ಲಂಡನ್: ಜಿ20 ಶೃಂಗಸಭೆಯ (G20 Summit 2023) ಸಂದರ್ಭದಲ್ಲಿ ಭಾರತಕ್ಕೆ (India) ನೀಡಿದ್ದು ಪ್ರಮುಖ ಘಟನೆಯಾಗಿದೆ ಎಂದು ಬ್ರಿಟನ್ ಪ್ರಧಾನಿ ರಿಷಿ ಸುನಕ್ (Britain PM Rishi Sunak) ಹೇಳಿಕೊಂಡಿದ್ದು, ತಮ್ಮ ಭಾರತ ಭೇಟಿಯ ಕೆಲವು ಸುಂದರ ಕ್ಷಣಗಳನ್ನು ಸೋಷಿಯಲ್ ಮೀಡಿಯಾದಲ್ಲಿ (Social Media) ಹಂಚಿಕೊಂಡಿದ್ದಾರೆ. ಎಕ್ಸ್ ವೇದಿಕೆಯಲ್ಲಿ ಈ ಕುರಿತಾದ ವಿಡಿಯೋ ಷೇರ್ ಮಾಡಿಕೊಂಡಿರುವ ಸುನಕ್ ಅವರು, “ಜಿ 20ಗಾಗಿ ಭಾರತಕ್ಕೆ ಮಹತ್ವದ ಪ್ರವಾಸ ಕೈಗೊಂಡಿದ್ದೆ, ವಿಶ್ವ ವೇದಿಕೆಯಲ್ಲಿ ಇಂಗ್ಲೆಂಡ್ ಆಶೋತ್ತರಗಳನ್ನು ಹೇಳಿದೆ ಎಂದು ಬರೆದುಕೊಂಡಿದ್ದಾರೆ.
An important trip to India for the G20, delivering for the UK on the world stage 🇬🇧 👇 pic.twitter.com/H3MvrCJ7zg
— Rishi Sunak (@RishiSunak) September 11, 2023
ಜಾಗತಿಕ ಸಮಸ್ಯೆಗಳ ಬಗ್ಗೆ ಚರ್ಚೆ ಮುಖ್ಯವಾಗುತ್ತದೆ. ಯಾಕೆಂದರೆ ಅವು ನಮ್ಮೆಲ್ಲರ ಮೇಲೆ ಪರಿಣಾಮ ಬೀರುತ್ತವೆ. ಕೋವಿಡ್ ಸಮಯದಲ್ಲಿ ನಾವು ನೋಡಿದ್ದೇವೆ ಮತ್ತು ಪುಟಿನ್ ಉಕ್ರೇನ್‌ನ ಅಕ್ರಮ ಆಕ್ರಮಣದ ವಿನಾಶಕಾರಿ ಪರಿಣಾಮಗಳನ್ನು ಉಕ್ರೇನಿಯನ್ ಜನರ ಮೇಲೆ ಮತ್ತು ಜಾಗತಿಕ ಇಂಧನ ಬೆಲೆಗಳ ಏರಿಕೆ ಎರಡನ್ನೂ ನಾವು ನೋಡಿದ್ದೇವೆ. ಆದರೆ ನಾವು ಯಾವುದೇ ಭ್ರಮೆಯಲ್ಲಿಲ್ಲ; ಸಮಸ್ಯೆಗಳನ್ನು ಪ್ರತ್ಯೇಕವಾಗಿ ಪರಿಹರಿಸಲು ಸಾಧ್ಯವಿಲ್ಲ. ಪ್ರತ್ಯೇಕತೆಯು ವ್ಲಾದಿಮಿರ್ ಪುಟಿನ್ ಅವರು ಆರಿಸಿಕೊಂಡ ನೀತಿಯಾಗಿದೆ. ಇದರಿಂದಾಗಿ ಕೋಟ್ಯಂತರ ಜನರ ಜೀವನಾಡಿಯಾಗಿರು ಕಪ್ಪು ಸಮುದ್ರದ ಧಾನ್ಯದ ಒಪ್ಪಂದವನ್ನು ಉಲ್ಲಂಘಿಸುತ್ತದೆ ಎಂದು ಹೇಳಿಕೊಂಡಿದ್ದಾರೆ.
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಭೇಟಿಯ ವೀಡಿಯೊಗಳ ಜೊತೆಗೆ, ಜಗತ್ತನ್ನು ಎದುರಿಸಲು ಪುಟಿನ್ ಜಿ 20 ನಲ್ಲಿ ಇಲ್ಲದಿದ್ದರೂ ಅವರು ವಿಶ್ವದ ಕೆಲವು ದೊಡ್ಡ ಸಮಸ್ಯೆಗಳನ್ನು ಪರಿಹರಿಸಲು ಅಲ್ಲಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಅಕ್ಷರಧಾಮ ದೇಗುಲಕ್ಕೆ ರಿಷಿ ಸುನಕ್, ಅಕ್ಷತಾ ಮೂರ್ತಿ ಭೇಟಿ, ಪ್ರಾರ್ಥನೆ
ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಬಂಧ ಸಂದರ್ಭದಲ್ಲಿ ಪ್ರಧಾನಿ ರಿಷಿ ಸುನಕ್ ಹಾಗೂ ಅವರ ಪತ್ನಿ ಅಕ್ಷತಾ ಅವರು ಭಾನುವಾರ (ಸೆಪ್ಟೆಂಬರ್ 10) ಎರಡನೇ ದಿನದ ಚಟುವಟಿಕೆಗಳು ಆರಂಭವಾಗುವ ಮುನ್ನವೇ ಬಿಡುವು ಪಡೆದ ದಂಪತಿಯು ದೇವಾಲಯಕ್ಕೆ ಭೇಟಿ ನೀಡಿದ್ದರು.
ರಿಷಿ ಸುನಕ್ ಅವರು ಭಾರತದ ಮೂಲದವರಾಗಿದ್ದು, ಹಿಂದು ಸಂಪ್ರದಾಯಗಳನ್ನು ಅನುಸರಿಸುತ್ತಾರೆ. ಇನ್ನು ಅಕ್ಷತಾ ಮೂರ್ತಿ ಅವರು ಇನ್ಫೋಸಿಸ್‌ನ ನಾರಾಯಣಮೂರ್ತಿ ಹಾಗೂ ಸುಧಾಮೂರ್ತಿ ಅವರ ಪುತ್ರಿಯಾಗಿದ್ದಾರೆ. ಇಬ್ಬರೂ ಹಿಂದು ಧರ್ಮದಲ್ಲಿ ಅಚಲ ನಂಬಿಕೆ ಇಟ್ಟಿದ್ದು, ದೈವಭಕ್ತರಾಗಿದ್ದಾರೆ. ಹಾಗಾಗಿ, ಅವರು ಅಕ್ಷರಧಾಮ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ.