ಪ್ಯಾಲೆಸ್ತೀನ್‌ನ (Palestine) ಗಾಜಾಪಟ್ಟಿಯ (Gaza Strip) ಹಮಾಸ್ ಉಗ್ರರು ಇಸ್ರೇಲ್ ಮೇಲೆ ರಣಭೀಕರ ಸಮರ (Israel Palestine War) ಸಾರಿದ್ದಾರೆ. ಸುಮಾರು 5 ಸಾವಿರ ರಾಕೆಟ್‌ಗಳ (Missile) ದಾಳಿ ಜತೆಗೆ ನೂರಾರು ಉಗ್ರರು ಇಸ್ರೇಲ್‌ನ ನಗರಗಳಲ್ಲಿ ಗುಂಡಿನ ದಾಳಿ ಮಾಡುತ್ತಿದ್ದಾರೆ. ಮಹಿಳೆಯರು, ಮಕ್ಕಳು, ಹಿರಿಯರು ಎನ್ನದೆ ಸಿಕ್ಕಸಿಕ್ಕವರ ಮೇಲೆ ಹಮಾಸ್ ಉಗ್ರ(Hamas Terrorists) ರು ಗುಂಡಿನ ದಾಳಿ ನಡೆಸುತ್ತಿದ್ದಾರೆ. ಈ ದಾಳಿಯಲ್ಲಿ ಸುಮಾರು 300 ಅಧಿಕ ಜನರು ಮೃತಪಟ್ಟಿದ್ದು, ಸಾವಿರಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಪ್ರತಿಯಾಗಿ ಇಸ್ರೇಲ್ ಕೂಡ ಗಾಜಾಪಟ್ಟಿಯ ಮೇಲೆ ವೈಮಾನಿಕ ದಾಳಿಯನ್ನು ನಡೆಸಿದೆ. ಗಾಜಾಪಟ್ಟಿಯಿಂದ ತೂರಿ ಬರುವ ರಾಕೆಟ್‌ಗಳನ್ನು ಆಕಾಶದಲ್ಲೇ ಹೊಡೆದುರುಳಿಸುವ ಐರನ್ ಡೋಮ್ ಕ್ಷಿಪಣಿ ರಕ್ಷಣಾ ವ್ಯವಸ್ಥೆಯು (Iron Dome) ಸಂಪೂರ್ಣವಾಗಿ ರಾಕೆಟ್ ದಾಳಿಯನ್ನು ಹಿಮ್ಮೆಟ್ಟಿಸುವಲ್ಲಿ ಸಫಲವಾಗಿಲ್ಲ ಎಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ. ವಾಸ್ತವದಲ್ಲಿ ಈ ಕ್ಷಿಪಣಿ ವಿರೋಧ ವ್ಯವಸ್ಥೆಯ ಬಗ್ಗೆ ಸಾಕಷ್ಟು ಹಿರಿಮೆಯ ಮಾತುಗಳಿದ್ದವು.
ಹಮಾಸ್ ಉಗ್ರರು ಐರನ್ ಡೋಮ್ ಲೋಪವನ್ನು ಪತ್ತೆ ಹಚ್ಚೆ ಏಕಕಾಲಕ್ಕೆ ಸಾವಿರಾರು ಕ್ಷಿಪಣಿ ದಾಳಿ ನಡೆಸುವ ಮೂಲಕ ಇಸ್ರೇಲ್‌ಗೆ ಬಿಸಿ ಮುಟ್ಟಿಸಿದ್ದಾರೆ. ಪರಿಣಾಮ ಹಮಾಸ್ ಉಗ್ರರು ಗರಿಷ್ಠ ಸಂಖ್ಯೆಯಲ್ಲಿ ಸಾವು ನೋವಿಗೆ ಕಾರಣವಾಗಿದ್ದಾರೆ. ಹಲವಾರು ರಾಕೆಟ್‌ಗಳನ್ನು ಇಸ್ರೇಲ್‌ನ ಹೆಚ್ಚು-ಅಭಿಮಾನದ ಐರನ್ ಡೋಮ್ ಕ್ಷಿಪಣಿ ರಕ್ಷಣಾ ವ್ಯವಸ್ಥೆಯಿಂದ ತಡೆಹಿಡಿಯಲಾಗಿದ್ದರೂ, ಇನ್ನೂ ಅನೇಕವು ಇಸ್ರೇಲಿ ಪ್ರದೇಶಗಳಲ್ಲಿ ಸ್ಫೋಟಗೊಂಡವು ಮತ್ತು ಕಳೆದ ಹತ್ತು ವರ್ಷದಲ್ಲೇ ಇದೇ ಮೊದಲ ಬಾರಿಗೆ ಭೀಕರ ಪರಿಸ್ಥಿತಿಯನ್ನು ಸೃಷ್ಟಿಸಿದವು.
ಏನಿದು ಐರನ್ ಡೋಮ್?
ಸರಳ ಭಾಷೆಯಲ್ಲಿ ಹೇಳುವುದಾದರೆ, ಐರನ್ ಡೋಮ್ ಎನ್ನುವುದು ಕ್ಷಿಪಣಿ ದಾಳಿಯನ್ನು ತಡೆಯುವ ಒಂದು ವ್ಯವಸ್ಥೆಯಾಗಿದೆ. ಇಸ್ರೇಲ್ ವಿನ್ಯಾಸಗೊಳಿಸಿದ ಐರನ್ ಡೋಮ್ ವ್ಯವಸ್ಥೆಯು ಕಡಿಮೆ-ಶ್ರೇಣಿಯ ವೈಮಾನಿಕ ದಾಳಿಗಳನ್ನು ತಟಸ್ಥಗೊಳಿಸುವ ಮೂಲಕ ಜನಸಂಖ್ಯೆಯ ಪ್ರದೇಶಗಳು ಮತ್ತು ನಿರ್ಣಾಯಕ ಸ್ವತ್ತುಗಳನ್ನು ರಕ್ಷಿಸುವ ಸಾಮರ್ಥ್ಯವನ್ನು ಹೊಂದಿದೆ. ರಕ್ಷಣಾ ವ್ಯವಸ್ಥೆಯು ವಾಯುಪ್ರದೇಶದಲ್ಲಿನ ಟಾರ್ಗೆಟ್‌ಗಳನ್ನು ಪ್ರತಿಬಂಧಿಸಬಹುದು ಮತ್ತು ರಾಕೆಟ್‌ನ ಪಥ, ವೇಗ ಮತ್ತು ನಿರೀಕ್ಷಿತ ಗುರಿಯನ್ನು ಪತ್ತೆಹಚ್ಚಲು ವೇಗದ, ಸಂಕೀರ್ಣ ಲೆಕ್ಕಾಚಾರಗಳನ್ನು ನಿರ್ವಹಿಸುತ್ತದೆ. ಈ ಲೆಕ್ಕಾಚಾರಗಳನ್ನು ಬಳಸಿಕೊಂಡು ಗಾಜಾಪಟ್ಟಿಯಿಂದ ತೂರಿ ಬರುವ ಕ್ಷಿಪಣಿಗಳನ್ನು ಗಾಳಿಯಲ್ಲಿ ನಾಶ ಪಡಿಸುತ್ತದೆ.
2011ರಲ್ಲಿ ಮೊದಲ ಬಾರಿಗೆ ಇಸ್ರೇಲ್, ಗಾಜಾಪಟ್ಟಿಯಿಂದ 40 ಕಿ.ಮೀ ದೂರದಲ್ಲಿರುವ ತನ್ನ ದಕ್ಷಿಣದ ನಗರ ಬೀರಶೇವಾದಲ್ಲಿ ಮೊದಲನೇ ಬ್ಯಾಟರಿಯನ್ನು ಪ್ರತಿಷ್ಠಾಪಿಸಿತು. ವಾಸ್ತವದಲ್ಲಿ ಈ ಪ್ರದೇಶವು ಹಮಾಸ್ ಉಗ್ರರ ತಮ್ಮ ದಾಳಿಗೆ ಆಯ್ದುಕೊಳ್ಳುವ ನೆಚ್ಚಿನ ತಾಣವಾಗಿದೆ. ಇಸ್ರೇಲ್ ಬಳಿ ಈಗ ಇಂಥ 10 ಬ್ಯಾಟರಿಗಳಿವೆ(ಐರನ್ ಡೋಮ್ ವ್ಯವಸ್ಥೆ).
ಐರನ್ ಡೋಮ್ ಹೇಗೆ ಕೆಲಸ ಮಾಡುತ್ತದೆ?
ಐರನ್ ಡೋಮ್ ವ್ಯವಸ್ಥೆಯನ್ನು ಅತ್ಯಾಧುನಿಕ ರಕ್ಷಣಾ ವ್ಯವಸ್ಥೆ ಎಂದು ಪರಿಗಣಿಸಲಾಗಿದೆ. ಗಾಳಿಯಲ್ಲಿ ಒಳಬರುವ ದಾಳಿಗಳನ್ನು ಗುರುತಿಸಲು ಮತ್ತು ನಾಶಮಾಡಲು ಇದು ರಾಡಾರ್ ಅನ್ನು ಬಳಸಿಕೊಳ್ಳುತ್ತದೆ.
ಗಾಜಾದಿಂದ ಹಾರಿಸಲಾದ ರಾಕೆಟ್‌ಗಳಂತಹ ಕಡಿಮೆ-ಶ್ರೇಣಿಯ ಮೂಲ ಶಸ್ತ್ರಾಸ್ತ್ರಗಳನ್ನು ಎದುರಿಸಲು ಸಹಾಯ ಮಾಡಲು ಶಸ್ತ್ರಾಸ್ತ್ರ ವ್ಯವಸ್ಥೆಯನ್ನು ಐರನ್ ಡೋಮ್ ಮೂಲಕ ವಿನ್ಯಾಸಗೊಳಿಸಲಾಗಿದೆ. ಐರನ್ ಡೋಮ್‌ನ ಪ್ರತಿಯೊಂದು ಬ್ಯಾಟರಿಯು ರಾಡಾರ್ ಪತ್ತೆ ಮತ್ತು ಟ್ರ್ಯಾಕಿಂಗ್ ಸಿಸ್ಟಮ್, ಫೈರಿಂಗ್ ಕಂಟ್ರೋಲ್ ಸಿಸ್ಟಮ್ ಮತ್ತು 20 ಇಂಟರ್‌ಸೆಪ್ಟರ್ ಕ್ಷಿಪಣಿಗಳಿಗೆ ಮೂರು ಲಾಂಚರ್‌ಗಳನ್ನು ಹೊಂದಿರುತ್ತದೆ. ಪ್ರತಿ ಬ್ಯಾಟರಿಯು 4 ರಿಂದ 70 ಕಿ.ಮೀ. ವ್ಯಾಪ್ತಿಯನ್ನು ಹೊಂದಿರುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ, ಈ ಬ್ಯಾಟರಿಗಳನ್ನು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ತೆಗೆದುಕೊಂಡು ಹೋಗಬಹುದು. ಎಲ್ಲೆಲ್ಲಿ ಅಗತ್ಯವಿದೆಯೋ ಅಲ್ಲಿ ಅವಳಡಿಸಲು ಇದರಿಂದ ಸಾಧ್ಯವಾಗಲಿದೆ.
ಇಸ್ರೇಲ್‌ನಿಂದಲೇ ಐರನ್ ಡೋಮ್ ಅಭಿವೃದ್ಧಿ
ಇಸ್ರೇಲ್‌ನ ರಫಾಯಲ್ ಅಡ್ವಾನ್ಸ್ಡ್ ಡಿಫೆನ್ಸ್ ಸಿಸ್ಟಮ್ ಕಂಪನಿಯು ಈ ಐರನ್ ಡೋಮ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. ಇದೊಂದು ಸರ್ಕಾರಿ ಸ್ವಾಮ್ಯದ ಕಂಪನಿಯಾಗಿದೆ. ಈ ವ್ಯವಸ್ಥೆಯ ಅಭಿವೃದ್ಧಿಗೆ ಭಾಗಶಃ ಅಮೆರಿಕ ಕೂಡ ಹಣವನ್ನು ಹೂಡಿಕೆ ಮಾಡಿದೆ. 2016ರಲ್ಲಿ ಈ ವ್ಯವಸ್ಥೆ ಅಭಿವೃದ್ಧಿಗೆ ಸುಮಾರು 5 ಶತಕೋಟಿ ಡಾಲರ್ ವೆಚ್ಚ ಮಾಡಲಾಗಿದೆ. ಐರನ್ ಡೋಮ್ ಇಸ್ರೇಲ್ ಪ್ರಮುಖ ರಕ್ಷಣೆಯ ಅಸ್ತ್ರವಾಗಿದೆ.
ಈ ಸುದ್ದಿಯನ್ನೂ ಓದಿ: Israel Palestine War: ಹಮಾಸ್ ಬೆನ್ನಲ್ಲೇ ಲೆಬನಾನ್‌ನ ಹೆಜ್ಬುಲ್ಲಾ ಉಗ್ರರ ದಾಳಿ; ಇಸ್ರೇಲ್‌ಗೆ ಡಬಲ್ ಸಂಕಷ್ಟ
ಹಮಾಸ್ ಉಗ್ರರ ದಾಳಿ ಸಕ್ಸೆಸ್ ಆದದ್ದು ಹೇಗೆ?
ಬಲಾಢ್ಯ ರಕ್ಷಣಾ ವ್ಯವಸ್ಥೆಯನ್ನು ಇಸ್ರೇಲ್ ಹೊಂದಿದ್ದರೂ, ಹಮಾಸ್ ಉಗ್ರರು ಹೇಗೆ ಅಷ್ಟೊಂದು ಘಾತುಕ ಶಕ್ತಿಯಲ್ಲಿ ದಾಳಿ ನಡೆಸಿದರು ಎಂಬುದು ಅಚ್ಚರಿಯಾಗುತ್ತದೆ. ಅತ್ಯಾಧುನಿಕ ಸೆನ್ಸರ್‌ಗಳನ್ನು ಒಳಗೊಂಡಿರುವ ಇಸ್ರೇಲ್ ವ್ಯವಸ್ಥೆಯ ಲೋಪಗಳನ್ನು ಬಳಸಿಕೊಂಡು ದಾಳಿ ನಡೆಸಲು ಯಶಸ್ವಿಯಾಯಿತು. ಹಲವು ವರ್ಷಗಳಿಂದ ಇಸ್ರೇಲ್
ಹಮಾಸ್, ಈಗ ಹಲವಾರು ವರ್ಷಗಳಿಂದ ಐರನ್ ಡೋಮ್ ವ್ಯವಸ್ಥೆಯಲ್ಲಿ ದೌರ್ಬಲ್ಯವನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿತ್ತು. ಪ್ಯಾಲೇಸ್ತಿನಿಯನ್ ಉಗ್ರಗಾಮಿ ಗುಂಪು ಕಡಿಮೆ ಅವಧಿಯಲ್ಲಿ ಅನೇಕ ರಾಕೆಟ್‌ಗಳನ್ನು ಹಾರಿಸುವ ಮೂಲಕ ಯಶಸ್ವಿಯಾಗಿದೆ. ಹೀಗಿದ್ದೂ ಅದಕ್ಕೆ ನಿಯಂತ್ರಣ ವ್ಯವಸ್ಥೆಗೆ ಎಲ್ಲಾ ಟಾರ್ಗೆಟ್‌ಗಳನ್ನು ಬೇಧಿಸುವುದು ಸಾಧ್ಯವಾಗಿಲ್ಲ. ಶನಿವಾರ ಹಮಾಸ್ ಉಗ್ರರು 20 ನಿಮಿಷದ ಅವಧಿಯಲ್ಲಿ 5000 ರಾಕೆಟ್‌ಗಳಿಂದ ದಾಳಿ ಮಾಡಿದ್ದಾರೆ. ವರದಿಗಳ ಪ್ರಕಾರ, ಐರನ್ ಡೋಮ್, ಹೀಗೆ ದಾಳಿ ಮಾಡಿದ ಕ್ಷಿಪಣಿಗಳ ಪೈಕಿ ಶೇ.90ರಷ್ಟು ಕ್ಷಿಪಣಿಗಳನ್ನು ನಾಶಪಡಿಸಲು ಯಶಸ್ವಿಯಾಗಿದೆ.