Site icon Vistara News

Find A Husband: 35 ವರ್ಷದ ಈ ಯುವತಿಗೆ ಗಂಡನನ್ನು ಹುಡುಕಿ ಕೊಟ್ರೆ, ನಿಮಗೆ 4 ಲಕ್ಷ ರೂ. ಬಹಮಾನ ಗ್ಯಾರಂಟಿ!

US woman offers rs 4 lakh, to who will find husband for her

ನವದೆಹಲಿ: ಒಂಟಿ ಜೀವನದಿಂದ ಬೇಸತ್ತಿರುವ ಅಮೆರಿಕದ ಮಹಿಳೆಯೊಬ್ಬಳು (US Woman) ತನಗೆ ತಕ್ಕ ಗಂಡನನ್ನು ಹುಡುಕಿಕೊಟ್ಟರೆ 5 ಸಾವಿರ ಡಾಲರ್ ಹಣ (5000 Dollar) ನೀಡುವುದಾಗಿ ಹೇಳಿದ್ದಾಳೆ. ಅಂದರೆ, ಭಾರತೀಯ ರೂಪಾಯಿ ಲೆಕ್ಕದಲ್ಲಿ ಈ ಮೊತ್ತ ಸುಮಾರು 4,10,462 ರೂಪಾಯಿ ಆಗುತ್ತದೆ! ಲಾಸ್ ಏಂಜಲೀಸ್‌ನ (Los Angels) 35 ವರ್ಷದ ಕಾರ್ಪೊರೇಟ್ ವ್ಯಾಜ್ಯ ನ್ಯಾಯವಾದಿ ಈವ್ ಟಿಲ್ಲಿ-ಕೊಲ್ಸನ್ (Eve Tilley-Coulson) ಅವರು ಟಿಕ್‌ಟಾಕ್‌ನಲ್ಲಿ (TikTok) ವಿಡಿಯೋವೊಂದನ್ನು ಷೇರ್ ಮಾಡಿದ್ದಾರೆ. ತನಗೆ ಸೂಕ್ತ ಗಂಡನನ್ನು ಹುಡುಕಲು ನೆರವು ನೀಡಬೇಕು ಎಂದು ವಿಡಿಯೋದಲ್ಲಿ (Social Media) ಮನವಿ ಮಾಡಿದ್ದಾರೆ. ಟಿಕ್‌ಟಾಕ್ ಖಾತೆಯಲ್ಲಿ ನ್ಯಾಯವಾದಿಗೆ 1000,000 ಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ ಎಂದು ನ್ಯೂಯಾರ್ಕ್‌ ಪೋಸ್ಟ್‌ನಲ್ಲಿ ತಿಳಿಸಲಾಗಿದೆ(Find A Husband).

ನನಗೆ ಸೂಕ್ತ ಗಂಡನನ್ನು ಹುಡುಕಿಕೊಡುವವರಿಗೆ ಬಹುಮಾನ ನೀಡುವ ಒಪ್ಪಂದವನ್ನು ನಾನು ಈ ಹಿಂದೆ ನನ್ನ ಸ್ನೇಹಿತರು ಮತ್ತು ಬಾಸ್‌ ಅವರೊಂದಿಗೆ ಮಾಡಿಕೊಂಡಿದ್ದೆ. ಅದನ್ನೀಗ ಮುಕ್ತವಾಗಿಸಿದ್ದೇನೆ. ಯಾರು ಬೇಕಾದರೂ ನನಗೆ ಗಂಡನನ್ನು ಹುಡುಕಿಕೊಡಬಹುದು. ಅಂಥವರಿಗೆ ನಾನು ಬಹುಮಾನ ನೀಡುತ್ತೇನೆ ಎಂದು ತಿಳಿಸಿದ್ದಾರೆ.

ನೀವು ನನಗೆ ಗಂಡನನ್ನು ಹುಡುಕಿಕೊಟ್ಟರೆ ಮತ್ತು ನಾನು ಅವನನ್ನು ಮದುವೆಯಾದರೆ 5 ಸಾವಿರ ಡಾಲರ್ ನೀಡುತ್ತೇನೆ. ಆತನೊಂದಿಗೆ ದೀರ್ಘಾವಧಿಗೆ ಇರಬೇಕೆಂದೇನೂ ಇಲ್ಲ. 20 ವರ್ಷದಲ್ಲಿ ನಾನು ಡೈವೋರ್ಸ್ ಕೂಡ ಕೊಡಬಹುದು. ಇದ್ಯಾವುದು ಲೆಕ್ಕಕ್ಕ ಬರಲ್ಲ. ಆದರೆ, ನೀವು ನನಗೆ ಸೂಕ್ತವಾದ ಗಂಡನನ್ನು ಹುಡುಕಿಕೊಟ್ಟರೆ 5 ಸಾವಿರ ಡಾಲರ್ ನಿಮ್ಮದು ಎಂದು ವಿಡಿಯೋದಲ್ಲಿ ಈವ್ ಟಿಲ್ಲಿ-ಕೊಲ್ಸನ್ ಹೇಳಿದ್ದಾರೆ.

ನಾನು ಐದು ವರ್ಷಗಳಿಂದ ಸಿಂಗಲ್ ಆಗಿದ್ದೇನೆ. ಡೇಟಿಂಗ್ ಎಲ್ಲಾ ಟ್ರೈ ಮಾಡಿದೆ. ಯಾವುದೂ ವರ್ಕೌಟ್ ಆಗಲಿಲ್ಲ. ಮುಖತಃವಾಗಿ ವ್ಯಕ್ತಿಗಳನ್ನು ಭೇಟಿ ಮಾಡಿದೆ. ಡೇಟಿಂಗ್ ಆ್ಯಪ್ ಮೂಲಕ ಟ್ರೈ ಮಾಡಿದೆ. ಯಾರೂ ನನಗೆ ಸೂಟ್ ಅನ್ನುವಂಥವರು ಸಿಗಲಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿ: ವೈರಲ್‌ ನ್ಯೂಸ್ | ಅಧ್ಯಾಪಕರ ಮನೆಗೆ ಕನ್ನ ಹಾಕಿದ ಕಳ್ಳನ ಗುರುಭಕ್ತಿ ಹೀಗಿತ್ತು!

ತನ್ನ ಹೇಗೆ ಇರಬೇಕು ಎಂಬುದನ್ನೂ ಈವ್ ಟಿಲ್ಲಿ-ಕೊಲ್ಸನ್ ಹೇಳಿಕೊಂಡಿದ್ದಾರೆ. ಆತ ಸುಮಾರು 27 ವರ್ಷದಿಂದ 40 ವರ್ಷದೊಳಗಿನವರಾಗಿರಬೇಕು. 5 ಅಡಿ 11 ಇಂಚ್ ಅಥವಾ ಅದಕ್ಕಿಂತ ಹೆಚ್ಚು ಎತ್ತರವಾಗಿರಬೇಕು. ತಮಾಷೆ ಸ್ವಭಾವದನಾಗಿರಬೇಕು. ಬ್ರಿಟಿಷನ್ ಸೆನ್ಸ್ ಆಫ್ ಹ್ಯೂಮರ್ ಇರಬೇಕು. ಮಕ್ಕಳು, ಪ್ರಾಣಿ ಮತ್ತು ಕ್ರೀಡೆಗಳನ್ನು ಇಷ್ಟ ಪಡುವನಾಗಿರಬೇಕು ಎಂದು ಇವ್ ಹೇಳಿಕೊಂಡಿದ್ದಾರೆ. ಒಂದೊಮ್ಮೆ ಈ ರೀತಿ ಗುಣಗಳು ಇರುವ ವ್ಯಕ್ತಿ ನಿಮಗೆ ಗೊತ್ತಿದ್ದರೆ ಅಥವಾ ಆ ಗುಣಗಳನ್ನು ನೀವೇ ಹೊಂದಿದವರಾಗಿದ್ದರೆ ಟಿಕ್ ಟಾಕ್ ಮೂಲಕ ಈವ್ ಟಿಲ್ಲಿ-ಕೊಲ್ಸನ್ ಅವರನ್ನು ಸಂಪರ್ಕಿಸಬಹುದು. ಬಹುಮಾನ ಕೂಡ ಗೆಲ್ಲಬಹುದು.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Exit mobile version