ಕೆನಡಾ: ಅಮೆರಿಕವು ಮತ್ತೊಂದು ಫ್ಲೈಯಿಂಗ್ ಆಬ್ಜೆಕ್ಟ್(ಹಾರಾಡುವ ವಸ್ತು) ಅನ್ನು ಹೊಡೆದುರುಳಿಸಿದೆ. ಆದರೆ, ಬಲೂನ್ (Spy Balloon) ರೀತಿಯ ಈ ವಸ್ತು ಕೆನಡಾದ ವಾಯುಪ್ರದೇಶದಲ್ಲಿ ಕಂಡು ಬಂದಿತ್ತು. ಹಾಗಾಗಿ, ಅಮೆರಿಕ ಮತ್ತು ಕೆನಡಾ ಸೇನೆಗಳು ಜಂಟಿ ಕಾರ್ಯಾಚರಣೆ ನಡೆಸಿವೆ. ಕಳೆದ 8 ದಿನಗಳಲ್ಲಿ ಅಮೆರಿಕ ಹೊಡೆದುರುಳಿಸುತ್ತಿರುವ ಮೂರನೇ ಬಲೂನ್ ರೀತಿಯ ವಸ್ತು ಇದಾಗಿದೆ.
ಫೆಬ್ರವರಿ 4ರಂದು ಚೀನಾದ ಗೂಢಚಾರ ಬಲೂನ್ ಅನ್ನು ಉರುಳಿಸುವುದರೊಂದಿಗೆ ಅಮೆರಿಕವು ನಡೆಸಿದ ಮೂರನೇ ದಾಳಿಯಾಗಿದೆ. ಈ ಬಲೂನ್ ಒಂದು ವಾರದವರೆಗೆ ಅಮೆರಿಕದ ಮುಖ್ಯ ಭೂಭಾಗದಾದ್ಯಂತ ಅಲೆದು ಜನವರಿ 28ರಂದು ಅಲಾಸ್ಕಾ ಮೂಲಕ ಅಮೆರಿಕ ಪ್ರವೇಶಿಸಿತ್ತು. ಅಂತಿಮವಾಗಿ ಅಮೆರಿಕ ಈ ಬೂಲನನ್ನು ಹೊಡೆದುರುಳಿಸಿತ್ತು.
ಕೆನಡಾದ ವಾಯುಪ್ರದೇಶದಲ್ಲಿ ಹೊಡೆದುರುಳಿಸಲಾದ ಬಲೂನ್ ಕುರಿತಾದ ಯಾವುದೇ ಮಾಹಿತಿಯನ್ನು ಅಮೆರಿಕವಾಗಲೀ, ಕೆನಡಾವಾಗಲೀ ಹಂಚಿಕೊಂಡಿಲ್ಲ. ಆದರೆ, ಅಮೆರಿಕ ಫೈಟರ್ ಜೆಟ್ ಮೂಲಕ ಬಲೂನನ್ನು ಹೊಡೆದುರುಳಿಸಿದ ಮಾಹಿತಿಯನ್ನು ಕೆನಡಾ ಪ್ರಧಾನಿ ಖಚಿತಪಡಿಸಿದ್ದಾರೆ.
ಇದನ್ನೂ ಓದಿ: Spy Balloon: ಅಮೆರಿಕ ಮಾತ್ರವಲ್ಲ, ಭಾರತದ ಮೇಲೂ ಚೀನಾ ಬಲೂನ್ ಕಣ್ಗಾವಲು!
ಈ ಕುರಿತು ಕೆನಡಾದ ಪ್ರಧಾನಿ ಮತ್ತು ಅಮೆರಿಕ ಅಧ್ಯಕ್ಷರ ನಡುವಿನ ಕರೆಗಳು ವಿನಿಮಯವಾಗಿದ್ದವು. ಅದರ ಅನುಸಾರ ಅಧ್ಯಕ್ಷ ಬೈಡೆನ್ ಅವರು, ಉತ್ತರ ಕೆನಡಾದ ವಾಯು ಪ್ರದೇಶದಲ್ಲಿ ಹಾರಾಡುತ್ತಿದ್ದ ಅನುಮಾನಾಸ್ಪದ ವಸ್ತುವನ್ನು ಕೆಳಗಿಳಿಸಲು ಕೆನಡಾದೊಂದಿಗೆ ಕೆಲಸ ಮಾಡಲು ಉತ್ತರ ಅಮೆರಿಕಾದ ಏರೋಸ್ಪೇಸ್ ಡಿಫೆನ್ಸ್ ಕಮಾಂಡ್‌ಗೆ(NORAD) ಆದೇಶಿಸಿದರು ಎಂದು ಅಮೆರಿಕ ರಕ್ಷಣಾ ಇಲಾಖೆ ಹೇಳಿಕೊಂಡಿದೆ. ಅಂತಿಮವಾಗಿ ಅಮೆರಿಕ ಎಫ್-22 ಫೈಟರ್ ಜೆಟ್, ಕೆನಡಾದ ಪ್ರದೇಶದಲ್ಲಿ ಹಾರಾಡುತ್ತಿದ್ದ ಬಲೂನ್ ಅನ್ನು AIM 9X ಬಳಸಿಕೊಂಡು ಹೊಡೆದುರುಳಿಸಿತು.