Karnataka Budget Session 2024: ಖಾಸಗಿ ಒಡೆತನದ ʼಮೈಸೂರು ಲ್ಯಾಂಪ್ಸ್‌ʼ ಷೇರು ಖರೀದಿಗೆ ಕ್ರಮ: ಎಂ.ಬಿ. ಪಾಟೀಲ್ - Vistara News

ರಾಜಕೀಯ

Karnataka Budget Session 2024: ಖಾಸಗಿ ಒಡೆತನದ ʼಮೈಸೂರು ಲ್ಯಾಂಪ್ಸ್‌ʼ ಷೇರು ಖರೀದಿಗೆ ಕ್ರಮ: ಎಂ.ಬಿ. ಪಾಟೀಲ್

Karnataka Budget Session 2024: ಮೈಸೂರು ಲ್ಯಾಂಪ್ಸ್‌ಗೆ ಸಂಬಂಧಿಸಿದಂತೆ ಸರ್ಕಾರ ಹೆಚ್ಚು ಜಾಗರೂಕತೆಯ ಹೆಜ್ಜೆಗಳನ್ನು ಇಡುತ್ತಿದ್ದು, ಅದರ ಆಸ್ತಿ ಯಾವುದೇ ಖಾಸಗಿ ವ್ಯಕ್ತಿ/ಸಂಸ್ಥೆಗಳ ಪಾಲಾಗಲು ಬಿಡುವುದಿಲ್ಲ ಎಂದು ಎಂ.ಬಿ. ಪಾಟೀಲ್‌ ಸ್ಪಷ್ಟಪಡಿಸಿದ್ದಾರೆ.

VISTARANEWS.COM


on

Karnataka Budget Session 2024 Move to buy all shares of Mysore Lamps says MB Patil
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಸರ್ಕಾರಿ ಸ್ವಾಮ್ಯದ ಮೈಸೂರು ಲ್ಯಾಂಪ್ಸ್ (Mysore Lamps) ಕಂಪನಿಯಲ್ಲಿ ಶೇ. 5.6ರಷ್ಟು ಷೇರುಗಳು ಖಾಸಗಿಯವರ ಒಡೆತನದಲ್ಲಿದ್ದು ಅಷ್ಟೂ ಷೇರುಗಳನ್ನು ಸರ್ಕಾರವೇ ಖರೀದಿ ಮಾಡಿ ಸಂಸ್ಥೆಯನ್ನು ಶೇ. 100ರಷ್ಟು ಸರ್ಕಾರಿ ಸಂಸ್ಥೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌ (MB Patil) ತಿಳಿಸಿದ್ದಾರೆ. ವಿಧಾನ ಮಂಡಲ ಅಧಿವೇಶನದಲ್ಲಿ (Karnataka Budget Session 2024) ಕೇಳಲಾದ ಪ್ರಶ್ನೆಗೆ ಅವರು ಈ ಉತ್ತರವನ್ನು ನೀಡಿದ್ದಾರೆ.

ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್‌ನ ಎಸ್.ಎಲ್. ಬೋಜೇಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿದ ಎಂ.ಬಿ. ಪಾಟೀಲ್‌, ಮೈಸೂರು ಲ್ಯಾಂಪ್ಸ್‌ಗೆ ಸಂಬಂಧಿಸಿದಂತೆ ಸರ್ಕಾರ ಹೆಚ್ಚು ಜಾಗರೂಕತೆಯ ಹೆಜ್ಜೆಗಳನ್ನು ಇಡುತ್ತಿದ್ದು, ಅದರ ಆಸ್ತಿ ಯಾವುದೇ ಖಾಸಗಿ ವ್ಯಕ್ತಿ/ಸಂಸ್ಥೆಗಳ ಪಾಲಾಗಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಸದ್ಯ ಈ ಕಂಪನಿಯಲ್ಲಿ ಸರ್ಕಾರದ ಷೇರು ಪ್ರಮಾಣ ಶೇ 91.07ರಷ್ಟು ಇದೆ. ಸರ್ಕಾರಿ ಸ್ವಾಮ್ಯದ ಎನ್‌ಜಿಇಎಫ್ ಸಂಸ್ಥೆ ಶೇ 3.33ರಷ್ಟು ಷೇರು ಬಂಡವಾಳ ಹೊಂದಿದೆ. ಉಳಿದ ಶೇ 5.6ರಷ್ಟು ಷೇರು ಬಂಡವಾಳ ಸಾರ್ವಜನಿಕರದ್ದಾಗಿದೆ ಎಂದು ಎಂ.ಬಿ. ಪಾಟೀಲ್‌ ವಿವರಿಸಿದರು.

ಮೈಸೂರು ಲ್ಯಾಂಪ್ಸ್ ಮತ್ತು ಎನ್‌ಜಿಇಎಫ್ ಸಂಸ್ಥೆಗೆ ಸೇರಿದ ಜಾಗಗಳಲ್ಲಿ ಸಾರ್ವಜನಿಕ ಉದ್ದೇಶದ ವಿನೂತನ ಯೋಜನೆಗಳನ್ನು ಅನುಷ್ಠಾನಗೊಳಿಸಲು 2021ರಲ್ಲಿ ಪಬ್ಲಿಕ್ ಚಾರಿಟಬಲ್ ಟ್ರಸ್ಟ್ ಸ್ಥಾಪಿಸಲಾಗಿತ್ತು. ಸರ್ಕಾರದ ಮುಖ್ಯ ಕಾರ್ಯದರ್ಶಿ ಇದರ ಅಧ್ಯಕ್ಷರಾಗಿದ್ದಾರೆ. ಇವರಲ್ಲದೆ, ಸರ್ಕಾರದ ಕಡೆಯಿಂದ ಏಳು ಮತ್ತು ನಾಗರಿಕರ ವಲಯದಿಂದ ಐದು ಟ್ರಸ್ಟಿಗಳನ್ನು ನೇಮಿಸಲು ಅವಕಾಶ ಇದೆ. ಇದುವರೆಗೂ ಈ ಟ್ರಸ್ಟ್ ಗೆ ಯಾವುದೇ ಚಟುವಟಿಕೆಗಳನ್ನು ಸರ್ಕಾರದ ಕಡೆಯಿಂದ ವಹಿಸಿರುವುದಿಲ್ಲ ಎಂದು ಎಂ.ಬಿ. ಪಾಟೀಲ್‌ ವಿವರಿಸಿದರು.

ಮೊದಲ ಆದ್ಯತೆ ಕಂಪನಿಯನ್ನು ಪೂರ್ಣ ಪ್ರಮಾಣದಲ್ಲಿ ಸರ್ಕಾರಿ ಸಂಸ್ಥೆಯನ್ನಾಗಿ ಮಾಡುವುದು. ಅದರ ನಂತರವೇ ಅದರ ಆಸ್ತಿಗಳನ್ನು ಸಾರ್ವಜನಿಕ ಉದ್ದೇಶಗಳಿಗೆ ಹೇಗೆ ಬಳಸಿಕೊಳ್ಳಬೇಕು ಎಂಬುದರ ಬಗ್ಗೆ ತೀರ್ಮಾನ ಮಾಡಲಾಗುವುದು. ಒಟ್ಟಿನಲ್ಲಿ ಖಾಸಗಿಯವರಿಗಂತೂ ಕೊಡುವುದಿಲ್ಲ ಎಂದು ಎಂ.ಬಿ. ಪಾಟೀಲ್‌ ತಿಳಿಸಿದರು.

ರಾಜ್ಯದಲ್ಲಿ ₹50 ಸಾವಿರ ಕೋಟಿ ಹೂಡಿಕೆ, 58 ಸಾವಿರ ಉದ್ಯೋಗಸೃಷ್ಟಿ: ಎಂ ಬಿ ಪಾಟೀಲ

2023-24ನೇ ಸಾಲಿನಲ್ಲಿ ಒಟ್ಟು 241 ಬಂಡವಾಳ ಹೂಡಿಕೆ ಯೋಜನೆಗಳಿಗೆ ಅನುಮೋದನೆ ನೀಡಲಾಗಿದ್ದು, ಇವುಗಳಿಂದ ₹50,025 ಕೋಟಿ ಬಂಡವಾಳ ಹರಿದುಬಂದಿದೆ. ಇವುಗಳ ಮೂಲಕ 58,051 ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌ ಹೇಳಿದ್ದಾರೆ.

ವಿಧಾನ ಪರಿಷತ್ತಿನಲ್ಲಿ ಬಿಜೆಪಿ ಸದಸ್ಯ ಕೇಶವಪ್ರಸಾದ್ ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದ ಎಂ.ಬಿ. ಪಾಟೀಲ, ಏಕಗವಾಕ್ಷಿ ಅನುಮೋದನಾ ಸಮಿತಿಯು ಹಸಿರು ನಿಶಾನೆ ನೀಡಿರುವ ಈ ಯೋಜನೆಗಳ ಪೈಕಿ 24 ಯೋಜನೆಗಳು ಮಾತ್ರ ಬೆಂಗಳೂರು ಜಿಲ್ಲೆಯಲ್ಲಿದ್ದು, ಉಳಿದ 217 ಯೋಜನೆಗಳು ಹೊರಗಿನ ಜಿಲ್ಲೆಗಳಲ್ಲಿವೆ. ಬೆಂಗಳೂರು ಜಿಲ್ಲೆಯಲ್ಲಿ 21,537 ಕೋಟಿ ರೂ. ಹೂಡಿಕೆ ಆಗುತ್ತಿದ್ದು, 19,243 ಉದ್ಯೋಗ ಸೃಷ್ಟಿ ಆಗಲಿವೆ. ಉಳಿದ ಜಿಲ್ಲೆಗಳಲ್ಲಿ 28,488 ಕೋಟಿ ರೂ. ಬಂಡವಾಳ ಹೂಡಿಕೆ ಆಗುತ್ತಿದ್ದು, 38,808 ಮಂದಿಗೆ ಉದ್ಯೋಗ ಸಿಗಲಿವೆ ಎಂದು ಪಾಟೀಲ್‌ ಅಂಕಿ-ಅಂಶಗಳ ಸಮೇತ ವಿವರಿಸಿದರು.

ಇದನ್ನೂ ಓದಿ: Karnataka Budget Session 2024: 16 ಸಾವಿರ ಅತಿಥಿ ಉಪನ್ಯಾಸಕರ ಕಾಯಂ ಇಲ್ಲವೆಂದ ಸರ್ಕಾರ!

ಬಿಯಾಂಡ್‌ ಬೆಂಗಳೂರಿಗೆ ಒತ್ತು

ಬೆಂಗಳೂರನ್ನು ಹೊರತುಪಡಿಸಿ ರಾಜ್ಯದ ಮಿಕ್ಕ ಭಾಗಗಳಲ್ಲಿ ಉದ್ದಿಮೆಗಳು ನೆಲೆಯೂರಿ, ಉದ್ಯೋಗ ಸೃಷ್ಟಿಯಾಗುವಂತೆ ಮಾಡಲು ಸರ್ಕಾರವು ಬಿಯಾಂಡ್ ಬೆಂಗಳೂರು ಉಪಕ್ರಮವನ್ನು ಆರಂಭಿಸಿದ್ದು, ವಿವಿಧೆಡೆಗಳಲ್ಲಿ ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಇದಕ್ಕಾಗಿ ಕೈಗಾರಿಕಾ ನೀತಿಯಲ್ಲಿ ಹಲವು ಪ್ರೋತ್ಸಾಹಧನ ಮತ್ತು ವಿನಾಯಿತಿಗಳನ್ನು ನೀಡಲಾಗುತ್ತಿದೆ ಎಂದು ಸಚಿವ‌ ಎಂ.ಬಿ. ಪಾಟೀಲ್‌ ಹೇಳಿದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Narendra Modi: ನಾಮಪತ್ರ ಸಲ್ಲಿಕೆಗೂ ಮುನ್ನ ಗಂಗಾರತಿ ಮಾಡಿದ ಮೋದಿ-ಇಲ್ಲಿದೆ ಲೈವ್‌

Narendra Modi: ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಮಾಡಿರುವ ಪ್ರಧಾನಿ ಗಂಗಾ ನದಿಯ ಜೊತೆಗಿನ 10 ವರ್ಷಗಳ ನಂಟಿಗೆ ಸಂಬಂಧಿಸಿದ ವಿಡಿಯೋವೊಂದನ್ನು ಹರಿಬಿಟ್ಟಿದ್ದಾರೆ. ಅಲ್ಲದೇ ಗಂಗಾ ಮಾತೆ ನನ್ನನ್ನು ದತ್ತು ಪಡೆದಿದ್ದಾಳೆ. ಈ ಹತ್ತು ವರ್ಷಗಲ್ಲಿ ನನ್ನ ಮತ್ತು ಗಂಗಾಮಾತೆಯ ಜೊತೆಗಿನ ನಂಟು ಮತ್ತಷ್ಟು ಬಲಿಷ್ಠವಾಗಿದೆ ಎಂದು ಬರೆದಿಕೊಂಡಿದ್ದಾರೆ. ದಶಾಶ್ವಮೇಧ ಘಾಟ್‌ ಭೇಟಿ ಬಳಿಕ ಪ್ರಧಾನಿ ವಾರಾಣಸಿಯಲ್ಲಿರುವ ಕಾಲಭೈರವೇಶ್ವರ ದೇಗುಲಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಲಿದ್ದಾರೆ.

VISTARANEWS.COM


on

Narendra Modi
Koo

ವಾರಾಣಸಿ: ಮೂರನೇ ಬಾರಿ ಗೆಲುವಿನ ನಿರೀಕ್ಷೆಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ(Narendra Modi) ಕೆಲವೇ ಕ್ಷಣಗಳಲ್ಲಿ ವಾರಾಣಸಿ(Varanasi)ಯಲ್ಲಿ ನಾಮಪತ್ರ(Nomination Filing) ಸಲ್ಲಿಸಲಿದ್ದಾರೆ. ನಾಮಪತ್ರ ಸಲ್ಲಿಕೆಗೂ ಮುನ್ನ ವಾರಾಣಸಿಯಲ್ಲಿರುವ ದಶಾಶ್ವಮೇಧ ಘಾಟ್‌ಗೆ ಭೇಟಿ ಕೊಟ್ಟ ಮೋದಿ ಗಂಗಾ ನದಿಗೆ ಪೂಜೆ ಸಲ್ಲಿಸಿದರು. ಐದು ಅರ್ಚಕರ ನೇತೃತ್ವದಲ್ಲಿ ಪೂಜೆ ನಡೆದಿದ್ದು, ಗಂಗಾ ನದಿ(Ganga River)ಗೆ ಪ್ರಧಾನಿ ಆರತಿ ಬೆಳಗಿದರು.

ಇನ್ನು ಇದಕ್ಕೂ ಮುನ್ನ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಮಾಡಿರುವ ಪ್ರಧಾನಿ ಗಂಗಾ ನದಿಯ ಜೊತೆಗಿನ 10 ವರ್ಷಗಳ ನಂಟಿಗೆ ಸಂಬಂಧಿಸಿದ ವಿಡಿಯೋವೊಂದನ್ನು ಹರಿಬಿಟ್ಟಿದ್ದಾರೆ. ಅಲ್ಲದೇ ಗಂಗಾ ಮಾತೆ ನನ್ನನ್ನು ದತ್ತು ಪಡೆದಿದ್ದಾಳೆ. ಈ ಹತ್ತು ವರ್ಷಗಲ್ಲಿ ನನ್ನ ಮತ್ತು ಗಂಗಾಮಾತೆಯ ಜೊತೆಗಿನ ನಂಟು ಮತ್ತಷ್ಟು ಬಲಿಷ್ಠವಾಗಿದೆ ಎಂದು ಬರೆದಿಕೊಂಡಿದ್ದಾರೆ. ದಶಾಶ್ವಮೇಧ ಘಾಟ್‌ ಭೇಟಿ ಬಳಿಕ ಪ್ರಧಾನಿ ವಾರಾಣಸಿಯಲ್ಲಿರುವ ಕಾಲಭೈರವೇಶ್ವರ ದೇಗುಲಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಲಿದ್ದಾರೆ.

ನಾಮಪತ್ರ ಸಲ್ಲಿಕೆಗೂ ಮುನ್ನ ದಿನ ಅಂದರೆ ಸೋಮವಾರ ಇಲ್ಲಿನ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ದ್ವಾರದಿಂದ ಅದ್ಧೂರಿ ರೋಡ್‌ ಶೋ ನಡೆಸಿದರು. ಸರಿಸುಮಾರು 5 ಕಿಮೀ ವರೆಗೆ ರೋಡ್ ಶೋನಲ್ಲಿ ವಾರಣಾಸಿ ಲೋಕಸಭಾ ಕ್ಷೇತ್ರದ 1 ಲಕ್ಷಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು, ಕಾಶಿ ನಿವಾಸಿಗಳು, ಕ್ರೀಡಾಪಟುಗಳು, ಕಲಾವಿದರು ಮತ್ತು ಸ್ಥಳೀಯರಲ್ಲದೇ ಇತರ ಪ್ರಮುಖರು ಭಾಗವಹಿಸಲಿದ್ದರು. ಮರಾಠಿ, ಗುಜರಾತಿ, ಬೆಂಗಾಲಿ, ಮಾಹೇಶ್ವರಿ, ಮಾರ್ವಾಡಿ, ತಮಿಳು ಮತ್ತು ಪಂಜಾಬಿ ಸಮುದಾಯಗಳ ಗುಂಪು ಪ್ರಧಾನಿ ಮೋದಿಯನ್ನು ತಮ್ಮ ಸಾಂಪ್ರದಾಯಿಕ ಉಡುಗೆಯಲ್ಲಿ ಸ್ವಾಗತಿಸದರು. 5,000 ಕ್ಕೂ ಹೆಚ್ಚು ಬಿಜೆಪಿ ಮಹಿಳಾ ಘಟಕದ ಕಾರ್ಯಕರ್ತರು ಭಾಗಿಯಾಗಿದ್ದು, 100 ಪಾಯಿಂಟ್‌ಗಳಲ್ಲಿ ಪುಷ್ಪವೃಷ್ಟಿ ಮಾಡಲಾಯಿತು. ಮುಸ್ಲಿಂ ಸಮುದಾಯದವರೂ ಮೋದಿಗೆ ವಿಶೇಷ ಸ್ವಾಗತ ಕೋರಿದ್ದರು. ರೋಡ್‌ ಶೋ ಬಳಿಕ ಮೋದಿ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದರು.

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಇಂಡಿಯಾ ಒಕ್ಕೂಟದ ಅಭ್ಯರ್ಥಿಯಾಗಿ ಅಜಯ್ ರೈ ಕಣದಲ್ಲಿದ್ದಾರೆ. ಅಜಯ್ ರೈ ಉತ್ತರ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದು, ಕಳೆದ ಎರಡು ಬಾರಿಯೂ ಮೋದಿ ವಿರುದ್ಧ ಸ್ಪರ್ಧಿಸಿ ಸೋತಿದ್ದರು. ಈ ಬಾರಿ ಪ್ರಧಾನಿ ಮೋದಿಯವರ ಗೆಲುವಿನ ಅಂತರವನ್ನು 7 ಲಕ್ಷಕ್ಕೂ ಮೀರಿ ಹೆಚ್ಚಿಸುವ ಗುರಿಯನ್ನು ಬಿಜೆಪಿ ಹೊಂದಿದೆ. 2019ರಲ್ಲಿ 64% ಮತ ಹಂಚಿಕೆಯೊಂದಿಗೆ ಮೋದಿಯವರು 4.8 ಲಕ್ಷ ಅಂತದಲ್ಲಿ ಗೆಲುವು ಸಾಧಿಸಿದ್ದರು. 2014ರಲ್ಲಿ ಅವರು 3.7 ಲಕ್ಷ ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದರು.

Continue Reading

ಪ್ರಮುಖ ಸುದ್ದಿ

‌Prajwal Revanna Case: ಜೀವನದಲ್ಲಿ ಮೊದಲ ಬಾರಿಗೆ ಗಡ್ಡ ಬಿಟ್ಟ ದೇವೇಗೌಡರು; ವೈರಿನಾಶಕ್ಕೆ ಶಪಥ!

‌Prajwal Revanna Case: ದೇವೇಗೌಡರ ಐವತ್ತು ವರ್ಷಗಳ ಕಾಲದ ಘನತೆಯ ರಾಜಕೀಯ ಜೀವನಕ್ಕೆ ಪೆನ್‌ ಡ್ರೈವ್‌ ಪ್ರಕರಣದಿಂದ ಭಾರಿ ಪೆಟ್ಟು ಬಿದ್ದಿದೆ. ಕುಟುಂಬಕ್ಕೆ ಮುಜುಗರ ಸೃಷ್ಟಿಯಾಗಿದೆ. ಅವಮಾನಿತರಾದ ದೇವೇಗೌಡರು ರೇವಣ್ಣ ಜೈಲಿಗೆ ಹೋದ ಬಳಿಕ, ಎಂದೂ ಗಡ್ಡ ಬಿಡದವರು ಮೊದಲ ಬಾರಿಗೆ ದಾಡಿ ಬಿಟ್ಟಿದ್ದರು. ಡಿಕೆಶಿ ಹಾಗೂ ಸಿದ್ದರಾಮಯ್ಯ ತಮಗೆ ಸೃಷ್ಟಿಸಿರುವ ಅವಮಾನಕ್ಕೆ ಪ್ರತೀಕಾರ ಮಾಡಲು ಎಚ್‌ಡಿಡಿ ಕುಟುಂಬ ಕುದಿಯುತ್ತಿದೆ.

VISTARANEWS.COM


on

HD Deve gowda prajwal revanna case
Koo

ಬೆಂಗಳೂರು: ಮಾಜಿ ಸಚಿವ ಎಚ್‌.ಡಿ ರೇವಣ್ಣ (HD Revanna Jailed) ಅವರು ಇಂದು ಜಾಮೀನಿನಲ್ಲಿ ಬಿಡುಗಡೆ ಆಗುತ್ತಿದ್ದು, ಪ್ರಜ್ವಲ್‌ ರೇವಣ್ಣ ಪ್ರಕರಣದಲ್ಲಿ (Prajwal Revanna Case) ಕುಟುಂಬಕ್ಕೆ ಆಗಿರುವ ಅವಮಾನದ ಸೇಡು ತೀರಿಸಿಕೊಳ್ಳಲು ರಾಜಕೀಯ ಭೀಷ್ಮ, ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡರು (HD Deve Gowda) ಸಜ್ಜಾಗಿದ್ದಾರೆ. ಸದಾ ನೀಟ್‌ ಶೇವ್‌ ಮಾಡಿಕೊಳ್ಳುವ ದೇವೇಗೌಡರು ಮಗ ಜೈಲುಪಾಲಾದ ಬಳಿಕ ಮೊದಲ ಬಾರಿಗೆ ಗಡ್ಡ ಬಿಟ್ಟಿದ್ದು, ಇದೀಗ ಎದುರಾಳಿಗಳನ್ನು ಎದುರಿಸಲು ಎದ್ದು ಕೂತಿದ್ದಾರೆ.

ಇಂದು ರೇವಣ್ಣ ಮನೆಗೆ

ಹನ್ನೊಂದು ದಿನಗಳ ಹಿಂದೆ ಪದ್ಮನಾಭ ನಗರದ ದೇವೇಗೌಡರ ನಿವಾಸದಲ್ಲೇ ಆರೆಸ್ಟ್ ಆಗಿದ್ದ ಎಚ್‌.ಡಿ ರೇವಣ್ಣ ಇಂದು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ. ಜೈಲರ್‌ಗೆ ಬಿಡುಗಡೆ ಆದೇಶ ಪ್ರತಿ ಸಿಗುವವರೆಗೂ ಬಿಡುಗಡೆ ದೊರೆಯುವುದಿಲ್ಲ. ಬೆಳಿಗ್ಗೆ ಹತ್ತುವರೆಗೆ ಕೋರ್ಟ್ ಕಲಾಪ ಆರಂಭವಾಗಲಿದ್ದು, ಹತ್ತುವರೆಗೆ ಪರಪ್ಪನ ಅಗ್ರಹಾರ ಜೈಲಿಗೆ ಜೈಲರ್‌ ಬರಲಿದ್ದಾರೆ. ರೇವಣ್ಣ ಪರ ವಕೀಲರಿಂದ ಜೈಲರ್‌ಗೆ ಬಿಡುಗಡೆ ಆದೇಶ ಪ್ರತಿ ನೀಡಿ ಹನ್ನೊಂದು ಗಂಟೆ ಬಳಿಕ ಬಿಡುಗಡೆ ಸಾಧ್ಯತೆ ಇದೆ. ಬಹುತೇಕ ಅಭಿಜಿನ್ ಮುಹೂರ್ತ 11.40ರ ಸಮಯದಲ್ಲಿ ಬಿಡುಗಡೆ ಸಾಧ್ಯತೆ ಇದೆ.

ರೇವಣ್ಣ ಬಿಡುಗಡೆ ಬಳಿಕ ನೇರವಾಗಿ ಪದ್ಮನಾಭ ನಗರಕ್ಕೆ ಆಗಮಿಸುವ ಸಾಧ್ಯತೆ ಇದೆ. ರೇವಣ್ಣ ಬಿಡುಗಡೆಯಿಂದ ಗೌಡರ ಕುಟುಂಬದಲ್ಲಿ ಸಂತೋಷ ಮೂಡಿದ್ದು, ಬಿಡುಗಡೆ ‌ಬಳಿಕ ತಂದೆ ದೇವೇಗೌಡರು, ಹೆಚ್‌ಡಿಕೆ ಸೇರಿ ಕುಟುಂಬ ಸದಸ್ಯರ ಜೊತೆಗೆ ರೇವಣ್ಣ ಚರ್ಚೆ ನಡೆಸುವ ಸಾಧ್ಯತೆ ಇದೆ. ಮಾಜಿ ಪಿಎಂ ಎಚ್.ಡಿ ದೇವೇಗೌಡರ ಆಶೀರ್ವಾದ ಪಡೆದು ಬಳಿಕ ಮುಂದಿನ ಕೆಲಸಗಳಿಗಾಗಿ ಹಾಸನ ಕಡೆ ಹೊರಡಲಿದ್ದಾರೆ.

ಹನ್ನೊಂದು ದಿನಗಳ ಸಂಕಷ್ಟದ ಮೂಡ್‌ನಿಂದ ಇಂದು ಹೊರಬಂದಿರುವ ದೇವೇಗೌಡರು, ನಿನ್ನೆ ರಾತ್ರಿ ಒಂದು ಗಂಟೆವರೆಗೂ ತಮ್ಮ ಮಕ್ಕಳೊಂದಿಗೆ ಹಲವು ವಿಚಾರಗಳನ್ನು ಚರ್ಚೆ ಮಾಡಿದ್ದಾರೆ. ಮಾಜಿ ಸಿಎಂ ಎಚ್‌ಡಿಕೆ ಸೇರಿದಂತೆ ದೇವೇಗೌಡರ ಪುತ್ರಿಯರು ಸಹ ಇದರಲ್ಲಿ ಭಾಗಿಯಾಗಿದ್ದರು. ಇಂದು ಮನೆಯಲ್ಲಿ ಹಬ್ಬದ ವಾತಾವರಣವಿದ್ದು, ನಿನ್ನೆ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದರು.

“ಪೆನ್ ಡ್ರೈವ್ ಪ್ರಕರಣದಿಂದ ಈಗಾಗಲೇ ನಮ್ಮ ಕುಟುಂಬದ ಮಾನ ಬೀದಿಗೆ ಬಂದಿದೆ. ಲೋಕಸಭೆ ‌ಚುನಾವಣೆ ಹೊತ್ತಿನಲ್ಲಿ ಇಕ್ಕಟ್ಟಿಗೆ ಸಿಲುಕಿದ್ದೇವೆ. ಈ ಹೊತ್ತಲ್ಲಿ ರಾಜಕೀಯ ಹೇಳಿಕೆ ಸೇರಿದಂತೆ ಯಾವುದಕ್ಕೂ ಹೇಳಿಕೆ ನೀಡಬೇಡಿ. ಹೆಚ್ಚು ಮಾತನಾಡಬೇಡಿ” ಎಂದು ದೇವೇಗೌಡರು ಮಕ್ಕಳಿಗೆ ಸೂಚನೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಬಹಳ ಎಚ್ಚರಿಕೆಯಿಂದ ಹೆಜ್ಜೆ ಇಡುವಂತೆ ಎಚ್ಚರಿಸಿದ್ದಾರೆ.

ಸರ್ಕಾರದ ವಿರುದ್ಧ ಯಾವ ಅಸ್ತ್ರ?

ದೇವೇಗೌಡರ ಐವತ್ತು ವರ್ಷಗಳ ಕಾಲದ ಘನತೆಯ ರಾಜಕೀಯ ಜೀವನಕ್ಕೆ ಪೆನ್‌ ಡ್ರೈವ್‌ ಪ್ರಕರಣದಿಂದ ಭಾರಿ ಪೆಟ್ಟು ಬಿದ್ದಿದೆ. ಕುಟುಂಬಕ್ಕೆ ಮುಜುಗರ ಸೃಷ್ಟಿಯಾಗಿದೆ. ಅವಮಾನಿತರಾದ ದೇವೇಗೌಡರು ರೇವಣ್ಣ ಜೈಲಿಗೆ ಹೋದ ಬಳಿಕ, ಎಂದೂ ಗಡ್ಡ ಬಿಡದವರು ಮೊದಲ ಬಾರಿಗೆ ದಾಡಿ ಬಿಟ್ಟಿದ್ದರು. ಡಿಕೆಶಿ ಹಾಗೂ ಸಿದ್ದರಾಮಯ್ಯ ತಮಗೆ ಸೃಷ್ಟಿಸಿರುವ ಅವಮಾನಕ್ಕೆ ಪ್ರತೀಕಾರ ಮಾಡಲು ಎಚ್‌ಡಿಡಿ ಕುಟುಂಬ ಕುದಿಯುತ್ತಿದೆ.

ಈ ನಿಟ್ಟಿನಲ್ಲಿ ತಂತ್ರ ರೆಡಿಯಾಗುತ್ತಿದ್ದು, ರಾಜಕೀಯ, ಸಾಮಾಜಿಕ ಎಲ್ಲ ನೆಲೆಗಳಲ್ಲೂ ಎದುರಾಳಿಗಳಿಗೆ ಕೌಂಟರ್‌ ಕೊಡಲು ಸಜ್ಜಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಮೂರು ಅಸ್ತ್ರಗಳು ತಯಾರಾಗುತ್ತಿವೆ ಎನ್ನಲಾಗಿದೆ.

ಅಸ್ತ್ರ – 1: ಡಿಕೆಶಿ ಸಿದ್ದರಾಮಯ್ಯ ವಿರುದ್ಧ ಪ್ರಯೋಗ

ಒಕ್ಕಲಿಗ ಸಮುದಾಯದ ಮುಂದೆ ಡಿಕೆಶಿಯನ್ನು ವಿಲನ್ ಮಾಡುವುದು, ದೇವೇಗೌಡರ ಫ್ಯಾಮಿಲಿಯನ್ನು ಜೈಲಿಗೆ ಕಳುಹಿಸಿದ್ದೇ ಡಿಕೆಶಿ ಹಾಗೂ ಸಿದ್ದರಾಮಯ್ಯ ಅಂತ ಬಿಂಬಿಸುವುದು ಈ ಅಸ್ತ್ರ. ಡಿಕೆಶಿಗೆ ದೇವೇಗೌಡರ ಕುಟುಂಬ ನೋಡಿದರೆ ಆಗಲ್ಲ. ಹೀಗಾಗಿ ಪೆನ್ ಡ್ರೈವ್ ಕೇಸ್‌ನಲ್ಲಿ ನಮ್ಮನ್ನು ಸಿಕ್ಕಿ ಹಾಕಿಸಿದ್ದಾರೆ. ಸಿದ್ದರಾಮಯ್ಯಗೆ ಒಕ್ಕಲಿಗ ಸಮುದಾಯ ಕಂಡರೆ ಆಗಲ್ಲ ಅಂತ ಬಿಂಬಿಸುವುದು, ರಾಜ್ಯಾದ್ಯಂತ ಸರ್ಕಾರದ ನಡೆ ವಿರುದ್ಧ ಮೈತ್ರಿ ಪಕ್ಷದ ಜತೆ ಜನಾಭಿಪ್ರಾಯ ಸಂಗ್ರಹಿಸುವುದು, ಇವರ ತಪ್ಪು ಮರೆ ಮಾಚಲು ಪೆನ್ ಡ್ರೈವ್ ಪ್ರಕರಣ ತಂದರು ಅಂತ ಪ್ರಚಾರ ಮಾಡುವುದು ಇತ್ಯಾದಿಗಳ ಮೂಲಕ ಮುಗಿಬೀಳುವುದು.

ಅಸ್ತ್ರ – 2: ಭ್ರಷ್ಟಾಚಾರದ ಪ್ರಸ್ತಾಪ

ಸರ್ಕಾರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ವಿಚಾರಗಳನ್ನು ಪ್ರಸ್ತಾಪ ಮಾಡಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವುದು, ಈ ಹಿಂದೆ ಸರ್ಕಾರದ ಸಚಿವರ ವರ್ಗಾವಣೆ ದಂಧೆ ಸಂಬಂಧ ಇದೆ ಎನ್ನಲಾದ ಪೆನ್ ಡ್ರೈವ್ ಅಸ್ತ್ರ ಪ್ರಯೋಗ ಮಾಡುವುದು ಪ್ಲಾನ್‌ನಲ್ಲಿದೆ.

ಅಸ್ತ್ರ – 3: ಕಾನೂನು ಅಸ್ತ್ರಗಳು

ಡಿಕೆಶಿ ವಿರುದ್ಧ ಇರುವ, ಕೇಂದ್ರ ತನಿಖಾ ಏಜೆನ್ಸಿಗಳ ಮುಂದೆ ದಾಖಲಾಗಿರುವ ಪ್ರಕರಣಗಳಿಗೆ ಮರುಜೀವ ಕೊಡಿಸುವುದು, ಡಿಕೆಶಿಗೆ ಐಟಿ, ಇಡಿ, ಸಿಬಿಐ ಸಂಕಷ್ಟ ಎದುರಾಗುವಂತೆ ನೋಡಿಕೊಳ್ಳುವುದು, ಈ ಬಗ್ಗೆ ಕೇಂದ್ರದ ಮುಂದೆ ಇನ್ನಷ್ಟು ದಾಖಲೆ ನೀಡಿ ಮೈತ್ರಿ ಪಕ್ಷದ ಬೆಂಬಲ ಪಡೆಯುವುದು ಈ ಪ್ಲಾನ್‌ನಲ್ಲಿದೆ.

ಇದನ್ನೂ ಓದಿ: HD Revanna Bail: ನಿನ್ನೆ ಜಾಮೀನು ಸಿಕ್ಕರೂ ಇಂದು ಸಂಜೆಯವರೆಗೆ ರೇವಣ್ಣ ಜೈಲಿನಲ್ಲಿರಬೇಕು!

Continue Reading

ಕರ್ನಾಟಕ

Prajwal Revanna Case: ರೇವಣ್ಣಗೆ ಜಾಮೀನು ಹಿನ್ನೆಲೆ ವಿದೇಶದಿಂದ ಪ್ರಜ್ವಲ್‌ ವಾಪಸ್?‌; ಕೋರ್ಟ್‌ಗೆ ಶರಣಾಗುವ ಸಾಧ್ಯತೆ

Prajwal Revanna Case: ಎಚ್.ಡಿ. ರೇವಣ್ಣಗೆ ಜಾಮೀನು ಸಿಕ್ಕ ಬಳಿಕ ನ್ಯಾಯಲಯದ ಮುಂದೆ ಹಾಜರಾಗುವಂತೆ ರೇವಣ್ಣ ಕುಟುಂಬದ ವಕೀಲರು ಸಲಹೆ ನೀಡಿದ್ದು, ಹೀಗಾಗಿ ಈ ವಾರದಲ್ಲಿಯೇ ಪ್ರಜ್ವಲ್‌ ರೇವಣ್ಣ ವಿದೇಶದಿಂದ ಬರುವ ಸಾಧ್ಯತೆಗಳಿವೆ.

VISTARANEWS.COM


on

Prajwal Revanna Case
Koo

ಬೆಂಗಳೂರು: ಮಾಜಿ ಸಚಿವ ರೇವಣ್ಣ ಅವರಿಗೆ ಜಾಮೀನು ಮಂಜೂರಾದ ಬೆನ್ನಲ್ಲೇ ಅಮ್ಮ-ಮಗ ಎಸ್ಐಟಿ ಮುಂದೆ ಹಾಜರಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ತಂದೆಗೆ ಜಾಮೀನು ಸಿಕ್ಕ ಹಿನ್ನೆಲೆಯಲ್ಲಿ ವಿದೇಶದಲ್ಲಿರುವ ಪ್ರಜ್ವಲ್‌ ರೇವಣ್ಣ(Prajwal Revanna Case), ನ್ಯಾಯಾಲಯದ ಮುಂದೆ ಶರಣಾಗುವ ಸಾಧ್ಯತೆ ಇದ್ದು, ಬಹುತೇಕ ಈ ವಾರದಲ್ಲೇ ವಿದೇಶದಿಂದ ಆಗಮಿಸಬಹುದು ಎನ್ನಲಾಗಿದೆ.

ಎಸ್ಐಟಿ ಮುಂದೆ ಬುಧವಾರ ಭವಾನಿ ರೇವಣ್ಣ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ. ಆದ್ದರಿಂದ ಬುಧವಾರ ಸಂಜೆ ಬೆಂಗಳೂರಿಗೆ ಬಂದು ಗುರುವಾರ ನ್ಯಾಯಾಲಯದ ಮುಂದೆ ಪ್ರಜ್ವಲ್ ಹಾಜರಾಗಲಿದ್ದಾರೆ ಎನ್ನಲಾಗಿದೆ. ರೇವಣ್ಣಗೆ ಜಾಮೀನು ಸಿಕ್ಕ ಬಳಿಕ ನ್ಯಾಯಲಯದ ಮುಂದೆ ಹಾಜರಾಗುವಂತೆ ರೇವಣ್ಣ ಕುಟುಂಬದ ವಕೀಲರು ಸಲಹೆ ನೀಡಿದ್ದು, ಹೀಗಾಗಿ ಈ ವಾರದಲ್ಲಿಯೇ ಪ್ರಜ್ವಲ್‌ ರೇವಣ್ಣ ವಿದೇಶದಿಂದ ಬರುವ ಸಾಧ್ಯತೆಗಳಿವೆ.

ಇದನ್ನೂ ಓದಿ | Prajwal Revanna Case: ರೇವಣ್ಣಗೆ ಜಾಮೀನು; ಹೊಳೆನರಸೀಪುರದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ ಅಭಿಮಾನಿಗಳು ವಶಕ್ಕೆ

ಹಾಸನ, ಹೊಳೆನರಸೀಪುರ ನಿವಾಸದಲ್ಲಿ ಎಫ್ಎಸ್ಎಲ್ ತಜ್ಞರ ಪರಿಶೀಲನೆ

ಹಾಸನ: ಪ್ರಜ್ವಲ್ ವಿರುದ್ಧದ ಅತ್ಯಾಚಾರ ಪ್ರಕರಣದ ತನಿಖೆಯನ್ನು ಎಸ್‌ಐಟಿ ಚುರುಕುಗೊಳಿಸಿದೆ. ಪ್ರಕರಣದ ಸಂಬಂಧ ಹೆಚ್ಚಿನ ಮಾಹಿತಿ ಕಲೆಹಾಕಲು ಹಾಸನ ಸಂಸದರ ನಿವಾಸ ಹಾಗೂ ಹೊಳೆನರಸೀಪುರದ ರೇವಣ್ಣ ಅವರ ನಿವಾಸದಲ್ಲಿ ಎಫ್‌ಎಸ್‌ಎಲ್ ತಂಡದೊಂದಿಗೆ ಎಸ್‌ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ಹಾಸನದ ಆರ್.ಸಿ.ರಸ್ತೆಯಲ್ಲಿರುವ ಸಂಸದರ ನಿವಾಸದಲ್ಲಿ ಮೂರು ಗಂಟೆಗೂ ಹೆಚ್ಚು ಕಾಲ ಪರಿಶೀಲನೆ ನಡೆಸಲಾಗಿದ್ದು, ಅತ್ಯಾಚಾರ ಆರೋಪ ಕುರಿತು ಅಗತ್ಯ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ. ನಂತರ ಹೊಳೆನರಸೀಪುರದ ರೇವಣ್ಣ ನಿವಾಸಕ್ಕೆ ಎಸ್ಐಟಿ ತಂಡ ತೆರಳಿದರು. ಹೊಳೆನರಸೀಪುರದ ಚೆನ್ನಾಂಬಿಕಾ ನಿವಾಸದಲ್ಲಿ ಇನ್ಸ್‌ಪೆಕ್ಟರ್ ಸ್ಚರ್ಣ ನೇತೃತ್ವದ ತಂಡ ಪರಿಶೀಲನೆ ನಡೆಸಿತು.

ಹಾಸನ ಸಂಸದರ ನಿವಾಸ ಹಾಗೂ ಹೊಳೆನರಸೀಪುರ ನಿವಾಸದಲ್ಲೂ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಸಂತ್ರಸ್ತ ಮಹಿಳೆ ದೂರು ನೀಡಿದ್ದರಿಂದ ಎರಡೂ ಕಡೆ ಅಧಿಕಾರಿಗಳು ಪರಿಶೀಲನೆ ನಡೆಸಿ, ಅಗತ್ಯ ಮಾಹಿತಿ ಕಲೆ ಹಾಕಿದ್ದಾರೆ.

Continue Reading

ಪ್ರಮುಖ ಸುದ್ದಿ

Sushil Kumar Modi : ಬಿಹಾರದ ಮಾಜಿ ಡಿಸಿಎಂ ಸುಶೀಲ್ ಕುಮಾರ್ ಮೋದಿ ನಿಧನ

VISTARANEWS.COM


on

Sushil Kumar Modi
Koo

ನವದೆಹಲಿ: ಬಿಹಾರದ ಮಾಜಿ ಉಪಮುಖ್ಯಮಂತ್ರಿ ಮತ್ತು ಬಿಜೆಪಿಯ ಹಿರಿಯ ಮುಖಂಡ ಸುಶೀಲ್ ಕುಮಾರ್ ಮೋದಿ (72) ಸೋಮವಾರ ನಿಧನನ ಹೊಂದಿದ್ದಾರೆ. ಸುಶೀಲ್ ಕುಮಾರ್ ಮೋದಿ ಅವರು ಕ್ಯಾನ್ಸರ್​​ ಸಮಸ್ಯೆಯಿಂದ ಬಳಲುತ್ತಿದ್ದರು. ತಮ್ಮ ಆರೋಗ್ಯ ಸ್ಥಿತಿಯಿಂದಾಗಿ 2024 ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಈ ವರ್ಷದ ಏಪ್ರಿಲ್​​ನಲ್ಲಿ ಘೋಷಿಸಿದ್ದರು. ಮಾಜಿ ರಾಜ್ಯಸಭಾ ಸಂಸದರಾಗಿದ್ದ ಅವರ ಪಾರ್ಥಿವ ಶರೀರವನ್ನು ನಾಳೆ (ಮೇ 14) ಪಾಟ್ನಾದ ರಾಜೇಂದ್ರ ನಗರ ಪ್ರದೇಶದಲ್ಲಿರುವ ಅವರ ನಿವಾಸಕ್ಕೆ ತರಲಾಗುವುದು ಎಂದು ಮೂಲಗಳು ತಿಳಿಸಿವೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ, ಬಿಹಾರದ ಉಪಮುಖ್ಯಮಂತ್ರಿಗಳಾದ ಸಾಮ್ರಾಟ್ ಚೌಧರಿ ಮತ್ತು ವಿಜಯ್ ಕುಮಾರ್ ಸಿನ್ಹಾ ಸೇರಿದಂತೆ ಹಲವಾರು ಬಿಜೆಪಿ ನಾಯಕರು ಸುಶೀಲ್ ಕುಮಾರ್ ಮೋದಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಪಕ್ಷದಲ್ಲಿ ನನ್ನ ಮೌಲ್ಯಯುತ ಸಹೋದ್ಯೋಗಿ ಮತ್ತು ದಶಕಗಳಿಂದ ನನ್ನ ಸ್ನೇಹಿತ ಸುಶೀಲ್ ಮೋದಿ ಜಿ ಅವರ ಅಕಾಲಿಕ ನಿಧನದಿಂದ ನಾನು ತೀವ್ರ ದುಃಖಿತನಾಗಿದ್ದೇನೆ. ಬಿಹಾರದಲ್ಲಿ ಬಿಜೆಪಿಯ ಏಳಿಗೆ ಮತ್ತು ಅದರ ಯಶಸ್ಸಿನ ಹಿಂದೆ ಅವರ ಕೊಡುಗೆ ಅಮೂಲ್ಯವಾಗಿದೆ. ತುರ್ತು ಪರಿಸ್ಥಿತಿಯನ್ನು ಬಲವಾಗಿ ವಿರೋಧಿಸಿದ ಅವರು ವಿದ್ಯಾರ್ಥಿ ರಾಜಕಾರಣದಿಂದ ತಮ್ಮನ್ನು ಪ್ರೇರಿತರಾಗಿದ್ದರು. ಅವರು ತುಂಬಾ ಶ್ರಮಜೀವಿ ಮತ್ತು ಸ್ನೇಹಪರ ಶಾಸಕ ಎಂದು ಹೆಸರುವಾಸಿಯಾಗಿದ್ದರು. ರಾಜಕೀಯಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಅವರ ತಿಳುವಳಿಕೆ ಬಹಳ ಆಳವಾಗಿತ್ತು. ಅವರು ಆಡಳಿತಗಾರರಾಗಿ ಪ್ರಶಂಸನೀಯ ಕೆಲಸವನ್ನೂ ಮಾಡಿದರು. ಜಿಎಸ್ಟಿ ಅಂಗೀಕಾರದಲ್ಲಿ ಅವರ ಸಕ್ರಿಯ ಪಾತ್ರವನ್ನು ಯಾವಾಗಲೂ ನೆನಪಿಸಿಕೊಳ್ಳಲಾಗುತ್ತದೆ. ಈ ದುಃಖದ ಸಮಯದಲ್ಲಿ ಅವರ ಕುಟುಂಬ ಮತ್ತು ಬೆಂಬಲಿಗರೊಂದಿಗೆ ನನ್ನ ಸಂತಾಪವಿದೆ. ಓಂ ಶಾಂತಿ! ಎಂದು ಪ್ರಧಾನಿ ಮೋದಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Tejasvi Surya: ಈ ದಲಿತ ನಾಯಕನ ಜತೆ ಚರ್ಚೆಗೆ ಬನ್ನಿ ರಾಹುಲ್‌ ಗಾಂಧಿ; ತೇಜಸ್ವಿ ಸೂರ್ಯ ಪಂಥಾಹ್ವಾನ!

ರಾಷ್ಟ್ರೀಯ ಜನತಾ ದಳ (ಆರ್​ಜೆಡಿ) ಮುಖಂಡ ತೇಜಸ್ವಿ ಯಾದವ್ ಕೂಡ ಎಕ್ಸ್ ನಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಸುಶೀಲ್ ಕುಮಾರ್ ಮೋದಿ ಯಾರು?

ಜನವರಿ 5, 1952 ರಂದು ಜನಿಸಿದ ಸುಶೀಲ್ ಕುಮಾರ್ ಮೋದಿ ಅವರು ಪಾಟ್ನಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ಕಾರ್ಯಕರ್ತನಾಗಿ ತಮ್ಮ ರಾಜಕೀಯ ಪ್ರಯಾಣವನ್ನು ಪ್ರಾರಂಭಿಸಿದರು, ಅಲ್ಲಿ ಅವರು 1973 ರಲ್ಲಿ ವಿದ್ಯಾರ್ಥಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು.

ತಮ್ಮ ಮೂರು ದಶಕಗಳ ರಾಜಕೀಯ ಜೀವನದಲ್ಲಿ ಸುಶೀಲ್ ಮೋದಿ ಅವರು ಶಾಸಕ, ಎಂಎಲ್ಸಿ ಮತ್ತು ಲೋಕಸಭೆ ಮತ್ತು ರಾಜ್ಯಸಭಾ ಸದಸ್ಯ ಸೇರಿದಂತೆ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಅವರು 2005 ರಿಂದ 2013 ರವರೆಗೆ ಮತ್ತು ಮತ್ತೆ 2017 ರಿಂದ 2020 ರವರೆಗೆ ಬಿಹಾರದ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು.

ಹಿರಿಯ ರಾಜಕಾರಣಿ 1990 ರಲ್ಲಿ ಪಾಟ್ನಾ ಸೆಂಟ್ರಲ್ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. 1996 ರಿಂದ 2004 ರವರೆಗೆ ರಾಜ್ಯ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿಯೂ ಸೇವೆ ಸಲ್ಲಿಸಿದರು.

2004 ರಲ್ಲಿ ಸುಶೀಲ್ ಮೋದಿ ಭಾಗಲ್ಪುರದಿಂದ ಲೋಕಸಭೆಗೆ ಆಯ್ಕೆಯಾಗುವ ಮೂಲಕ ರಾಷ್ಟ್ರ ರಾಜಕಾರಣಕ್ಕೆ ಪ್ರವೇಶಿಸಿದ್ದರು. ಆದಾಗ್ಯೂ, 2005 ರಲ್ಲಿ, ಅವರು ತಮ್ಮ ಲೋಕಸಭಾ ಹುದ್ದೆಗೆ ರಾಜೀನಾಮೆ ನೀಡಿ ವಿಧಾನ ಪರಿಷತ್ತಿಗೆ ಸೇರಿ ಬಿಹಾರದ ಉಪಮುಖ್ಯಮಂತ್ರಿಯ ಪಾತ್ರವನ್ನು ವಹಿಸಿಕೊಂಡಿದ್ದರು.

Continue Reading
Advertisement
pm narendra modi nomination varanasi
ಪ್ರಮುಖ ಸುದ್ದಿ4 mins ago

PM Narendra Modi: ವಾರಾಣಸಿಯಲ್ಲಿ ನರೇಂದ್ರ ಮೋದಿ ನಾಮಪತ್ರ ಅನುಮೋದಿಸುವ ನಾಲ್ವರು ಯಾರು?

karnataka Rain Effected
ಬೆಂಗಳೂರು13 mins ago

Karnataka Rain: ಮಿಡ್‌ನೈಟ್‌ ಮಳೆ ಅವಾಂತರ; ಮರಗಳು, ವಿದ್ಯುತ್‌ ಕಂಬಗಳು ಧರೆಗೆ, ಕುಸಿದು ಬಿದ್ದ ಮನೆ

Viral Video
ವೈರಲ್ ನ್ಯೂಸ್14 mins ago

Viral Video: ಛೇ..ಇವನೆಂಥಾ ಪಾಪಿ..! ನಾಯಿ ಮೇಲೆ ಪದೇ ಪದೇ ಹಲ್ಲೆ ನಡೆಸಿ ವಿಕೃತಿ

Salman Khan
ಬಾಲಿವುಡ್24 mins ago

Salman Khan: ಸಲ್ಮಾನ್‌ ಖಾನ್‌ ಮನೆ ಎದುರು ಫೈರಿಂಗ್‌ ಕೇಸ್‌; 6ನೇ ಆರೋಪಿಯ ಬಂಧನ

RCB Vs CSK
ಕ್ರೀಡೆ25 mins ago

RCB vs CSK: ಆರ್​ಸಿಬಿ ಪ್ಲೇ ಆಫ್​ ಹಾದಿಗೆ ಕೊಳ್ಳಿ ಇಡಲಿದೆಯೇ ಮಳೆ; ಹವಾಮಾನ ಇಲಾಖೆ ನೀಡಿದ ಮುನ್ಸೂಚನೆ ಏನು?

bomb hoax bengaluru
ಕ್ರೈಂ56 mins ago

Bomb Hoax: ಬೆಂಗಳೂರಿನ ಖಾಸಗಿ ಶಾಲೆಗೆ ಬಾಂಬ್ ಬೆದರಿಕೆ ಇಮೇಲ್, ತಪಾಸಣೆ

Team India Coach
ಕ್ರಿಕೆಟ್1 hour ago

Team India Coach: ಭಾರತ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಹುದ್ದೆಗೆ ಅರ್ಜಿ ಆಹ್ವಾನ; ಮೇ 27 ಕೊನೆಯ ದಿನ

Job Alert
ಉದ್ಯೋಗ1 hour ago

Job Alert: ಎಚ್ಎ‌ಎಲ್‌ನಿಂದ 200 ಅಪ್ರೆಂಟಿಸ್‌ಗಳ ನೇಮಕ; ಐಟಿಐ ಪಾಸಾದವರು ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಿ

Narendra Modi
ದೇಶ2 hours ago

Narendra Modi: ನಾಮಪತ್ರ ಸಲ್ಲಿಕೆಗೂ ಮುನ್ನ ಗಂಗಾರತಿ ಮಾಡಿದ ಮೋದಿ-ಇಲ್ಲಿದೆ ಲೈವ್‌

HD Deve gowda prajwal revanna case
ಪ್ರಮುಖ ಸುದ್ದಿ2 hours ago

‌Prajwal Revanna Case: ಜೀವನದಲ್ಲಿ ಮೊದಲ ಬಾರಿಗೆ ಗಡ್ಡ ಬಿಟ್ಟ ದೇವೇಗೌಡರು; ವೈರಿನಾಶಕ್ಕೆ ಶಪಥ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain Effected
ಬೆಂಗಳೂರು13 mins ago

Karnataka Rain: ಮಿಡ್‌ನೈಟ್‌ ಮಳೆ ಅವಾಂತರ; ಮರಗಳು, ವಿದ್ಯುತ್‌ ಕಂಬಗಳು ಧರೆಗೆ, ಕುಸಿದು ಬಿದ್ದ ಮನೆ

Dina Bhavishya
ಭವಿಷ್ಯ7 hours ago

Dina Bhavishya : ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡ್ಬಹುದು ಎಚ್ಚರ!

HD Revanna Bail Revanna will not leave the country condition imposed by the court
ಕ್ರೈಂ17 hours ago

HD Revanna Bail: ರೇವಣ್ಣ ದೇಶ ಬಿಡಂಗಿಲ್ಲ, ಕೆ.ಆರ್‌. ನಗರಕ್ಕೆ ಎಂಟ್ರಿ ಕೊಡಂಗಿಲ್ಲ! ಕೋರ್ಟ್‌ ವಿಧಿಸಿದ ಷರತ್ತು ಏನು?

HD Revanna Bail
ಕ್ರೈಂ17 hours ago

HD Revanna Bail: ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು; ಎಸ್‌ಐಟಿಗೆ ಮುಖಭಂಗ!

Prajwal Revanna Case Revanna bail plea to be heard Judge reprimands SIT cops for their behaviour
ಕ್ರೈಂ17 hours ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ವಿಚಾರಣೆ; ಎಸ್‌ಐಟಿ ಪೊಲೀಸರ ವರ್ತನೆಗೆ ಜಡ್ಜ್‌ ಗರಂ!

Karnataka Weather Forecast
ಮಳೆ18 hours ago

Karnataka Weather : ನಾಳೆ ಮುಕ್ಕಾಲು ಕರ್ನಾಟಕದಲ್ಲಿ ಬಿರುಗಾಳಿ ಜತೆಗೆ ವಿಪರೀತ ಮಳೆ

Modi Roadshow Live
ದೇಶ18 hours ago

Modi Roadshow Live: ವಾರಾಣಸಿಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ1 day ago

Karnataka Rain : ಕುರಿಗಾಹಿಗಳ ಪ್ರಾಣ ಕಸಿದ ಸಿಡಿಲು; 20ಕ್ಕೂ ಹೆಚ್ಚು ಕುರಿಗಳು ಸಾವು

karnataka weather forecast karnataka rains
ಮಳೆ1 day ago

Karnataka Weather : ವಾಯುಭಾರ ಕುಸಿತ; ಕರಾವಳಿ, ಮಲೆನಾಡು ಸೇರಿ ಹಲವೆಡೆ ಭಾರಿ ಮಳೆ ಎಚ್ಚರಿಕೆ

Dina Bhavishya
ಭವಿಷ್ಯ1 day ago

Dina Bhavishya : ಇಂದು ಹೂಡಿಕೆ ಮಾಡಿದರೆ ಗಳಿಸುವಿರಿ ಭಾರಿ ಲಾಭ; ಅನಿರೀಕ್ಷಿತ ಸುದ್ದಿಯಿಂದ ಸಂತಸ

ಟ್ರೆಂಡಿಂಗ್‌