ನವ ದೆಹಲಿ: ಭಾರತದಲ್ಲಿ ಆರ್ಟಿಫಿಶಿಯಲ್ ಇಂಟಲಿಜೆನ್ಸ್ (Artificial Intelligence) ವಲಯದಲ್ಲಿ 45,000ಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಇವೆ ಎಂದು ಟೀಮ್‌ಲೀಸ್ ಡಿಜಿಟಲ್ ವರದಿ ತಿಳಿಸಿದೆ. ಡೇಟಾ ಸೈಂಟಿಸ್ಟ್‌ಗಳು(data scientists) ಮತ್ತು ಮೆಶೀನ್ ಲರ್ನಿಂಗ್ ಎಂಜಿನಿಯರ್ ಹುದ್ದೆಗಳಿಗೆ (Machine Learning engineers) ಬೇಡಿಕೆ ಇದೆ ಎಂದು ವರದಿ ತಿಳಿಸಿದೆ.
ಟೆಕ್ ಸ್ಟಾಫಿಂಗ್ ಕಂಪನಿಯಾದ ಟೀಮ್‌ಲೀಸ್, ಎಐ ವಲಯದಲ್ಲಿ ಉದ್ಯೋಗಾವಕಾಶಗಳ ಬಗ್ಗೆ ಬೆಳಕು ಚೆಲ್ಲಿದೆ. ಡೇಟಾ ಮತ್ತು ಎಂಎಲ್ ಎಂಜಿನಿಯರ್‌ಗಳಿಗೆ ವಾರ್ಷಿಕ 14 ಲಕ್ಷ ರೂ. ವೇತನ ಸಿಗುತ್ತದೆ. ಡೇಟಾ ಆರ್ಕಿಟೆಕ್ಟ್‌ಗಳು 12 ಲಕ್ಷ ರೂ. ತನಕ ಗಳಿಸಬಹುದು. 8 ವರ್ಷ ಅನುಭವ ಇರುವವರು ವಾರ್ಚಿಕ 25ರಿಂದ 45 ಲಕ್ಷ ರೂ. ಸಂಪಾದಿಸಬಹುದು. ಕರಿಯರ್ ಬೆಳವಣಿಗೆಗೆ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಕೌಶಲವನ್ನು ಗಳಿಸುವುದು ಸೂಕ್ತ ಎಂದು ಟೀಮ್‌ಲೀಸ್ ವರದಿ ತಿಳಿಸಿದೆ.
37% ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಎಐ ತಂತ್ರಜ್ಞಾನದ ತರಬೇತಿ ನೀಡಿವೆ. 30% ಕಂಪನಿಗಳು ತರಬೇತಿ ಒದಗಿಸಲು ಮುಂದಾಗಿವೆ. ಎಐ ಕೌಶಲಕ್ಕೆ ಬೇಡಿಕೆ ಮತ್ಯು ಪೂರೈಕೆಯ ನಡುವೆ ಭಾರಿ ಅಂತರ ಉಂಟಾಗಿದೆ ಎಂದು ವರದಿ ತಿಳಿಸಿದೆ.