Site icon Vistara News

ದೇಶ ಹಾಳು ಮಾಡ್ತಿದ್ದೀಯಾ, ನಿನಗೆ ಹ್ಯಾಂಡ್‌ಶೇಕ್ ಮಾಡಲ್ಲ! ಕೆನಡಾ ಪ್ರಧಾನಿಗೇ ಸಾಮಾನ್ಯ ವ್ಯಕ್ತಿ ಮಂಗಳಾರತಿ!

India involved in Canada elections Says intelligence report

ನವದೆಹಲಿ: ”ನೀನು ದೇಶವನ್ನು ನಾಶ ಮಾಡ್ತಾ ಇದ್ಯಾ… ನಾನು ನಿನಗೆ ಹ್ಯಾಂಡ್ ಶೇಕ್ ಮಾಡಲ್ಲ ಹೋಗಯ್ಯ…” ಹೀಗೆ ಕೆನಡಾದ ವ್ಯಕ್ತಿಯೊಬ್ಬರು, ತಮ್ಮದೇ ಪ್ರಧಾನಿ ಜಸ್ಟಿನ್ ಟ್ರೂಡೋ (Canada PM Justin Trudeau) ಅವರಿಗೆ ಹೇಳುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ(Viral Video). ಈ ಘಟನೆ ಟೊರೊಂಟೊದಲ್ಲಿ (Toronto) ನಡೆದಿದೆ. ಟ್ರೂಡೋ ಅವರು ತಮ್ಮ ಬೆಂಬಲಿಗರಿಗೆ ಶೇಕ್ ಹ್ಯಾಂಡ್ (Shake Hands) ಮಾಡುತ್ತಿದ್ದರು, ಆಗ ಒಬ್ಬ ವ್ಯಕ್ತಿ ಕೈಕುಲುಕಲು ನಿರಾಕರಿಸಿದ್ದಲ್ಲೇ, ಜಸ್ಟೀನ್ ಸರ್ಕಾರ (Canada Government) ಹೇಗೆ ಜನರಿಗೆ ಹೊರೆಯಾಗಿದೆ ಎಂದು ವಿವರಿಸುತ್ತಾನೆ.

ವೈರಲ್ ವಿಡಿಯೋದಲ್ಲಿ ಏನಿದೆ?

ಪ್ರಧಾನಿ ಜಸ್ಟಿನ್ ಟ್ರೂಡೋ ಅವರು ಕೈ ಬೀಸುತ್ತಾ ತಮ್ಮ ಬೆಂಬಲಿಗರೊಂದಿಗೆ ಬರುತ್ತಾರೆ. ಎದುರಿದ್ದ ಜನರಿಗೆ ಶುಭಾಶಯ ಹೇಳುತ್ತಾ ವ್ಯಕ್ತಿಯೊಬ್ಬನಿಗೆ ಕೈ ಕುಲುಕಲು ಹೋಗುತ್ತಾರೆ. ಆಗ ವ್ಯಕ್ತಿ ನಾನು ನಿನ್ನೊಂದಿಗೆ ಹ್ಯಾಂಡ್ ಶೇಕ್ ಮಾಡಲಾರೆ ಎಂದು ಹೇಳುತ್ತಾನೆ. ಅಲ್ಲದೇ ಕೆಟ್ಟ ಭಾಷೆ ಬಳಸುತ್ತಾನೆ. ಆಗ ಟ್ರೂಡೋ, ಯಾಕೆ ಸರ್..? ಎಂದು ಪ್ರಶ್ನಿಸುತ್ತಾನೆ. ಆಗ ವ್ಯಕ್ತಿ, ನೀನು ಇಡೀ ದೇಶವನ್ನು ನಾಶ ಮಾಡುತ್ತಿದ್ದೀಯಾ? ಎಂದು ಜೋರಾಗಿ ಹೇಳುತ್ತಾನೆ. ನಾನೇನು ಅಂಥ ತಪ್ಪು ಮಾಡಿದ್ದೇನೆ ಎದು ಟ್ರೂಡೋ ಕೇಳುತ್ತಾರೆ. ಅದಕ್ಕೆ, ದೇಶದಲ್ಲಿ ಯಾರಾದರೂ ಮನೆಯನ್ನು ಖರೀದಿಸಲು ಸಾಧ್ಯವಾಗುತ್ತಿದೆಯೇ ಎಂದು ಪ್ರಶ್ನಿಸುತ್ತಾನೆ.

ಈ ಪ್ರಶ್ನೆಗೆ ಉತ್ತರಿಸಿದ ಟ್ರುಡೋ, ವಸತಿ ವಿಷಯವು ಸಂಸದೀಯ ಸರ್ಕಾರದ ಜವಾಬ್ದಾರಿಯಲ್ಲ ಎಂದು ಹೇಳುವ ಮೂಲಕ, ಸ್ಥಳೀಯ ಸರ್ಕಾರಗಳ ಮೇಲೆ ಗೂಬೆ ಕೂರಿಸುತ್ತಾರೆ. ಆಗ ವ್ಯಕ್ತಿ ತಮ್ಮ ಮಾತನ್ನು ಮುಂದುವರಿಸುತ್ತಾ, ನೀವು ಜನರ ಮೇಲೆ ಕಾರ್ಬನ್ ತೆರಿಗೆ ಹೇರುತ್ತಿದ್ದೀರಿ ಎಂದು ಹೇಳುತ್ತಾನೆ. ಅದಕ್ಕೆ ಉತ್ತರಿಸಿದ ಟ್ರುಡೋ, ಕಾರ್ಬನ್ ತೆರಿಗೆಯಿಂದ ನಾವು ಏನು ಮಾಡುತ್ತಿದ್ದೇವೆ ಎಂಬುದು ನಿಮಗೆ ಗೊತ್ತಾ? ಮಾಲಿನ್ಯಕ್ಕೆ ಬೆಲೆ ಕಟ್ಟಿ, ಆ ಹಣವನ್ನು ನಿಮ್ಮಂಥವರ ಕುಟುಂಬಗಳಿಗೆ ಪುನಃ ನೀಡುತ್ತಿದ್ದೇವೆ ಎಂದು ಹೇಳುತ್ತಾರೆ.

ಈ ಸುದ್ದಿಯನ್ನೂ ಓದಿ: India Canada Row: ಥಂಡಾ ಹೊಡೆದ ಕೆನಡಾ ಪಿಎಂ! ಭಾರತದೊಂದಿಗೆ ಇನ್ನು ಜಗಳ ಮಾಡಲ್ಲ ಎಂದ ಟ್ರೂಡೋ

ನೀವು ನಮ್ಮಂಥರಿಗೆ ಹಣ ನೀಡುತ್ತಿಲ್ಲ. ಬದಲಿಗೆ ಆ ತೆರಿಗೆ ಹಣವನ್ನು ಉಕ್ರೇನ್‌ಗೆ ಕಳುಹಿಸುತ್ತಿದ್ದೀರಿ ಅಲ್ವಾ? ತನ್ನ ಸ್ವಂತ ದೇಶವನ್ನೇ ಕಸಾಯಿಖಾನೆ ಮಾಡಿರುವ ವ್ಯಕ್ತಿಗೆ ಕಳುಹಿಸುತ್ತಿದ್ದೀರಿ ಎಂದು ಆ ವ್ಯಕ್ತಿ ಆರೋಪಿಸುತ್ತಾನೆ. ಆದರೆ, ಟ್ರೂಡೋ ಅವರು ಆ ವ್ಯಕ್ತಿಯ ರಷನ್ ಪ್ರೊಪಗಂಡಾ ತಿರಸ್ಕರಿಸುತ್ತಾರೆ. ಅಲ್ಲದೇ, ನೀವು ಪುಟಿನ್ ಹೇಳಿದ್ದನ್ನು ಹೇಳುತ್ತಿದ್ದೀರಿ. ಅಲ್ಲವೇ? ರಷ್ಯಾದಿಂದ ಸಾಕಷ್ಟು ತಪ್ಪು ಮಾಹಿತಿಯು ರವಾನೆಯಾಗುತ್ತಿದೆ ಎನ್ನುತ್ತಾ ಟ್ರೂಡೋ ಅವರು ಅಲ್ಲಿಂದ ಮುಂದಕ್ಕೆ ಹೋಗುತ್ತಾರೆ.

ಕೆನಡಾದಲ್ಲಿ ವಸತಿ ಸಮಸ್ಯೆ ಸಿಕ್ಕಾಪಟ್ಟೆಯಾಗಿದೆ. ಅಲ್ಲಿನ ಜನರಿಗೆ ಮನೆಗಳನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲ. ಹೆಚ್ಚುತ್ತಿರುವ ಅಕ್ರಮ ವಲಸಿಗರು, ಅಂತಾರಾಷ್ಟ್ರೀಯ ವಿದ್ಯಾರ್ಥಿಗಳೇ ಇದಕ್ಕೆ ಕಾರಣ ಎಂದು ಟ್ರೂಡೋ ಸರ್ಕಾರ ಆರೋಪಿಸುತ್ತಿದೆ. ಕೆನಡಾದಲ್ಲಿ ಮನೆಗಳಿಗೆ ಸಾಕಷ್ಟು ಬೇಡಿಕೆ ಇದೆ. ಆದರೆ, ಜನರಿಗೆ ಕೈಗೆಟುಕುವ ದರದಲ್ಲಿ ಅಲ್ಲಿನ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ.

ವಿದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version