Site icon Vistara News

Job in top companies : ದೊಡ್ಡ ಕಂಪನಿಗಳಲ್ಲಿ ಜಾಬ್ ಪಡೆಯುವುದು ಹೇಗೆ

Year Ender 2023, 58 percent job layoffs in 2023 compared to last year

ಬೆಂಗಳೂರು-ದಿಲ್ಲಿ-ಮುಂಬಯಿ-ಚೆನ್ನೈ ಮುಂತಾದ ಮಹಾ ನಗರಗಳಲ್ಲಿ ದೊಡ್ಡ ಕಂಪನಿಗಳಲ್ಲಿ ಕೆಲಸ ಪಡೆಯುವುದು ಅನೇಕ ಯುವಜನರ ಕನಸು. ಟಿಸಿಎಸ್‌, ಅಮೆಜಾನ್‌, ಗೂಗಲ್‌, ರಿಲಯನ್ಸ್‌, ಅಕ್ಸೆಂಚರ್‌, ವಿಪ್ರೊ, ಮೈಕ್ರೊಸಾಫ್ಟ್‌, ಐಬಿಎಂ ಇತ್ಯಾದಿ ಟಾಪ್‌ ಕಂಪನಿಗಳಲ್ಲಿ ಜಾಬ್‌ ಗಿಟ್ಟಿಸಿಕೊಳ್ಳಬೇಕೆಂದು ಯುವ ಜನರು ಬಯಸುತ್ತಾರೆ. (Job in top companies) ಪ್ರತಿಭಾವಂತರನ್ನು ಈ ಕಂಪನಿಗಳು ಕೇವಲ ತಮ್ಮ ಬ್ರಾಂಡ್‌ ಮತ್ತು ಸಂಬಳದ ದೃಷ್ಟಿಯಿಂದ ಮಾತ್ರ ಆಕರ್ಷಿಸುವುದಿಲ್ಲ. ಅಲ್ಲಿನ ಕೆಲಸದ ವಾತಾವರಣ, ವಿಮೆ, ಟ್ರಾವೆಲ್‌, ಮೀಲ್ಸ್‌ ಇತ್ಯಾದಿಗಳೂ, ವರ್ಕ್‌ ಕಲ್ಚರ್‌ಗಳೂ ಆಕರ್ಷಿಸುತ್ತವೆ.

ಕಂಪನಿಗಳು ಬಯಸುವುದೇನು? ದೊಡ್ಡ ಕಂಪನಿಗಳಲ್ಲಿ ಕೆಲಸ ಪಡೆಯಲು ಉತ್ತಮವಾದ ಕಾರ್ಯತಂತ್ರ ಮುಖ್ಯ. ಕಂಪನಿಯು ಏನನ್ನು ನಿರೀಕ್ಷಿಸುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯ. ಉತ್ತಮ ಕೌಶಲವನ್ನು ಕಲಿತುಕೊಂಡಿರುವುದು ಎಷ್ಟು ಮುಖ್ಯವೋ, ಕಂಪನಿಯ ದೀರ್ಘಕಾಲೀನ ಗುರಿಗಳ ಜತೆಗೆ ಹೊಂದಾಣಿಕೆ ಮಾಡಿಕೊಳ್ಳುವುದೂ ಮುಖ್ಯ. ಉದ್ಯೋಗಿ ಕೋರ್‌ ಸ್ಕಿಲ್‌ ಕಲಿತಿರಬೇಕು, ಹೊಸ ವಿಷಯಗಳನ್ನು ಕಲಿಯಲು ಬಯಸಬೇಕು. ಉತ್ತಮ ಸಂವಹನ ಸಾಮರ್ಥ್ಯವನ್ನು ಹೊಂದಿರಬೇಕು. 50% ಕಂಪನಿಗಳು ಕೌಶಲಕ್ಕೆ ಆದ್ಯತೆ ನೀಡುತ್ತವೆ.

ಟಾಪ್‌ ಕಂಪನಿಗಳಿಗೆ ಸೇರಿಕೊಳ್ಳುವುದು ಹೇಗೆ? ಮೊದಲನೆಯದಾಗಿ ನೀವು ಸೇರಿಕೊಳ್ಳಲು ಬಯಸುವ ಕಂಪನಿಗಳ ಪಟ್ಟಿ ರೆಡಿ ಮಾಡಿ. ಬಳಿಕ ನಿಮ್ಮ ಕೌಶಲಕ್ಕೆ ಸರಿ ಹೊಂದುವ ಉದ್ಯೋಗಾವಕಾಶಗಳ ಬಗ್ಗೆ ಕಂಪನಿಗಳು ಜಾಹೀರಾತು ನೀಡಿವೆಯೇ ಎಂಬುದನ್ನು ಗಮನಿಸಿ. ನೀವು ಫ್ರೆಶರ್‌ ಆಗಿದ್ದರೆ ಈ ಕಂಪನಿಗಳು ನಿಮ್ಮ ಕಾಲೇಜುಗಳಲ್ಲಿ ನಡೆಸಬಹುದಾದ ಕ್ಯಾಂಪಸ್‌ ಸಂದರ್ಶನದ ಪ್ರಯೋಜನ ಪಡೆಯಬಹುದು.

ನೆಟ್‌ ವರ್ಕಿಂಗ್‌, ಕಂಪನಿ ಪೋರ್ಟಲ್‌, ಪ್ಲೇಸ್‌ಮೆಂಟ್‌ ಏಜೆನ್ಸಿ: ಮಧ್ಯಮ ಮತ್ತು ಹಿರಿಯ ಸ್ತರದ ಉದ್ಯೋಗಿಗಳು ಕಂಪನಿಗಳ ವೆಬ್‌ಸೈಟ್‌, ಜಾಬ್ಸ್‌ ಜಾಹೀರಾತುಗಳ ನು ಗಮನಿಸಬಹುದು. ಪ್ಲೇಸ್‌ಮೆಂಟ್‌ ಏಜೆನ್ಸಿಗಳನ್ನು ಸಂಪರ್ಕಿಸಬಹುದು. ಕಂಪನಿಗಳಲ್ಲಿ ಹುದ್ದೆಗಳು ಖಾಲಿ ಇರುವುದರ ಬಗ್ಗೆ ಅಲ್ಲಲ್ಲಿ ವಿಚಾರಿಸಿ ತಿಳಿದುಕೊಳ್ಳಬಹುದು. ಸಾಮಾನ್ಯವಾಗಿ ಹಿರಿಯ ಸ್ತರದಲ್ಲಿ ಹುದ್ದೆಗಳಿಗೆ ನೇಮಕಾತಿಯಲ್ಲಿ ಮೌತ್‌ ಟು ಮೌತ್‌ ಇನ್‌ಫಾರ್ಮೇಶನ್‌ ಮತ್ತು ಕಂಪನಿಯ ಜಾಹೀರಾತು ಸಹಕಾರಿಯಾಗುತ್ತದೆ.

ಇದನ್ನೂ ಓದಿ: ವಿಸ್ತಾರ ಮನಿ PLUS : ಈ 5 ಸೀಕ್ರೇಟ್ಸ್‌ ಗೊತ್ತಿದ್ರೆ ಶ್ರೀಮಂತರಾಗೋದು ಪಕ್ಕಾ

ನೆಟ್‌ ವರ್ಕಿಂಗ್‌ : ಬಹುತೇಕ ಕಂಪನಿಗಳು ಇಂಟರ್ನಲ್‌ ನೆಟ್‌ ವರ್ಕ್‌ ಮೂಲಕ ನೇಮಕವನ್ನು ಕೈಗೊಳ್ಳುತ್ತಿವೆ. ಇದು ವೆಚ್ಚ ನಿಯಂತ್ರಣಕ್ಕೂ ಸಹಕಾರಿ. ಜಾಹೀರಾತುಗಳನ್ನು ಕಂಡ ಬಳಿಕ ಕಂಪನಿ ಬಗ್ಗೆ ಸಂಶೋಧನೆ ಮಾಡಿರಿ.

ಲಿಂಕ್ಡ್‌ ಇನ್‌ ಬಳಸಿ: ದೊಡ್ಡ ಕಂಪನಿಗಳಲ್ಲಿ ಸೇರಲು ಬಯಸುವವರು ಲಿಂಕ್ಡ್‌ ಇನ್‌ನಲ್ಲಿ ರೆಸ್ಯೂಮ್‌ ಅನ್ನು ನೀಟಾಗಿ ನಮೂದಿಸುವುದು ಉತ್ತಮ. ಸರಿಯಾದ ಪದಗಳನ್ನು ಬಳಸಿ. ಏಕೆಂದರೆ ನಿಮ್ಮ ಮೊದಲ ಇಂಟರ್‌ಫೇಸ್‌ ಟೆಕ್ನಿಕಲ್‌ ಟೂಲ್‌ ಆಗಿರುತ್ತದೆ.

Exit mobile version