Site icon Vistara News

ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: ತುಟ್ಟಿಭತ್ಯೆ 2.75% ಹೆಚ್ಚಳ

Karnataka Election Results- 217 Crorepatis In 224 Member Karnataka Assembly

ಬೆಂಗಳೂರು: ಈಗಾಗಲೆ ದಿನನಿತ್ಯ ಪೆಟ್ರೋಲ್‌ ಡೀಸೆಲ್‌ ದರ ಹೆಚ್ಚಳದ ಜತೆಗೆ ಅಗತ್ಯ ವಸ್ತುಗಳ ಬೆಲೆ ಗಗನಮುಖಿ ಆಗಿರುವುದರಿಂದ ತತ್ತರಿಸಿರುವ ನಡುವೆ ರಾಜ್ಯ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿಯನ್ನು ನೀಡಿದೆ.

ರಾಜ್ಯ ಸರ್ಕಾರಿ ನೌಕರರ ತುಟ್ಟಿ ಭತ್ಯೆಯನ್ನು 2.75% ಹೆಚ್ಚಳ ಮಾಡುವ ಪ್ರಸ್ತಾವನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಪ್ಪಿಗೆ ಸೂಚಿಸಿದ್ದಾರೆ. ಇತ್ತೀಚೆಗಷ್ಟೆ ಕೇಂದ್ರ ಸರ್ಕಾರ ತನ್ನ ನೌಕರರಿಗೆ 3.0% ತುಟ್ಟಿಭತ್ಯೆ ಹಿನ್ನೆಲೆಯಲ್ಲಿ ರಾಜ್ಯ ನೌಕರರಿಗೂ ಈ ಸೌಲಭ್ಯ ಲಭಿಸಿರುವುದು ಸಂತಸಕ್ಕೆ ಕಾರಣವಾಗಿದೆ.

ಕಳೆದ ವಾರವಷ್ಟೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಪುಟ ಸಮಿತಿಯು ಕೇಂದ್ರ ಸರ್ಕಾರಿ ನೌಕರರಿಗೆ ಹಾಗೂ ಪಿಂಚಣಿದಾರರಿಗೆ 3.0% ತುಟ್ಟಿಭತ್ಯೆ ಹೆಚ್ಚಿಸುವ ನಿರ್ಧಾರ ಮಾಡಿತ್ತು. ಅಲ್ಲಿವರೆಗೆ ಮೂಲವೇತನದ 31% ಇದ್ದ ತುಟ್ಟಿಭತ್ಯೆ 34%ಕ್ಕೆ ಹೆಚ್ಚಳವಾದಂತಾಗಿತ್ತು.

ಕಾಲಕಾಲಕ್ಕೆ ಮಾರುಕಟ್ಟೆಯಲ್ಲಿ, ದಿನಬಳಕೆ ವಸ್ತುಗಳಲ್ಲಿ ಆಗುವ ಏರಿಳಿತಕ್ಕೆ ಅನುಗುಣವಾಗಿ ತುಟ್ಟಿಭತ್ಯೆಯನ್ನು ಸರಿಹೊಂದಿಸಲಾಗುತ್ತದೆ. ಕೇದ್ರ ನೌಕರರಿಗೆ ತುಟ್ಟಿಭತ್ಯೆ ಸಿಕ್ಕರೂ ತಮಗೆ ಲಭಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು. ಈ ಕುರಿತು ರಾಜ್ಯ ಸರ್ಕಾರಿ ನೌಕರರ ಸಂಘವು ಸರ್ಕಾರಕ್ಕೆ ಮನವಿ ಮಾಡಿತ್ತು.

ಇದೀಗ ಆದೇಶ ಹೊರಡಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ತುಟ್ಟಿಭತ್ಯೆಯನ್ನು 2.75% ಹೆಚ್ಚಳ ಮಾಡಲು ಒಪ್ಪಿದ್ದಾರೆ. ಇಲ್ಲಿವರೆಗೆ ಮೂಲ ವೇತನದ 24.5% ಇದ್ದ ತುಟ್ಟಿಭತ್ಯೆ ಈ ಆದೇಶದ ಮೂಲಕ 27.25% ಆಗಿದೆ. ತುಟ್ಟಿಭತ್ಯೆ ಹೆಚ್ಚಳ ಆದೇಶವು 2022ರ ಜನವರಿ ಒಂದರಿಂದಲೇ ಪೂರ್ವಾನ್ವಯವಾಗುವುದರಿಂದಾಗಿ, ಈಗಾಗಲೆ ಬೆಲೆ ಏರಿಕೆ ಬಿಸಿಗೆ ಒಳಗಾಗಿರುವ ನೌಕರರ ಕೈಗೆ ಒಂದಿಷ್ಟು ಹಣ ಲಭಿಸಲಿದೆ.

ತುಟ್ಟಿ ಭತ್ಯೆ ಹೆಚ್ಚಳದ ಕುರಿತು ಟ್ವೀಟ್‌ ಮಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಈ ನಿರ್ಧಾರದಿಂದ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ 1,447 ಕೋಟಿ ರೂ. ವ್ಯಯವಾಗಲಿದೆ. ಸದ್ಯದಲ್ಲೆ ಆದೇಶ ಮಾಡಲಾಗುತ್ತದೆ ಎಂದಿದ್ದಾರೆ.

ಮತ್ತಷ್ಟು ಓದಿಗೆ: ದೇಶದಲ್ಲಿ ಮತ್ತೆ ಏರಿದ ತೈಲ ದರ: ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ಬೆಲೆ ₹110ಗಳತ್ತ..!

Exit mobile version