Site icon Vistara News

Viral video: ಲೈವ್ ಟಿವಿ ಚರ್ಚೆಯಲ್ಲಿ ಹೊಡೆದಾಡಿಕೊಂಡ ಪಾಕಿಸ್ತಾನಿ ನಾಯಕರು!

viral video pakistan leaders

ಹೊಸದಿಲ್ಲಿ: ಲೈವ್ ಟೆಲಿವಿಷನ್ ಚರ್ಚೆಯ (Live TV debate) ಸಮಯದಲ್ಲಿ ಪಾಕಿಸ್ತಾನದ ಇಬ್ಬರು ರಾಜಕೀಯ ಪಕ್ಷಗಳ ನಾಯಕರು (Pakistan leaders) ತೀವ್ರ ವಾಗ್ವಾದದಿಂದ ಕ್ರುದ್ಧರಾಗಿ ಪರಸ್ಪರ ಥಳಿಸಿ, ಒದ್ದು, ಕಿತ್ತಾಡಿಕೊಂಡಿದ್ದಾರೆ. ಪ್ರಸ್ತುತ ಭಾರತದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ (Viral video) ಆಗಿದ್ದು, ʼಇದೇ ನಿಮ್ಮ ಸಂಸ್ಕೃತಿʼ ಎಂಬ ತೀವ್ರ ಗೇಲಿಗೆ ಒಳಗಾಗಿದೆ.

ವರದಿಗಳ ಪ್ರಕಾರ, ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ನ ಸೆನೆಟರ್ ಅಫ್ನಾನ್ ಉಲ್ಲಾ ಖಾನ್ ಮತ್ತು ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಜೊತೆ ಸಂಬಂಧ ಹೊಂದಿರುವ ಶೇರ್ ಅಫ್ಜಲ್ ಖಾನ್ ಮರ್ವಾತ್ ನಡುವೆ ಜಗಳ ನಡೆದಿದೆ. ಜಾವೇದ್ ಚೌಧರಿ ಅವರ ಎಕ್ಸ್‌ಪ್ರೆಸ್ ನ್ಯೂಸ್ ಟಾಕ್ ಶೋನಲ್ಲಿ ಈ ಗಲಾಟೆ ನಡೆದಿದೆ.

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ (Imran Khan) ಕುರಿತು ಚರ್ಚೆ ನಡೆಯುತ್ತಿತ್ತು. ಇಬ್ಬರೂ ನಾಯಕರು ಆಕ್ರಮಣಕಾರಿಯಾಗಿ ವಾದ ಮಂಡಿಸಿದ್ದು, ಶೀಘ್ರದಲ್ಲೇ ಅದು ಉಲ್ಬಣಗೊಂಡು ಉಭಯ ನಾಯಕರು ಪರಸ್ಪರ ನಿಂದಿಸಿಕೊಂಡರು. ಅಫ್ನಾನ್ ಉಲ್ಲಾ ಅವರು ಇಮ್ರಾನ್ ಖಾನ್ ಅವರನ್ನು ನಿಂದಿಸಿದಾಗ ಜಗಳ ಪ್ರಾರಂಭವಾಯಿತು. ಅಫ್ನಾನ್ ಉಲ್ಲಾ ಖಾನ್‌ಗೆ ಮಾರ್ವತ್ ಕಪಾಳಮೋಕ್ಷ ಮಾಡಿದರು. ಈ ವೇಳೆ ಇಬ್ಬರೂ ಥಳಿಸಿ, ಒದೆದು, ಹೊಡೆದಾಡಿಕೊಂಡರು.

ಈ ವಿಡಿಯೋ ಭಾರತದಲ್ಲಿ ಹೆಚ್ಚು ವೈರಲ್ ಆಗಿದೆ. ಸೋಶಿಯಲ್‌ ಮೀಡಿಯಾದಲ್ಲಿ ಜನ ಈ ನಾಯಕರನ್ನು ತೀವ್ರ ಗೇಲಿಗೆ ಒಳಪಡಿಸಿದ್ದಾರೆ. ʼʼಇದೇ ನಿಮ್ಮ ಸಂಸ್ಕೃತಿʼʼ ಎಂದು ಕೆಲವರು ಗೇಲಿ ಮಾಡಿದರೆ, ʼʼಹೊಡೆದಾಡಲು ನಿಮ್ಮ ಭಯೋತ್ಪಾದಕರ ಸಹಾಯವನ್ನೂ ಪಡೆದುಕೊಳ್ಳಿʼʼ ಎಂದು ಇನ್ನು ಕೆಲವರು ಚುಚ್ಚಿದ್ದಾರೆ.

ಇದನ್ನೂ ಓದಿ: ಪಾಕ್‌ನಿಂದ ಭಯೋತ್ಪಾದನೆ, ಕತ್ತೆಗಳ ಬಳಿಕ ಭಿಕ್ಷುಕರ ಎಕ್ಸ್‌ಪೋರ್ಟ್! ವಿದೇಶಿ ಜೈಲುಗಳಲ್ಲಿ ಪಾಕಿಸ್ತಾನದ ಬೆಗ್ಗರ್ಸ್

Exit mobile version