Site icon Vistara News

World’s Oldest Dog: ಜಗತ್ತಿನ ಅತ್ಯಂತ ಹಿರಿಯ, 31 ವರ್ಷದ ಪೋರ್ಚುಗಲ್ ನಾಯಿ ‘ಬೋಬಿ’ ನಿಧನ

Worlds oldest dog bobi dies at age of 31, in portugal

ಲಿಸ್ಬನ್: ಜಗತ್ತಿನ ಅತ್ಯಂತ ಹಿರಿಯ ನಾಯಿ (World’s Oldest Dog) ಎಂದು ವಿಶ್ವ ದಾಖಲೆ ಬರೆದಿದ್ದ ಬೋಬಿ (Bobi) ತನ್ನ 31 ವಯಸ್ಸಿನಲ್ಲಿ ಮೃತವಾಗಿದೆ ಎಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ (Guinness World Records) ಸೋಮವಾರ ಹೇಳಿದೆ. ಮಧ್ಯ ಪೋರ್ಚುಗಲ್‌ನ (Portugal) ಹಳ್ಳಿಯೊಂದರಲ್ಲಿ ವಾಸವಾಗಿದ್ದ ರಫೀರೊ ಅಲೆಂಟೆಜಾನೊ ‘ಬೋಬಿ’ಗೆ 31 ವರ್ಷ ಮತ್ತು 165 ದಿನಗಳಾಗಿದ್ದವು. ಇದಕ್ಕೂ ಮೊದಲು ಜಗತ್ತಿನ ಹಿರಿಯ ನಾಯಿ ಎಂಬ ದಾಖಲೆ 1993ರಿಂದಲೂ ಆಸ್ಟ್ರೇಲಿಯಾದ ಕ್ಯಾಟಲ್ ಡಾಗ್ ಹೆಸರಿನಲ್ಲಿತ್ತು. ಈ ನಾಯಿ 29 ವರ್ಷ ಮತ್ತು 5 ತಿಂಗಳ ಕಾಲ ಬದುಕಿತ್ತು.

ಇತಿಹಾಸದಲ್ಲಿ ಪ್ರತಿ ನಾಯಿಯನ್ನು ಮೀರಿಸಿದ್ದರೂ, ಭೂಮಿಯ ಮೇಲಿನ ಅವನ 11,478 ದಿನಗಳು ಅವನನ್ನು ಪ್ರೀತಿಸುವವರಿಗೆ ಎಂದಿಗೂ ಸಾಕಾಗುವುದಿಲ್ಲ” ಎಂದು ಬೋಬಿಯನ್ನು ಹಲವಾರು ಬಾರಿ ಭೇಟಿ ಮಾಡಿದ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಅವನ ಸಾವನ್ನು ಮೊದಲು ಘೋಷಿಸಿದ ಪಶುವೈದ್ಯ ಕರೆನ್ ಬೆಕರ್ ಹೇಳಿದರು. “ಗಾಡ್‌ಸ್ಪೀಡ್, ಬಾಬಿ.”

ಇತಿಹಾಸದಲ್ಲಿ ಪ್ರತಿ ನಾಯಿಯೂ ತನ್ನ ಜೀವನ ಮಿತಿಯನ್ನೂ ಮೀರಿ ಬದುಕಿದ್ದರೂ, ತನ್ನ ಪ್ರೀತಿಸಿದವರಿಗಾಗಿ 11,478 ದಿನಗಳನ್ನು ಭೂಮಿಯ ಮೇಲಿದ್ದರೂ ಸಾಕಾಗುವುದಿಲ್ಲ ಎಂದು ಬೋಬಿಯನ್ನು ಅನೇಕ ಬಾರಿ ಭೇಟಿಯಾಗಿದ್ದ ಪಶು ವೈದ್ಯ ಕರೆನ್ ಬೇಕರ್ ಅವರು ತಿಳಿಸಿದ್ದಾರೆ. ವಿಶೇಷ ಎಂದರೆ, ಕರೆನ್ ಬೇಕರ್ ಅವರು ಬೋಬಿ ನಿಧನದ ವಾರ್ತೆಯನ್ನು ಸೋಷಿಯಲ್ ಮೀಡಿಯಾದಲ್ಲಿ ಬಹಿರಂಗ ಮಾಡಿದ್ದರು. ಈ ತಿಂಗಳ ಫೆಬ್ರವರಿಯಲ್ಲಿ ಜಗತ್ತಿನ ಅತ್ಯಂತ ಹಿರಿಯ ನಾಯಕಿ ಇಹಲೋಕ ತ್ಯಜಿಸಿದೆ ಎಂದು ಹೇಳಿಕೊಂಡಿದದರು.

ಸಾಂಪ್ರದಾಯಿಕವಾಗಿ ಕುರಿ ನಾಯಿಗಳಾಗಿ ಬಳಸಲಾಗುವ ಬೋಬಿ ತಳಿಯ ನಾಯಿಯು ಸಾಮಾನ್ಯವಾಗಿ 12 ರಿಂದ 14 ವರ್ಷಗಳ ಜೀವಿತಾವಧಿಯನ್ನು ಹೊಂದಿರುತ್ತದೆ. ಈ ಪೋರ್ಚುಗಲ್‌ನ ಈ ನಾಯಿಕ 31 ವರ್ಷಗಳ ಕಾಲ ಬದುಕಿತ್ತು.

ಬೋಬಿ ಮಾಲೀಕ ಲಿಯೋನೆಲ್ ಕೋಸ್ಟಾ ಅವರು ಹಳ್ಳಿಯಲ್ಲಿ ವಾಸವಾಗಿದ್ದರು. ನಾಯಿಯನ್ನು ಎಂದಿಗೂ ಸರಪಳಿಯಲ್ಲಿ ಅಥವಾ ಬಾರಿನಿಂದ ಬಂಧಿಸಿಡುತ್ತಿರಲಿಲ್ಲ. ಯಾವಾಗಲೂ ಅದು “ಮಾನವ ಆಹಾರವನ್ನು” ತಿನ್ನುವುದು ಸೇರಿದಂತೆ ಇನ್ನಿತರ ಅಂಗಳ ಅದರ ದೀರ್ಘಾಯುಷ್ಯಕ್ಕೆ ಕಾರಣವೆಂದು ಹೇಳುತ್ತಿದ್ದರು.

ಈ ಸುದ್ದಿಯನ್ನೂ ಓದಿ: Viral News : ಬರ್ತ್‌ಡೇ ಆಚರಿಸಿಕೊಳ್ಳುತ್ತಿದೆ ವಿಶ್ವದ ಅತ್ಯಂತ ಹಿರಿಯ ನಾಯಿ! ಇದರ ವಯಸ್ಸೆಷ್ಟು ಗೊತ್ತಾ?

ಬೋಬಿ ಜನಿಸಿದ ಸಮಯದಲ್ಲಿ ಕೋಸ್ಟಾ ಅವರ ಕುಟುಂಬವು ಅನೇಕ ಪ್ರಾಣಿಗಳು ಹೊಂದಿತ್ತು. ಕುಟುಂಬದ ಸ್ಥಿತಿ ಆರ್ಥಿಕವಾಗಿ ಅಷ್ಟೇನೂ ಚೆನ್ನಾಗಿರಲಿಲ್ಲ. ಆದ್ದರಿಂದ ಸಾಮಾನ್ಯವಾಗಿ ನವಜಾತ ನಾಯಿಮರಿಗಳನ್ನು ಸಾಕುವುದಕ್ಕಿಂತ ಹೆಚ್ಚಾಗಿ ಹೂಳುತ್ತಿದ್ದರು. ಆದರೆ ಬೋಬಿ ಉರುವಲಿನ ರಾಶಿಯ ನಡುವೆ ಅಡಗಿಕೊಂಡು ತನ್ನ ಜೀವವನ್ನು ಉಳಿಸಿಕೊಂಡಿತ್ತು. ಕೋಸ್ಟಾ ಮತ್ತು ಆತನ ಸಹೋದರರು ಬೋಬಿ ರಹಸ್ಯವಾಗಿ ಬದುಕಿರುವುದನ್ನು ಕಂಡುಕೊಂಡರು ಮತ್ತು ಅದು ಕಣ್ಣು ಬಿಡುವವರೆಗೂ ಸಂಗತಿಯನ್ನು ರಹಸ್ಯವಾಗಿಟ್ಟರು.

ನಾಯಿ ಮರಿ ಕಣ್ಣು ಬಿಟ್ಟರೆ ನಮ್ಮ ತಂದೆ ತಾಯಿ ಆ ಮರಿಯನ್ನು ಎಂದಿಗೂ ಹೂಳುತ್ತಿರಲಿಲ್ಲ ಎಂಬ ಸಂಗತಿ ನಮಗೆ ಗೊತ್ತಿತ್ತು ಎಂದು ಕೋಸ್ಟಾ ಸುದ್ದಿ ಸಂಸ್ಥೆಗೆ ಈ ಹಿಂದೆ ತಿಳಿಸಿದ್ದರು. ಸಾಯುವುದಕ್ಕಿಂತ ಮೊದಲು ಬೋಬಿ ವಾಕ್ ಮಾಡಲು ಇಷ್ಟಪಡುತ್ತಿತ್ತು. ಆದರೆ, ಶಕ್ತಿ ಸಾಕಾಗುತ್ತಿರಲಿಲ್ಲ. ತುಪ್ಪಳ ತೆಳುವಾಗುತ್ತಿತ್ತು; ದೃಷ್ಟಿ ಮಂಜಾಗುತ್ತಿತ್ತು. ನಾಯಿಗೆ ಹೆಚ್ಚು ವಿಶ್ರಾಂತಿ ಅಗತ್ಯವಾಗಿತ್ತು ಎಂದು ಅವರು ತಿಳಿಸಿದ್ದಾರೆ.

ವಿದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version