ನವದೆಹಲಿ: ಅಸಮರ್ಥ ನಾಯಕತ್ವ, ಉಗ್ರರ ಪೋಷಣೆ, ಭಯೋತ್ಪಾದನೆಗೆ ಹಣ ವಿನಿಯೋಗ ಸೇರಿ ಹಲವು ಕಾರಣಗಳಿಂದಾಗಿ ಪಾಕಿಸ್ತಾನವು (Pakistan) ಆರ್ಥಿಕವಾಗಿ ದಿವಾಳಿಯಾಗಿದೆ. ಹಾಗಾಗಿಯೇ, ಹಣಕ್ಕಾಗಿ ವಿಶ್ವ ಬ್ಯಾಂಕ್ ಸೇರಿ ಹಲವು ಜಾಗತಿಕ ಸಂಸ್ಥೆಗಳ ಎದುರು ಭಿಕ್ಷಾಪಾತ್ರೆ ಹಿಡಿದು ನಿಂತಿದೆ. ಪಾಕಿಸ್ತಾನದಲ್ಲಿ ಇಂತಹ ಪರಿಸ್ಥಿತಿ ಇರುವ ಬೆನ್ನಲ್ಲೇ, ಪಾಕ್ ವ್ಯಕ್ತಿಯೊಬ್ಬರು ವಿಮಾನದಲ್ಲಿಯೇ ಭಿಕ್ಷೆ ಬೇಡಿದ್ದು, ಈ ವಿಡಿಯೊ ಭಾರಿ (Viral Video) ವೈರಲ್ ಆಗಿದೆ.
ಹೌದು, ಕುರ್ತಾ, ಪೈಜಾಮ ಹಾಗೂ ನೀಲಿ ಜಾಕೆಟ್ ಧರಿಸಿರುವ ವ್ಯಕ್ತಿಯೊಬ್ಬ ವಿಮಾನದಲ್ಲಿಯೇ ಭಿಕ್ಷೆ ಬೇಡಿದ್ದಾನೆ. ಎರಡು ವಾರಗಳ ಹಿಂದೆ ಈತ ವಿಮಾನದಲ್ಲಿ ಭಿಕ್ಷೆ ಬೇಡಿದ್ದು, ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಸಾಮಾನ್ಯವಾಗಿ ವಿಮಾನಗಳಲ್ಲಿ ಪ್ರಯಾಣಿಸುವವರು ಉನ್ನತ ವರ್ಗದವರು ಎಂಬ ಭಾವನೆ ಇದೆ. ಆದರೆ, ಪಾಕಿಸ್ತಾನದ ನಾಗರಿಕನು ಅಲ್ಲಿಯೂ ಭಿಕ್ಷೆ ಬೇಡುವ ಮೂಲಕ ಅಚ್ಚರಿ ಮೂಡಿಸಿದ್ದಾನೆ.
ಪಾಕ್ ರಾಜಕಾರಣಿಯ ಭಿಕ್ಷಾಟನೆ ವಿಡಿಯೊ
Viral video whereby a Pakistani can be seen begging in a flight; Says I am not a beggar but need money to make a madrasas in Pakistan. pic.twitter.com/hUB3ZzVJGn
— Megh Updates 🚨™ (@MeghUpdates) July 13, 2023
ಮದರಸಾಕ್ಕಾಗಿ ಹಣ ಬೇಕಂತೆ
ವೈರಲ್ ಆಗುತ್ತಿದ್ದಂತೆಯೇ ಪಾಕಿಸ್ತಾನದ ವೆಬ್‌ಸೈಟ್ ಸೇರಿ ಹಲವು ಮೂಲಗಳಿಂದ ಜನ ಈತ ಯಾರೆಂದು ಪತ್ತೆಹಚ್ಚಿದ್ದಾರೆ. ಈತನ ಹೆಸರು ಅಖ್ತರ್ ಲಾವಾ ಎಂಬುದಾಗಿ ತಿಳಿದುಬಂದಿದೆ. ಅಷ್ಟಕ್ಕೂ, ಅಖ್ತರ್ ಲಾವಾ ಹೊಟ್ಟೆಪಾಡಿಗಾಗಿ ವಿಮಾನದಲ್ಲಿ ಭಿಕ್ಷೆ ಬೇಡಿಲ್ಲ. ಈತ ಲಾಹೋರ್‌ನಲ್ಲಿ ಮದರಸಾವನ್ನು ಮುನ್ನಡೆಸಲು ಜನರ ಬಳಿ ಹಣ ಸಂಗ್ರಹಿಸಲು ಮುಂದಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ.
“ನಾವು ಮದರಸಾವೊಂದನ್ನು ನಿರ್ಮಿಸಲು ಹಣ ಸಂಗ್ರಹಿಸುತ್ತಿದ್ದೇವೆ. ಯಾರಿಗಾದರೂ ದಾನ ಮಾಡುವ ಮನಸ್ಸಿದ್ದರೆ ದಯಮಾಡಿ ದೇಣಿಗೆ ನೀಡಿ. ನೀವು ಎದ್ದು ಬಂದು ನನಗೆ ಹಣ ಕೊಡಬೇಕಿಲ್ಲ. ನಾನೇ ನಿಮ್ಮ ಬಳಿ ಬಂದು ಹಣ ಪಡೆಯುತ್ತೇನೆ” ಎಂದು ಅಖ್ತರ್ ಲಾವಾ ಹೇಳಿದ್ದಾನೆ.
ಇದನ್ನೂ ಓದಿ: S Jaishankar: ಫ್ಯಾನ್ಸಿ ಶರ್ಟ್ ಧರಿಸಿ ಅಮೆರಿಕ ಸಚಿವ ಬ್ಲಿಂಕನ್ ಜತೆ ಜೈಶಂಕರ್ ಮಿಂಚಿಂಗ್; ಫೋಟೊ ವೈರಲ್
ಯಾರೀತ ಅಖ್ತರ್ ಲಾವಾ?
ಮೂಲಗಳ ಪ್ರಕಾರ, ಅಖ್ತರ್ ಲಾವಾ ಲಾಹೋರ್‌ನ ಸ್ಥಳೀಯ ರಾಜಕಾರಣಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಈತ ಉದ್ಯಮಿಯೂ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈತನ ವಿಡಿಯೊಗಳು ವೈರಲ್ ಆಗುತ್ತವೆ. ಅಲ್ಲದೆ, ‘ಲಾಹೋರ್ ದಾ ಪಾವಾ, ಅಖ್ತರ್ ಲಾವಾ’ ಎಂಬುದು (ಅಖ್ತರ್ ಲಾವಾ, ಲಾಹೋರ್‌ನ ಬುನಾದಿ) ಈತನ ಖ್ಯಾತ ಘೋಷಣೆಯಾಗಿದೆ.