Site icon Vistara News

Job Alert: ಸಿಬಿಎಸ್‌ಇಯಲ್ಲಿದೆ ಉದ್ಯೋಗಾವಕಾಶ; ಏಪ್ರಿಲ್ 11ರೊಳಗೆ ಅರ್ಜಿ ಸಲ್ಲಿಸಿ

job alert

job alert

ಬೆಂಗಳೂರು: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (Central Board of Secondary Education) ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದೆ (CBSE Recruitment 2024). ಗ್ರೂಪ್‌ ಎ, ಬಿ, ಸಿಯ ಒಟ್ಟು 118 ಅಸಿಸ್ಟೆಂಟ್ ಸೆಕ್ರೆಟರಿ, ಜೂನಿಯರ್ ಅಕೌಂಟೆಂಟ್, ಟ್ರಾನ್ಸ್‌ಲೇಟ್‌ ಆಫೀಸರ್‌ ಸೇರಿದಂತೆ ವಿವಿಧ​ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಮಾರ್ಚ್‌ 12ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಕೊನೆಯ ದಿನ ಏಪ್ರಿಲ್ 11 (Job Alert).

ಹುದ್ದೆಗಳ ವಿವರ

ಅಸಿಸ್ಟೆಂಟ್ ಸೆಕ್ರೆಟರಿ- 64, ಅಕೌಂಟ್ಸ್ ಆಫೀಸರ್- 3, ಜೂನಿಯರ್ ಎಂಜಿನಿಯರ್- 17, ಜೂನಿಯರ್ ಟ್ರಾನ್ಸ್​ಲೇಶನ್ ಆಫೀಸರ್-7, ಅಕೌಂಟೆಂಟ್​-7, ಜೂನಿಯರ್ ಅಕೌಂಟೆಂಟ್​-20 ಹುದ್ದೆಗಳಿವೆ.

ಉದ್ಯೋಗದ ಸ್ಥಳ ಮತ್ತು ಅರ್ಜಿ ಶುಲ್ಕ

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ನೇಮಕಾತಿ ಅಧಿಸೂಚನೆ ಪ್ರಕಾರ, ಆಯ್ಕೆಯಾಗುವ ಅಭ್ಯರ್ಥಿಗಳು ಭಾರತದಲ್ಲಿ ಎಲ್ಲಿ ಬೇಕಾದರೂ ಉದ್ಯೋಗ ನಿರ್ವಹಿಸಲು ತಯಾರಿರಬೇಕು.

ಆಯ್ಕೆ ವಿಧಾನ ಮತ್ತು ಅರ್ಜಿ ಶುಲ್ಕ

ಲಿಖಿತ ಪರೀಕ್ಷೆ, ಸಂದರ್ಶನ ಮತ್ತು ಡಾಕ್ಯುಮೆಂಟ್‌ ಪರಿಶೀಲನೆ ಮೂಲಕ ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ. ಎಸ್‌ಸಿ / ಎಸ್‌ಟಿ / ಪಿಡಬ್ಲ್ಯುಬಿಡಿ / ಮಾಜಿ ಯೋಧರು / ಮಹಿಳೆಯರು ಮತ್ತು ಸಿಬಿಎಸ್‌ಇ ಉದ್ಯೋಗಿಗಳು ಅರ್ಜಿ ಶುಲ್ಕ ಪಾವತಿಸಬೇಕಾಗಿಲ್ಲ. ಸಾಮಾನ್ಯ / ಒಬಿಸಿ / ಇಡಬ್ಲ್ಯುಎಸ್‌ ಅಭ್ಯರ್ಥಿಗಳು ಗ್ರೂಪ್‌ ಎ ಹುದ್ದೆಗಳಿಗೆ ಅರ್ಜಿ ಶುಲ್ಕವಾಗಿ 1,500 ರೂ. ಮತ್ತು ಗ್ರೂಪ್‌ ಬಿ ಮತ್ತು ಸಿ ಹುದ್ದೆಗಳಿಗೆ 800 ರೂ. ಪಾವತಿಸಬೇಕು. ಇದನ್ನು ಆನ್‌ಲೈನ್‌ ಮೂಲಕವೇ ಸಲ್ಲಿಸಬೇಕಿದ್ದು, ಇದಕ್ಕಾಗಿ ಡೆಬಿಟ್‌ / ಕ್ರೆಡಿಟ್‌ ಕಾರ್ಡ್‌, ಇಂಟರ್‌ನೆಟ್‌ ಬ್ಯಾಂಕಿಂಗ್‌ ವಿಧಾನ ಬಳಸಬಹುದು.

ವಿವಿಧ ಹುದ್ದೆಗಳಿಗಿರುವ ವಯೋಮಿತಿ

ಅಸಿಸ್ಟಂಟ್‌ ಸೆಕ್ರಟರಿ (ಅಡ್ಮಿನಿಸ್ಟ್ರೇಷನ್‌)-18ರಿಂದ 35 ವರ್ಷ, ಅಸಿಸ್ಟಂಟ್‌ ಸೆಕ್ರಟರಿ (ಅಕಾಡೆಮಿಕ್ಸ್‌)-18ರಿಂದ 30 ವರ್ಷ, ಅಸಿಸ್ಟಂಟ್‌ ಸೆಕ್ರಟರಿ (ಸ್ಕಿಲ್‌ ಎಜುಕೇಷನ್‌)-18ರಿಂದ 30 ವರ್ಷ, ಅಸಿಸ್ಟಂಟ್‌ ಸೆಕ್ರಟರಿ (ಟ್ರೇನಿಂಗ್‌)-18ರಿಂದ 30 ವರ್ಷ, ಅಕೌಂಟ್‌ ಆಫೀಸರ್‌-18ರಿಂದ 35 ವರ್ಷ, ಜೂನಿಯರ್‌ ಎಂಜಿನಿಯರ್‌-18ರಿಂದ 32 ವರ್ಷ, ಜೂನಿಯರ್‌ ಟ್ರಾನ್ಸ್‌ಲೇಟ್‌ ಆಫೀಸರ್‌ -18ರಿಂದ 30 ವರ್ಷ, ಅಕೌಂಟೆಂಟ್‌-18ರಿಂದ 30 ವರ್ಷ, ಜೂನಿಯರ್‌ ಅಕೌಂಟೆಂಟ್‌-18ರಿಂದ 27 ವರ್ಷ ಎಂದು ಪ್ರಕಟಣೆ ತಿಳಿಸಿದೆ.

CBSE Recruitment 2024ರ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸುವ ವಿಧಾನ

ಇದನ್ನೋ ಓದಿ: Job Alert: ಇಸ್ರೋದಲ್ಲಿ ಉದ್ಯೋಗ ನಿರ್ವಹಿಸಬೇಕೆ? ಇಲ್ಲಿದೆ ಸುವರ್ಣಾವಕಾಶ

Exit mobile version