ನವದೆಹಲಿ: ನ್ಯೂಜಿಲೆಂಡ್ ಸಂಸತ್ತಿನ ಅತ್ಯಂತ ಕಿರಿಯ ಸಂಸದೆಯ (Member of Parliament in New Zealand) ಪವರ್ ಫುಲ್ ಭಾಷಣ ಭಾರೀ ವೈರಲ್ (Powerful Speech) ಆಗುತ್ತಿದೆ. 21 ವರ್ಷದ ಹನಾ-ರವ್ಹಿತಿ ಮೈಪಿ-ಕ್ಲಾರ್ಕ್ (Hana-Rawhiti Maipi-Clarke) 170 ವರ್ಷಗಳಲ್ಲೇ ನ್ಯೂಜಿಲೆಂಡ್‌ನ ಅತ್ಯಂತ ಕಿರಿಯ ಸದಸ್ಯೆ(Youngest MP) ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಹೌರಾಕಿ-ವೈಕಾಟೊ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಹಿರಿಯ ಹಾಗೂ ಅತ್ಯಂತ ಗೌರವಾನ್ವಿತ ಸಂಸದ ನಾನಿಯಾ ಮಹುತಾ ಅವರನ್ನು ಸೋಲಿಸಿ, ಕಳೆದ ಅಕ್ಟೋಬರ್ ತಿಂಗಳಲ್ಲಿ ನ್ಯೂಜಿಲೆಂಡ್ ಸಂಸತ್ತಿಗೆ ಆಯ್ಕೆಯಾಗಿದ್ದಾರೆ. ಮೈಪಿ ಕ್ಲಾರ್ಕ್ ಅವರು ಸ್ಥಳೀಯ ಸಮುದಾಯಗಳ (native communities) ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಆಕೆಯ ಅಜ್ಜ, ತೈತಿಮು ಮೈಪಿ, ಮಾವೋರಿ ಕಾರ್ಯಕರ್ತ ಗುಂಪಿನ ನ್ಗಾ ಟಮಾಟೊವಾ ಸದಸ್ಯರಾಗಿದ್ದಾರೆ(viral video).
ಮೈಪಿ ಕ್ಲಾರ್ಕ್ ಅವರು ಕಳೆದ ತಿಂಗಳು ಮಾಡಿದ ಭಾವೋದ್ರಿಕ್ತ ಭಾಷಣವು ಸಾಂಪ್ರದಾಯಿಕ ‘ಹಕಾ’ ಸಂಹವನದಲ್ಲಿತ್ತು. ಹಕಾ ಎಂದರೆ ಯುದ್ಧದ ಕೂಗು ಎಂದರ್ಥ. “ನಾನು ನಿಮಗಾಗಿ ಸಾಯುತ್ತೇನೆ … ಆದರೆ ನಾನು ನಿಮಗಾಗಿ ಬದುಕುತ್ತೇನೆ ಕೂಡ” ಎಂದು ತಮ್ಮ ಭಾಷಣದಲ್ಲಿ ಮತದಾರರಿಗೆ ಭರವಸೆ ನೀಡಿದರು. ಇದು ಭಾರೀ ವೈರಲ್ ಆಗಿದೆ.
New Zealand natives' speech in parliament pic.twitter.com/OkmYNm58Ke
— Enez Özen | Enezator (@Enezator) January 4, 2024
ತಮ್ಮ ಜೀವನದುದ್ದಕ್ಕೂ ತಮ್ಮ ತರಗತಿಯ ಹಿಂಭಾಗದಲ್ಲಿ ಕುಳಿತಿರುವ ತಮರಿಕಿ ಮಾವೋರಿಗೆ, ತಮ್ಮ ಮಾತೃಭಾಷೆಯನ್ನು ಕಲಿಯಲು ಹಂಬಲಿಸುವ ವಾಕಾಮಾ ಪೀಳಿಗೆಗಳಿಗೆ, ಇನ್ನೂ ತಮ್ಮ ಪೆಪೆಹಾಕ್ಕೆ ಹೋಗದ ತಮರಿಕಿಗಳ ಪರವಾಗಿ ನಾನಿದ್ದೇನೆ. ಈ ಕೆಲಸಗಳು ತೆರೆದ ಬಾಹುಗಳಿಂದ ನಿಮಗಾಗಿ ಕಾಯುತ್ತಿವೆ ಎಂದು ಮೈಪಿ ಕ್ಲಾರ್ಕ್ ಅವರು ತಮ್ಮ ಭಾಷಣದಲ್ಲಿ ಹೇಳಿದರು.
21 ವರ್ಷ ವಯಸ್ಸಿನ ಮೈಪಿ ಕ್ಲಾರ್ಕ್ ಅವರು ಆಕ್ಲೆಂಡ್ ಮತ್ತು ಹ್ಯಾಮಿಲ್ಟನ್ ನಡುವಿನ ಸಣ್ಣ ಪಟ್ಟಣವಾದ ಹಂಟ್ಲಿಯವರು. ಮೈಪಿ ಕ್ಲಾರ್ಕ್ ಅವರು ತಮ್ಮನ್ನು ತಾವು ರಾಜಕಾರಣಿಯಾಗಿ ಗುರುತಿಸಿಕೊಳ್ಳಲು ಬಯಸುವುದಿಲ್ಲ. ಆದರೆ ಮಾವೋರಿ ಭಾಷೆಯ ರಕ್ಷಕಳಾಗಿ ನೋಡುತ್ತಾರೆ. ಮಾವೋರಿಗಳ ಹೊಸ ಜನರ ಧ್ವನಿಯನ್ನು ಕೇಳುವ ಅಗತ್ಯವಿದೆ ಎಂದು ಭಾವಿಸುತ್ತಾರೆಂದು ದಿ ಗಾರ್ಡಿಯನ್ ವರದಿ ಮಾಡಿದೆ.
ಯಾವುದನ್ನೂ ವೈಯಕ್ತಿಕವಾಗಿ ತೆಗೆದುಕೊಳ್ಳಬೇಡಿ ಎಂದು ನನಗೆ ಸಂಸತ್ತಿಗೆ ಪ್ರವೇಶಿಸುವ ಮೊದಲು ಕೆಲವು ಸಲಹೆಗಳನ್ನು ನೀಡಲಾಯಿತು. ಆದರೆ, ಈ ಚೇಂಬರ್‌ನಲ್ಲಿ ಹೇಳಲಾದ ಎಲ್ಲವನ್ನೂ ನಾನು ವೈಯಕ್ತಿಕವಾಗಿ ತೆಗೆದುಕೊಳ್ಳದೆ ಇರಲಾರೆ ಎಂದು ಅವರು ತಮ್ಮ ಭಾಷಣದಲ್ಲಿ ಹೇಳಿದ್ದು ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.
ಕೇವಲ ಒಂದೆರಡು ವಾರಗಳಲ್ಲಿ… ಈ ಸರ್ಕಾರವು ನನ್ನ ಇಡೀ ಪ್ರಪಂಚದ ಮೇಲೆ ದಾಳಿ ಮಾಡಿದೆ. ಆರೋಗ್ಯ, ತಯಾವೋ (ಪರಿಸರ), ವೈ (ನೀರು), ವೇನುವಾ (ಭೂಮಿ), ನೈಸರ್ಗಿಕ ಸಂಪನ್ಮೂಲಗಳು, ಮಾವೋರಿ ವಾರ್ಡ್‌ಗಳು, ರಿಯೋ (ಭಾಷೆ), ತಮರಿಕಿ, ಮತ್ತು ಟೆ ತಿರಿಟಿ ಅಡಿಯಲ್ಲಿ ಈ ದೇಶದಲ್ಲಿರಲು ನನ್ನ ಮತ್ತು ನಿಮ್ಮ ಹಕ್ಕು ಎಂದು ಮೈಪಿ-ಕ್ಲಾರ್ಕ್ ಹೇಳಿದರು. ಮನೆಯಿಂದ ನೋಡುತ್ತಿರುವ ಪ್ರತಿಯೊಬ್ಬ ವ್ಯಕ್ತಿಗೆ ಹೇಳಲಿಚ್ಛಿಸುತ್ತೇನೆ, ಇದು ನನ್ನ ಕ್ಷಣವಲ್ಲ, ಇದು ನಿಮ್ಮದು ಎಂದು ಅವರು ತಮ್ಮ ಭಾಷಣದ ಕೊನೆಯಲ್ಲಿ ಹೇಳಿದರು.
ಈ ಸುದ್ದಿಯನ್ನೂ ಓದಿ: Viral Video: ರಶ್ ಇರುವ ರೈಲಿನೊಳಗೆ ಹತ್ತೋದು ಹೇಗೆ?; ಈ ವಿಡಿಯೊ ನೋಡಿ