Site icon Vistara News

Police Transfer: 11 ಡಿವೈಎಸ್‌ಪಿ, 51 ಪೊಲೀಸ್ ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ

Police transfer

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪೊಲೀಸ್‌ ಇಲಾಖೆಗೆ ಮೇಜರ್‌ ಸರ್ಜರಿ ನಡೆದಿದ್ದು, 11 ಡಿವೈಎಸ್‌ಪಿ ಮತ್ತು 51 ಪೊಲೀಸ್ ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ (Police Transfer) ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಲೋಕಸಭಾ ಚುನಾವಣೆ ನಿಮಿತ್ತ ಮಾಡಿದ್ದ ಪೊಲೀಸ್‌ ಅಧಿಕಾರಿಗಳ ವರ್ಗಾವಣೆ ಆದೇಶವನ್ನು ಭಾಗಶಃ ಮಾರ್ಪಡಿಸಿ ಇಲಾಖೆಯು ಆದೇಶ ಹೊರಡಿಸಿದೆ.

ಸಂಬಂಧಪಟ್ಟ ಘಟಕಾಧಿಕಾರಿಗಳು, ವರ್ಗಾವಣೆಗೊಂಡ ಅಧಿಕಾರಿಗಳನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ, ಯಾವುದೇ ಸೇರುವಿಕೆ ಕಾಲ ಬಳಸದೇ ವರ್ಗಾಯಿಸಲಾದ ಸ್ಥಳದಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವಂತೆ ಸೂಚಿಸಲು ಪೊಲೀಸ್‌ ಇಲಾಖೆ ನಿರ್ದೇಶನ ನೀಡಿದೆ.

ಡಿವೈಎಸ್‌ಪಿ ಶಿವಕುಮಾರ್‌ ಟಿ.ಎಂ. ಅವರನ್ನು ಕಲಬುರಗಿ ಸಂಚಾರ ಉಪವಿಭಾಗ, ಮೊಹಮ್ಮದ್‌ ಶರೀಫ್‌ ರಾವುತರ್‌(ಆಳಂದ ಉಪವಿಭಾಗ, ಕಲಬುರಗಿ), ಕೋದಂಡ ರಾಮ. ಟಿ (ಸಿಸಿಬಿ, ಮಂಗಳೂರು) ಸೇರಿ 11 ಡಿವೈಎಸ್‌ಪಿಗಳನ್ನು ವರ್ಗಾವಣೆ ಮಾಡಲಾಗಿದೆ.

ಇದನ್ನೂ ಓದಿ | Karnataka Budget Session 2024: 16 ಸಾವಿರ ಅತಿಥಿ ಉಪನ್ಯಾಸಕರ ಕಾಯಂ ಇಲ್ಲವೆಂದ ಸರ್ಕಾರ!

ಅದೇ ರೀತಿ ವಸಂತ ಕೆ.ಎಂ. ಅವರನ್ನು ಸೋಮವಾರಪೇಟೆ ಪೊಲೀಸ್‌ ಠಾಣೆ, ರಾಘವೇಂದ್ರ ಎಂ. ಬೈಂದೂರು (ಕಾವೂರು ಪೊಲೀಸ್‌ ಠಾಣೆ, ಮಂಗಳೂರು), ಸುರೇಶ್‌ ಪಿ. ಶಿಂಗಿ (ಉಡುಪಿ ನಗರ) ಸೇರಿ 51 ಪೊಲೀಸ್‌ ಇನ್‌ಸ್ಪೆಕ್ಟರ್‌ಗಳನ್ನು ವರ್ಗಾಯಿಸಲಾಗಿದೆ.

ಇದನ್ನೂ ಓದಿ | Karnataka Budget Session 2024: ಖಾಸಗಿ ಒಡೆತನದ ʼಮೈಸೂರು ಲ್ಯಾಂಪ್ಸ್‌ʼ ಷೇರು ಖರೀದಿಗೆ ಕ್ರಮ: ಎಂ.ಬಿ. ಪಾಟೀಲ್

Exit mobile version