ನವದೆಹಲಿ: 65 ಉಕ್ರೇನ್ ಯುದ್ಧ ಕೈದಿಗಳನ್ನು (65 Ukrainian Prisoners) ಹೊತ್ತೊಯ್ಯುತ್ತಿದ್ದ ಸೇನಾ ಸಾರಿಗೆ ವಿಮಾನವು ಉಕ್ರೇನ್ ಗಡಿಯ ಬೆಲ್ಗೊರೊಡ್ ಪ್ರದೇಶದಲ್ಲಿ ಅಪಘಾತಕ್ಕೀಡಾಗಿದೆ(military transport plane crashed). ವಿಮಾನದಲ್ಲಿದ್ದ ಎಲ್ಲರೂ ಸಾವಿಗೀಡಾಗಿದ್ದಾರೆ ಎಂದು ರಷ್ಯಾ (Russia) ಹೇಳಿದೆ. ಈ ವಿಮಾನ ಪತನದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ(Viral Video). ಬೆಂಕಿಯುಂಡೆಯಾಗಿ ವಿಮಾನ ಪತನವಾಗುವುದನ್ನು ವಿಡಿಯೋದಲ್ಲಿ ಕಾಣಬಹುದು.
ಐಎಲ್ – 76 ಸೇನಾ ಸಾರಿಗೆ ವಿಮಾನವು ಬೆಲ್ಗೊರೊಡ್ ಪ್ರದೇಶದಲ್ಲಿ ಮಾಸ್ಕೋ ಸ್ಥಳೀಯ ಕಾಲಾಮಾನ ಪ್ರಕಾರ 11 ಗಂಟೆಗೆ ಪತನವಾಯಿತು ಎಂದು ಮಾಸ್ಕೋ ರಕ್ಷಣಾ ಸಚಿವಾಲಯವು ರಷ್ಯಾದ ಸುದ್ದಿ ಸಂಸ್ಥೆಗೆ ತಿಳಿಸಿದೆ.
IL-76 carrying Ukrainian POWs crashes in Belgorod region – Russian MoDhttps://t.co/do6MamDcza pic.twitter.com/8Xfzt7Gz21
— RT (@RT_com) January 24, 2024
ವಿಮಾನದಲ್ಲಿ ಉಕ್ರೇನ್‌ನ 65 ಯುದ್ಧ ಕೈದಿಗಳಿದ್ದರು. ಜತೆಗೆ ಆರು ಸಿಬ್ಬಂದಿ ಹಾಗೂ ಮೂರು ಎಸ್ಕಾರ್ಟ್ಸ್ ಪ್ರಯಾಣಿಸುತ್ತಿದ್ದರು. ವಿನಿಮಯಕ್ಕೆ ಯುದ್ಧ ಕೈದಿಗಳನ್ನು ಬೆಲ್ಗೆರೊಡ್ ಪ್ರದೇಶಕ್ಕೆ ಕರೆದುಕೊಂಡು ಹೋಗಲಾಗುತ್ತಿತ್ತು ರಷ್ಯಾದ ರಕ್ಷಣಾ ಸಚಿವಾಲಯವು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ವಿಮಾನವನ್ನು ಕೈವ್‌ನಿಂದ ಹೊಡೆದುರಳಿಸಲಾಗಿದೆ. ಇದಕ್ಕೆ ಪಾಶ್ಚಿಮಾತ್ಯ ರಾಷ್ಟ್ರಗಳ ಕ್ಷಿಪಣಿಗಳೇ ಕಾರಣ ಎಂದು ರಷ್ಯಾದ ಸಂಸತ್ತಿನ ಕೆಳಮನೆಯ ಸದಸ್ಯ ವ್ಯಾಚೆಸ್ಲಾವ್ ವೊಲೊಡಿನ್ ಆರೋಪಿಸಿದ್ದಾರೆ. ಅವರು ತಮ್ಮ ಸೈನಿಕರನ್ನು ತಾವೇ ಕೊಂದಿದ್ದಾರೆ. ಮಾನವೀಯ ಕಾರ್ಯಾಚರಣೆಯನ್ನು ನಡೆಸುತ್ತಿದ್ದ ನಮ್ಮ ಪೈಲಟ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈಶಾನ್ಯದಲ್ಲಿರುವ ಕೊರೊಚಾನ್ಸ್ಕಿ ಜಿಲ್ಲೆಯಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಪ್ರಾದೇಶಿಕ ಗವರ್ನರ್ ವ್ಯಾಚೆಸ್ಲಾವ್ ಗ್ಲಾಡ್ಕೋವ್ ಟೆಲಿಗ್ರಾಮ್‌ನಲ್ಲಿ ತಿಳಿಸಿದ್ದಾರೆ. ವಿಮಾನ ಪತನವಾದ ಸ್ಥಳಕ್ಕೆ ತನಿಖಾ ತಂಡವನ್ನು ಕಳುಹಿಸಲಾಗಿದೆ. ತುರ್ತು ಸೇವೆಗಳನ್ನು ಒದಗಿಸಲಾಗುತ್ತಿದೆ. ನನ್ನ ಪ್ರವಾಸದ ವೇಳಾಪಟ್ಟಿಯನ್ನು ಬದಲಿಸಿಕೊಂಡು, ಘಟನಾ ಸ್ಥಳಕ್ಕೆ ಹೋಗುತ್ತಿದ್ದೇನೆ ಎಂದು ಗ್ಲಾಡ್ಕೋವ್ ಅವರು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Viral Video: ಲೈವ್ ಪ್ರದರ್ಶನ ನೀಡುತ್ತಿರುವಾಗಲೇ ರಷ್ಯಾ ನಟಿ ಉಕ್ರೇನ್ ಬಾಂಬ್ ದಾಳಿಗೆ ಬಲಿ