Site icon Vistara News

Pakistan Election: ಪಾಕಿಸ್ತಾನದಲ್ಲಿ ಅವಳಿ ಬಾಂಬ್ ಸ್ಫೋಟ; 22ಕ್ಕೂ ಅಧಿಕ ಜನರ ಸಾವು

two bomb blast in Pakistan and more than 22 people dead

ಇಸ್ಲಾಮಾಬಾದ್: ಸಾರ್ವತ್ರಿಕ ಚುನಾವಣೆಯು (Pakistan Election) ಮುಂದಿರುವಂತೆಯ ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಭಾರೀ ಅವಳಿ ಬಾಂಬ್ ಸ್ಫೋಟ ಸಂಭವಿಸಿದ್ದು (Two bomb blast) 22ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಸ್ವತಂತ್ರ ಅಭ್ಯರ್ಥಿಯ ಚುನಾವಣಾ ಪ್ರಚಾರದ ಕಚೇರಿ ಬಳಿಕ ಈ ಬಾಂಬ್ ಸ್ಫೋಟವಾಗಿದೆ. ಫೆಬ್ರವರಿ 9ರಂದು ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣಾ ನಡೆಯಲಿದೆ.

ಬಲೂಚಿಸ್ತಾನ ಸರ್ಕಾರದ ಪ್ರಕಾರ, 22ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಮತ್ತು 24ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಭಾರೀ ತೈಲ ಸಂಪತ್ತು ಹೊಂದಿರುವ ಮತ್ತು ಆಫ್ಘಾನಿಸ್ತಾನ ಮತ್ತು ಇರಾನ್‌ ಗಡಿ ಹಂಚಿಕೊಂಡಿರುವ ಬಲೂಚಿಸ್ತಾನದಲ್ಲಿ ಬಲೂಚಿ ರಾಷ್ಟ್ರೀಯವಾದಿಗಳು ದಂಗೆಯಲ್ಲಿ ಎರಡು ದಶಕಗಳಿಂದ ತೊಡಗಿದ್ದಾರೆ. ಈ ಬಂಡಾಯವು ಮೊದಲು ಸಂಪನ್ಮೂಲಗಳ ಹಂಚಿಕೆಗೆ ಆರಂಭವಾದರೂ, ಈಗ ಪ್ರತ್ಯೇಕ ರಾಷ್ಟ್ರಕ್ಕೆ ಬೇಡಿಕೆ ಇಟ್ಟಿದ್ದಾರೆ. ಇದೇ ವೇಳೆ, ಪಾಕಿಸ್ತಾನಿ ತಾಲಿಬಾನ್ ಮತ್ತು ಇತರ ಬಂಡುಕೋರರ ಗುಂಪುಗಳು ಈ ಪ್ರದೇಶದಲ್ಲಿ ಅಸ್ತಿತ್ವದಲ್ಲಿವೆ. ಆದರೆ, ಈವರೆಗೂ ಯಾವುದೇ ಗುಂಪು ಬಾಂಬ್ ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ.

ಬಲೂಚಿಸ್ತಾನದ ಪಿಶಿನ್ ಜಿಲ್ಲೆಯ ಸ್ವತಂತ್ರ ಅಭ್ಯರ್ಥಿಯ ಚುನಾವಣಾ ಕಚೇರಿಯ ಬಳಿ ಸಂಭವಿಸಿತು ಮತ್ತು 14 ಜನರು ಮೃತಪಟ್ಟರು. ಆ ನಂತರ, ಆಫ್ಘಾನಿಸ್ತಾನ ಗಡಿಯ ಬಳಿಕ ಕಿಲ್ಲಾ ಸೈಫುಲ್ಲಾ ಎಂಬಲ್ಲಿ ಜಮೈತಾ ಅಲೇಮಾ ಇಸ್ಲಾಮ್(ಜೆಯುಐ) ಕಚೇರಿಯನ್ನು ಗುರಿಯಾಗಿಸಿಕೊಂಡು ಬಾಂಬ್ ಸ್ಫೋಟಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಚುನಾವಣಾ ಆಯೋಗವು ಬಲೂಚಿಸ್ತಾನದ ಮುಖ್ಯ ಕಾರ್ಯದರ್ಶಿ ಮತ್ತು ಇನ್ಸ್‌ಪೆಕ್ಟರ್ ಜನರಲ್ ಅವರನ್ನು ತಕ್ಷಣದ ವರದಿಗಳನ್ನು ಕೇಳಿದೆ ಮತ್ತು ಘಟನೆಗಳ ಹಿಂದೆ ಇರುವವರ ವಿರುದ್ಧ ಕ್ರಮ ಕೈಗೊಳ್ಳಲು ಅವರಿಗೆ ಸೂಚನೆ ನೀಡಿದೆ ಎಂದು ಚುನಾವಣಾ ಆಯೋಗದ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಗುರುವಾರ ನಡೆಯಲಿರುವ ಚುನಾವಣೆಯ ಭದ್ರತೆಗಾಗಿ ಐದು ಲಕ್ಷಕ್ಕೂ ಅದಿಕ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 90 ಸಾವಿರಕ್ಕೂ ಅಧಿಕ ಮತಗಟ್ಟೆಗಳನ್ನು ರಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: ದಿಲ್ಲಿ ಲಜಪತ್‌ನಗರ ಬಾಂಬ್ ಸ್ಫೋಟ; ನಾಲ್ವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ನೀಡಿದ ಸುಪ್ರೀಂ ಕೋರ್ಟ್

Exit mobile version