ಬೆಂಗಳೂರು: ನೀವು ಸಾಮಾಜಿಕ ಜಾಲತಾಣಗಳಲ್ಲಿ ಮೀಮ್ಸ್‌ಗಳನ್ನು (Chief Memes Officer) ಕಂಡು ನಕ್ಕು ಹಗುರವಾಗಿರಬಹುದು. ಆನಂದಿಸಿರಬಹುದು. ಇದೀಗ ಬೆಂಗಳೂರಿನ ಸ್ಟಾಕ್‌ಗ್ರೊ (StockGro) ಎಂಬ ಸ್ಟಾಕ್ ಮಾರ್ಕೆಟ್ ಸಂಬಂಧಿತ ಸ್ಟಾರ್ಟಪ್, ಚೀಫ್ ಮೀಮ್ಸ್ ಆಫೀಸರ್ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಿದೆ. ಹಾಗೂ ತಿಂಗಳಿಗೆ 1 ಲಕ್ಷ ರೂ. ವೇತನವನ್ನು ನೀಡುವುದಾಗಿ ತಿಳಿಸಿದೆ.
ಹಣಕಾಸು ಸಂಬಂಧಿತ ವಿಚಾರಗಳನ್ನು, ಮಾರುಕಟ್ಟೆ ಟ್ರೆಂಡ್‌ಗಳನ್ನು ಸರಳ ಹಾಗೂ ಹಾಸ್ಯ ಪ್ರಜ್ಞೆಯೊಂದಿಗೆ ಜನರಿಗೆ ಅರ್ಥ ಮಾಡಿಸಲು ಚೀಫ್ ಮೀಮ್ಸ್ ಆಫೀಸರ್ ಹುದ್ದೆಯನ್ನು ಸ್ಟಾಕ್‌ಗ್ರೊ ನೇಮಿಸುತ್ತಿದೆ. ಈಗಾಗಲೇ ಈ ಹುದ್ದೆಗೆ 200 ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಸ್ಟಾರ್ಟಪ್ ತನ್ನ ಲಿಂಕ್ಡ್ ಇನ್ ತಾಣದಲ್ಲಿ ತಿಳಿಸಿದೆ. ಇದು ಫುಲ್ ಟೈಮ್ ಹುದ್ದೆಯಾಗಿದೆ.
ಅರ್ಹತೆ ಏನು?
ಹಣಕಾಸು, ಸ್ಟಾಕ್ ಮಾರುಕಟ್ಟೆ ಬಗ್ಗೆ ಜ್ಞಾನ ಇರಬೇಕು.
ಹಣಕಾಸು ಮತ್ತು ಫನ್ನಿ ಟ್ರೆಂಡ್‌ಗಳ ಬಗ್ಗೆ ಲಿಂಕ್ ಮಾಡಬಲ್ಲ ಸೃಜನಶೀಲತೆ ಇರಬೇಕು.
ಫನ್ನಿ ಅನ್ನಿಸುವ ಹಾಗೂ ಹಣಕಾಸು ಸಂಬಂಧಿತ ಮೀಮ್ಸ್‌ಗಳನ್ನು ಸೃಷ್ಟಿಸಬೇಕು.
ಹಾಸ್ಯ ಪ್ರಜ್ಞೆ ಇರಬೇಕು
ಸಂವಹನಾ ಕೌಶಲ, ಟೀಮ್ ಸ್ಪಿರಿಟ್‌ನಲ್ಲಿ ಕೆಲಸ ಮಾಡುವ ಸ್ವಭಾವ ಇರಬೇಕು.
ನಕ್ಕು ನಗಿಸಬಲ್ಲ ಮೀಮ್ಸ್‌ಗಳು ಅದೇ ವೇಳೆ ಹಣಕಾಸು ವಿಷಯಗಳನ್ನೂ ಒಳಗೊಂಡಿರಬೇಕು.
ಅದ್ಭುತವಾಗಿ ಬರೆಯಲು ಗೊತ್ತಿರಬೇಕು.
ಚೀಫ್ ಮೀಮ್ಸ್ ಆಫೀಸರ್ ಹುದ್ದೆ ಅಸಾಂಪ್ರದಾಯಿಕವಾಗಿದ್ದು, ಈಗಿನ ಗ್ರಾಹಕರ ಅಗತ್ಯಕ್ಕೆ ಅನುಗುಣವಾಗಿದೆ ಎಂದು ಸ್ಟಾಕ್ ಗ್ರೊ ಕಂಪನಿಯ ಸಿಇಒ ಅಜಯ್ ಲಾಖೋಟಿಯಾ ತಿಳಿಸಿದ್ದಾರೆ.