Site icon Vistara News

ನಿರುದ್ಯೋಗಕ್ಕೆ ರಾಜಕಾರಣಿಗಳೇ ಕಾರಣ: ಡಿ.ಕೆ. ಶಿವಕುಮಾರ್‌ ಪ್ರಶ್ನೆಗೆ Twitterನಲ್ಲಿ ಸ್ವಾರಸ್ಯಕರ ಉತ್ತರಗಳು !

Rakshit Shetty Richard Anthony Produce By Hombale

ಬೆಂಗಳೂರು: ನಿರುದ್ಯೋಗ ಸೃಷ್ಟಿಗೆ ರಾಜಕಾರಣಿಗಳ ಭ್ರಷ್ಟಾಚಾರ, ಎಲ್ಲವನ್ನೂ ಉಚಿತವಾಗಿ ನೀಡುವ ಯೋಜನೆಗಳು, ಕೈಗಾರಿಕೆಗಳಿಗೆ ಆದ್ಯತೆ ನೀಡದೇ ಇರುವುದೇ ಕಾರಣ. ಇವು ಸೇರಿ ಅನೇಕ ಉತ್ತರಗಳು ಲಭಿಸಿರುವುದು KPCC ಅಧ್ಯಕ್ಷ ಡಿ.ಕೆ. ಶಿವಕುಮಾರ್‌ (D.K. Shivakumar) ಪ್ರಶ್ನೆಗೆ Twitter ಬಳಕೆದಾರರಿಂದ ಬಂದಿರುವ ಉತ್ತರ.

“ಕರ್ನಾಟಕದಲ್ಲಿ ನಿರುದ್ಯೋಗಕ್ಕೆ ಬಹುದೊಡ್ಡ ಕಾರಣ ಏನಿರಬಹುದು? ಈ ಕುರಿತು ನಿಮ್ಮ ಅಭಿಪ್ರಾಯ ತಿಳಿಸಿ.” ಎಂದು ಶಿವಕುಮಾರ್‌ ಅವರು ಸೋಮವಾರ ಬೆಳಗ್ಗೆ ಟ್ವಿಟ್ಟರ್‌ನಲ್ಲಿ ಪ್ರಶ್ನೆ ಕೇಳಿದ್ದರು. ಇದಕ್ಕೆ ನೂರಾರು ಜನರು ಪ್ರತಿಕ್ರಿಯೆ ನೀಡಿದ್ದಾರೆ.

@Kavitha46728380 ಎನ್ನುವವರು ಪ್ರತಿಕ್ರಿಯಿಸಿ, ಯಾವ ದೇಶದಲ್ಲಿ ಶ್ರೀಮಂತ ರಾಜಕಾರಣಿಗಳು ಇರುತ್ತಾರೆ, ಆ ದೇಶದಲ್ಲಿ ನಿರುದ್ಯೋಗ ಮತ್ತು ಬಡತನ ಹೆಚ್ಚಾಗಿರುತ್ತದೆ. ಸಮಾಧಾನಕರ ಮತ್ತು ಸಂತಸದ ಸುದ್ದಿ ಏನೆಂದರೆ ನಮ್ಮ ದೇಶ ಬದಲಾಗುತ್ತಿದೆ, ಪ್ರಗತಿಯ ದಿಕ್ಕಿನಲ್ಲಿ ಸಾಗುತ್ತಿದೆ. ಸಾಮಾನ್ಯ ಭಾರತೀಯ ಸೋಂಬೇರಿ ಅಲ್ಲ, ದೇಶಕ್ಕೆ ತನ್ನ ಕೊಡುಗೆಯನ್ನು ಕೊಡಲು ಮರೆಯುವುದಿಲ್ಲ ಎಂದಿದ್ದಾರೆ.

@KvNarayanaswam3 ಅವರ ಪ್ರತಿಕ್ರಿಯಿಸಿ, ಮೊದಲು ನಿಮ್ಮಂತಹ ರಾಜಕಾರಣಿಗಳು ಪ್ರಮಾಣಿಕರಾಗಿ, ಆಡಳಿತದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡಿ ಮತದಾರರಿಗೆ ಆಮಿಷ ನೀಡಿ ಬೇಡಿ ಚುನಾವಣೆ ಸಂದರ್ಭದಲ್ಲಿ ಮಾತ್ರ ಪಕ್ಷದ ಚಿಹ್ನೆ ಇರಲಿ ಹೈಕಮಾಂಡ್ ಸಂಸ್ಕೃತಿಯನ್ನು ನಿರ್ಮೂಲನೆ ಮಾಡಿ ನಿಮ್ಮ ಪ್ರಶ್ನೆಗೆ ಉತ್ತರ ರಾಜಕಾರಣಿಗಳು ಹೇಗೆ ಶ್ರೀಮಂತರಾದರು ಎನ್ನುವುದೇ ಉತ್ತರ ಎಂದು ಹೇಳಿದ್ದಾರೆ.

ಇನ್ನೂ ಅನೇಕರು ನಿರುದ್ಯೋಗಕ್ಕೆ ತಮ್ಮದೇ ಕಾರಣಗಳನ್ನು ಮತ್ತು ಪರಿಹಾರಗಳನ್ನು ನೀಡಿದ್ದಾರೆ. ಅವುಗಳಲ್ಲಿ ಪ್ರಮುಖವಾದವನ್ನು ಪಟ್ಟಿ ಮಾಡುವುದಾದರೆ

ಹೆಚ್ಚಿನ ಓದಿಗಾಗಿ: ಸ್ವಾಮೀಜಿಗಳು ಭಿಷ್ಮ, ದ್ರೋಣರಂತೆ ಕಣ್ಮುಚ್ಚಿ ಕೂರಬಾರದು: ಧರ್ಮ ರಕ್ಷಣೆಗೆ ಧ್ವನಿ ಎತ್ತಲು ಡಿ.ಕೆ. ಶಿವಕುಮಾರ್‌ ಕರೆ

Exit mobile version