Akshardham : ವಿದೇಶದಲ್ಲಿನ ಅತೀ ದೊಡ್ಡ ದೇವಾಲಯ ಉದ್ಘಾಟನೆಗೆ ಸಜ್ಜು; ಏನಿದರ ವಿಶೇಷ? Vistara News

ವಿದೇಶ

Akshardham : ವಿದೇಶದಲ್ಲಿನ ಅತೀ ದೊಡ್ಡ ದೇವಾಲಯ ಉದ್ಘಾಟನೆಗೆ ಸಜ್ಜು; ಏನಿದರ ವಿಶೇಷ?

Akshardham : ಅಮೆರಿಕದಲ್ಲಿ ನಿರ್ಮಾಣವಾದ ಅತೀ ದೊಡ್ಡ ಹಿಂದೂ ದೇವಾಲಯದ ಉದ್ಘಾಟನೆಗೆ ಮುಹೂರ್ತ ನಿಗದಿಯಾಗಿದೆ. ಅಕ್ಟೋಬರ್‌ 8ರಂದು ನ್ಯೂಜೆರ್ಸಿಯಲ್ಲಿ(New Jersey)ಅಕ್ಷರಧಾಮ ದೇಗುಲವನ್ನು(Akshardham) ಉದ್ಘಾಟಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

VISTARANEWS.COM


on

Akshardham
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನ್ಯೂ ಜೆರ್ಸಿ: ಕೋಟ್ಯಂತರ ಹಿಂದೂಗಳ ಕನಸು ನನಸಾಗುವ ದಿನ ಹತ್ತಿರವಾಗುತ್ತಿದ್ದು, ಭಾರತದ ಹೊರಗೆ ನಿರ್ಮಾಣವಾದ ಅತೀ ದೊಡ್ಡ ಹಿಂದೂ ದೇವಾಲಯವೊಂದರ ಉದ್ಘಾಟನೆಗೆ ಮುಹೂರ್ತ ನಿಗದಿಯಾಗಿದೆ. ಅಕ್ಟೋಬರ್‌ 8ರಂದು ಸ್ವಾಮಿ ನಾರಾಯಣ್‌ ಅಕ್ಷರಧಾಮ(Akshardham) ದೇವಾಲಯವನ್ನು ಅಮೆರಿಕಾದ ನ್ಯೂ ಜೆರ್ಸಿಯಲ್ಲಿ(New Jersey)ಉದ್ಘಾಟಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಎಲ್ಲಿದೆ?

ನ್ಯೂಯಾರ್ಕ್‌ನ ವಿಶ್ವ ಪ್ರಸಿದ್ಧ ಟೈಮ್ಸ್‌ ಸ್ವೈರ್‌ನಿಂದ(Times Square) ದಕ್ಷಿಣಕ್ಕೆ 60 ಮೈಲಿ(90 ಕಿ.ಮೀ.) ಮತ್ತು ವಾಷಿಂಗ್ಟನ್‌ ಡಿಸಿಯಿಂದ(Washington DC) ಉತ್ತರಕ್ಕೆ 180 ಮೈಲಿ(289 ಕಿ.ಮೀ.) ದೂರದಲ್ಲಿ ಈ ಬಿಎಪಿಎಸ್‌ ಸ್ವಾಮಿನಾರಾಯಣ್‌ ಅಕ್ಷರಧಾಮವಿದೆ. ನ್ಯೂಜೆರ್ಸಿಯ ರಾಬಿನ್ಸನ್‌ವಿಲ್ಲೆ ಟೌನ್‌ಶಿಪ್‌ನಲ್ಲಿ ಈ ದೇಗುಲವನ್ನು ನಿರ್ಮಿಸಲಾಗಿದೆ. ಅಮೆರಿಕಾದ 12,500ಕ್ಕಿಂತಲೂ ಹೆಚ್ಚು ಸ್ವಯಂ ಸೇವಕರು 2011ರಿಂದ 2023ರ ತನಕ ಸುಮಾರು 12 ವರ್ಷಗಳ ಕಾಲ ಈ ದೇಗುಲ ನಿರ್ಮಿಸಲು ಶ್ರಮಿಸಿದ್ದಾರೆ.

ವೈಶಿಷ್ಟ್ಯ ಏನೇನು?

ಅಕ್ಷರಧಾಮ ಎಂದೇ ಜನಪ್ರಿಯವಾಗಿರುವ ಈ ದೇಗುಲಕ್ಕೆ ಪ್ರತಿದಿನ ಸಾವಿರಾರು ಭಕ್ತರು ಭೇಟಿ ನೀಡಲಿದ್ದಾರೆ. ಸುಮಾರು 183 ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಈ ದೇವಸ್ಥಾನ 255 ಅಡಿ x 345 ಅಡಿ x 191 ಅಡಿ ಅಳತೆ ಹೊಂದಿದೆ. ಇದನ್ನು ಪ್ರಾಚೀನ ಭಾರತೀಯ ಸಂಸ್ಕೃತಿ ಪ್ರಕಾರ ರಚಿಸಲಾಗಿದೆ. ಹಿಂದೂ ಸಂಪ್ರದಾಯಗಳನ್ನು ಸೂಚಿಸುವ ಸುಮಾರು 10 ಸಾವಿರದಷ್ಟು ಪ್ರತಿಮೆಗಳು, ಸಾಂಪ್ರದಾಯಿಕ ವಾದ್ಯೋಪಕರಣಗಳ ಮಾದರಿ, ನೃತ್ಯ ಪ್ರಕಾರಗಳನ್ನು ಕೆತ್ತಲಾಗಿದೆ.

ಈ ದೇಗುಲ ಕಾಂಬೋಡಿಯಾದ ಅಂಕೋರ್‌ ವಾಟ್‌ ಬಳಿಕ ಎರಡನೇ ಅತೀ ದೊಡ್ಡ ದೇಗುಲ ಎನಿಸಿಕೊಳ್ಳಲಿದೆ. 12ನೇ ಶತಮಾನದ ಅಂಕೋರ್‌ ವಾಟ್‌ ದೇಗುಲ ಸಂಕೀರ್ಣ ಅತೀ ದೊಡ್ಡ ಹಿಂದೂ ದೇವಾಲಯ ಎನಿಸಿಕೊಂಡಿದೆ. ಸುಮಾರು 500 ಎಕರೆ ಪ್ರದೇಶದಲ್ಲಿ ಹರಡಿರುವ ಇದು ಯುನೆಸ್ಕೋದ ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ. ನವದೆಹಲಿಯಲ್ಲಿ 2005ರ ನವೆಂಬರ್‌ ನಲ್ಲಿ ಉದ್ಘಾಟನೆಯಾದ ಅಕ್ಷರಧಾಮ ದೇವಸ್ಥಾನ 100 ಎಕ್ರೆಗಿಂತಲೂ ಹೆಚ್ಚಿನ ಪ್ರದೇಶದಲ್ಲಿ ವ್ಯಾಪಿಸಿದೆ.

ʼʼನಮ್ಮ ಆಧ್ಯಾತ್ಮಿಕ ಗುರು ಪ್ರಮುಖ್‌ ಸ್ವಾಮಿ ಮಹರಾಜ್‌ ಹಿಂದೂಗಳು ಮಾತ್ರವಲ್ಲ, ಭಾರತೀಯರು ಮಾತ್ರವಲ್ಲ, ಒಂದು ಪ್ರತ್ಯೇಕ ಗುಂಪು ಮಾತ್ರವಲ್ಲ ಪ್ರಪಂಚದ ಎಲ್ಲಾ ಜನರಿಗೆ ಹೊಂದಬಹುದಾದ ತಾಣವೊಂದನ್ನು ರೂಪಿಸಬೇಕು ಎನ್ನುವ ಗುರಿ ಹೊಂದಿದ್ದರು. ಇದು ಹಿಂದೂ ಸಂಪ್ರದಾಯದ ಆಧಾರದಲ್ಲಿ ಕೆಲವು ಸಾರ್ವರ್ತಿಕ ಮೌಲ್ಯಗಳನ್ನು ಅರಿತುಕೊಳ್ಳಲು ನೆರವಾಗಲಿದೆʼʼ ಎಂದು ಬಿಎಪಿಎಸ್‌ ಸ್ವಾಮಿ ನಾರಾಯಣ್‌ ಸಂಸ್ಥದ ಅಕ್ಷರವತ್ಸಲ್‌ ದಾಸ್‌ ಸ್ವಾಮಿ ಹೇಳಿದ್ದಾರೆ.

ʼʼಇದು ಅವರ ಸಂಕಲ್ಪವಾಗಿತ್ತು. ಅವರ ಆಶಯದಂತೆ ಅಕ್ಷರಧಾಮ ದೇಗುಲವನ್ನು ಹಿಂದೂ ಸಂಪ್ರದಾಯಿಕ ವಾಸ್ತು ಶಿಲ್ಪದೊಂದಿಗೆ ನಿರ್ಮಿಸಲಾಗಿದೆʼʼ ಎಂದು ಅವರು ತಿಳಿಸಿದ್ದಾರೆ. ಅಕ್ಷರಧಾಮವು ಒಂದು ಮುಖ್ಯ ದೇವಾಲಯ, 12 ಉಪ ದೇವಾಲಯ, 9 ಶಿಖರಗಳು ಮತ್ತು 9 ಪಿರಮಿಡ್‌ ಆಕೃತಿಯ ಶಿಖರಗಳನ್ನು ಒಳಗೊಂಡಿದೆ. ಇದನ್ನು ಸಾವಿರ ವರ್ಷಗಳ ತನಕ ಉಳಿಯುವಂತೆ ನಿರ್ಮಿಸಿರುವುದು ವಿಶೇಷ.

4 ಮಾದರಿಯ ಶಿಲೆ

ಇನ್ನು ಅಕ್ಷರಧಾಮ ದೇಗುಲ ರಚನೆಗೆ 4 ಮಾದರಿಯ ಕಲ್ಲುಗಳನ್ನು ಬಳಸಲಾಗಿದೆ. ಸುಣ್ಣದ ಕಲ್ಲು, ಗುಲಾಬಿ ಮರಳುಗಲ್ಲು, ಮಾರ್ಬಲ್‌ ಮತ್ತು ಗ್ರಾನೈಟ್‌ಗಳನ್ನು ಬಳಸಲಾಗಿದ್ದು, ಇವು ಅತೀ ಹೆಚ್ಚಿನ ಶಾಖ ಮತ್ತು ಶೀತವನ್ನು ತಡೆದುಕೊಳ್ಳಬಲ್ಲವು. ಸುಮಾರು 2 ಮಿಲಿಯನ್‌ ಕ್ಯೂಬಿಕ್‌ ಅಡಿ ಕಲ್ಲುಗಳನ್ನು ದೇಗುಲ ರಚನೆಗೆ ಬಳಸಲಾಗಿದ್ದು ಇವನ್ನು ಪ್ರಪಂಚದ ಬೇರೆ ಬೇರೆ ಕಡೆಗಳಿಂದ ಸಂಗ್ರಹಿಸಲಾಗಿದೆ. ಬಲ್ಗೇರಿಯಾ ಮತ್ತು ತುರ್ಕಿಯಿಂದ ಸುಣ್ಣದ ಕಲ್ಲು, ತುರ್ಕಿ, ಇಟಲಿ, ಗ್ರೀಸ್‌ನಿಂದ ಮಾರ್ಬಲ್‌, ಭಾರತ ಮತ್ತು ಚೀನಾದಿಂದ ಗ್ರಾನೈಟ್‌, ಭಾರತದಿಂದ ಮರಳುಗಲ್ಲು, ಇತರ ಅಲಂಕೃತ ಕಲ್ಲುಗಳನ್ನು ಯುರೋಪ್‌, ಏಷ್ಯಾ, ಮತ್ತು ಲ್ಯಾಟಿನ್‌ ಅಮೆರಿಕಾದಿಂದ ಸಂಗ್ರಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: India Canada Row : ಖಲಿಸ್ತಾನಿ ಉಗ್ರರ ಕಡೆಗೆ ಮೃದು ಧೋರಣೆ; ಟ್ರುಡೊ ವಿರುದ್ಧ ಆರ್ಯ ಮತ್ತೆ ವಾಗ್ದಾಳಿ

ಭಾರತದ ಪ್ರಾಚೀನ ಬ್ರಹ್ಮ ಕುಂಡ್‌ ಸೇರಿದಂತೆ ಭಾರತ ಮತ್ತು ಅಮೆರಿಕಾದ ವಿವಿಧ ರಾಜ್ಯಗಳ ಪವಿತ್ರ ನದಿಗಳ ನೀರನ್ನು ಸಂಗ್ರಹಿಸಲಾಗಿದೆ. ಸಾವಿರಾರು ಸ್ವಯಂಸೇವಕರ ಶ್ರಮ ಈ ದೇಗುಲದ ಹಿಂದಿದೆ. ಮಹಂತ್‌ ಸ್ವಾಮಿ ಮಹಾರಾಜ್‌ ನೇತೃತ್ವದಲ್ಲಿ ಅಕ್ಟೋಬರ್‌ 8ರಂದು ಉದ್ಘಾಟನೆ ಆಯೋಜಿಸಲಾಗಿದೆ. ಅಕ್ಟೋಬರ್‌ 18ರಂದು ದೇಗುಲ ಭಕ್ತರ ಪ್ರವೇಶಕ್ಕೆ ಮುಕ್ತವಾಗಲಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Tsunami Warning: 7.6 ತೀವ್ರತೆಯ ಭೂಕಂಪ; ಭೀಕರ ಸುನಾಮಿಯ ವಾರ್ನಿಂಗ್‌!

Tsunami Warning: ಫಿಲಿಪೈನ್ಸ್‌ನಲ್ಲಿ ಕಳೆದ ಒಂದು ತಿಂಗಳಲ್ಲಿ ಸಂಭವಿಸುತ್ತಿರುವ ಎರಡನೇ ಭೂಕಂಪ ಇದಾಗಿದೆ. ಕಳೆದ ತಿಂಗಳ ಆರಂಭದಲ್ಲಿ ಕೂಡ ಭೂಕಂಪ ಸಂಭವಿಸಿ 8 ಜನ ಮೃತಪಟ್ಟಿದ್ದರು.

VISTARANEWS.COM


on

Tsunami
Koo

ಮನಿಲಾ: ಫಿಲಿಪೈನ್ಸ್‌ನಲ್ಲಿ 7.6 ತೀವ್ರತೆಯ ಪ್ರಬಲ ಭೂಕಂಪ (Earthquake) ಸಂಭವಿಸಿದೆ. ಫಿಲಿಪೈನ್ಸ್‌ನ ಮಿಂಡಾನಾವೋ (Mindanao) ಎಂಬಲ್ಲಿ ಶನಿವಾರ (ನವೆಂಬರ್‌ 3) ಸಂಜೆ ಪ್ರಬಲ ಭೂಕಂಪ ಸಂಭವಿಸಿದ್ದು, ದೇಶಾದ್ಯಂತ ಆತಂಕ ಮನೆಮಾಡಿದೆ. ರಿಕ್ಟರ್‌ ಮಾಪನದಲ್ಲಿ 7.6 ತೀವ್ರತೆಯ ಭೂಕಂಪ ದಾಖಲಾಗಿದೆ ಎಂದು ಯುರೋಪಿಯನ್‌ ಮೆಡಿಟೇರಿಯನ್‌ ಸೈಸ್ಮೊಲಾಜಿಕಲ್‌ ಸೆಂಟರ್‌ (EMSC) ಮಾಹಿತಿ ನೀಡಿದೆ. ಇದರ ಬೆನ್ನಲ್ಲೇ ಅಮೆರಿಕವು ಸುನಾಮಿ ಅಪ್ಪಳಿಸುವ ಎಚ್ಚರಿಕೆ (Tsunami Warning) ನೀಡಿದೆ.

ಸುಮಾರು 63 ಕಿಲೋಮೀಟರ್‌ ಆಳದಲ್ಲಿ ಭೂಮಿ ಕಂಪಿಸಿದೆ ಎಂದು ಮಾಹಿತಿ ನೀಡಿದೆ. “ಭೂಕಂಪವು ಪ್ರಬಲವಾಗಿದೆ. ಇದು ದೇಶದಲ್ಲಿ ಸುನಾಮಿಗೆ ಕಾರಣವಾಗಬಹುದು. ದೊಡ್ಡ ದೊಡ್ಡ ಅಲೆಗಳು ಅಪ್ಪಳಿಸಬಹುದು” ಎಂಬುದಾಗಿ ಫಿಲಿಪೈನ್ಸ್‌ಗೆ ಅಮೆರಿಕ ಎಚ್ಚರಿಕೆ ನೀಡಿದೆ ಎಂದು ತಿಳಿದುಬಂದಿದೆ. ಇದರಿಂದಾಗಿ ಫಿಲಿಪೈನ್ಸ್‌ನ ಕರಾವಳಿ ಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಆದಾಗ್ಯೂ, ಭೂಕಂಪದಿಂದ ಯಾವುದೇ ಸಾವು-ನೋವಿನ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ತಿಂಗಳಲ್ಲಿ ಎರಡನೇ ಬಾರಿ ಕಂಪಿಸಿದ ಭೂಮಿ

ಕಳೆದ ಒಂದು ತಿಂಗಳಲ್ಲಿ ಫಿಲಿಪೈನ್ಸ್‌ನಲ್ಲಿ ಎರಡನೇ ಬಾರಿ ಭೂಕಂಪ ಸಂಭವಿಸಿದೆ. ನವೆಂಬರ್‌ ತಿಂಗಳ ಆರಂಭದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಿಂದಾಗಿ ಎಂಟು ಜನ ಮೃತಪಟ್ಟಿದ್ದರು. ಸಾರಂಗಾನಿ, ಸೌತ್‌ ಕೊಟಾಬಟೊ ಹಾಗೂ ಡಾವಾವೋ ಪ್ರಾಂತ್ಯಗಳಲ್ಲಿ ಪ್ರಬಲ ಭೂಕಂಪ ಸಂಭವಿಸಿತ್ತು. 13ಕ್ಕೂ ಅಧಿಕ ಜನ ಗಾಯಗೊಂಡಿದ್ದರೆ, 50 ಅಧಿಕ ಮನೆಗಳು ಕುಸಿದಿದ್ದವು. ಇನ್ನು ಶನಿವಾರ ಸಂಜೆ ಭೂಕಂಪ ಸಂಭವಿಸಿದ ಕಾರಣ ಜಪಾನ್‌ನಲ್ಲೂ ಸುನಾಮಿ ಎಚ್ಚರಿಕೆ ನೀಡಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Earthquake: ಕಾಶ್ಮೀರದಲ್ಲಿ ಪ್ರಬಲ ಭೂಕಂಪ; 24 ಗಂಟೆಯಲ್ಲಿ 3 ದುರಂತ

ನೇಪಾಳದಲ್ಲಿ 157 ಜನ ಸಾವು

ನೇಪಾಳದಲ್ಲೂ ಇತ್ತೀಚೆಗೆ ಸಂಭವಿಸಿದ ಪ್ರಬಲ ಭೂಕಂಪದಲ್ಲಿ 157 ಜನ ಮೃತಪಟ್ಟಿದ್ದು, 250ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಸಾವಿರಾರು ಕಟ್ಟಡಗಳು ಧರೆಗುರುಳಿದ್ದು, ಜನರ ರಕ್ಷಣೆಗೆ ಹರಸಾಹಸ ಮಾಡಬೇಕಾಗಿತ್ತು. ಮಹಿಳೆಯರು, ಮಕ್ಕಳು, ಹಿರಿಯರು ಭೂಕಂಪಕ್ಕೆ ಬಲಿಯಾಗಿದ್ದರು. ಅಷ್ಟಕ್ಕೂ, ನೇಪಾಳದಲ್ಲಿ ಕಳೆದ ಮೂರು ದಿನಗಳಲ್ಲಿ ಮೂರ್ನಾಲ್ಕು ಬಾರಿ ಭೂಮಿ ಕಂಪಿಸಿದ ಕಾರಣ ಜನರಲ್ಲಿ ಭಯ ಮನೆಮಾಡಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಪ್ರಮುಖ ಸುದ್ದಿ

‘ಹುಡುಕು, ಕೊಲ್ಲು’; ಹಮಾಸ್‌ ಉಗ್ರರ ದಮನಕ್ಕೆ ಇಸ್ರೇಲ್‌ ಮಾಸ್ಟರ್‌ ಪ್ಲಾನ್‌ ಹೇಗಿದೆ?

ಹಮಾಸ್‌ ಉಗ್ರರ ಜತೆಗಿನ ಸಮರ ಮುಗಿದ ಮೇಲೆ ಏನು ಮಾಡಬೇಕು ಎಂಬ ಸ್ಪಷ್ಟ ಚಿತ್ರಣ ಇಸ್ರೇಲ್‌ ಬಳಿ ಇದೆ. ಹಮಾಸ್‌ ಉಗ್ರರನ್ನು ಹುಡುಕಿ ಕೊಲ್ಲಲು ಬೆಂಜಮಿನ್‌ ನೆತನ್ಯಾಹು ಮಾಸ್ಟರ್‌ ಪ್ಲಾನ್‌ ರೂಪಿಸಿದ್ದಾರೆ. ಏನದು?

VISTARANEWS.COM


on

Benjamin Netanyhu
Koo

ಜೆರುಸಲೇಂ: ಅಕ್ಟೋಬರ್‌ 7ರಂದು ಹಮಾಸ್‌ ಉಗ್ರರು ದಾಳಿ ಮಾಡಿದ ಬಳಿಕ ಯುದ್ಧ (Israel Palestine War) ಘೋಷಿಸಿದ ಇಸ್ರೇಲ್‌ ಇದುವರೆಗೆ ಹಿಂದಡಿ ಇಟ್ಟಿಲ್ಲ. ಪ್ಯಾಲೆಸ್ತೀನ್‌ನ ಗಾಜಾ ನಗರದಲ್ಲಿ ಬೀಡು ಬಿಟ್ಟಿರುವ ಹಮಾಸ್‌ ಉಗ್ರರು (Hamas Terrorists) ಮನವಿ ಮಾಡುವಷ್ಟರಮಟ್ಟಿಗೆ ಇಸ್ರೇಲ್‌ ನಿರಂತರವಾಗಿ ದಾಳಿ ಮಾಡಿದೆ. ಕೆಲ ದಿನಗಳ ಕದನ ವಿರಾಮ, ಒತ್ತೆಯಾಳುಗಳ ಬಿಡುಗಡೆ ಬಳಿಕ ಈಗ ಮತ್ತೆ ಗಾಜಾ ನಗರದ ಮೇಲೆ ಇಸ್ರೇಲ್‌ ಬಾಂಬ್‌ ದಾಳಿ ಮಾಡಿ 175 ಜನರನ್ನು ಕೊಂದಿದೆ. ಇದರ ಬೆನ್ನಲ್ಲೇ, ಹಮಾಸ್‌ ಉಗ್ರರನ್ನು ನಿರ್ನಾಮ ಮಾಡಲು ಇಸ್ರೇಲ್‌ ಹೊಸ ಯೋಜನೆ ರೂಪಿಸಿದೆ.

ಹೌದು, ಗಾಜಾ ನಗರದ ಮೇಲೆ ನಡೆಯುತ್ತಿರುವ ದಾಳಿ ಮುಗಿದ ಬಳಿಕ, ಯುದ್ಧ ನಿಲ್ಲಿಸಿದ ನಂತರ ಜಗತ್ತಿನ ಯಾವ ಮೂಲೆಯಲ್ಲಿ ಇದ್ದರೂ ಹಮಾಸ್‌ ಉಗ್ರರನ್ನು ಸದೆಬಡಿಯಲು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಆದೇಶಿಸಿದ್ದಾರೆ ಎಂದು ತಿಳಿದುಬಂದಿದೆ. ಹಾಗಾಗಿ ಹಮಾಸ್‌ ಉಗ್ರರ ಜತೆಗಿನ ಕಾಳಗ ಮುಗಿಯುತ್ತಲೇ ಇಸ್ರೇಲ್‌ ಮತ್ತೊಂದು ಕಾರ್ಯಾಚರಣೆ ಆರಂಭಿಸುವುದು ನಿಶ್ಚಿತ ಎಂಬ ಮಾತುಗಳು ಕೇಳಿಬರುತ್ತಿವೆ.

“ಹಮಾಸ್‌ ಉಗ್ರರ ಜತೆಗಿನ ಯುದ್ಧ ಮುಗಿದ ಬಳಿಕ ಹಮಾಸ್‌ ಮುಖಂಡರನ್ನು, ಉಗ್ರರನ್ನು ಹತ್ಯೆಗೈಯಲು ಗುಪ್ತಚರ ಸಂಸ್ಥೆಯಾದ ಮೊಸಾದ್‌ ಯೋಜನೆ ರೂಪಿಸಬೇಕು. ಇದಕ್ಕೂ ಮೊದಲು ಶತ್ರುಗಳ ದಮನಕ್ಕೆ ಇಸ್ರೇಲ್‌ ಕೈಗೊಂಡಿದ್ದ ಆಪರೇಷನ್‌ ವ್ರ್ಯಾತ್‌ ಆಫ್‌ ಗಾಡ್‌ನಂತಹ (Operation Wrath of God) ಕಾರ್ಯಾಚರಣೆ ಕೈಗೊಳ್ಳಬೇಕು. ಉಗ್ರರನ್ನು ಹುಡುಕಬೇಕು, ಕೊಲೆ ಮಾಡಬೇಕು ಎಂಬುದಷ್ಟೇ ಕಾರ್ಯಾಚರಣೆಯ ಗುರಿಯಾಗಿರಬೇಕು” ಎಂಬುದಾಗಿ ಮೊಸಾದ್‌ ಅಧಿಕಾರಿಗಳಿಗೆ ಬೆಂಜಮಿನ್‌ ನೆತನ್ಯಾಹು ಆದೇಶಿಸಿದ್ದಾರೆ ಎಂದು ಜಾಗತಿಕ ಮಾಧ್ಯಮಗಳು ವರದಿ ಮಾಡಿವೆ.

ಹಿಟ್‌ ಲಿಸ್ಟ್‌ನಲ್ಲಿ ಯಾರಿದ್ದಾರೆ?

ಜಗತ್ತಿನ ಯಾವ ಮೂಲೆಯಲ್ಲಿಯೇ ಹಮಾಸ್‌ ಹಿರಿಯ ಉಗ್ರರು ಇರಲಿ, ಅವರನ್ನು ಹತ್ಯೆಗೈಯಬೇಕು ಎಂಬುದು ನೆತನ್ಯಾಹು ಆದೇಶವಾಗಿದೆ ಎಂದು ಮೊಸಾದ್‌ ಮಾಜಿ ಅಧಿಕಾರಿಗಳು ತಿಳಿಸಿದ್ದಾರೆ. ಕಾರ್ಯಾಚರಣೆಗಾಗಿ ಒಂದು ಹಿಟ್‌ ಲಿಸ್ಟ್‌ಅನ್ನೂ ತಯಾರಿಸಲಾಗಿದೆ ಎಂದು ತಿಳಿದುಬಂದಿದೆ. ಪ್ಯಾಲೆಸ್ತೀನ್‌ ಮಾಜಿ ಪ್ರಧಾನಿ, ಈಗ ಹಮಾಸ್‌ ರಾಜಕೀಯ ಮುಖಸ್ಥನಾಗಿರುವ ಇಸ್ಮಾಯಿಲ್‌ ಹನಿಯೇಹ್‌, ಹಮಾಸ್‌ ಮಿಲಿಟರಿ ವಿಭಾಗದ ಮುಖ್ಯಸ್ಥ ಮೊಹಮ್ಮದ್‌ ಡೈಫ್‌, ಗಾಜಾ ಹಮಾಸ್‌ ಮುಖ್ಯಸ್ಥ ಯಾಹ್ಯಾ ಸಿನ್ವರ್‌ ಸೇರಿ ಹಲವು ಪ್ರಮುಖರನ್ನು ಹಿಟ್‌ಲಿಸ್ಟ್‌ನಲ್ಲಿ ಸೇರಿಸಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Israel Palestine War: 5 ಒತ್ತೆಯಾಳುಗಳ ಸಾವು; ಕದನ ವಿರಾಮ ಅಂತ್ಯ, ಮತ್ತೆ ಹಮಾಸ್‌ ಮೇಲೆ ಇಸ್ರೇಲ್‌ ಬಾಂಬ್‌ ಮಳೆ

ಇಸ್ರೇಲ್‌ ಹಾಗೂ ಹಮಾಸ್‌ ಉಗ್ರರ ನಡುವಿನ ಸಮರದಲ್ಲಿ ಮೃತಪಟ್ಟವರ ಸಂಖ್ಯೆ 12 ಸಾವಿರ ದಾಟಿದೆ. ಅದರಲ್ಲೂ, ಹಮಾಸ್‌ ಉಗ್ರರ ತಾಣವಾದ ಗಾಜಾ ನಗರದ ಮೇಲೆ ಇಸ್ರೇಲ್‌ ನಿರಂತರವಾಗಿ ದಾಳಿ ನಡೆಸುತ್ತಿದ್ದು, ನಗರದಲ್ಲಿ ಇದುವರೆಗೆ 11 ಸಾವಿರಕ್ಕೂ ಜನ ಮೃತಪಟ್ಟಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯವೇ ಮಾಹಿತಿ ನೀಡಿದೆ. ಹಮಾಸ್‌ ಉಗ್ರರ ದಾಳಿಗೆ ಇಸ್ರೇಲ್‌ನಲ್ಲಿ 1,400 ಜನ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ದೇಶ

ಮೆಲೋನಿ+ಮೋದಿ=ಮೆಲೋಡಿ; ಇಟಲಿ ಪ್ರಧಾನಿ ಸೆಲ್ಫಿ ‘ಜಸ್ಟ್ ಲುಕ್ಕಿಂಗ್‌ ಲೈಕ್‌ ಎ ವಾವ್’!

ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಜತೆಗಿನ ಸೆಲ್ಫಿಯನ್ನು ಪೋಸ್ಟ್‌ ಮಾಡಿದ್ದಾರೆ. ಜನ ಜಸ್ಟ್‌ ಲುಕ್ಕಿಂಗ್‌ ಲೈಕ್‌ ಎ ವಾವ್‌ ಎಂದು ಪ್ರತಿಕ್ರಿಯಿಸಿದ್ದಾರೆ. ಫೋಟೊ ಕೂಡ ಭಾರಿ ವೈರಲ್‌ ಆಗಿದೆ.

VISTARANEWS.COM


on

Narendra Modi Giorgia Melone
Koo

ದುಬೈ: ಪ್ರಧಾನಿ ನರೇಂದ್ರ ಮೋದಿ ಹಾಗೂ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ (Giorgia Meloni) ಅವರ ಸ್ನೇಹದ ಬಗ್ಗೆ ಜಗತ್ತಿಗೇ ಗೊತ್ತಿದೆ. ಭಾರತದಲ್ಲಂತೂ ನರೇಂದ್ರ ಮೋದಿ (Narendra Modi) ಹಾಗೂ ಜಾರ್ಜಿಯಾ ಮೆಲೋನಿ ಅವರ ಅಸಂಖ್ಯಾತ ಟ್ರೋಲ್‌ಗಳು, ವಿಡಿಯೊಗಳು, ಹಾಡುಗಳು, ಮೀಮ್‌ಗಳು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತವೆ. ಈಗ ಜಾರ್ಜಿಯಾ ಮೆಲೋನಿ ಅವರೇ ನರೇಂದ್ರ ಮೋದಿ ಜತೆ ಸೆಲ್ಫಿ ತೆಗೆಸಿಕೊಂಡು, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿದ್ದಾರೆ. ಈ ಫೋಟೊ ಈಗ ವೈರಲ್‌ (Viral News) ಆಗಿದ್ದು, ಜನ “ಜಸ್ಟ್‌ ಲುಕ್ಕಿಂಗ್‌ ಲೈ ಎ ವಾವ್”‌ ಎಂದು ಪ್ರತಿಕ್ರಿಯಿಸಿದ್ದಾರೆ.

ಯುಎಇ ದೇಶದ ರಾಜಧಾನಿ ದುಬೈನಲ್ಲಿ ನಡೆದ 28ನೇ ಕಾನ್ಫರೆನ್ಸ್‌ ಆಫ್‌ ದಿ ಪಾರ್ಟೀಸ್‌ (COP28) ಶೃಂಗಸಭೆಯಲ್ಲಿ ನರೇಂದ್ರ ಮೋದಿ ಹಾಗೂ ಜಾರ್ಜಿಯಾ ಮೆಲೋನಿ ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಇದೇ ವೇಳೆ ಜಾರ್ಜಿಯಾ ಮೆಲೋನಿ ಅವರು ನರೇಂದ್ರ ಮೋದಿ ಅವರ ಜತೆ ಸೆಲ್ಫಿ ತೆಗೆಸಿಕೊಂಡಿದ್ದಾರೆ. “ಸಿಒಪಿ28 ಸಭೆಯಲ್ಲಿ ಆತ್ಮೀಯ ಸ್ನೇಹಿತರು” ಎಂದು ಒಕ್ಕಣೆ ಬರೆದಿದ್ದಾರೆ. ಅಷ್ಟೇ ಅಲ್ಲ, ಮೆಲೋನಿ+ಮೋದಿ= ಮೆಲೋಡಿ ಎಂಬ ಅರ್ಥ ಬರುವ ಕಾರಣ ಮೆಲೋಡಿ ಎಂಬ ಹ್ಯಾಶ್‌ ಟ್ಯಾಗ್‌ ಬಳಸಿದ್ದಾರೆ. ಈ ಫೋಟೊ ಭಾರಿ ವೈರಲ್‌ ಆಗಿದ್ದು, ಸಾವಿರಾರು ಜನ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: Giorgia Meloni On Modi: ವಿಶ್ವ ನಾಯಕರಲ್ಲೇ ಮೋದಿ ಹೆಚ್ಚು ಪ್ರೀತಿಪಾತ್ರರು, ಇಟಲಿ ಪ್ರಧಾನಿ ಮೆಲೋನಿ ಮೆಚ್ಚುಗೆ

“ಜಸ್ಟ್‌ ಲುಕ್ಕಿಂಗ್‌ ಲೈಕ್‌ ಎ ವಾವ್”‌ ಎಂದು ವ್ಯಕ್ತಿಯೊಬ್ಬರು ಪ್ರತಿಕ್ರಿಯಿಸುವ ಮೂಲಕ ಇತ್ತೀಚಿನ ಟ್ರೆಂಡ್‌ ಫಾಲೋ ಮಾಡಿದ್ದಾರೆ. “ಈ ಒಂದು ಫೋಟೊ ಎಲ್ಲ ವೈರಲ್‌ ರೆಕಾರ್ಡ್‌ಗಳನ್ನೂ ಮೀರಿಸುತ್ತದೆ” ಎಂದು ಮತ್ತೊಬ್ಬರು ಹೇಳಿದ್ದಾರೆ. “ಮೋದಿ ಹಾಗೂ ಮೆಲೋಡಿ ಜೋಡಿ ಚೆನ್ನಾಗಿದೆ” ಎಂದು ಇನ್ನೊಬ್ಬರು ಕಿಚಾಯಿಸಿದ್ದಾರೆ. ಹಾಗೆಯೇ ಸಾವಿರಾರು ಮೀಮ್‌ಗಳು, ಟ್ರೋಲ್‌ಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ.

ಮೋದಿಯನ್ನು ಹಾಡಿ ಹೊಗಳಿದ್ದ ಮೆಲೋನಿ

ಜಾರ್ಜಿಯಾ ಮೆಲೋನಿ ಅವರು ಇದಕ್ಕೂ ಮೊದಲು ನರೇಂದ್ರ ಮೋದಿ ಅವರನ್ನು ಹೊಗಳಿದ್ದರು. ರೈಸಿನಾ ಶೃಂಗಸಭೆಯ ಹಿನ್ನೆಲೆಯಲ್ಲಿ ಭಾರತಕ್ಕೆ ಆಗಮಿಸಿದ್ದ ಜಾರ್ಜಿಯಾ ಮೆಲೋನಿ, “ನರೇಂದ್ರ ಮೋದಿ ಅವರು ವಿಶ್ವದ ನಾಯಕರಲ್ಲಿಯೇ ಹೆಚ್ಚು ಪ್ರೀತಿಗೆ ಪಾತ್ರರಾಗಿದ್ದಾರೆ. ಅವರು ಧೀಮಂತ ನಾಯಕರು ಎಂಬುದು ಸಾಬೀತಾಗಿದೆ. ಇದಕ್ಕಾಗಿ ಮೋದಿ ಅವರಿಗೆ ಅಭಿನಂದನೆಗಳು” ಎಂದಿದ್ದರು. “ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ಹಾಗೂ ಇಟಲಿ ಸಂಬಂಧ ಮತ್ತಷ್ಟು ವೃದ್ಧಿಯಾಗುತ್ತಿದೆ. ಉಭಯ ದೇಶಗಳ ಸಂಬಂಧವನ್ನು ವ್ಯೂಹಾತ್ಮಕ ಸಂಬಂಧವಾಗಿ ಮಾರ್ಪಡಿಸಲು ನಾವು ಉತ್ಸುಕರಾಗಿದ್ದೇವೆ. ಇದರಿಂದ ಎರಡೂ ದೇಶಗಳ ಸಂಬಂಧ ಇನ್ನಷ್ಟು ವೃದ್ಧಿಯಾಗಲಿದೆ” ಎಂದು ತಿಳಿಸಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ವಿದೇಶ

Medical Miracle: ಈ ಅಜ್ಜಿ 50 ವರ್ಷದಿಂದ ಬರೀ ಕೋಲ್ಡ್‌ ಡ್ರಿಂಕ್ಸ್‌ ಕುಡಿದೇ ಬದುಕ್ತಿದ್ದಾರೆ!

Medical Miracle: ವಿಯೆಟ್ನಾಂನ ವೃದ್ಧೆಯೊಬ್ಬರು 50 ವರ್ಷಗಳಿಂದ ಕೇವಲ ತಂಪು ಪಾನೀಯ, ನೀರು ಕುಡಿದೇ ಜೀವಿಸುತ್ತಿದ್ದಾರೆ. ಇದಕ್ಕಿರುವ ಕಾರಣ ಇಲ್ಲಿದೆ.

VISTARANEWS.COM


on

water drinking
Koo

ವಿಯೆಟ್ನಾಂ: ಉತ್ತಮ ಆರೋಗ್ಯಕ್ಕೆ ಸರಿಯಾದ, ಪೋಷಕಾಂಶಯುಕ್ತ ಆಹಾರ ಮುಖ್ಯ ಎನ್ನುತ್ತದೆ ವೈದ್ಯ ಲೋಕ. ಅದಕ್ಕಾಗಿ ದ್ರವ ರೂಪದ ಆಹಾರದ ಜತೆಗೆ ಘನ ಆಹಾರವನ್ನೂ ಸೇವಿಸಬೇಕು ಎಂದು ಸಲಹೆ ನೀಡಲಾಗುತ್ತದೆ. ಆದರೆ ವೈದ್ಯಲೋಕವನ್ನೇ ಅಚ್ಚರಿಗೆ ದೂಡಿ ಇಲ್ಲೊಬ್ಬರು ಸುಮಾರು 50 ವರ್ಷಗಳಿಂದ ಕೇವಲ ನೀರು ಮತ್ತು ತಂಪು ಪಾನೀಯ (Cold drinks) ಕುಡಿದೇ ಬದುಕುತ್ತಿದ್ದಾರೆ. ಅದೂ ಅವರು ಈ 75ರ ಇಳಿವಯಸ್ಸಿನಲ್ಲೂ ಆರೋಗ್ಯವಂತರಾಗಿದ್ದಾರೆ ಎನ್ನುವುದು ವಿಶೇಷ (Medical Miracle). ಯಾರು ಈ ವೃದ್ಧೆ? ಏನಿವರ ಹಿನ್ನೆಲೆ ಎನ್ನುವುದರ ವಿವರ ಇಲ್ಲಿದೆ.

ವಿಯಟ್ನಾಂನ ಬುಯಿ ಲೋಯಿ ಎಂಬ 75ರ ಹರೆಯದ ಅಜ್ಜಿಯೇ ವೈದ್ಯ ಲೋಕಕ್ಕೆ ಸವಾಲಾಗಿರುವವರು. ಅವರಿಗೆ ಯಾವುದೇ ಘನ ಆಹಾರ ತಿನ್ನಬೇಕೆಂದು ಅನಿಸುವುದೇ ಇಲ್ಲವಂತೆ. ಬರೀ ನೀರು, ಸಕ್ಕರೆಯಂಶವಿರುವ ತಂಪು ಪಾನೀಯವಷ್ಟೇ ಅವರ ಆಹಾರ.

ಕಾರಣವೇನು?

ಬುಯಿ ಲೋಯಿ ಅವರ ಈ ವಿಚಿತ್ರ ವರ್ತನೆಯ ಹಿಂದೆ ಬಲವಾದ ಕಾರಣವಿದೆ. ಆಗ ಬುಯಿ ಲೋಯಿ ಅವರಿಗೆ ಸುಮಾರು 25 ವರ್ಷವಾಗಿತ್ತು. 50 ವರ್ಷಗಳ ಹಿಂದೆ ಅವರು ಹಾಗೂ ಮತ್ತೊಬ್ಬ ಮಹಿಳೆ ಗಾಯವಾದ ಸೈನಿಕರಿಗೆ ಚಿಕಿತ್ಸೆ ನೀಡಲು ಬೆಟ್ಟ ಹತ್ತುತ್ತಿದ್ದರು. ಆಗ ಸಿಡಿಲು ಬಡಿದು ಬುಯಿ ಲೋಯಿ ಪ್ರಜ್ಞೆ ತಪ್ಪಿತ್ತು. ಕೆಲವು ಸಮಯದ ಬಳಿಕ ಎಚ್ಚರವಾದ ಮೇಲೆ ಗೆಳತಿ ಜ್ಯೂಸ್ ಕುಡಿಸಿದ್ದರು. ಆ ಬಳಿಕ ಬುಯಿ ಲೋಯಿ ಅವರ ಜೀವನ ಶೈಲಿಯೇ ಬದಲಾಯಿತು. ನಂತರ ಅವರಿಗೆ ಯಾವುದೇ ಘನ ಆಹಾರ ತಿನ್ನಲು ಅಷ್ಟು ಇಷ್ಟವಾಗುತ್ತಿರಲಿಲ್ಲವಂತೆ. ಸ್ವಲ್ಪ ಸಮಯ ಹಣ್ಣು, ಮತ್ತಿತರ ಆಹಾರ ಸೇವಿಸಿದರು. ಆದರೆ 1970ರಿಂದ ಹಣ್ಣು ಹಾಗೂ ಇತರ ಘನ ಆಹಾರ ಸೇವಿಸುವುದನ್ನು ಸಹ ಸಂಪೂರ್ಣ ನಿಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದೀಗ ಅವರ ಮನೆಯ ಫ್ರಿಡ್ಜ್‌ ತುಂಬಾ ಬರೀ ನೀರು ಹಾಗೂ ಜ್ಯೂಸ್‌ಗಳಿವೆ. ಅದರಲ್ಲೂ ತಂಪು ಪಾನೀಯಗಳನ್ನು ಹೆಚ್ಚಾಗಿ ಸೇವಿಸುತ್ತಾರೆ. ಈ ಡಯಟ್‌ನಿಂದಾಗಿ ಹೆರಿಗೆಯಾದಾಗ ಮಕ್ಕಳಿಗೆ ಹಾಲುಣಿಸಲು ಕೂಡ ಅವರಿಗೆ ಸಾಧ್ಯವಾಗಲಿಲ್ಲ ಎಂದು ಅವರ ಆಪ್ತರು ಹೇಳಿದ್ದಾರೆ. ಸದ್ಯ ಈ ಬಗ್ಗೆ ವೈದ್ಯರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಕೇವಲ ದ್ರವ ಆಹಾರದಿಂದಲೇ ಆರೋಗ್ಯವಾಗಿರುವುದು ಹೇಗೆ ಎನ್ನುವುದು ಬಹು ದೊಡ್ಡ ಪ್ರಶ್ನೆಯಾಗಿ ಕಾಡುತ್ತಿದೆ.

ಇದನ್ನೂ ಓದಿ: Viral video : ಶಾಲೆಗೆ ಹೊರಟಿದ್ದ ಟೀಚರ್‌ ಸಿನಿಮಾ ಸ್ಟೈಲ್‌ನಲ್ಲಿ ಕಿಡ್ನಾಪ್‌

ಕೇವಲ ಬೆಲ್ಲ, ಹಾಲು, ನೀರು ಸೇವಿಸುವ ಬಾಲಕಿ

ಇದೇ ಮಾದರಿಯ ಘಟನೆಯೊಂದು ಇತ್ತೀಚೆಗೆ ನಮ್ಮ ರಾಜ್ಯದಲ್ಲೂ ವರದಿಯಾಗಿತ್ತು. ಯಾದಗಿರಿ ಜಿಲ್ಲೆಯ ಸುರಪುರ ಪಟ್ಟಣದ ರಂಗಂಪೇಟೆಯ ರೇಣುಕಮ್ಮ ಎಂಬ ಬಾಲಕಿ 14 ವರ್ಷಗಳಿಂದ ಕೇವಲ ಬೆಲ್ಲ, ಹಾಲು ಹಾಗೂ ನೀರು ಸೇವಿಸುತ್ತಿದ್ದಾಳೆ. ಮನೆಯಲ್ಲಿ ಅವಳ ತಂದೆ-ತಾಯಿ, ಸಹೋದರರು ಹಾಗೂ ಸಹಪಾಠಿಗಳು ಎಷ್ಟೇ ಒತ್ತಾಯ ಮಾಡಿದರೂ ಊಟ ಮಾತ್ರ ಮಾಡೋದಿಲ್ಲ. ಊಟ ಮಾಡಿದರೆ ವಾಂತಿ ಆಗುತ್ತದೆಯಂತೆ. ಹೀಗಾಗಿ ಈ 14 ವರ್ಷದ ಬಾಲಕಿ ರೇಣುಕಮ್ಮ ಹುಟ್ಟಿದಾಗಿನಿಂದಲೂ ಕೇವಲ ಬೆಲ್ಲ, ಹಾಲು ಮಾತ್ರ ಸೇವಿಸುತ್ತಾ ಬಂದಿದ್ದಾಳೆ. ವೈದ್ಯರು ತಪಾಸಣೆ ಮಾಡಿದ್ದರೂ ಪರಿಹಾರ ಹುಡುಕುವುದು ಸಾಧ್ಯವಾಗಿಲ್ಲ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Continue Reading
Advertisement
Tulu Language
ಕರ್ನಾಟಕ34 seconds ago

Tulu Language : ತುಳುಗೆ ಸಿಗಲಿದೆಯೇ ಭಾಷಾ ಪ್ರಾತನಿಧ್ಯ? ಈ ಅಧಿವೇಶನದಲ್ಲಿ ಮಹತ್ವದ ನಿರ್ಧಾರ!

Rajastan Elections: 10 reasons for BJP Win
ದೇಶ15 mins ago

Rajastan Elections 2023 : ರಾಜಸ್ಥಾನದಲ್ಲಿ ಬಿಜೆಪಿ ಭರ್ಜರಿ ಮುನ್ನಡೆ; ದಿಗ್ವಿಜಯಕ್ಕೆ 10 ಕಾರಣ

raman singh bhupesh baghel
ದೇಶ16 mins ago

Election Result 2023: ಛತ್ತೀಸ್‌ಗಢದಲ್ಲಿ ಸುಳ್ಳಾದ ಎಕ್ಸಿಟ್‌ ಪೋಲ್‌, ಗೆಲುವಿನತ್ತ ಬಿಜೆಪಿ ದಾಪುಗಾಲು

Ration card not cancelled and Vidhanasoudha
ಕರ್ನಾಟಕ28 mins ago

Ration Card : ಆರು ತಿಂಗಳಿಂದ ರೇಷನ್‌ ಪಡೆದಿಲ್ಲವೇ? ನಿಮ್ಮ ಕಾರ್ಡ್‌ ರದ್ದಾಗುವ ಭಯ ಬೇಡ! ಆದರೆ..?

Sachin Tendulkar says he is super impressed by Vicky Kaushal
ಕ್ರಿಕೆಟ್36 mins ago

Sachin Tendulkar: ವಿಕ್ಕಿ ಕೌಶಲ್‌ ಸಿನಿಮಾ ಕಂಡು ʻಸೂಪರ್ ಇಂಪ್ರೆಸ್ಡ್ʼ ಆದ ಸಚಿನ್ ತೆಂಡೂಲ್ಕರ್‌!

Crime Sense Murder Case
ಕರ್ನಾಟಕ1 hour ago

Murder Case : ವ್ಯಕ್ತಿಯ ತಲೆ ಸೀಳಿ ಮೋರಿಗೆ ಶವ ಎಸೆದ ಹಂತಕರು!

election five states
ದೇಶ1 hour ago

Election Results 2023: ಲೋಕಸಭೆ 65 ಸ್ಥಾನಗಳ ಮೇಲೆ ಇದೀಗ ಬಿಜೆಪಿ ಹಿಡಿತ! ಮೋದಿ ಹಾದಿ ಸುಲಭ!

Police call off protest FIR against lawyer who slapped police
ಕರ್ನಾಟಕ1 hour ago

Police Protest : ಪ್ರತಿಭಟನೆ ಕೈ ಬಿಟ್ಟ ಪೊಲೀಸರು; ಕಪಾಳಕ್ಕೆ ಹೊಡೆದ ವಕೀಲನ ಮೇಲೆ ಎಫ್‌ಐಆರ್‌

Shivraj Singh Chouhan
ದೇಶ1 hour ago

Ladli Behna: ಚೌಹಾಣ್‌ ‘ಗ್ಯಾರಂಟಿ’ಗೆ ಜೈ ಎಂದ ಮಧ್ಯಪ್ರದೇಶ ಜನ;‌ ಏನಿದು ಲಾಡ್ಲಿ ಬೆಹ್ನಾ?

Bobby Deol cries after paparazzi praise him as Animal
ಬಾಲಿವುಡ್1 hour ago

Bobby Deol: ʻಅನಿಮಲ್‌ʼ ಸಕ್ಸೆಸ್‌ ಹೊಗಳಿಕೆಗೆ ಕಣ್ಣೀರಿಟ್ಟ ನಟ ಬಾಬಿ ಡಿಯೋಲ್

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Bigg Boss- Saregamapa 20 average TRP
ಕಿರುತೆರೆ1 month ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Police call off protest FIR against lawyer who slapped police
ಕರ್ನಾಟಕ1 hour ago

Police Protest : ಪ್ರತಿಭಟನೆ ಕೈ ಬಿಟ್ಟ ಪೊಲೀಸರು; ಕಪಾಳಕ್ಕೆ ಹೊಡೆದ ವಕೀಲನ ಮೇಲೆ ಎಫ್‌ಐಆರ್‌

Dina Bhavihsya
ಪ್ರಮುಖ ಸುದ್ದಿ8 hours ago

Dina Bhavishya : ಸಂಡೇ ಆದರೂ ಈ ರಾಶಿಯವರಿಗೆ ಟೆನ್ಷನ್‌ ತಪ್ಪಲ್ಲ! ಇವರಿಂದ ದೂರ ಇರಿ

Cockroaches bite baby born 2 days ago in vanivilas hospital
ಆರೋಗ್ಯ20 hours ago

Vanivilas Hospital : 2 ದಿನಗಳ ಹಿಂದಷ್ಟೇ ಜನಿಸಿದ ಮಗುವನ್ನು ಕಚ್ಚಿ ಹಾಕಿದ ಜಿರಳೆಗಳು!

Dina Bhavishya
ಪ್ರಮುಖ ಸುದ್ದಿ1 day ago

Dina Bhavishya : ಯಾರನ್ನೂ ನಂಬಿ ಇನ್ವೆಸ್ಟ್ಮೆಂಟ್‌ ಮಾಡ್ಬೇಡಿ!

DK Shiakumar and MLA Munirathna
ಕರ್ನಾಟಕ2 days ago

DK Shivakumar : ಡಿಕೆಶಿಯನ್ನು ಗೇಟ್‌ ಒಳಗೇ ಬಿಟ್ಟಿಲ್ಲ, ಸಿಎಂ ಮಾಡುವಂತೆಯೂ ಹೇಳಿಲ್ಲವೆಂದ ಮುನಿರತ್ನ!

Tigre Found in Mysuru again Beware of this village
ಕರ್ನಾಟಕ2 days ago

Operation Tiger : ಮೈಸೂರಲ್ಲಿ ಮತ್ತೆ ಹುಲಿ ಕಾಟ; ಈ ಗ್ರಾಮದವರು ಹುಷಾರು!

Infosys Narayana Murthy and Congress Guarantee
ಕರ್ನಾಟಕ3 days ago

Congress Guarantee : ಯಾವುದನ್ನೂ ಪುಕ್ಕಟೆ ಕೊಡಬೇಡಿ; ‘ಗ್ಯಾರಂಟಿ’ಗೆ ನಾರಾಯಣ ಮೂರ್ತಿ ಆಕ್ಷೇಪ!

Justice for Ajay Protests against NIMHANS Hospital
ಆರೋಗ್ಯ3 days ago

Child Death : ಜಸ್ಟಿಸ್ ಫಾರ್ ಅಜಯ್; ಶುರುವಾಯ್ತು ನಿಮ್ಹಾನ್ಸ್‌ ವಿರುದ್ಧ ಪ್ರತಿಭಟನೆ

Dina Bhavishya
ಪ್ರಮುಖ ಸುದ್ದಿ4 days ago

Dina Bhavishya : ಯಾರಾದರೂ ಕಾಳಜಿ ತೋರಿದರೆ ಈ ರಾಶಿಯವರು ನೆಗ್ಲೆಕ್ಟ್‌ ಮಾಡ್ಬೇಡಿ!

Dina Bhavishya
ಪ್ರಮುಖ ಸುದ್ದಿ5 days ago

Dina Bhavishya : ಈ ರಾಶಿಯವರಿಗೆ ಬೇಸರ ತರಲಿದೆ ಸಂಗಾತಿಯ ಕಹಿ ಮಾತು

ಟ್ರೆಂಡಿಂಗ್‌