Site icon Vistara News

ʻಹಿಂದೂ ಯುವಕರು ಅತ್ಯಾಚಾರ ಮಾಡುವ ಮನಸ್ಥಿತಿಯವರಲ್ಲ.. ಹೀಗಾಗಿ ಆಕೆ ಬಚಾವಾಗಿದ್ದಾಳೆʼ: ಸಿ.ಟಿ.ರವಿ ವಿವಾದಿತ ಹೇಳಿಕೆ

ಸಿ.ಟಿ.ರವಿ

ಬೆಂಗಳೂರು: ಮಂಡ್ಯದ ಮುಸ್ಕಾನ್‌ ಖಾನ್‌ ಅವತ್ತು ಸುರಕ್ಷಿತವಾಗಿ ಮನೆಗೆ ಹೋಗಲು ಅಲ್ಲಿದ್ದ ಹಿಂದೂ ಹುಡುಗರು ಕಾರಣ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ʻಹಿಂದೂ ಹುಡುಗರ‌ ಜಾಗದಲ್ಲಿ ಮುಸ್ಲಿಂ ಹುಡುಗರು, ಹಿಂದೂ ಹುಡುಗಿ ಇದ್ದಿದ್ದರೆ ಅವತ್ತು ಆಕೆ ಸುರಕ್ಷಿತವಾಗಿ ಮನೆಗೆ ಹೋಗುತ್ತಿರಲಿಲ್ವೇನೋ? ಯಾಕೆಂದರೆ ಹಿಂದೂ ಹುಡುಗರು ಆವೇಶದಿಂದ ಘೋಷಣೆ ಕೂಗಿರಬಹುದು. ಆದರೆ ಅತ್ಯಾಚಾರ ಮಾಡುವ ಮನಸ್ಥಿತಿಯವರಲ್ಲ. ಹಾಗಾಗಿ ಆಕೆ ಬಚಾವಾಗಿದ್ದಾಳೆʼ ಎಂದು ಸಿ.ಟಿ.ರವಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ʻಹಿಜಾಬ್ ವಿವಾದದ ಹಿಂದೆ ಬೇರೆಯದ್ದೇ ಸಂಚು ಇದೆ ಅನ್ನಿಸುತ್ತದೆ. ನೂರಾರು ಸಂಸ್ಕೃತಿ, ವೈವಿಧ್ಯತೆಯ ರಾಷ್ಟ್ರವಾದ ಭಾರತವನ್ನು ದುರ್ಬಲಗೊಳಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕುʼ ಎಂದು ಸಿ.ಟಿ.ರವಿ ಒತ್ತಾಯಿಸಿದ್ದಾರೆ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರ ವಿವಾದಿತ ಹೇಳಿಕೆಗೆ ಸದ್ಯ ಪ್ರತಿಪಕ್ಷಗಳು ಹಾಗೂ ಸಾರ್ವಜನಿಕ ವಲಯದಲ್ಲಿ ಭಾರಿ ವಿರೋಧ ವ್ಯಕ್ತವಾಗುತ್ತಿದೆ.

Exit mobile version