ಬೆಂಗಳೂರು: ಜಯನಗರದ ಮೊನಾರ್ಕ್ ಇಂಟರ್ ನ್ಯಾಷನಲ್ ಹೋಟೆಲ್ ಮ್ಯಾನೇಜರ್ ಹೋಟೆಲ್ ಮಾಲೀಕನಿಗೆ ₹2.4 ಲಕ್ಷ ಹಣ ವಂಚಿಸಿ ಪರಾರಿಯಾಗಿದ್ದಾನೆ. ಮೂಲತಃ ಅಸ್ಸಾಂನ ಜಬಿರ್ ಹುಸೇನ್ ಕಳೆದ ಮೂರು ವರ್ಷಗಳಿಂದ ಮೊನಾರ್ಕ್ ಇಂಟರ್ ನ್ಯಾಷನಲ್ ಹೋಟೆಲ್‌ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ.
ಬಿಲ್ಲಿಂಗ್ ಮಾಡುವ ವೇಳೆ ಆರೋಪಿ ಜಬಿರ್ ಹುಸೇನ್ ಹೋಟೆಲ್ ಬ್ಯಾಂಕ್ ಖಾತೆ ನೀಡುವ ಬದಲು ತನ್ನ ಬ್ಯಾಂಕ್ ಅಕೌಂಟ್ ನಂಬರ್ ಕೊಟ್ಟು ಗ್ರಾಹಕರಿಂದ ಹಣ ಪಡೆಯುತ್ತಿದ್ದ. ಹೀಗೆ ಗ್ರಾಹಕರಿಂದ ಕಲೆಕ್ಷನ್ ಆಗಿದ್ದ ಒಟ್ಟು ₹2 ಲಕ್ಷದ 40 ಸಾವಿರ ಹಣವನ್ನು ಆರೋಪಿ ಜಬಿರ್ ಹೋಟೆಲ್ ಮಾಲೀಕನಿಗೆ ನೀಡಿರಲಿಲ್ಲ.
ಏಪ್ರಿಲ್ 3ರ ಬೆಳಗ್ಗೆ ಟೀ ಕುಡಿದು ಬರುತ್ತೇನೆ ಎಂದು ಹೋಟೆಲ್‌ನಿಂದ ಹೊರಗಡೆ ಹೋದ ಆರೋಪಿ ಜಬಿರ್ ಹುಸೇನ್ ಪರಾರಿಯಾಗಿದ್ದಾನೆ. ಬಳಿಕ ಹೋಟೆಲ್ ಮಾಲೀಕ ಜಬಿರ್ ಮೊಬೈಲ್‌ಗೆ ಕರೆ ಮಾಡಿದಾಗ ಸ್ವಿಚ್ ಆಫ್ ಬಂದಿದೆ. ಕೂಡಲೇ ಮೊನಾರ್ಕ್ ಇಂಟರ್ ನ್ಯಾಷನಲ್ ಹೋಟೆಲ್ ಮಾಲೀಕ ಆರೋಪಿ ಜಬಿರ್ ಹುಸೇನ್ ವಿರುದ್ಧ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದನ್ನು ಓದಿ: ನ್ಯಾಯ ಪಡೆಯಲು ಅನ್ಯಾಯದ ಮಾರ್ಗ ಹಿಡಿದರು: ವೃದ್ಧನ ಮನೆಯಲ್ಲಿ ₹2 ಕೋಟಿ ಕದ್ದರು
ವಂಚಕ ಮ್ಯಾನೇಜರ್ ಜಬಿರ್ ಹೋಟೆಲ್‌ನಿಂದ ಹೊರ ಹೋಗುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಜಯನಗರ ಪೊಲೀಸರು ಆರೋಪಿ ಜಬಿರ್ ಹುಸೇನ್‌ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.