Site icon Vistara News

Most expensive wedding: ಜಗತ್ತಿನ ದುಬಾರಿ ವಿವಾಹ ಯಾವುದು ಗೊತ್ತೆ? ಖರ್ಚಾಗಿದ್ದು ಇಷ್ಟು ಕೋಟಿ ರೂ.

wedding

wedding

ಲಂಡನ್:‌ ಇತ್ತೀಚಿನ ದಿನಗಳಲ್ಲಿ ಐಷಾರಾಮಿ ಮದುವೆಗಳು(Most expensive wedding) ಹೆಚ್ಚು ಸದ್ದು ಮಾಡುತ್ತಿವೆ. ಕೋಟಿಗಟ್ಟಲೆ ರೂ. ಖರ್ಚು ಮಾಡಿ ಮದುವೆಯಾಗುವುದು ಟ್ರೆಂಡ್ ಆಗಿ ಬದಲಾಗಿದೆ. ಅದಕ್ಕೆ ತಕ್ಕಂತೆ ಭಾರತದ ಶ್ರೀಮಂತ ಉದ್ಯಮಿ ಮುಖೇಶ್‌ ಅಂಬಾನಿ(ambani) ಅವರ ಪುತ್ರಿ ಇಶಾ ಅಂಬಾನಿ ಮತ್ತು ಆನಂದ್‌ ಪಿರಮಾಲ್‌ ಅವರ ವಿವಾಹ ಬಹಳ ಅದ್ದೂರಿಯಾಗಿ ನೆರವೇರಿತ್ತು. ಇದು ಭಾರತದಲ್ಲಿ ನಡೆದ ಅತೀ ಹೆಚ್ಚು ವೆಚ್ಚದ ಮದುವೆ ಎನ್ನುವ ಹೆಗ್ಗಳಿಕೆ ಪಾತ್ರವಾಗಿತ್ತು. ಆದರೆ ಸುಮಾರು 4 ದಶಕಗಳ ಹಿಂದೆ ಬ್ರಿಟನ್‌ನಲ್ಲಿ ಐಷಾರಾಮಿ ವಿವಾಹ ಸಮಾರಂಭವೊಂದು ನಡೆದಿತ್ತು. ಪ್ರಿನ್ಸ್‌ ಚಾರ್ಲ್ಸ್ ಮತ್ತು ಡಯಾನಾ(Prince Charles and Princess Diana) ಅವರ ವಿವಾಹ ಇಂದಿಗೂ ಜಗತ್ತಿನ ಅತೀ ದುಬಾರಿ ಮದುವೆ ಎನಿಸಿಕೊಂಡಿದೆ.

ಬರೋಬ್ಬರಿ 914 ಕೋಟಿ ರೂ. ಖರ್ಚು!

ಇಶಾ ಅಂಬಾನಿ ಮತ್ತು ಆನಂದ್‌ ಪಿರಮಾಲ್‌ ಅವರ ವಿವಾಹಕ್ಕೆ ಸುಮಾರು 400 ಕೋಟಿ ರೂ. ಖರ್ಚಾಗಿದ್ದರೆ ಪ್ರಿನ್ಸ್‌ ಚಾರ್ಲ್ಸ್ ಮತ್ತು ಡಯಾನಾ ಅವರ ಮದುವೆ ಸಮಾರಂಭಕ್ಕೆ ಅದಕ್ಕಿಂತ ಎರಡು ಪಟ್ಟು ಹೆಚ್ಚು ಖರ್ಚು ಮಾಡಲಾಗಿತ್ತು. ಅಂದರೆ ಸುಮಾರು 914 ಕೋಟಿ ರೂ. ವೆಚ್ಚವಾಗಿತ್ತು ಎಂದು ಅಂಕಿ ಅಂಶಗಳು ತಿಳಿಸಿವೆ.

ಪ್ರಿನ್ಸ್‌ ಚಾರ್ಲ್ಸ್ ಮತ್ತು ಡಯಾನಾ ಅವರ ಮದುವೆ ಅತೀ ಹೆಚ್ಚು ವೀಕ್ಷಿಸಲ್ಪಟ್ಟ ಬ್ರಿಟಿಷ್‌ ರಾಯಲ್‌ ಫ್ಯಾಮಿಲಿಯ ಸಮಾರಂಭದಲ್ಲಿ ಒಂದಾಗಿದೆ. 2.84 ಕೋಟಿಗಿಂತ ಅಧಿಕ ಮಂದಿ ಈ ಐಷಾರಾಮಿ ಮದುವೆಯನ್ನು ಕಣ್ತುಂಬಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಡಯಾನಾ ಧರಿಸಿದ ಉಡುಗೆಯೂ ಗಮನ ಸೆಳೆದಿತ್ತು.

ವಿಶ್ವದ ಅತ್ಯಂತ ದುಬಾರಿ ವಿವಾಹ ಎನ್ನುವ ದಾಖಲೆಯೇನೋ ಡಯಾನಾ ಹೆಸರಿನಲ್ಲಿದೆ. ಆದರೆ ವಿಶ್ವದ ಅತ್ಯಂತ ದುಬಾರಿ ವಿವಾಹ ಸಮಾರಂಭದ ಉಡುಗೆ ಧರಿಸಿರುವ ರೆಕಾರ್ಡ್‌ ಇಶಾ ಅಂಬಾನಿಯದ್ದು. 2018ರಲ್ಲಿ ಸಪ್ತಪದಿ ತುಳಿದ ಅವರು ಆಗ ಧರಿಸಿದ್ದ ಲೆಹಂಗಾದ ಬೆಲೆ ಬರೋಬ್ಬರಿ 90 ಕೋಟಿ ರೂ. ಮೌಲ್ಯದ್ದಾಗಿತ್ತು.

ಡಯಾನಾ ಅವರ ವಿವಾಹ ಉಡುಗೆಯನ್ನು ಡೇವಿಡ್‌ ಮತ್ತು ಎಲಿಜಬೆತ್‌ ಇಮ್ಯಾನುವೆಲ್‌ ಡಿಸೈನ್‌ ಮಾಡಿದ್ದು, 4.1 ಕೋಟಿ ರೂ. ಬೆಲೆ ಬಾಳುತ್ತದೆ. ರೇಷ್ಮೆ ಮತ್ತು ಶುದ್ಧ ಮುತ್ತನ್ನು ಈ ಉಡುಗೆಯ ತಯಾರಿಕೆಯಲ್ಲಿ ಬಳಸಲಾಗಿದೆ. ವರದಿಯೊಂದರ ಪ್ರಕಾರ ಚಾರ್ಲ್ಸ್‌ ಮತ್ತು ಡಯಾನಾ ದಂಪತಿ ತಮ್ಮ ಮದುವೆ ಮತ್ತು ನಿಶ್ಚಿತಾರ್ಥದ ಸಂದರ್ಭದಲ್ಲಿ ಬೆಲೆಬಾಳುವ ಸುಮಾರು 3,000ದಷ್ಟು ಉಡುಗೊರೆಗಳನ್ನು ಪಡೆದಿದ್ದಾರೆ. ಇದು ಬೆಳೆಬಾಳುವ ವಜ್ರ ಮತ್ತು ಚಿನ್ನದ ಆಭರಣ, ಐಷರಾಮಿ ವಾಚ್‌, ದುಬಾರಿ ಅಡುಗೆ ಪಾತ್ರೆಗಳನ್ನು ಒಳಗೊಂಡಿದೆ.

ಇದನ್ನೂ ಓದಿ: Akshardham : ವಿದೇಶದಲ್ಲಿನ ಅತೀ ದೊಡ್ಡ ದೇವಾಲಯ ಉದ್ಘಾಟನೆಗೆ ಸಜ್ಜು; ಏನಿದರ ವಿಶೇಷ?

ಮದುವೆ ಸಂದರ್ಭದಲ್ಲಿ ಸುಮಾರು 250 ಸಂಗೀತಗಾರರು ಕಾರ್ಯಕ್ರಮ ನೀಡಿದ್ದರು. 1,400 ಅತಿಥಿಗಳು ಸಮಾರಂಭಕ್ಕೆ ಸಾಕ್ಷಿಯಾಗಿದ್ದರು. 1981ರರಲ್ಲಿ ಈ ಅದ್ದೂರಿ ವಿವಾಹ ನಡೆದಿತ್ತು. ಆದರೆ ದುರಂತ ಎಂದರೆ ಚಾರ್ಲ್ಸ್‌ ಮತ್ತು ಡಯಾನಾ ದಂಪತಿ ಮದುವೆಯಾದ 15 ವರ್ಷಗಳ ಬಳಿಕ ಅಂದರೆ 1996ರಲ್ಲಿ ವಿಚ್ಛೇದನ ಪಡೆದುಕೊಂಡರು. ಡಯಾನಾ 1997ರಲ್ಲಿ ನಡೆದ ಅಪಘಾತವೊಂದರಲ್ಲಿ ಮರಣ ಹೊಂದಿದರು.

Exit mobile version