ನವದೆಹಲಿ: ಆಕಾಶದಲ್ಲಿ ಹಾರಾಟ ನಡೆಸುತ್ತಿರುವಾಗಲೇ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡ (Engine Catches Fire) ಹಿನ್ನೆಲೆಯಲ್ಲಿ ಅಟ್ಲಾಸ್ ಏರ್ ಬೋಯಿಂಗ್ 747-8 ಕಾರ್ಗೋ (Atlas Air Boeing 747-8 plane) ವಿಮಾನವು ಅಮೆರಿಕದ ಮಿಯಾಮಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Miami International Airport) ತುರ್ತು ಭೂಸ್ಪರ್ಶ ಮಾಡಿದ ಘಟನೆ ನಡೆದಿದೆ(Emergency Landing). ಈ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಕೆಲವೇ ಸಮಯದಲ್ಲಿ ವಿಮಾನದ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತು. ಈ ಕುರಿತಾದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಮಿಯಾಮಿ ಅಂತಾರಾಷ್ಟ್ರೀಯ ಏರ್‌ಪೋರ್ಟ್‌ನಲ್ಲಿ ವಿಮಾನ ಲ್ಯಾಂಡಿಂಗ್ ಸಂಬಂಧ ಸಿಬ್ಬಂದಿ ಎಲ್ಲಾ ಪ್ರಮಾಣಿತ ಕಾರ್ಯವಿಧಾನಗಳನ್ನು ಅನುಸರಿಸಿದರು ಮತ್ತು ಸುರಕ್ಷಿತವಾಗಿ ವಿಮಾನವನ್ನು ಲ್ಯಾಂಡಿಂಗ್ ಮಾಡಲಾಯಿತು ಎಂದು ಅಟ್ಲಾಸ್ ಏರ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾದ ವೀಡಿಯೊಗಳು ಹಾರಾಟದ ಸಮಯದಲ್ಲಿ ವಿಮಾನದ ಎಡ ರೆಕ್ಕೆಯಿಂದ ಜ್ವಾಲೆಗಳನ್ನು ಹೊರ ಬರುತ್ತಿರುವುದನ್ನು ಕಾಣಬಹುದು. ಈ ಬೆಂಕಿಗೆ ಏನು ಕಾರಣ ಎಂಬುದನ್ನು ಪತ್ತೆ ಹಚ್ಚಲಾಗುವುದು ಎಂದು ಕಾರ್ಗೊ ಕಂಪನಿ ತಿಳಿಸಿದೆ.
💥#BREAKING: Atlas Air Boeing 747-8 catches fire with sparks shooting out during mid flight.#Miami | #Florida #boeing7478 #atlasair pic.twitter.com/3IO5xFvMr6
— Noorie (@Im_Noorie) January 19, 2024
ಘಟನೆಯಲ್ಲಿ ಒಳಗೊಂಡಿರುವ ವಿಮಾನವು ಬೋಯಿಂಗ್ 747-8 ಎಂದು ಫ್ಲೈಟ್‌ವೇರ್ ಡೇಟಾ ತೋರಿಸಿದೆ, ಇದು ನಾಲ್ಕು ಜನರಲ್ ಎಲೆಕ್ಟ್ರಿಕ್ ಜಿಇಎನ್‌ಎಕ್ಸ್ ಎಂಜಿನ್‌ಗಳಿಂದ ಚಾಲಿತವಾಗಿದೆ. ಯಾವು ಸಾವು ನೋವು ವರದಿಯಾಗಿಲ್ಲ. ಆದರೆ, ಎಷ್ಟು ಸಿಬ್ಬಂದಿ ವಿಮಾನದಲ್ಲಿದ್ದು ಎಂಬುದು ಸ್ಪಷ್ಟವಾಗಿಲ್ಲ ಎಂದು ಮಿಯಾಮಿ-ಡೇಡ್ ಫೈರ್ ರೆಸ್ಕ್ಯೂ ಉಲ್ಲೇಖಿಸಿ ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.
ಅಲಾಸ್ಕಾ ಏರ್‌ಲೈನ್ಸ್ ಮ್ಯಾಕ್ಸ್ 9 ವಿಮಾನವು ಒರೆಗಾನ್‌ನಿಂದ ಟೇಕ್-ಆಫ್ ಆದ ಸ್ವಲ್ಪ ಸಮಯದ ನಂತರ ಅದರ ಫ್ಯೂಸ್‌ಲೇಜ್‌ನ ಭಾಗವು ಮುರಿದುಬಿದ್ದ, ತುರ್ತು ಲ್ಯಾಂಡಿಂಗ್ ಮಾಡಿದ ಘಟನೆ ನಡೆದ ಒಂದು ತಿಂಗಳ ಬಳಿಕ ಈ ದುರ್ಘಟನೆ ಸಂಭವಿಸಿದೆ. ಈ ಘಟನೆಯು ಅಮೆರಿಕ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಎಫ್ಎಎ ಸುರಕ್ಷತಾ ತಪಾಸಣೆಗಾಗಿ 171 ವಿಮಾನಗಳನ್ನು ತಾತ್ಕಾಲಿಕವಾಗಿ ಕಾರ್ಯಾಚರಣೆಯಿಂದ ಸ್ಥಗಿತಗೊಳಿಸಲಾಗಿತ್ತು.
ಈ ಸುದ್ದಿಯನ್ನೂ ಓದಿ: Nepal Plane Crash | ನೇಪಾಳದಲ್ಲಿ 72 ಜನರಿದ್ದ ವಿಮಾನ ಪತನ; ಹಲವರು ಮೃತಪಟ್ಟಿರುವ ಶಂಕೆ