Site icon Vistara News

Viral News: ನೋವು ಎಂದು ಆಸ್ಪತ್ರೆಗೆ ಹೋದವನ ಮೂಗಿನಿಂದ 150 ಹುಳುಗಳನ್ನು ಹೊರ ತೆಗೆದ ವೈದ್ಯರು!

Viral News, Florida Doctors pulls 150 larvae from Patient nose

ನವದೆಹಲಿ: ಮುಖ ಊದಿಕೊಂಡಿದ್ದಕ್ಕೆ ವ್ಯಕ್ತಿಯ (Florida man) ಮೂಗಿನಿಂದ 150ಕ್ಕೂ ಅಧಿಕ ಹುಳಗಳನ್ನು (live larvae) ವೈದ್ಯರು ಹೊರ ತೆಗೆದ ಘಟನೆ ಅಮೆರಿಕದ ಫ್ಲೋರಿಡಾದಲ್ಲಿ ನಡೆದಿದೆ (Florida Doctors). ಮಾಧ್ಯಮಗಳ ವರದಿಯ ಪ್ರಕಾರ, ತೀವ್ರವಾದ ನೋವು ಮತ್ತು ಮೂಗಿನ ರಕ್ತಸ್ರಾವವನ್ನು ಅನುಭವಿಸಿದ ನಂತರ ರೋಗಿ ಫ್ಲೋರಿಯಾದ ಎಚ್‌ಸಿಎ ಸ್ಮಾರಕ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ವೈದ್ಯರು ಅವರ ಮೂಗಿನಿಂದ ಹುಳುಗಳನ್ನು ಹೊರ ತೆಗೆದಿದ್ದಾರೆ(Viral News).

ಒಂದೆರಡು ಗಂಟೆಗಳಲ್ಲಿ ನನ್ನ ಮುಖವು ಊದಿಕೊಳ್ಳಲು ಪ್ರಾರಂಭಿಸಿತು, ನನ್ನ ತುಟಿಗಳು ಊದಿಕೊಂಡವು, ನನಗೆ ಮಾತನಾಡಲು ಸಾಧ್ಯವಾಗಲಿಲ್ಲ. ನನ್ನ ಇಡೀ ಮುಖವು ಬೆಂಕಿಯಲ್ಲಿ ಉರಿಯುತ್ತಿರುವ ಅನುಭವವಾಗುತ್ತಿತ್ತು ಎಂದು ರೋಗಿಯು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ರೋಗಿಯನ್ನು ಇಎನ್‌ಟಿ ತಜ್ಞ ವೈದ್ಯ ಡೇವಿಡ್ ಕಾರ್ಲಸನ್ ಅವರು ಪರೀಕ್ಷೆ ನಡೆಸಿದರು. ಆಗ ರೋಗಿಯ ಮೂಗಿಯೊಳಗೆ ಏನೋ ಚಲಿಸುತ್ತಿರುವುದನ್ನು ಕಂಡುಕೊಂಡರು. ಕ್ಯಾಮೆರಾ ಮೂಲಕ ಪರೀಕ್ಷಿಸಿದಾಗ ಮೂಗಿನಲ್ಲಿ ಡಜನ್‌ಗಟ್ಟಲೇ ಹುಳುಗಳು ಮೊಗಿನೊಳಗೆ ಇರುವುದು ಗೊತ್ತಾಯಿತು. ಅವರು ಆಹಾರ ನೀಡುತ್ತಿರುವುದನ್ನು ಕಂಡುಕೊಂಡಿದ್ದಾರೆ.

ಮೂಗಿನೊಳಗೆ ಸಣ್ಣ ಮತ್ತು ದೊಡ್ಡ ಗಾತ್ರದ ಹುಳುಗಳಿದ್ದವು ಎಂದು ಡಾ.ಕಾರ್ಲಸನ್ ಅವರು ಹೇಳಿದ್ದಾರೆ. ಪರೀಕ್ಷೆ ವೇಳೆ ರೋಗಿಯು ದೊಡ್ಡ ತೊಂದರೆಯಲ್ಲಿದ್ದಾನೆಂದು ನನಗೆ ತಿಳಿದಿತ್ತು, ಅವನ ಕಣ್ಣು ಮತ್ತು ಅವನ ಮೆದುಳಿಗೆ ಬಹಳ ಸಮೀಪದಲ್ಲಿ ತಲೆಬುರುಡೆಯ ತಳದ ಬಳಿ ಸವೆತವಾಗುತ್ತಿತ್ತು ಎಂದು ವೈದ್ಯರು ಹೇಳಿದ್ದಾರೆ.

ಆತನ ಸ್ಥಿತಿ ಎಷ್ಟು ಹದಗೆಟ್ಟಿತ್ತು ಎಂದರೆ, ಹುಳುಗಳು ತಲೆಯೊಳಗಿನ ಇತರ ಅಂಗಾಂಶಗಳಲ್ಲಿ ಬಿಲಗಳನ್ನು ಮಾಡಿಕೊಂಡಿದ್ದವು. ಒಟ್ಟಾರೆಯಾಗಿ 150 ಹುಳುಗಳನ್ನು ವಿವಿಧ ವಿಧಾನಗಳ ಮೂಲಕ ಹೊರ ತೆಗೆಯಲಾಯಿತು ವೈದ್ಯರು ತಿಳಿಸಿದ್ದಾರೆ.

30 ವರ್ಷಗಳ ಹಿಂದೆ ಗಡ್ಡೆಯನ್ನು ತೆಗೆದ ನಂತರ ರೋಗಿಯ ನಿರೋಧಕ ಶಕ್ತಿಯು ಕುಂದಿತ್ತು.ಇದರಿಂದಾಗಿಯೇ ಸೋಂಕು ತಗುಲಲು ಕಾರಣವಾಗಿರಬಹುದು. ನಮ್ಮ ನಿರೋಧಕ ಶಕ್ತಿಯ ಹೊರಗಿನ ಒಳ ಬರುವ ಜೀವಿಗಳನ್ನು ತಡೆಯುವ ಪ್ರಯತ್ನ ಮಾಡುತ್ತದೆ. ಒಂದೊಮ್ಮೆ ಅದು ಕಡಿಮೆಯಾದರೆ ಹೊರಗಿನ ಜೀವಿಗಳಿಗೆ ನಮ್ಮ ದೇಹವು ಆಶ್ರಯತಾಣವಾಗಿ ಬದಲಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Viral News: ಅಂಗವೈಕಲ್ಯತೆ ಇದ್ದರೂ ಸ್ವಾಭಿಮಾನದ ಬದುಕು; ಈ ಫುಡ್‌ ಡೆಲಿವರಿ ಏಜೆಂಟ್‌ ವಿಲ್‌ ಪವರ್‌ಗೆ ನೆಟ್ಟಿಗರ ಬಹುಪರಾಕ್‌

Exit mobile version