ನವದೆಹಲಿ: ರೇಪ್ (Rape) ಮಾಡುವಾಗ 111 ಬಾರಿ ಚಾಕುವಿನಿಂದ (Stabing) ಇರಿದು ಮತ್ತು ಮೂರುವರೆ ಗಂಟೆಗಳ ಕಾಲ ಚಿತ್ರ ಹಿಂಸೆ ನೀಡಿ ತನ್ನ ಮಾಜಿ ಗೆಳತಿಯನ್ನು (Ex Girlfriend Murder) ಕೊಲೆ ಮಾಡಿದ ಸ್ಯಾಡಿಸ್ಟ್ ವ್ಯಕ್ತಿಗೆ (Accused) ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ (Russia President Vladimir Putin) ಅವರು ಕ್ಷಮಾದಾನ ನೀಡಿದ್ದಾರೆ. ಈ ಸ್ಯಾಡಿಸ್ಟಿಕ್ ಆರೋಪಿ ಉಕ್ರೇನ್‌ನಲ್ಲಿ ರಷ್ಯಾ ಪರವಾಗಿ ಹೋರಾಡಿದ್ದಾನೆ ಎಂಬ ಏಕೈಕ ಕಾರಣಕ್ಕೆ ಆತನ ಅಪರಾಧವನ್ನು ಪುಟಿನ್ ಅವರು ಮನ್ನಿಸಿದ್ದಾನೆ. 27 ವರ್ಷದ ಆರೋಪಿ, ವ್ಲಾಡಿಸ್ಲಾವ್ ಕಾನ್ಯುಸ್, 23 ವರ್ಷದ ವೆರಾ ಪೆಖ್ಟೆಲೆವಾ ಅವರನ್ನು ಹತ್ಯೆಗೈದಿದ್ದಕ್ಕಾಗಿ 17 ವರ್ಷಗಳ ಜೈಲು ಶಿಕ್ಷೆಯ ಒಂದು ವರ್ಷಕ್ಕಿಂತ ಕಡಿಮೆ ಅವಧಿಯನ್ನು ಅನುಭವಿಸಿದ್ದ. ಬಳಿಕ ಆತನನ್ನು ರಷ್ಯಾ ಸೇನೆಗೆ ಸೇರ್ಪಡೆ ಮಾಡಲಾಗಿತ್ತು.
ಮಿಲಿಟರಿಯಲ್ಲಿ ಆರು ತಿಂಗಳು ಸೇವೆ ಸಲ್ಲಿಸಿದ ನಂತರ ಆತನನ್ನು ಮುಕ್ತಗೊಳಿಸುವ ಮತ್ತು ಆತನ ಕ್ರಿಮಿನಲ್ ದಾಖಲೆಯನ್ನು ತೆರವುಗೊಳಿಸುವ ಕ್ರಮವನ್ನು ಸಂತ್ರಸ್ತೆಯ ತಾಯಿ, 49 ವರ್ಷದ ಒಕ್ಸಾನಾ ಅವರು ಖಂಡಿಸಿದ್ದಾರೆ. ಸ್ಯಾಡಿಸ್ಟ್ ಆಗಿರುವ ಆರೋಪಿ ಈಗ ಮುಕ್ತನಾಗಿದ್ದು, ಇತರ ಹೆಣ್ಣುಮಕ್ಕಳನ್ನು ಬಲಿ ಪಡೆಯಲು ಸಿದ್ಧನಾಗಿದ್ದಾನೆ ಎಂದು ಅವರು ಆರೋಪಿಸಿದ್ದಾರೆ.
ಆರೋಪಿ ಕಾನ್ಯುಸ್, ಸಂತ್ರಸ್ತ ವೆರಾಳನ್ನು ಸುಮಾರು ನಾಲ್ಕು ಗಂಟೆಗಳ ಕಾಲ ಕ್ರೂರ ಚಿತ್ರಹಿಂಸೆ ನೀಡಿದ್ದ. ಆಕೆಯ ಮೇಲೆ ನಿರಂತರಾಗಿ ಅತ್ಯಾಚಾರ ನಡೆಸಿದ್ದ ಮತ್ತು ಸತತವಾಗಿ ಆಕೆ ಚಾಕುವಿನಿಂದ ಇರಿದು ಕೊಂದಿದ್ದ. ಸಂಬಂಧ ಮುರಿದು ಬಿದ್ದ ಬಳಿಕ ತನ್ನ ವಸ್ತುಗಳನ್ನು ಹಿಂಪಡೆಯಲು ಬಂದ ವೆರಾಳ ಮೇಲೆ ಕಾನ್ಯುಸ್ ಈ ಹೇಯ ಕೃತ್ಯವನ್ನು ನಡೆಸಿದ್ದ.
ಕಾನ್ಯುಸ್, ವೆರಾಳಿಗೆ ಚಿತ್ರಹಿಂಸೆ ನೀಡಿ ಕೊಲೆ ಮಾಡುವಾಗು ಆಕೆ ಜೋರಾಗಿ ಕಿರುಚಿಕೊಳ್ಳುತ್ತಿದ್ದಳು. ಆಗ ನೆರೆ ಹೊರೆಯವರು ಪೊಲೀಸರಿಗೆ ಏಳು ಬಾರಿ ಫೋನ್ ಕರೆ ಮಾಡಿದ್ದರು. ಅಷ್ಟಾದರೂ ಪೊಲೀಸರು ಸ್ಥಳಕ್ಕೆ ಆಗಮಿಸಿ ಸಂಭಾವ್ಯ ಕೊಲೆಯನ್ನು ತಡೆಯಲು ಮುಂದಾಗಲಿಲ್ಲ. ಈ ಬಗ್ಗೆ ನೆರೆಹೊರೆಯುವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನ್ಯಾಯಾಲಯದಲ್ಲಿ, ಈ ಪ್ರಕರಣವನ್ನು ‘ವಿಶೇಷವಾಗಿ ಕ್ರೂರ ಕೊಲೆ’ ಎಂದು ಬ್ರಾಂಡ್ ಮಾಡಲಾಯಿತು, ಸ್ಯಾಡಿಸ್ಟ್ ಆರೋಪಿ ವೆರಾ ಅವರನ್ನು ಚಿತ್ರಹಿಂಸೆ ನೀಡಿ ಕೊಂದಿದ್ದಾನೆ ಎಂದು ಮಾನವ ಹಕ್ಕುಗಳ ಪ್ರಚಾರಕ ಅಲಿಯೋನಾ ಪೊಪೊವಾ ಹೇಳಿದ್ದಾರೆ. ಅಂಥ ಆರೋಪಿಗೆ ಕ್ಷಮಾದಾನ ನೀಡಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ವಿರುದ್ಧ ಸಂತ್ರಸ್ತೆಯ ತಾಯಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Physical abuse : ಅಪ್ರಾಪ್ತೆ ಮೇಲೆ ದೌರ್ಜನ್ಯ ; ಅತ್ಯಾಚಾರ ಎಸಗಿ ವಿಡಿಯೊ ಮಾಡಿದ ಕಿರಾತಕರು!