Site icon Vistara News

DR Calculation : ಡಿಎ ಲೆಕ್ಕಾಚಾರ, ಕೇಂದ್ರ ಸರ್ಕಾರಿ ಉದ್ಯೋಗಿಗಳ ಸಂಬಳ, ಪಿಂಚಣಿ ಎಷ್ಟು ಹೆಚ್ಚಲಿದೆ?

cash

7th Pay Commission Dearness allowance/DR Calculation: ಡಿಯರ್‌ನೆಸ್‌ ಅಲೊವೆನ್ಸ್‌ ಅನ್ನು ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ನೀಡಲಾಗುತ್ತದೆ. ಕೇಂದ್ರ ಸರ್ಕಾರ ಕಳೆದ ವಾರ ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆಯನ್ನು (Dearness allowance) ಮೂಲವೇತನದ ಶೇ.4ರಷ್ಟು ಹೆಚ್ಚಿಸಿದೆ. ಇದರೊಂದಿಗೆ ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ DA/DR ದರವು ಮೂಲ ವೇತನ/ಪಿಂಚಣಿಯ 42%ಕ್ಕೆ ಏರಿಕೆಯಾದಂತಾಗಿದೆ. 7ನೇ ವೇತನ ಆಯೋಗದ ಫಾರ್ಮ್ಯುಲಾದ ಆಧಾರದಲ್ಲಿ ಸರ್ಕಾರವು ಡಿಎ/ಡಿಆರ್‌ ಏರಿಕೆಯನ್ನು ಮಾಡುತ್ತದೆ. ಇತ್ತೀಚಿನ ಏರಿಕೆಯಿಂದ 47.58 ಲಕ್ಷ ಕೇಂದ್ರ ಸರ್ಕಾರಿ ಉದ್ಯೋಗಿಗಳು ಮತ್ತು 69.76 ಲಕ್ಷ ಪಿಂಚಣಿದಾರರು ಅನುಕೂಲ ಪಡೆಯಲಿದ್ದಾರೆ.

ಡಿಎ ಏರಿಕೆಯ ಲೆಕ್ಕಾಚಾರ ಹೇಗೆ? (DA Hike calculation):

ಇತ್ತೀಚಿನ 4% ಏರಿಕೆಯ ಪರಿಣಾಮ ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆಯ ಪ್ರಮಾಣವು ಮೂಲವೇತನದ 42%ಕ್ಕೆ ಏರಿಕೆಯಾಗಿದೆ. ಉದಾಹರಣೆಗೆ ಒಬ್ಬ ಉದ್ಯೋಗಿಯ ಮೂಲವೇತನ 31,400 ರೂ. ಆಗಿದ್ದರೆ, 11,932 ರೂ. ಡಿಎ ಇರುತ್ತದೆ. ಅಂದರೆ 38% ಆಗಿರುತ್ತದೆ. ಪರಿಷ್ಕೃತ ಡಿಎ 42% ಆಗಿರುವುದರಿಂದ 13,188 ರೂ.ಗೆ ಏರಿಕೆಯಾಗಲಿದೆ. ಅಂದರೆ 1256 ರೂ. ಏರಿಕೆಯಾಗುತ್ತದೆ.

ಡಿಆರ್‌ ಏರಿಕೆಯ ಲೆಕ್ಕಾಚಾರ ಹೇಗೆ? (DA Hike Calculation):

ಡಿಯರ್‌ನೆಸ್‌ ರಿಲೀಫ್‌ (dearness relief) ಅನ್ನು ಕೇಂದ್ರ ಸರ್ಕಾರಿ ಪಿಂಚಣಿದಾರರಿಗೆ ನೀಡಲಾಗುತ್ತದೆ. ಅದು ಈಗ ಮೂಲ ಪಿಂಚಣಿಯ 38%ರಿಂದ 42%ಕ್ಕೆ ಏರಿಕೆಯಾಗಿದೆ. ಉದಾಹರಣೆಗೆ ಪಿಂಚಣಿದಾರರ ಮೂಲ ಪಿಂಚಣಿಯು 25,200 ರೂ. ಆಗಿದ್ದರೆ, 38%ರ ಹಳೆಯ ದರದಲ್ಲಿ 9576 ರೂ.ಗಳಾಗುತ್ತದೆ. ಈಗ 42%ಕ್ಕೆ ಏರಿಕೆಯಾಗಿರುವುದರಿಂದ ಪಿಂಚಣಿದಾರ 10,584 ರೂ. ಡಿಆರ್‌ ಪಡೆಯುತ್ತಾನೆ. ಅಂದರೆ 1008 ರೂ. ಹೆಚ್ಚಳವಾಗುತ್ತದೆ.

ಡಿಎ ಹೆಚ್ಚಳ ಜಾರಿ ದಿನಾಂಕ: ಡಿಎ/ಡಿಆರ್‌ ಹೆಚ್ಚಳವು 2023ರ ಜನವರಿ 1ರಿಂದ ಅನ್ವಯವಾಗುತ್ತದೆ.

Exit mobile version