Site icon Vistara News

Puffer Fish: ಮೀನು ತಿಂದು ಸತ್ತ ಹೆಂಡತಿ, ಕೋಮಾಕ್ಕೆ ಜಾರಿದ ಗಂಡ! ಏನಿದು ಪಫರ್ ಫಿಶ್?

Wife dead and husband in coma by eating Puffer Fish

ನವದೆಹಲಿ: ಮೀನು ತಿಂದು ಯಾರಾದರೂ ಸಾಯೋದಕ್ಕೆ ಸಾಧ್ಯನಾ? ಖಂಡಿತ ಇಲ್ಲ. ಆದರೂ ಮಲೇಷ್ಯಾದಲ್ಲಿ ಮೀನು ತಿಂದು 83 ವರ್ಷದ ಮಹಿಳೆಯೊಬ್ಬಳು ಮೃತಪಟ್ಟರೆ, ಆಕೆಯ ಗಂಡ ಕೋಮಾಕ್ಕೆ ಜಾರಿದ್ದಾರೆ! ಹೌದು, ಇದು ನಿಜ. ಈ ದಂಪತಿ ಪಫರ್ ಮೀನು (Puffer Fish) ಸೇವಿಸಿದ್ದೇ ಈ ದುರಂತಕ್ಕೆ ಕಾರಣವಾಗಿದೆ. ಪಫರ್ ಮೀನು ಡೆಡ್ಲಿ ಮೀನು ಎಂದೇ ಖ್ಯಾತವಾಗಿದೆ. ಈ ಘಟನೆ ಮಾರ್ಚ್ 25 ರಂದು ಜೊಹೋರ್‌ನಲ್ಲಿ ನಡೆದಿದೆ. ದಂಪತಿಯ ಮಗಳು, ಎನ್‌ಜಿ ಐ ಲೀ, ತನ್ನ ತಂದೆ ಪಫರ್ ಮೀನನ್ನು ಸ್ಥಳೀಯ ಅಂಗಡಿಯಿಂದ ಖರೀದಿಸಿದ್ದಾರೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ನನ್ನ ತಂದೆ ತಾಯಿ ಅನೇಕ ವರ್ಷಗಳಿಂದ ಅದೇ ಮೀನು ಮಾರಾಟಗಾರರಿಂದ ಮೀನುಗಳನ್ನು ಖರೀದಿಸುತ್ತಿದ್ದಾರೆ, ಆದ್ದರಿಂದ ಅವರಿಗೆ ಮೀನುಗಳ ಬಗ್ಗೆ ಯಾವುದೇ ಅನುಮಾನಗಳಿರಲಿಲ್ಲ ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಅವರು ತಮ್ಮ ಜೀವವನ್ನು ಅಪಾಯಕ್ಕೆ ಸಿಲುಕಿಸಿಕೊಳ್ಳುವುದಕ್ಕಾಗಿಯೇ ಆ ಮೀನು ಅವರು ತಂದಿದ್ದಲ್ಲ. ಅವರಿಗೆ ಆ ಮೀನಿನ ಬಗ್ಗೆ ಅರಿವು ಇರಲಿಲ್ಲ ಎಂದು ಪುತ್ರಿ ಹೇಳಿದ್ದಾರೆ.

ದಂಪತಿ ಊಟಕ್ಕೆ ಮೀನನ್ನು ಸ್ವಚ್ಛಗೊಳಿಸಿ, ಬೇಯಿಸಿ, ಊಟ ಮಾಡಿದ ಸ್ವಲ್ಪ ಸಮಯದ ನಂತರ, ಲಿಮ್ ಸಿವ್ ಗುವಾನ್ ಮಹಿಳೆಯು ನಡುಗಲು ಆರಂಭಿಸಿದ್ದಾರೆ. ಉಸಿರಾಟದ ತೊಂದರೆ ಶುರುವಾಗಿದೆ. ಅವರ ಪತಿ ಕೂಡ ಒಂದು ಗಂಟೆಯ ನಂತರ ಇದೇ ರೀತಿಯ ರೋಗಲಕ್ಷಣಗಳನ್ನು ಪ್ರದರ್ಶಿಸಲು ಪ್ರಾರಂಭಿಸಿದರು ಎಂದು ಜೋಹರನ್‌ನ ಆರೋಗ್ಯ ಮತ್ತು ಏಕತಾ ಸಮಿತಿ ಅಧ್ಯಕ್ಷ ಲಿಂಗ್ ಟಿಯಾನ್ ಸೂನ್ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: Viral news | ಫ್ರೀಜರ್‌ ತುಂಡಿನಲ್ಲಿ ತೇಲುತ್ತಾ 11 ದಿನ ಸಮುದ್ರದಲ್ಲಿ ಬದುಕುಳಿದ!

ಕೂಡಲೇ ಅವರ ಪುತ್ರ, ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಆಸ್ಪತ್ರೆಗೆ ಬರುವಾಗಲೇ ತಾಯಿ ಮೃತಪಟ್ಟಿದ್ದಾರೆಂದು ವೈದ್ಯರು ಘೋಷಿಸಿದ್ದಾರೆ. ಆಹಾರ ವಿಷವಾಗಿರುವುದು ಮತ್ತು ಅದರಿಂದಾಗಿ ನರವ್ಯೂಹಗಳ ಮೇಲೆ ಪರಿಣಾಮವಾಗಿದೆ. ಆಗ ಹೃದಯದ ಡಿಸ್ರಿಥ್ಮಿಯಾದೊಂದಿಗೆ ಉಸಿರಾಟದ ವೈಫಲ್ಯ ಕಾಣಿಸಿಕೊಂಡಿದೆ. ಪಫರ್ ಮೀನಿನ ಸೆಗ್ವಾಚೆರ್ ಟಾಕ್ಸಿನ್ ಅಥವಾ ಟೆಟ್ರೋಡಾಟಾಕ್ಸಿನ್ ಇದಕ್ಕೆಲ್ಲ ಕಾರಣ ಎಂದು ಸೂನ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ನ್ಯೂಸ್ ವೀಕ್ ವರದಿ ಮಾಡಿದೆ.

Exit mobile version