Site icon Vistara News

ಪ್ರತಿಷ್ಠಿತ ಕಂಪನಿಗಳ ಹೆಸರಿನಲ್ಲಿ ನಕಲಿ ಆಯಿಲ್‌ ಮಾರಾಟ: ಖಾಕಿಗೇ ಚಳ್ಳೆಹಣ್ಣು ತಿನ್ನಿಸಿದ ದಂಧೆಕೋರ!

ಬೆಂಗಳೂರು: ಕ್ಯಾಸ್ಟ್ರಾ ಆಯಿಲ್‌, ಶೆಲ್‌, ಸರ್ವೋ ಸೇರಿಂದತೆ ಇತರೆ ಪ್ರತಿಷ್ಠಿತ ಕಂಪನಿಗಳ ಹೆಸರಿನಲ್ಲಿ ಆಯಿಲ್‌ ಕಲಬೆರಕೆ ಮಾಡುತ್ತಿದ್ದ ಆರೋಪಿ ಸ್ವಾಮಿ ಎಂಬಾತನನ್ನು ಅಶೋಕ ನಗರ ಪೊಲೀಸರು ರೆಡ್ ಹ್ಯಾಂಡ್‌ ಆಗಿ ಬಂಧಿಸಿದ್ದಾರೆ. ಆರೋಪಿ ಸ್ವಾಮಿ ಯಾರಿಗೂ ಅನುಮಾನ ಬರದಂತೆ ಅದೇ ಕಂಪನಿಗಳ ಸ್ಟಿಕ್ಕರ್‌, ಸೀಲ್‌ ಅಂಟಿಸಿ ಕಲಬೆರಕೆ ಆಯಿಲ್‌ ಅನ್ನು ಮಾರಾಟ ಮಾಡುತ್ತಿದ್ದ.

ಅಶೋಕ ನಗರ ಠಾಣಾ ವ್ಯಾಪ್ತಿಯಲ್ಲಿ ಆರೋಪಿ ಸ್ವಾಮಿ ನಕಲಿ ಸೀಲ್‌ ಬಳಸಿ ಇಂಜಿನ್‌ ಆಯಿಲ್‌ ಸಪ್ಲೈ ಮಾಡುತ್ತಿದ್ದ. ‌ ಇಂಜಿನ್‌ ಆಯಿಲ್ ಕಲಬೆರಕೆ ಮಾಡಲು ಆರೋಪಿ ಸ್ವಾಮಿ ಚನ್ನಪಟ್ಟಣದಲ್ಲಿ ಯೂನಿಟ್‌ ಹೊಂದಿದ್ದ. ಈ ಬಗ್ಗೆ ಮಾಹಿತಿ ಸಿಕ್ಕ ಕೂಡಲೇ ಚನ್ನಪಟ್ಟಣದ ಆಯಿಲ್‌ ಘಟಕದ ಮೇಲೆ ದಾಳಿ ನಡೆಸಿದ ಅಶೋಕ ನಗರ ಪೊಲೀಸರು ಆರೋಪಿ ಸ್ವಾಮಿಯನ್ನು ಬಂಧಿಸಿದ್ದಾರೆ.

ಪೊಲೀಸರಿಗೇ ಚಳ್ಳೆಹಣ್ಣು ತಿನ್ನಿಸಿದ್ದ ಆರೋಪಿ ಸ್ವಾಮಿ!

ಪ್ರತಿಷ್ಟಿತ ಕಂಪೆನಿಗಳ ಹೆಸರಿನಲ್ಲಿ ಕಲಬೆರಕೆ ಇಂಜಿನ್ ಆಯಿಲ್ ಮಾರಾಟ ಮಾಡುತ್ತಿದ್ದ ಆರೋಪಿ ಸ್ವಾಮಿ ದಾಳಿ ವೇಳೆ ಪೊಲೀಸರಿಗೇ ಚಳ್ಳೆಹಣ್ಣು ತಿನ್ನಿಸಲು ಪ್ರಯತ್ನಿಸಿದ್ದ. ಆರಂಭದಲ್ಲಿ ತನಿಖೆಯ ಹಾದಿ ತಪ್ಪಿಸಲು ಆರೋಪಿ ದೆಹಲಿಯಲ್ಲಿ ಯೂನಿಟ್‌ ಇರುವುದಾಗಿ ಹೇಳಿದ್ದ. ಸದ್ಯ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಅಶೋಕ ನಗರ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Exit mobile version