Site icon Vistara News

ಇರಾಕ್‌ ಬೆಂಬಲಿತ ಹಡಗುಗಳ ಮೇಲೆ ಅಮೆರಿಕ ದಾಳಿ; 10 ಹೌತಿ ಉಗ್ರರ ಹತ್ಯೆ, ವಿಡಿಯೊ ಇದೆ

Boat

US sinks 3 ships after Red Sea attack, 10 Houthi rebels killed

ನವದೆಹಲಿ: ಇಸ್ರೇಲ್‌ ಹಾಗೂ ಹಮಾಸ್‌ ಉಗ್ರರ ನಡುವೆ ಸಮರ ಶುರುವಾದ ಬಳಿಕ ಕೆಂಪು ಸಮುದ್ರದಲ್ಲಿ (Red Sea) ಉಪಟಳ ಮಾಡುತ್ತಿದ್ದ ಇರಾಕ್‌ ಬೆಂಬಲಿತ ಹೌತಿ ಉಗ್ರರಿಗೆ (Houthi Terrorists) ಅಮೆರಿಕ ತಕ್ಕ ಪಾಠ ಕಲಿಸಿದೆ. ಕೆಂಪು ಸಮುದ್ರದಲ್ಲಿ ಯೆಮೆನ್‌ನ ಹೌತಿ ಉಗ್ರರು ಪ್ರಯಾಣಿಸುತ್ತಿದ್ದ ಮೂರು ಹಡಗುಗಳ ಮೇಲೆ ಅಮೆರಿಕವು ಹೆಲಿಕಾಪ್ಟರ್‌ಗಳ ಮೂಲಕ ದಾಳಿ (US Attack) ನಡೆಸಿದೆ. ದಾಳಿಯ ತೀವ್ರತೆಗೆ ಮೂರೂ ಹಡಗುಗಳು ಮುಳುಗಿದ್ದು, 10 ಹೌತಿ ಉಗ್ರರು ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಭಾನುವಾರ (ಡಿಸೆಂಬರ್‌ 31) ಹೌತಿ ಬಂಡುಕೋರರ ಹಡಗುಗಳ ಮೇಲೆ ಅಮೆರಿಕ ಹೆಲಿಕಾಪ್ಟರ್‌ ಮೂಲಕ ದಾಳಿ ನಡೆಸಿದೆ. 10 ಹೌತಿ ಬಂಡುಕೋರರು ದಾಳಿಗೆ ಮೃತಪಟ್ಟಿದ್ದಾರೆ ಅಥವಾ ನೀರಿನಲ್ಲಿ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಅಮೆರಿಕ ದಾಳಿಯ ಬಳಿಯ ಕೆಂಪು ಸಮುದ್ರದಲ್ಲಿ ನೌಕೆಗಳ ಸಂಚಾರವನ್ನು 48 ಗಂಟೆ ನಿಷೇಧಿಸಲಾಗಿದೆ ಎಂದು ಸಮುದ್ರ ಸಾಗಣೆ ಕಂಪನಿ ಮಾಯೆರ್‌ಸ್ಕ್‌ ಮಾಹಿತಿ ನೀಡಿದೆ. ಇದರೊಂದಿಗೆ ಅಮೆರಿಕವು ಇರಾಕ್‌ ಹಾಗೂ ಹೌತಿ ಉಗ್ರರಿಗೆ ಬಿಸಿ ಮುಟ್ಟಿಸಿದಂತಾಗಿದೆ.

ಹೌತಿ ಬಂಡುಕೋರರ ಮೇಲೆ ಏಕೆ ದಾಳಿ?

ಅಕ್ಟೋಬರ್‌ 7ರಂದು ಇಸ್ರೇಲ್‌ ಮೇಲೆ ಪ್ಯಾಲೆಸ್ತೀನ್‌ನ ಹಮಾಸ್‌ ಉಗ್ರರು ದಾಳಿ ನಡೆಸಿದ ಬಳಿಕ ಗಾಜಾ ನಗರದ ಮೇಲೆ ಇಸ್ರೇಲ್‌ ನಿರಂತರವಾಗಿ ದಾಳಿ ನಡೆಸುತ್ತಿದೆ. ಇಸ್ರೇಲ್‌ ದಾಳಿಗೆ ಗಾಜಾ ನಗರವೇ ತತ್ತರಿಸಿಹೋಗಿದೆ. ಇಸ್ರೇಲ್‌ ದಾಳಿಯು ಹಲವು ಇಸ್ಲಾಮಿಕ್‌ ರಾಷ್ಟ್ರಗಳ ಕಣ್ಣು ಕೆಂಪಾಗುವಂತೆ ಮಾಡಿದೆ. ಹಾಗಾಗಿ, ಇರಾಕ್‌ ಬೆಂಬಲಿತ ಹೌತಿ ಉಗ್ರರು ಕೆಂಪು ಸಮುದ್ರದಲ್ಲಿ ನೌಕೆಗಳ ಅಪಹರಣ, ದಾಳಿ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಭಾರತಕ್ಕೆ ಹೊರಟಿದ್ದ ಹಡಗು ಅಪಹರಿಸಿದ ಹೌತಿ ಬಂಡುಕೋರರು! ಶಿಪ್ ನಮ್ಮದಲ್ಲ ಎಂದ ಇಸ್ರೇಲ್

ಟರ್ಕಿಯಿಂದ ಭಾರತಕ್ಕೆ ಹೊರಟಿದ್ದ ಸರಕು ಸಾಗಣೆ ಹಡಗನ್ನು ಯೆಮೆನ್‌ನ ಹೌತಿ ಬಂಡುಕೋರರು ಕಳೆದ ನವೆಂಬರ್‌ನಲ್ಲಿ ಕೆಂಪು ಸಮುದ್ರದಲ್ಲಿ ಅಪಹರಿಸಿದ್ದರು. ಹಡಗಿನಲ್ಲಿ ವಿವಿಧ ರಾಷ್ಟ್ರಗಳಿಗೆ ಸೇರಿದ ಸುಮಾರು 25 ಸಿಬ್ಬಂದಿ ಇದ್ದರು. ಇಸ್ರೇಲ್‌ ಹಡಗನ್ನು ಹೈಜಾಕ್ ಮಾಡಿರುವುದಾಗಿ ಹೌತಿಗಳು ಹೇಳಿದ್ದರು. ಆದರೆ, ಕ್ಲೇಮ್ ನಿರಾಕರಿಸಿದ್ದ ಇಸ್ರೇಲ್ ಸರ್ಕಾರವು, ಅಪಹರಣಕ್ಕೊಳಗಾದ ಗ್ಯಾಲಕ್ಸಿ ಲೀಡರ್ ಹಡಗಿನಲ್ಲಿ ಯಾವುದೇ ಭಾರತೀಯರು ಇರಲಿಲ್ಲ ಎಂದು ತಿಳಿದುಬಂದಿತ್ತು.

ಅಪಹರಣವನ್ನು ದೃಢೀಕರಿಸಿದ ಇಸ್ರೇಲಿ ರಕ್ಷಣಾ ಪಡೆಗಳು ಎಕ್ಸ್‌ ವೇದಿಕೆಯಲ್ಲಿ ಪೋಸ್ಟ್ ಮಾಡಿತ್ತು. ದಕ್ಷಿಣ ಕೆಂಪು ಸಮುದ್ರದಲ್ಲಿ ಯೆಮೆನ್ ಬಳಿ ಹೌತಿಗಳು ಸರಕು ಹಡಗನ್ನು ಅಪಹರಿಸಿದ್ದಾರೆ. ಜಾಗತಿಕ ಪರಿಣಾಮದ ಅತ್ಯಂತ ಗಂಭೀರ ಘಟನೆಯಾಗಿದೆ. ಹಡಗು ಭಾರತಕ್ಕೆ ಟರ್ಕಿಯಿಂದ ಹೊರಟಿತ್ತು. ಇಸ್ರೇಲಿಗಳನ್ನು ಒಳಗೊಂಡಂತೆ ವಿವಿಧ ರಾಷ್ಟ್ರಗಳ ನಾಗರಿಕ ಸಿಬ್ಬಂದಿ ಇದ್ದಾರೆ. ಆದರೆ ಈ ಹಡುಗು ಇಸ್ರೇಲ್‌ಗೆ ಸೇರಿಲ್ಲ ಅಲ್ಲ ಎಂದು ಹೇಳಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version