Site icon Vistara News

ಸಿಲಿಕಾನ್‌ ಸಿಟಿಯಲ್ಲಿ ಪುಂಡರ ʻಕಾರುʼಬಾರು: ನಾಲ್ಕು ಕಾರುಗಳ ಗಾಜು ಪುಡಿ ಪುಡಿ

ಬೆಂಗಳೂರು: ಮನೆ ಮುಂದೆ ನಿಲ್ಲಿಸಿದ್ದ ನಾಲ್ಕು ಕಾರುಗಳು ಮೇಲೆ ಕಲ್ಲು ಎತತಿ ಹಾಕಿ ಕಿಡಿಗೇಡಿಗಳು ಅಟ್ಟಹಾಸ ಮೆರೆದಿರುವ ಘಟನೆ ನಗರದ ನ್ಯಾನಪ್ಪನಹಳ್ಳಿಯ ಸುಗಮಾ ಬಡಾವಣೆಯಲ್ಲಿ ನಡೆದಿದೆ.

ತಡರಾತ್ರಿ ದುಷ್ಕರ್ಮಿಗಳ ಗುಂಪೊಂದು ಮನೆ ಮುಂದೆ ನಿಲ್ಲಿಸಿದ್ದ ಕಾರುಗಳ ಗಾಜುಗಳ ಮೇಲೆ ಹಾಲೋಬ್ಲಾಕ್‌ ಎತ್ತಿ ಹಾಕಿ ಪುಂಡಾಟ ಮೆರೆದಿದ್ದಾರೆ. ಈ ಘಟನೆಯಲ್ಲಿ ವ್ಯಾಗನಾರ್‌, ಎರ್ಟಿಗಾ, ಇಟಿಯಾಸ್‌, ಲೋಗನ್‌ ಕಾರುಗಳು ಜಖಂ ಆಗಿವೆ.

ಪುಂಡರ ಈ ದುಷ್ಕೃತ್ಯದಿಂದ ಸುಗಮಾ ಬಡಾವಣೆ ನಿವಾಸಿಗಳು ಮನೆ ಮುಂದೆ ವಾಹನಗಳನ್ನು ನಿಲ್ಲಿಸಲು ಭಯ ಪಡುವಂತಾಗಿದೆ. ಈ ಸಂಬಂಧ ಹುಳಿಮಾವು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version