ಉದ್ಯೋಗ
Job in top companies : ದೊಡ್ಡ ಕಂಪನಿಗಳಲ್ಲಿ ಜಾಬ್ ಪಡೆಯುವುದು ಹೇಗೆ
Job in top companies ಕಾರ್ಪೊರೇಟ್ ವಲಯದ ದಿಗ್ಗಜ ಕಂಪನಿಗಳಲ್ಲಿ ದೊಡ್ಡ ಹುದ್ದೆ, ಭರ್ಜರಿ ಸಂಬಳ ಪಡೆಯುವುದು ಅನೇಕ ಯುವಜನರ ಕನಸು. ಅದನ್ನು ಹೇಗೆ ಈಡೇರಿಸಿಕೊಳ್ಳಬಹುದು? ಇಲ್ಲಿದೆ ಉಪಯುಕ್ತ ಮಾಹಿತಿ.
ಬೆಂಗಳೂರು-ದಿಲ್ಲಿ-ಮುಂಬಯಿ-ಚೆನ್ನೈ ಮುಂತಾದ ಮಹಾ ನಗರಗಳಲ್ಲಿ ದೊಡ್ಡ ಕಂಪನಿಗಳಲ್ಲಿ ಕೆಲಸ ಪಡೆಯುವುದು ಅನೇಕ ಯುವಜನರ ಕನಸು. ಟಿಸಿಎಸ್, ಅಮೆಜಾನ್, ಗೂಗಲ್, ರಿಲಯನ್ಸ್, ಅಕ್ಸೆಂಚರ್, ವಿಪ್ರೊ, ಮೈಕ್ರೊಸಾಫ್ಟ್, ಐಬಿಎಂ ಇತ್ಯಾದಿ ಟಾಪ್ ಕಂಪನಿಗಳಲ್ಲಿ ಜಾಬ್ ಗಿಟ್ಟಿಸಿಕೊಳ್ಳಬೇಕೆಂದು ಯುವ ಜನರು ಬಯಸುತ್ತಾರೆ. (Job in top companies) ಪ್ರತಿಭಾವಂತರನ್ನು ಈ ಕಂಪನಿಗಳು ಕೇವಲ ತಮ್ಮ ಬ್ರಾಂಡ್ ಮತ್ತು ಸಂಬಳದ ದೃಷ್ಟಿಯಿಂದ ಮಾತ್ರ ಆಕರ್ಷಿಸುವುದಿಲ್ಲ. ಅಲ್ಲಿನ ಕೆಲಸದ ವಾತಾವರಣ, ವಿಮೆ, ಟ್ರಾವೆಲ್, ಮೀಲ್ಸ್ ಇತ್ಯಾದಿಗಳೂ, ವರ್ಕ್ ಕಲ್ಚರ್‌ಗಳೂ ಆಕರ್ಷಿಸುತ್ತವೆ.
ಕಂಪನಿಗಳು ಬಯಸುವುದೇನು? ದೊಡ್ಡ ಕಂಪನಿಗಳಲ್ಲಿ ಕೆಲಸ ಪಡೆಯಲು ಉತ್ತಮವಾದ ಕಾರ್ಯತಂತ್ರ ಮುಖ್ಯ. ಕಂಪನಿಯು ಏನನ್ನು ನಿರೀಕ್ಷಿಸುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯ. ಉತ್ತಮ ಕೌಶಲವನ್ನು ಕಲಿತುಕೊಂಡಿರುವುದು ಎಷ್ಟು ಮುಖ್ಯವೋ, ಕಂಪನಿಯ ದೀರ್ಘಕಾಲೀನ ಗುರಿಗಳ ಜತೆಗೆ ಹೊಂದಾಣಿಕೆ ಮಾಡಿಕೊಳ್ಳುವುದೂ ಮುಖ್ಯ. ಉದ್ಯೋಗಿ ಕೋರ್ ಸ್ಕಿಲ್ ಕಲಿತಿರಬೇಕು, ಹೊಸ ವಿಷಯಗಳನ್ನು ಕಲಿಯಲು ಬಯಸಬೇಕು. ಉತ್ತಮ ಸಂವಹನ ಸಾಮರ್ಥ್ಯವನ್ನು ಹೊಂದಿರಬೇಕು. 50% ಕಂಪನಿಗಳು ಕೌಶಲಕ್ಕೆ ಆದ್ಯತೆ ನೀಡುತ್ತವೆ.
ಟಾಪ್ ಕಂಪನಿಗಳಿಗೆ ಸೇರಿಕೊಳ್ಳುವುದು ಹೇಗೆ? ಮೊದಲನೆಯದಾಗಿ ನೀವು ಸೇರಿಕೊಳ್ಳಲು ಬಯಸುವ ಕಂಪನಿಗಳ ಪಟ್ಟಿ ರೆಡಿ ಮಾಡಿ. ಬಳಿಕ ನಿಮ್ಮ ಕೌಶಲಕ್ಕೆ ಸರಿ ಹೊಂದುವ ಉದ್ಯೋಗಾವಕಾಶಗಳ ಬಗ್ಗೆ ಕಂಪನಿಗಳು ಜಾಹೀರಾತು ನೀಡಿವೆಯೇ ಎಂಬುದನ್ನು ಗಮನಿಸಿ. ನೀವು ಫ್ರೆಶರ್ ಆಗಿದ್ದರೆ ಈ ಕಂಪನಿಗಳು ನಿಮ್ಮ ಕಾಲೇಜುಗಳಲ್ಲಿ ನಡೆಸಬಹುದಾದ ಕ್ಯಾಂಪಸ್ ಸಂದರ್ಶನದ ಪ್ರಯೋಜನ ಪಡೆಯಬಹುದು.
ನೆಟ್ ವರ್ಕಿಂಗ್, ಕಂಪನಿ ಪೋರ್ಟಲ್, ಪ್ಲೇಸ್‌ಮೆಂಟ್ ಏಜೆನ್ಸಿ: ಮಧ್ಯಮ ಮತ್ತು ಹಿರಿಯ ಸ್ತರದ ಉದ್ಯೋಗಿಗಳು ಕಂಪನಿಗಳ ವೆಬ್‌ಸೈಟ್, ಜಾಬ್ಸ್ ಜಾಹೀರಾತುಗಳ ನು ಗಮನಿಸಬಹುದು. ಪ್ಲೇಸ್‌ಮೆಂಟ್ ಏಜೆನ್ಸಿಗಳನ್ನು ಸಂಪರ್ಕಿಸಬಹುದು. ಕಂಪನಿಗಳಲ್ಲಿ ಹುದ್ದೆಗಳು ಖಾಲಿ ಇರುವುದರ ಬಗ್ಗೆ ಅಲ್ಲಲ್ಲಿ ವಿಚಾರಿಸಿ ತಿಳಿದುಕೊಳ್ಳಬಹುದು. ಸಾಮಾನ್ಯವಾಗಿ ಹಿರಿಯ ಸ್ತರದಲ್ಲಿ ಹುದ್ದೆಗಳಿಗೆ ನೇಮಕಾತಿಯಲ್ಲಿ ಮೌತ್ ಟು ಮೌತ್ ಇನ್‌ಫಾರ್ಮೇಶನ್ ಮತ್ತು ಕಂಪನಿಯ ಜಾಹೀರಾತು ಸಹಕಾರಿಯಾಗುತ್ತದೆ.
ಇದನ್ನೂ ಓದಿ: ವಿಸ್ತಾರ ಮನಿ PLUS : ಈ 5 ಸೀಕ್ರೇಟ್ಸ್ ಗೊತ್ತಿದ್ರೆ ಶ್ರೀಮಂತರಾಗೋದು ಪಕ್ಕಾ
ನೆಟ್ ವರ್ಕಿಂಗ್ : ಬಹುತೇಕ ಕಂಪನಿಗಳು ಇಂಟರ್ನಲ್ ನೆಟ್ ವರ್ಕ್ ಮೂಲಕ ನೇಮಕವನ್ನು ಕೈಗೊಳ್ಳುತ್ತಿವೆ. ಇದು ವೆಚ್ಚ ನಿಯಂತ್ರಣಕ್ಕೂ ಸಹಕಾರಿ. ಜಾಹೀರಾತುಗಳನ್ನು ಕಂಡ ಬಳಿಕ ಕಂಪನಿ ಬಗ್ಗೆ ಸಂಶೋಧನೆ ಮಾಡಿರಿ.
ಲಿಂಕ್ಡ್ ಇನ್ ಬಳಸಿ: ದೊಡ್ಡ ಕಂಪನಿಗಳಲ್ಲಿ ಸೇರಲು ಬಯಸುವವರು ಲಿಂಕ್ಡ್ ಇನ್‌ನಲ್ಲಿ ರೆಸ್ಯೂಮ್ ಅನ್ನು ನೀಟಾಗಿ ನಮೂದಿಸುವುದು ಉತ್ತಮ. ಸರಿಯಾದ ಪದಗಳನ್ನು ಬಳಸಿ. ಏಕೆಂದರೆ ನಿಮ್ಮ ಮೊದಲ ಇಂಟರ್‌ಫೇಸ್ ಟೆಕ್ನಿಕಲ್ ಟೂಲ್ ಆಗಿರುತ್ತದೆ.
ಉದ್ಯೋಗ
SBI SO Recruitment 2023: ಎಸ್‌ಬಿಐಯಲ್ಲಿದೆ 439 ಹುದ್ದೆ; ಪದವಿ ಹೊಂದಿದವರು ಅರ್ಜಿ ಸಲ್ಲಿಸಿ
SBI SO Recruitment 2023: ಎಸ್‌ಬಿಐ (SBI) 439 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತರು ಅಕ್ಟೋಬರ್ 6, 2023ರ ಒಳಗೆ ಅರ್ಜಿ ಸಲ್ಲಿಸಬಹುದು.
ನವ ದೆಹಲಿ: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕುವವರಿಗೆ ಎಸ್‌ಬಿಐ(SBI)ಉತ್ತಮ ಅವಕಾಶ ಒದಗಿಸುತ್ತಿದೆ. 439 ವಿಶೇಷ ಅಧಿಕಾರಿಗಳನ್ನು(Specialist Officer-SO) ಆಯ್ಕೆ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಿದೆ. ದೇಶಾದ್ಯಂತ ಇರುವ ಶಾಖೆಗಳಿಗೆ ನೇಮಕಾತಿ ನಡೆಯಲಿದೆ ಎಂದು ನೋಟಿಫಿಕೇಷನ್‌ನಲ್ಲಿ ತಿಳಿಸಲಾಗಿದೆ. ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನಾಂಕ ಅಕ್ಟೋಬರ್ 6, 2023.
ವಿದ್ಯಾರ್ಹತೆ
SBI SO 2023 ನೋಟಿಪಿಕೇಷನ್ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಂಪ್ಯೂಟರ್ ಸೈನ್ಸ್, ಇನ್ಫಾರ್ಮೇಶನ್ ಟೆಕ್ನಾಲಜಿ, ಎಲೆಕ್ಟ್ರಾನಿಕ್ಸ್ ಅಥವಾ ಸಾಫ್ಟ್‌ವೇರ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿರಬೇಕು. ಅಲ್ಲದೆ ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ಅಥವಾ ಸರ್ಕಾರಿ ನಿಯಂತ್ರಕ ಸಂಸ್ಥೆಗಳಿಂದ ಅನುಮೋದಿಸಲ್ಪಟ್ಟ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಇದೇ ಕ್ಷೇತ್ರಗಳಲ್ಲಿ ಸ್ನಾತಕೋತ್ತರ ಪದವಿ (MCA ಅಥವಾ M. Tech/M.Sc.) ಹೊಂದಿದವರೂ ಅರ್ಹರು.
ಅರ್ಜಿ ಶುಲ್ಕ
ಸಾಮಾನ್ಯ, ಒಬಿಸಿ ಮತ್ತು ಇಡಬ್ಲ್ಯೂಎಸ್ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 750 ರೂ. ಪಾವತಿಸಬೇಕು. ಎಸ್ಸಿ, ಎಸ್ಟಿ ಮತ್ತು ಪಿಡಬ್ಲ್ಯೂಡಿ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳ ಶುಲ್ಕವನ್ನು ಮನ್ನಾ ಮಾಡಲಾಗಿದೆ. ಸಾಮಾನ್ಯ ಅಭ್ಯರ್ಥಿಗಳ ಶುಲ್ಕವನ್ನು ಮರುಪಾವತಿಸಲಾಗುವುದಿಲ್ಲ.
ಆಯ್ಕೆ ವಿಧಾನ
ವಿವಿಧ ಹಂತಗಳ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಮೊದಲು ಅರು ಸಲ್ಲಿಸಿದವರ ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ. ಬಳಿಕ ಆಯ್ದ ಹುದ್ದೆಗಳಿಗೆ ಪರೀಕ್ಷೆ ನಡೆಯುತ್ತದೆ. ಅದರಲ್ಲಿ ಆಯ್ಕೆಯಾದವರ ಸಂದರ್ಶನ ನಡೆಸಲಾಗುತ್ತದೆ. ಪರೀಕ್ಷೆಯಲ್ಲಿ ಜನರಲ್ ಆಪ್ಟಿಟ್ಯೂಡ್(General Aptitude) ಮತ್ತು ಪ್ರೊಫೆಷನಲ್ ನಾಲೆಡ್ಜ್ (Professional Knowledge) ಎನ್ನುವ ಎರಡು ಹಂತಗಳಿರುತ್ತವೆ.
ಇದನ್ನೂ ಓದಿ: Job Alert: ಸರ್ಕಾರಿ ಉದ್ಯೋಗ ಹುಡುಕುತ್ತಿದ್ದೀರಾ? ಇಲ್ಲಿವೆ ಭರಪೂರ ಅವಕಾಶಗಳು
ವಯೋಮಿತಿ
ಅಸಿಸ್ಟೆಂಟ್ ಮ್ಯಾನೇಜರ್- 32 ವರ್ಷ
ಅಸಿಸ್ಟೆಂಟ್ ಜನರಲ್ ಮ್ಯಾನೇಜರ್- 45 ವರ್ಷ
ಮ್ಯಾನೇಜರ್- 38 ವರ್ಷ
ಡೆಪ್ಯುಟಿ ಮ್ಯಾನೇಜರ್- 35 ವರ್ಷ
ಚೀಫ್ ಮ್ಯಾನೇಜರ್- 42 ವರ್ಷ
ಪ್ರೊಜೆಕ್ಟ್ ಮ್ಯಾನೇಜರ್- 35 ವರ್ಷ
ಸೀನಿಯರ್ ಪ್ರೊಜೆಕ್ಟ್ ಮ್ಯಾನೇಜರ್ 38 ವರ್ಷ
ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಇದೆ.
ಅರ್ಜಿ ಸಲ್ಲಿಸುವ ವಿಧಾನ
- ಮೊದಲು ಅಧಿಕೃತ ವೆಬ್‌ಸೈಟ್ SBI sbi.co.in. ಕ್ಲಿಕ್ ಮಾಡಿ
- ನೋಂದಣಿ ಮಾಡಿಕೊಳ್ಳಿ
- ನೋಂದಣಿಯಾದ ಬಳಿಕ ಲಾಗಿನ್ ಪೇಜ್‌ಗೆ ಹೋಗಿ
- ರುಜುವಾತುಗಳನ್ನು ನಮೂದಿಸಿ
- ಲಾಗಿನ್ ಬಟನ್ ಕ್ಲಿಕ್ ಮಾಡಿ
- ಪ್ರಾಥಮಿಕ ಮಾಹಿತಿಗಳಾದ ಹೆಸರು, ಜನ್ಮ ದಿನಾಂಕ, ವಿಳಾಸ, ಶೈಕ್ಷಣಿಕ ಅರ್ಹತೆ, ಪ್ರಸ್ತುತದ ಉದ್ಯೋಗ ಮುಂತಾದ ಮಾಹಿತಿ ಒದಗಿಸಿ
- ಮಾಹಿತಿಯನ್ನು ಸೇವ್ ಮಾಡಿ Validate and Next ಬಟನ್ ಕ್ಲಿಕ್ ಮಾಡಿ
- ನಿಮ್ಮ ಫೋಟೊ ಮತ್ತು ಸಹಿಯನ್ನು ಅಪ್‌ಲೋಡ್ ಮಾಡಿ
- ಅಗತ್ಯವಾದ ಡಾಕ್ಯುಮೆಂಟ್ ಅಪ್‌ಲೋಡ್ ಮಾಡಿ
- ಆನ್‌ಲೈನ್ ಮೂಲಕ ಶುಲ್ಕ ಪಾವತಿಸಿ (ನೆಟ್ ಬ್ಯಾಂಕಿಂಗ್, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಯುಪಿಐ ಮೂಲಕ ಪಾವತಿಸುವ ಅವಕಾಶವಿದೆ.)
- Submit ಬಟನ್ ಮೇಲೆ ಕ್ಲಿಕ್ ಮಾಡಿ
- ಕೊನೆಯದಾಗಿ ಭವಿಷ್ಯದ ಅಗತ್ಯಗಳಿಗಾಗಿ ಅರ್ಜಿಯ ಪ್ರಿಂಟ್ ಔಟ್ ತೆಗೆದಿಡಿ
ಉದ್ಯೋಗ
Indian Coast Guard: 290 ನಾವಿಕ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ, ಅಪ್ಲೈ ದಿನಾಂಕ ವಿಸ್ತರಣೆ
Indian Coast Guard: ಇಂಡಿಯನ್ ಕೋಸ್ಟ್ ಗಾರ್ಡ್(Indian Coast Guard)ಖಾಲಿ ಇರುವ 290 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಆನ್ ಲೈನ್ ಮೂಲಕ ಸೆಪ್ಟಂಬರ್ 27ರೊಳಗೆ ಆಸಕ್ತರು ಅರ್ಜಿ ಸಲ್ಲಿಸಬಹುದು.
ದೇಶಕ್ಕಾಗಿ ಸೇವೆ ಸಲ್ಲಿಸಬೇಕು ಎಂದುಕೊಂಡಿರುವವರಿಗೆ ಇಲ್ಲಿದೆ ಗುಡ್ ನ್ಯೂಸ್. ಇಂಡಿಯನ್ ಕೋಸ್ಟ್ ಗಾರ್ಡ್(Indian Coast Guard) ಖಾಲಿ ಇರುವ 290 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ನಾವಿಕ(General Duty) 260 ಮತ್ತು ನಾವಿಕ(Domestic Branch) 30 ಹುದ್ದೆಗಳಿವೆ. ಕಡಲ ತೀರದ ರಕ್ಷಣೆಯ ಮೂಲಕ ತಾಯಿ ನಾಡಿಗಾಗಿ ಸೇವೆ ಸಲ್ಲಿಸಲಿರುವ ಅಪೂರ್ವ ಅವಕಾಶ ಇದಾಗಿದೆ. ಈ ಹಿಂದೆ ಆನ್‌ಲೈನ್ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 8 ಕೊನೆಯ ದಿನ ಎಂದು ಹೇಳಲಾಗಿತ್ತಾದರೂ ಇದೀಗ ಸಮಯಾವಕಾಶವನ್ನು ಸೆಪ್ಟಂಬರ್ 27ರವರೆಗೆ ವಿಸ್ತರಿಸಲಾಗಿದೆ.
ವಿದ್ಯಾರ್ಹತೆ
ನಾವಿಕ(Domestic Branch) ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು Council of Boards of School Education (COBSE) ಮಾನ್ಯತೆ ಪಡೆದ ಮಂಡಳಿಯಿಂದ ಹತ್ತನೇ ತರಗತಿ ಉತ್ತೀರ್ಣರಾಗಿರಬೇಕು ಮತ್ತು +2 ಕೋರ್ಸ್‌ನಲ್ಲಿ ಗಣಿತ ಮತ್ತು ಭೌತಶಾಸ್ತ್ರ ವನ್ನು ಓದಿದವರು ನಾವಿಕ(General Duty) ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರು ಎಂದು ಪ್ರಕಟಣೆ ತಿಳಿಸಿದೆ. ತಮ್ಮ ಹುದ್ದೆಯ ಬಗ್ಗೆ ಪ್ರಾಥಮಿಕ ಜ್ಞಾನ ಹೊಂದಿರುವುದು ಕಡ್ಡಾಯ.
ವೇತನದ ವಿವರ
ನಾವಿಕ(General Duty)-21700-69,100 ರೂ., ನಾವಿಕ(Domestic Branch)-21700-69,100 ರೂ. ವೇತನ ನಿಗದಿ ಪಡಿಸಲಾಗಿದೆ. ಇದಲ್ಲದೆ ಕೋಸ್ಟ್ ಗಾರ್ಡ್ ತನ್ನ ಸದಸ್ಯರಿಗೆ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವ ಮತ್ತು ಸಾಹಸಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಅವಕಾಶವನ್ನೂ ಒದಗಿಸಲಿದೆ.
ಅರ್ಜಿ ಸಲ್ಲಿಸುವವರ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 22 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯಸ್ಸಿನಲ್ಲಿ ರಿಯಾಯಿತಿ ಇದೆ. ಎಸ್.ಸಿ. ಮತ್ತು ಎಸ್.ಟಿ. ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಒ.ಬಿ.ಸಿ. ಅಭ್ಯರ್ಥಿಗಳಿಗೆ 3 ವರ್ಷಗಳ ರಿಯಾಯಿತಿ ಅನ್ವಯವಾಗಲಿದೆ.
ಆಯ್ಕೆ ವಿಧಾನ
ಅಭ್ಯರ್ಥಿಗಳನ್ನು ವಿವಿಧ ಹಂತಗಳ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಲಾಗುವುದು. ಆರಂಭದಲ್ಲಿ ಅಭ್ಯರ್ಥಿಗಳು ಪರೀಕ್ಷೆ ಬರೆಯಬೇಕು. ಅದರಲ್ಲಿ ಉತ್ತೀರ್ಣರಾದವರನ್ನು ಫಿಸಿಕಲ್ ಫಿಟ್ನೆಸ್ ಪರೀಕ್ಷೆಗೆ ಕರೆಯಲಾಗುತ್ತದೆ. ಇದರಲ್ಲಿ 1.6 ಕಿ.ಮೀ.ಯನ್ನು 7 ನಿಮಿಷಗಳಲ್ಲಿ ತಲುಪಬೇಕು ಮತ್ತು 20 ಸ್ಕ್ವಾಟ್ ಅಪ್ಸ್, 10 ಪುಶ್ ಅಪ್ ಮಾಡುವಂತಿರಬೇಕು. ಬಳಿಕ ದಾಖಲೆಗಳ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ ನಡೆಯಲಿದೆ. ಕೊನೆಯ ಹಂತದಲ್ಲಿ ಭಾರತೀಯ ಕೋಸ್ಟ್ ಗಾರ್ಡ್ ಸಂಬಂಧಿತ ಮಂಡಳಿಗಳು, ವಿಶ್ವವಿದ್ಯಾಲಯಗಳು ಮತ್ತು ರಾಜ್ಯ ಸರ್ಕಾರಗಳ ಮೂಲಕ ಎಲ್ಲಾ ಮೂಲ ದಾಖಲೆಗಳ ಸಮಗ್ರ ಪರಿಶೀಲನೆಯನ್ನು ಕೈಗೊಳ್ಳುತ್ತದೆ.
ಅರ್ಜಿ ಶುಲ್ಕ
ಸಾಮಾನ್ಯ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 300 ರೂ. ಪಾವತಿಸಬೇಕು. ಎಸ್.ಸಿ. ಮತ್ತು ಎಸ್.ಟಿ. ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇಲ್ಲ. ಆನ್‌ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಬೇಕು. ನೆಟ್ ಬ್ಯಾಂಕಿಂಗ್, ಕ್ರೆಡಿಟ್/ಡೆಬಿಟ್ ಕಾರ್ಡ್ ಅಥವಾ ಯುಪಿಐ ಮೂಲಕ ಹಣ ಪಾವತಿಸಬಹುದಾಗಿದೆ.
ಇದನ್ನೂ ಓದಿ: Job Alert: ಸರ್ಕಾರಿ ಉದ್ಯೋಗ ಹುಡುಕುತ್ತಿದ್ದೀರಾ? ಇಲ್ಲಿವೆ ಭರಪೂರ ಅವಕಾಶಗಳು
ಹೆಚ್ಚಿನ ಮಾಹಿತಿಗೆ ಇಂಡಿಯಾ ಕೋಸ್ಟ್ ಗಾರ್ಡ್ ವೆಬ್ ಸೈಟ್ ಕ್ಲಿಕ್ ಮಾಡಿ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
ಉದ್ಯೋಗ
Job Alert: ಸರ್ಕಾರಿ ಉದ್ಯೋಗ ಹುಡುಕುತ್ತಿದ್ದೀರಾ? ಇಲ್ಲಿವೆ ಭರಪೂರ ಅವಕಾಶಗಳು
Job Alert : ಸರ್ಕಾರಿ ಉದ್ಯೋಗ (government job) ಹುಡುಕುವವರಿಗೆ ಗುಡ್‌ನ್ಯೂಸ್. ಬ್ಯಾಂಕ್ (bank) ಸೇರಿ ವಿವಿಧ ಕಡೆಗಳಲ್ಲಿ ಬಾಕಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಆನ್‌ಲೈನ್ (online) ಮೂಲಕ ಅರ್ಜಿ ಸಲ್ಲಿಸಬಹುದು.
ನವದೆಹಲಿ: ಇಂದಿನ ಸ್ಪರ್ಧಾತ್ಮಕ ಯುಗದಲ್ಲೂ ಸರ್ಕಾರಿ ಉದ್ಯೋಗಕ್ಕಿರುವ(Government job) ಬೇಡಿಕೆ ಕಡಿಮೆಯಾಗಿಲ್ಲ. ಅದಲ್ಲಿನ ಭದ್ರತೆ, ಇತರ ಸೌಲಭ್ಯಗಳ ಕಾರಣದಿಂದ ಇಂದಿಗೂ ಯುವ ಜನತೆ ಸರಕಾರಿ ಉದ್ಯೋಗದ ಕಡೆಗೆ ಗಮನ ಹರಿಸುತ್ತಿದೆ. ಅದಕ್ಕೆ ತಕ್ಕಂತೆ ಸದ್ಯ ವಿವಿಧ ಸರಕಾರಿ ಮೂಲಗಳು ಈ ವಾರ ಉದ್ಯೋಗ ಭರ್ತಿ ಮಾಡುವ ನಿಟ್ಟಿನಲ್ಲಿ ನೋಟಿಫಿಕೇಷನ್ ಹೊರಡಿಸಿದ್ದು ನೀವು ಅರ್ಜಿ ಸಲ್ಲಿಸಬಹುದಾಗಿದೆ. ಮಧ್ಯಪ್ರದೇಶ ಪಬ್ಲಿಕ್ ಸರ್ವಿಸ್ ಕಮಿಷನ್ (MPPSC), ಐಡಿಬಿಐ(IDBI) ಬ್ಯಾಂಕ್ ಸೇರಿದಂತೆ ವಿವಿಧ ಕಡೆಗಳಲ್ಲಿ ಲಭ್ಯವಿರುವ ಉದ್ಯೋಗವಕಾಶಗಳ ಮಾಹಿತಿ ಇಲ್ಲಿದೆ.
MPPSCನಲ್ಲಿ 227 ಹುದ್ದೆ ಖಾಲಿ
ಪಿಸಿಎಸ್ (PCS)ಹುದ್ದೆಗಳನ್ನು ಭರ್ತಿ ಮಾಡಲು ಮಧ್ಯ ಪ್ರದೇಶ ಪಬ್ಲಿಕ್ ಸರ್ವಿಸ್ ಕಮಿಷನ್-MPPSC ಈಗಾಗಲೇ ಕಾರ್ಯಾರಂಭಿಸಿದೆ. ಸೆಪ್ಟಂಬರ್ 22ರಂದು ನೋಟಿಫಿಕೇಷನ್ ಹೊರಡಿಸಿದ್ದು, ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ MPPSCನ ಅಧಿಕೃತ ವೆಬ್ ಸೈಟ್ mppsc.mp.gov.in. ಭೇಟಿ ನೀಡಿ. ಸೂಚನೆ ಪ್ರಕಾರ ಡಿಸೆಂಬರ್ 12ರಂದು ಪರೀಕ್ಷೆ ನಡೆಯಲಿದೆ. ಸುಮಾರು 227 PCS ಹುದ್ದೆಗಳನ್ನು ಭರ್ತಿ ಮಾಡುವುದಾಗಿ MPPSC ತಿಳಿಸಿದೆ. ಮಧ್ಯ ಪ್ರದೇಶದವರು ಮತ್ತು ಇತರ ಯಾವುದೇ ರಾಜ್ಯದವರು ಅರ್ಜಿ ಸಲ್ಲಿಸಬಹುದು. ಯಾವುದೇ ವಿಷಯದಲ್ಲಿ ಪದವಿ ಪಡೆದವರು ಅರ್ಜಿ ಸಲ್ಲಿಸಲು ಅರ್ಹರು.
UPPSCಯಲ್ಲಿದೆ 2,240 ಹುದ್ದೆಗಳು
ಉತ್ತರ ಪ್ರದೇಶ ಪಬ್ಲಿಕ್ ಸರ್ವಿಸ್ ಕಮಿಷನ್ (UPPSC) ಸ್ಟಾಫ್ ನರ್ಸ್ ಹುದ್ದೆಗೆ ನೋಂದಣಿ ಮಾಡುವ ದಿನಾಂಕವನ್ನು ವಿಸ್ತರಿಸಿದೆ. ಅಭ್ಯರ್ಥಿಗಳು ಸೆಪ್ಟಂಬರ್ 29ರ ತನಕ ಪರೀಕ್ಷೆಗಾಗಿ ನೋಂದಣಿ ಮಾಡಬಹುದಾಗಿದೆ. ಒಟ್ಟು 2,240 ಸ್ಟಾಫ್ ನರ್ಸ್ ಹುದ್ದೆಗಳನ್ನು ಭರ್ತಿ ಮಾಡುವ ಯೋಜನೆ ಹಾಕಿಕೊಳ್ಳಲಾಗಿದ್ದು ಅದರಲ್ಲಿ 2,069 ಮಹಿಳೆಯರು ಮತ್ತು 171 ಪುರುಷ ನರ್ಸ್‌ಗಳು ಸೇರಿದ್ದಾರೆ. ಅಭ್ಯರ್ಥಿಗಳು uppsc.up.nic.in. ಮೂಲಕ ನೋಂದಣಿ ಮಾಡಿಕೊಳ್ಳಬೇಕು.
BTSCಯಲ್ಲಿ ಖಾಲಿ ಇದೆ 1,279 ಟ್ರೇಡ್ ಇನ್‌ಸ್ಟ್ರಕ್ಟರ್ ಹುದ್ದೆ
ಬಿಹಾರ ಟೆಕ್ನಿಕಲ್ ಸರ್ವಿಸ್ ಕಮಿಷನ್(BTSC) ಖಾಲಿ ಇರುವ ಒಟ್ಟು 1,279 ಟ್ರೇಡ್ ಇನ್ಟ್ರಕ್ಟರ್ ಹುದ್ದೆಗಳ ಭರ್ತಿಗೆ ನೋಟಿಫಿಕೇಷನ್ ಹೊರಡಿಸಿದೆ. ಆಸಕ್ತರು ಅಧಿಕೃತ ವೆಬ್ ಸೈಟ್ btsc.bih.nic.in. ಮೂಲಕ ಅರ್ಜಿ ಸಲ್ಲಿಸಬಹುದು. ಕೊನೆಯ ದಿನಾಂಕ ಅಕ್ಟೋಬರ್ 18. ವಿವಿಧ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಬೋಧನೆ ಮಾಡಲು ಇವರನ್ನು ನೇಮಿಸಲಾಗುವುದು. ಅಭ್ಯರ್ಥಿಗಳು ಪದವಿ ಅಥವಾ ಡಿಪ್ಲೋಮಾ ಓದಿರಬೇಕು.
ಇದನ್ನೂ ಓದಿ: Border Roads Organisation : ಗಡಿ ರಸ್ತೆಗಳ ಕಾರ್ಮಿಕರು ಮೃತಪಟ್ಟರೆ ಸರ್ಕಾರಿ ಸೌಲಭ್ಯಗಳು, ಕೇಂದ್ರ ಸರ್ಕಾರದ ಯೋಜನೆ
IDBI ಬ್ಯಾಂಕ್‌ನಲ್ಲಿ 600 ಹುದ್ದೆಗಳು
IDBI ಬ್ಯಾಂಕ್ ಜ್ಯೂನಿಯರ್ ಅಸಿಸ್ಟೆಂಟ್ ಮ್ಯಾನೇಜರ್(Grade 0) ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಒಟ್ಟು 600 ಹುದ್ದೆಗಳಿದ್ದು, ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್ idbibank.in.ಗೆ ಭೇಟಿ ನೀಡಿ ಹೆಸರು ನೋಂದಾಯಿಸಿಕೊಳ್ಳಬೇಕು. ಸೆಪ್ಟಂಬರ್ 30 ಹೆಸರು ನೋಂದಾಯಿಸಲು ಕೊನೆಯ ದಿನ. ಪರೀಕ್ಷೆ ಅಕ್ಟೋಬರ್ 20ರಂದು ನಡೆಯುವ ಸಾಧ್ಯತೆ ಇದೆ. ಈ ಹುದ್ದೆಗೆ ಅರ್ಜಿ ಸಲ್ಲಿಸುವವರು ಕನಿಷ್ಠ 20 ವರ್ಷ ದಾಟಿರಬೇಕು ಮತ್ತು ಗರಿಷ್ಠ 25 ವರ್ಷದ ಒಳಗಿರಬೇಕು.
ಉದ್ಯೋಗ
Great Learning Survey: ಭಾರತದ ಐಟಿಯೇತರ ಕ್ಷೇತ್ರದಲ್ಲಿ ಡೇಟಾ ಸೈನ್ಸ್, ಅನಾಲಿಟಿಕ್ಸ್ ಉದ್ಯೋಗ ಹೆಚ್ಚಳ!
Great Learning Survey: ಕಳೆದ ವರ್ಷಕ್ಕೆ ಹೋಲಿಸಿದರೆ ಸ್ವದೇಶೀ ಐಟಿಯೇತರ ಸಂಸ್ಥೆಗಳಲ್ಲಿ ಅನಾಲಿಟಿಕ್ಸ್ ಮತ್ತು ಡೇಟಾ ಸೈನ್ಸ್ ಉದ್ಯೋಗಾವಕಾಶ ಶೇಕಡಾ 20 ರಷ್ಟು ಹೆಚ್ಚಾಗಿದೆ.
ಬೆಂಗಳೂರು, ಕರ್ನಾಟಕ: ವೃತ್ತಿಪರ ಮತ್ತು ಉನ್ನತ ಶಿಕ್ಷಣ ವಿಭಾಗದಲ್ಲಿ ಪ್ರಮುಖ ಜಾಗತಿಕ ಮುಂದಾಳಾದ ಗ್ರೇಟ್ ಲರ್ನಿಂಗ್(Great Learning), ಭಾರತದಲ್ಲಿ ಅನಾಲಿಟಿಕ್ಸ್ (analytics) ಮತ್ತು ಡೇಟಾ ಸೈನ್ಸ್ (Data Science) ಉದ್ಯೋಗಗಳು 2023ರ ವರದಿಯನ್ನು ಪ್ರಕಟಿಸಿದೆ. ಡೇಟಾ-ಚಾಲಿತ ನಿರ್ಧಾರಗಳು ಸಂಸ್ಥೆಗಳಿಗೆ ಯಾವಾಗಲೂ ಪ್ರಮುಖವಾಗಿದ್ದರೂ, ಡೇಟಾ ಸೈನ್ಸ್ ಮತ್ತು ಅನಾಲಿಟಿಕ್ಸ್ ನಲ್ಲಿರುವ ಒಟ್ಟಾರೆ ಉದ್ಯೋಗಗಳ ಸಂಖ್ಯೆ ಕಳೆದ 12 ತಿಂಗಳುಗಳಲ್ಲಿ ಕುಸಿತವನ್ನು ದಾಖಲಿಸಿದೆ. ಚಾಲ್ತಿಯಲ್ಲಿರುವ ಜಾಗತಿಕ ಸ್ಥೂಲ ಆರ್ಥಿಕ ಅನಿಶ್ಚಿತತೆಯನ್ನು ಒಳಗೊಂಡಂತೆ ಅಂಶಗಳ ಸಂಯೋಜನೆಯು, ವಿಶೇಷವಾಗಿ ಐಟಿ ಉದ್ಯಮದಲ್ಲಿ ಈ ಪಾತ್ರಗಳ ಮೇಲೆ ಪ್ರಭಾವ ಬೀರುತ್ತಿದೆ. ಈ ವಲಯದಲ್ಲಿ ಬದಲಾಗುತ್ತಿರುವ ಉದ್ಯೋಗಗಳ ಅವಕಾಶದ ಕುರಿತು ವರದಿಯು ದೃಷ್ಟಿಕೋನವನ್ನು ನೀಡುತ್ತದೆ ಮತ್ತು ಲಭ್ಯವಿರುವ ಅವಕಾಶಗಳನ್ನು ಉತ್ತಮವಾಗಿ ಬಳಸಿಕೊಳ್ಳಲು ವೃತ್ತಿಪರರಿಗೆ ಸಹಾಯ ಮಾಡುತ್ತದೆ. ಹಾಗಾಗಿ, ಕಳೆದ ವರ್ಷಕ್ಕೆ ಹೋಲಿಸಿದರೆ ಸ್ವದೇಶೀ ಐಟಿಯೇತರ ಸಂಸ್ಥೆಗಳಲ್ಲಿ ಅನಾಲಿಟಿಕ್ಸ್ ಮತ್ತು ಡೇಟಾ ಸೈನ್ಸ್ ಉದ್ಯೋಗಾವಕಾಶ ಶೇಕಡಾ 20 ರಷ್ಟು ಹೆಚ್ಚಾಗಿದೆ
.
ಈ ವರದಿಯನ್ನು ವಿವಿಧ ಉದ್ಯೋಗ ಸೈಟ್ ಗಳಿಂದ ಡೇಟಾ ಸೈನ್ಸ್ ಮತ್ತು ಅನಾಲಿಟಿಕ್ಸ್ ಗೆ ಸಂಬಂಧಿಸಿದ ಡೇಟಾವನ್ನು ಒಗ್ಗೂಡಿಸುವ ಎಐಎಂ ರಿಸರ್ಚ್ ನಿಂದ ಅಭಿವೃದ್ಧಿಪಡಿಸಲಾಗಿದೆ. 2023 ರಲ್ಲಿ ಬಿ ಎಫ್ ಎಸ್ ಐ ವಲಯ ಅತ್ಯಧಿಕ ಡೇಟಾ ಅನಾಲಿಟಿಕ್ಸ್ ಉದ್ಯೋಗದ ಪಾಲಿನ ಕುರಿತು ವರದಿ ಮಾಡಿದೆ
2023ರಲ್ಲಿ ಬಿ ಎಫ್ ಎಸ್ ಐ ವಲಯ ಭಾರತದ ಡೇಟಾ ಸೈನ್ಸ್ ಮತ್ತು ಅನಾಲಿಟಿಕ್ಸ್ ಉದ್ಯೋಗಗಳ ಏಕೈಕ-ಅತಿದೊಡ್ಡ ಪಾಲನ್ನು ಎಂದರೆ ಒಟ್ಟಾರೆಯಾಗಿ 1/3 ರಷ್ಟು ಉದ್ಯೋಗಗಳಿಗೆ ಸಾಕ್ಷಿಯಾಯಿತು. ಅಪಾಯ ನಿರ್ವಹಣೆ, ವಂಚನೆ ಪತ್ತೆ ಮತ್ತು ಗ್ರಾಹಕ ಸೇವೆಯಂತಹ ಕಾರ್ಯಾಚರಣೆಗಳನ್ನು ಹೆಚ್ಚಿಸಲು ಎಐ/ಎಂಎಲ್ ಮತ್ತು ದೊಡ್ಡ ಡೇಟಾ ಅನಾಲಿಟಿಕ್ಸ್ ನಂತಹ ಹೊಸ ತಂತ್ರಜ್ಞಾನಗಳ ಬಳಕೆಯಿಂದ ಈ ಬೆಳವಣಿಗೆ ದಾಖಲಿಸಲಾಗಿದೆ.
ಪ್ರತಿಯೊಂದು ಕಾರ್ಯದಲ್ಲಿ ಡೇಟಾ ಸೈನ್ಸ್ ಬಳಸುವುದರಿಂದ, ಹಣಕಾಸು ಸಂಸ್ಥೆಗಳು ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಹೆಚ್ಚಿನ ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ಪ್ರಾರಂಭಿಸುತ್ತಿವೆ.
ಐಟಿ ಉದ್ಯೋಗಗಳ ಪಾಲು ಗಮನಾರ್ಹ ಇಳಿಕೆ
ಒಟ್ಟಾರೆ ಡೇಟಾ ಸೈನ್ಸ್ ಮತ್ತು ಅನಾಲಿಟಿಕ್ಸ್ ಉದ್ಯೋಗಗಳಲ್ಲಿ ಐಟಿ ವಲಯದ ಉದ್ಯೋಗಗಳ ಪಾಲು ಕಳೆದ ವರ್ಷದಿಂದ ಗಮನಾರ್ಹ ಇಳಿಕೆ ಕಂಡಿದೆ. ವಿಶೇಷವಾಗಿ ಹೆಚ್ಚಿನ ಸಂಖ್ಯೆಯ ಐಟಿ ವಲಯದ ಕ್ಲಯಂಟ್ ಗಳಿರುವ ಯು ಎಸ್ ಎ ಮತ್ತು ಯುರೋಪ್‌ನಲ್ಲಿ, ಇದು ಜಾಗತಿಕ ಹಿಂಜರಿತದ ಪ್ರವೃತ್ತಿಗಳಿಗೆ ಕಾರಣವೆಂದು ಹೇಳಬಹುದು. ಹಾಗೆಯೇ, 2022 ಕ್ಕೆ ಹೋಲಿಸಿದರೆ ವಿದ್ಯುತ್ ಮತ್ತು ಗೃಹಬಳಕೆಯಲ್ಲಿನ ಉದ್ಯೋಗಗಳು ಒಟ್ಟಾರೆಯಾಗಿ ಶೇಕಡಾವಾರು ಕಡಿಮೆಯಾಗಿದೆ, ಆದರೆ ರೀಟೇಲ್ ಮತ್ತು ಸಿಪಿಜಿ ಹಾಗೂ ಫಾರ್ಮಾ ಮತ್ತು ಆರೋಗ್ಯ ಸೇವೆಗಳಲ್ಲಿ ಈ ವರ್ಷ ಏರಿಕೆಯಾಗಿದೆ.
ಎಂ ಎನ್ ಸಿ ಐಟಿ ಮತ್ತು ಕೆಪಿಓ ಗಳು ಈ ವರ್ಷದ ಉದ್ಯೋಗಗಳಲ್ಲಿ ಇನ್ನೂ ಹೆಚ್ಚಿನ ಪಾಲನ್ನು ಹೊಂದಿವೆ; 2022 ಕ್ಕೆ ಹೋಲಿಸಿದರೆ ದೇಶೀಯ ಐಟಿಯೇತರ ಸಂಸ್ಥೆಗಳು ಉದ್ಯೋಗಾವಕಾಶಗಳಲ್ಲಿ ಹೆಚ್ಚಿನ ಜಿಗಿತ ವರದಿ ಮಾಡಿದೆ
2023ರಲ್ಲಿ ಭಾರತದಲ್ಲಿ ಡೇಟಾ ಸೈನ್ಸ್ ಮತ್ತು ಅನಾಲಿಟಿಕ್ಸ್ ಉದ್ಯೋಗಗಳಿಗೆ ಗರಿಷ್ಠ ಅವಕಾಶಗಳು ಎಂ ಎನ್ ಸಿ ಐಟಿ ಮತ್ತು ಕೆಪಿಓ ಗಳಲ್ಲಿವೆ, ಏಕೆಂದರೆ ಈ ಸಂಸ್ಥೆಗಳು ಸಾಮಾನ್ಯವಾಗಿ ದೊಡ್ಡ ಗ್ರಾಹಕರೊಂದಿಗೆ ಕೆಲಸ ಮಾಡುವುದರಿಂದ, ದೊಡ್ಡ ಪ್ರಮಾಣದ ಡೇಟಾ ನಿರ್ವಹಿಸುತ್ತವೆ. ಆದರೂ, ಮುಖ್ಯವಾಗಿ ಪಾಶ್ಚಿಮಾತ್ಯ ಜಗತ್ತಿನಲ್ಲಿ ಆರ್ಥಿಕ ಹಿಂಜರಿತದ ಕಠಿಣ ಆರ್ಥಿಕ ಸನ್ನಿವೇಶಗಳು ವಲಯದ ಮೇಲೆ ಪರಿಣಾಮ ಬೀರುವುದರಿಂದ ಡೇಟಾ ಉದ್ಯೋಗಗಳ ಪಾಲು ಹಿಂದಿನ ವರ್ಷಕ್ಕಿಂತ ಕಡಿಮೆಯಾಗಿದೆ. ಎಂ ಎನ್ ಸಿ ಐಟಿ ಮತ್ತು ಕೆಪಿಓ ಗಳಲ್ಲಿ ಡೇಟಾ ಮತ್ತು ಅನಾಲಿಟಿಕ್ಸ್ ಉದ್ಯೋಗಾವಕಾಶಗಳು ಹಿಂದಿನ ವರ್ಷ 2022 ಕ್ಕೆ ಹೋಲಿಸಿದರೆ ಶೇಕಡಾ 21 ಅಂಕಗಳಷ್ಟು (ಪಿಪಿ) ಕಡಿಮೆಯಾಗಿದೆ, ದೇಶೀಯ ಐಟಿ ಯೇತರ ಸಂಸ್ಥೆಗಳು ಮತ್ತು ದೇಶೀಯ ಐಟಿ ಮತ್ತು ಕೆಪಿಓ ಸಂಸ್ಥೆಗಳು ಕ್ರಮವಾಗಿ 20 ಪಿಪಿ ಮತ್ತು 8 ಪಿಪಿ ಯಷ್ಟು ಹೆಚ್ಚಾಗಿದೆ.
ಹಿರಿಯ ವೃತ್ತಿಪರರಿಗೆ ಉದ್ಯೋಗ ಕುಸಿತ
ಮಧ್ಯಮ ಹಂತದ ವೃತ್ತಿಪರರಿಗೆ ಲಭ್ಯವಿರುವ ಉದ್ಯೋಗಗಳು ಬೆಳೆಯುತ್ತಿರುವಾಗ, ಹಿರಿಯ ಹಂತದ ವೃತ್ತಿಪರರಿಗೆ ಮುಕ್ತ ಉದ್ಯೋಗಗಳಲ್ಲಿ ಕುಸಿತ ವರದಿಯಾಗಿದೆ. ಡೇಟಾ ಸೈನ್ಸ್ ಮತ್ತು ಅನಾಲಿಟಿಕ್ಸ್ ಉದ್ಯೋಗಗಳ ಸಂಖ್ಯೆಯನ್ನು ಪ್ರಾಥಮಿಕವಾಗಿ 2–5 ವರ್ಷಗಳು ಮತ್ತು 5–7 ವರ್ಷಗಳ ಅನುಭವದ ಆವರಣದಲ್ಲಿ ವೃತ್ತಿಪರರತ್ತ ಕೇಂದ್ರೀಕರಿಸಲಾಗಿದೆ. ಈ ಎರಡು ಮಾಜಿ ಕೆಲಸದ ವರ್ಗಗಳು ಐತಿಹಾಸಿಕವಾಗಿ ಮೆಚ್ಚಿನದ್ದಾಗಿದೆ, ಏಕೆಂದರೆ ಅವುಗಳ ಹೊಂದಾಣಿಕೆ ಮತ್ತು ಹೆಚ್ಚು ಹಿರಿಯ ವಯಸ್ಸಿನ ಗುಂಪುಗಳಿಗೆ ಹೋಲಿಸಿದರೆ ಸಂಸ್ಥೆಗಳಿಗೆ ಕಡಿಮೆ ವೆಚ್ಚ ಉಂಟಾಗುತ್ತದೆ. ಇದಲ್ಲದೇ, ಈ ಆವರಣದಲ್ಲಿ ಬರುವ ವೃತ್ತಿಪರರು ಸಂಬಂಧಿತ ಕೌಶಲ್ಯ ಮತ್ತು ಪ್ರಾಯೋಗಿಕ ಅನುಭವವನ್ನು ಹೊಂದಿದ್ದಾರೆ, ಅವರಿಗೆ ಫ್ರೆಶರ್‌ಗಳ ಮೇಲೆ ಒಂದು ಹಂತ ಹೆಚ್ಚು ನೀಡುತ್ತದೆ. 2022 ರಲ್ಲಿ, 2–5 ವರ್ಷಗಳು ಮತ್ತು 5–7 ವರ್ಷಗಳ ಮಾಜಿ-ಕೆಲಸದ ಆವರಣಕ್ಕೆ ಉದ್ಯೋಗಗಳ ಪಾಲು ಒಂದೇ ಆಗಿತ್ತು. ಅಂದಿನಿಂದ ಎರಡೂ ಗುಂಪುಗಳಲ್ಲಿ ಸ್ಥಾನಗಳಲ್ಲಿ ಹೆಚ್ಚಳ ಕಂಡುಬಂದಿದೆ, 2-5 ವರ್ಷಗಳ ಅನುಭವದ ಆವರಣವು ಆರ್ಥಿಕ ಹಿಂಜರಿತದ ನಡುವೆ ವೆಚ್ಚ ಕಡಿತದ ಕ್ರಮಗಳ ಪರಿಣಾಮವಾಗಿ ಉದ್ಯೋಗಾವಕಾಶದಲ್ಲಿ ಹೆಚ್ಚಿನ ಏರಿಕೆ (13 ಪಿಪಿ) ದಾಖಲಿಸಿದೆ.
ಹೆಚ್ಚುತ್ತಿರುವ ಸಂಸ್ಥೆಗಳ ಆದ್ಯತೆ
ಹೆಚ್ಚು ಅನುಭವೀ ವ್ಯಕ್ತಿಗಳಿಗೆ (7+ ವರ್ಷಗಳು) ಅವಕಾಶಗಳು ಕಡಿಮೆಯಾಗಿದೆ-ಕಠಿಣ ಸ್ಥೂಲ ಆರ್ಥಿಕ ಪರಿಸ್ಥಿತಿಗಳು ಮತ್ತು ಹೊಸದಾಗಿ, ದುಬಾರಿ ನೇಮಕ ಮಾಡುವ ಬದಲು ಆಂತರಿಕವಾಗಿ ತಮ್ಮ ಉದ್ಯೋಗಿಗಳನ್ನು ಹೆಚ್ಚಿಸಲು ಸಂಸ್ಥೆಗಳು ಆದ್ಯತೆ ನೀಡಿವೆ.
ಅನಾಲಿಟಿಕ್ಸ್ ಮತ್ತು ಡೇಟಾ ಸೈನ್ಸ್ ತಜ್ಞರಿಗೆ 6-10 ಎಲ್ ಪಿ ಎ ವೇತನ ಶ್ರೇಣಿಯಲ್ಲಿ ಹೆಚ್ಚು ಸ್ಥಾನಗಳು ಲಭ್ಯವಿದೆ
6–10 ಎಲ್ ಪಿ ಎ ಮತ್ತು 10–15 ಎಲ್ ಪಿ ಎ ನಡುವಿನ ಆದಾಯ ವ್ಯಾಪ್ತಿಯಲ್ಲಿರುವ ಮುಕ್ತ ಡೇಟಾ ಸೈನ್ಸ್ ಮತ್ತು ಅನಾಲಿಟಿಕ್ಸ್ ಉದ್ಯೋಗಗಳು 2023 ರಲ್ಲಿ ಎಲ್ಲಾ ಡೇಟಾ ಸಂಬಂಧಿತ ಉದ್ಯೋಗಗಳಲ್ಲಿ 60% ವರೆಗೆ ಇರುತ್ತವೆ. ಈ ಅಂಕಿಅಂಶವು 2-5 ಮತ್ತು 5-7 ವರ್ಷಗಳ ಅನುಭವ ಹೊಂದಿರುವವರಿಗೆ ಹೆಚ್ಚುತ್ತಿರುವ ಉದ್ಯೋಗಗಳ ಸಂಖ್ಯೆಗೆ ಅನುಗುಣವಾಗಿದೆ. ಈ ವರ್ಷ ಫ್ರೆಶರ್‌ಗಳು ಮತ್ತು ಹೆಚ್ಚು ಅನುಭವಿ ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ಸಂಸ್ಥೆಗಳು ಉತ್ಸುಕರಾಗಿಲ್ಲ ಎನ್ನುವ ಅಂಶವನ್ನು ಮಾಹಿತಿಯು ಪುನರುಚ್ಚರಿಸುತ್ತದೆ.
ದೇಶದ ಟೆಕ್ ರಾಜಧಾನಿಯಾಗಿರುವ ಬೆಂಗಳೂರು 2022 ರಿಂದ ಸ್ವಲ್ಪ ಕುಸಿತದ ಹೊರತಾಗಿಯೂ ಡೇಟಾ ಸೈನ್ಸ್ ಮತ್ತು ಅನಾಲಿಟಿಕ್ಸ್ ಉದ್ಯೋಗಗಳಲ್ಲಿ ಅತಿದೊಡ್ಡ ಪಾಲನ್ನು ಹೊಂದಿದೆ. ದೆಹಲಿ ಎನ್ ಸಿ ಆರ್, ಹೈದರಾಬಾದ್ ಮತ್ತು ಚೆನ್ನೈನಂತಹ ಇತರ ಸ್ಥಳಗಳು ಇತರೆ ಪ್ರತಿಭಾ ಕೇಂದ್ರಗಳತ್ತ ವಲಸೆ ಹೋಗುವುದರಿಂದ ತಮ್ಮ ಪಾಲನ್ನು ಹೆಚ್ಚಿಸಿವೆ. ಬೆಂಗಳೂರು ನಿಧಾನವಾಗಿ ಸಂತೃಪ್ತ ಬಿಂದುವನ್ನು ತಲುಪುತ್ತಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಚೆನ್ನೈನ ಆಟೋಮೋಟಿವ್ ಮತ್ತು ಉತ್ಪಾದನಾ ವಲಯಗಳು ಮತ್ತು ಹೈದರಾಬಾದ್‌ನ ಪ್ರವರ್ಧಮಾನಕ್ಕೆ ಬರುತ್ತಿರುವ ಔಷಧೀಯ ಮತ್ತು ಜೈವಿಕ ತಂತ್ರಜ್ಞಾನ ಉದ್ಯಮ ವಲಯಗಳು ಡೇಟಾ ಚಾಲಿತ ವಿಧಾನಗಳನ್ನು ಅಳವಡಿಸಿಕೊಂಡಿರುವುದರಿಂದ, ಹೆಚ್ಚುವರಿಯಾಗಿ ಡೇಟಾ ಸೈನ್ಸ್ ವೃತ್ತಿಪರರಿಗೆ ಹೆಚ್ಚಿನ ಬೇಡಿಕೆಯನ್ನು ಸೃಷ್ಟಿಸುತ್ತಿವೆ.
ಡೇಟಾ ಸೈನ್ಸ್ ಮತ್ತು ಅನಾಲಿಟಿಕ್ಸ್
ಎಂಬಿಎ ಪದವಿ ಹೆಚ್ಚುತ್ತಿರುವ ಡೇಟಾ ಸೈನ್ಸ್ ಮತ್ತು ಅನಾಲಿಟಿಕ್ಸ್ ಉದ್ಯೋಗಗಳಿಗೆ ಪೂರ್ವ ಅಗತ್ಯತೆಯಾಗಿದೆ, ಇದು ಕ್ಷೇತ್ರದ ಬಲವಾದ ವ್ಯಾಪಾರ ಏಕೀಕರಣವನ್ನು ಎತ್ತಿ ತೋರಿಸುತ್ತದೆ.
ಕಠಿಣ ಆರ್ಥಿಕ ಪರಿಸ್ಥಿತಿಗಳಿಂದಾಗಿ ಕೈಗಾರಿಕೆಗಳಾದ್ಯಂತ ಫ್ರೆಶರ್‌ಗಳ ನೇಮಕಾತಿಯಲ್ಲಿನ ಕುಸಿತದಿಂದ ಇಂಜಿನಿಯರಿಂಗ್ ಪದವಿ ಪಡೆದವರಿಗೆ ಡೇಟಾ ಸೈನ್ಸ್ ವಲಯದಲ್ಲಿ ಖಾಲಿ ಹುದ್ದೆಗಳಲ್ಲಿ ಇಳಿಕೆ ಕಂಡುಬಂದಿದೆ. ಫ್ರೆಶರ್‌ಗಳನ್ನು ನೇಮಿಸಿಕೊಳ್ಳುವುದು ಅತ್ಯಧಿಕ ವೆಚ್ಚದ ವ್ಯವಹಾರವಾಗಿದೆ ಏಕೆಂದರೆ ಸಂಸ್ಥೆಗಳು ಅವರನ್ನು ಯೋಜನೆಗಳಲ್ಲಿ ನಿಯೋಜಿಸುವ ಮೊದಲು ತರಬೇತಿ ನೀಡಬೇಕಾಗುತ್ತದೆ. ಆದರೂ, ಈ ವರ್ಷ ಎಂಬಿಎ ಪದವೀಧರರಿಗೆ ಡೇಟಾ ಸೈನ್ಸ್ ಮತ್ತು ಅನಾಲಿಟಿಕ್ಸ್ ಉದ್ಯೋಗಗಳು ಹೆಚ್ಚಿವೆ ಏಕೆಂದರೆ ಸಂಸ್ಥೆಗಳು ಅಸ್ತಿತ್ವದಲ್ಲಿರುವ ತಂಡಗಳನ್ನು ನಿರ್ವಹಿಸಲು ಕೇವಲ ಡೇಟಾ ಸೈನ್ಸ್ ಕೌಶಲ್ಯಗಳನ್ನು ಮಾತ್ರವಲ್ಲದೇ ವ್ಯವಸ್ಥಾಪಕ ಕೌಶಲ್ಯಗಳನ್ನು ಹೊಂದಿರುವ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲು ಹೆಚ್ಚು ಆಸಕ್ತಿ ವಹಿಸುತ್ತಿವೆ.
ಈ ಸುದ್ದಯನ್ನೂ ಓದಿ: Jio Institute: ಎಐ, ಡೇಟಾ ಸೈನ್ಸ್‌ನಲ್ಲಿ ಬೋಧಕರಿಗೆ ಕಾರ್ಯಕ್ರಮ; ಜಿಯೋ ಸಂಸ್ಥೆ ಜತೆ ಕೈಜೋಡಿಸಿದ ಎಐಸಿಟಿಇ
ಗ್ರೇಟ್ ಲರ್ನಿಂಗ್‌ನ ಸಹ-ಸಂಸ್ಥಾಪಕ ಹರಿ ಕೃಷ್ಣನ್ ನಾಯರ್ ಹೀಗೆ ಹೇಳಿದ್ದಾರೆ, “ಭಾರತವು ಜಾಗತಿಕವಾಗಿ ವ್ಯಾಪಾರ ಕಾರ್ಯಾಚರಣೆಗಳನ್ನು ಬೆಂಬಲಿಸುವ ಬೃಹತ್ ಡಿಜಿಟಲ್ ರೂಪಾಂತರದ ಮಧ್ಯದಲ್ಲಿದೆ ಮತ್ತು ಹೆಚ್ಚು ಪರಿಣಾಮಕಾರಿ ವ್ಯಾಪಾರ ಕಾರ್ಯಾಚರಣೆಗಳನ್ನು ಸಾಧಿಸಲು ಡೇಟಾ-ಚಾಲಿತ ನಿರ್ಧಾರಗಳನ್ನು ಅಳವಡಿಸಿಕೊಳ್ಳುವತ್ತ ಪ್ರಮುಖವಾಗಿ ಮುನ್ನಡೆದಿದೆ. ಈ ವರ್ಷದ ವರದಿಯು ಕೆಲವು ಅಚ್ಚರಿಗಳನ್ನು ಹುಟ್ಟುಹಾಕಿದೆ-ಆದರೆ ಒಮ್ಮೆ ಆರ್ಥಿಕತೆ ಮರುಕಳಿಸಿದರೆ, ಭಾರತದಲ್ಲಿ ಡೇಟಾ ಸೈನ್ಸ್ ಮತ್ತು ಅನಾಲಿಟಿಕ್ಸ್ ಉದ್ಯೋಗಗಳು ಮತ್ತಷ್ಟು ಬೆಳೆಯುತ್ತವೆಶಾಗೂ ಹೆಚ್ಚು ವಿಶಿಷ್ಟವಾದ ಉದ್ಯೋಗ ಪ್ರೊಫೈಲ್‌ಗಳನ್ನು ತೆರೆಯುತ್ತವೆ ಎಂದು ನಾವು ನಿರೀಕ್ಷಿಸಬಹುದು. ‘ಭಾರತದಲ್ಲಿ ಅನಾಲಿಟಿಕ್ಸ್ ಮತ್ತು ಡೇಟಾ ಸೈನ್ಸ್ ಉದ್ಯೋಗಗಳು 2023’ ವರದಿಯು ಸಂಸ್ಥೆಗಳಿಗೆ ಮತ್ತು ವ್ಯಕ್ತಿಗಳಿಗೆ ದೇಶದಲ್ಲಿ ಚಾಲ್ತಿಯಲ್ಲಿರುವ ಉದ್ಯೋಗ ಪ್ರವೃತ್ತಿಗಳ ಬಗ್ಗೆ ಆಳವಾದ ನೋಟವನ್ನು ನೀಡುವ ಮೂಲಕ ತಮ್ಮ ವೃತ್ತಿ ಗುರಿಗಳನ್ನು ಅನುಸರಿಸಲು ಮಾರ್ಗದರ್ಶನ ನೀಡುತ್ತದೆ ಎಂದು ನಾವು ಭಾವಿಸುತ್ತೇವೆ.
-
ದೇಶ14 hours ago
UNGA Speech: ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಿ, ವಿಶ್ವ ಸಂಸ್ಥೆಯಲ್ಲಿ ಭಾರತೀಯ ವಿದೇಶಾಂಗ ಸಚಿವ ಜೈಶಂಕರ್ ಪಾಠ!
-
ವಿದೇಶ22 hours ago
Great auction: ಅಮೆರಿಕದ ಅಪರೂಪದ ನೋಟು 3.9 ಕೋಟಿ ರೂ.ಗೆ ಮಾರಾಟ!
-
ಸುವಚನ9 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ದೇಶ15 hours ago
Manipur Horror: ಅಪಹರಿಸಿ ಕೊಂದ್ರಲ್ಲಾ… ನಮ್ಮ ಮಕ್ಕಳು ಮಾಡಿದ ತಪ್ಪಾದ್ರೂ ಏನು? ಹತ್ಯೆಗೀಡಾದ ವಿದ್ಯಾರ್ಥಿಗಳ ಪೋಷಕರ ಪ್ರಶ್ನೆ
-
ದೇಶ15 hours ago
GST Evasion: ಜಿಎಸ್ಟಿ ವಂಚಿಸಿದ ಬಿಜೆಪಿ ನಾಯಕಿಯ ಸಕ್ಕರೆ ಕಾರ್ಖಾನೆಯ 19 ಕೋಟಿ ರೂ. ಮೌಲ್ಯದ ಸೊತ್ತು ಜಪ್ತಿ!
-
ಆಟೋಮೊಬೈಲ್21 hours ago
Viral News : ಅಮ್ಮನ ಕಾರಿನಲ್ಲಿಯೇ ಮನೆ ಬಿಟ್ಟು ಹೋದ ಪುಟಾಣಿ ಮಕ್ಕಳು, 300 ಕಿ. ಮೀ ದೂರ ಹೋಗಿ ಸಿಕ್ಕಿಬಿದ್ದರು
-
ಕರ್ನಾಟಕ22 hours ago
Assault Case : ರಸ್ತೆ ವಿಚಾರಕ್ಕೆ ವಕೀಲನಿಗೆ ಹಿಗ್ಗಾಮುಗ್ಗಾ ಥಳಿಸಿದ ಗ್ರಾಮಸ್ಥರು!
-
ಕ್ರಿಕೆಟ್18 hours ago
Ruturaj Gaikwad : ಚೀನಾಗೆ ಹೊರಡುವ ಮೊದಲು ಪುಣೆಯ ಗಣೇಶ ಮಂದಿರಕ್ಕೆ ಭೇಟಿ ನೀಡಿದ ಋತುರಾಜ್