ಚಿಕ್ಕೋಡಿ: ಕೊಲೆಯಾದ ಸ್ಥಿತಿಯಲ್ಲಿ 17 ವರ್ಷದ ಬಾಲಕನ ಶವ (Dead Body Found) ಬಾವಿಯಲ್ಲಿ ಪತ್ತೆಯಾಗಿರುವುದು ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದ ಹೊರವಲಯದ ಲಾಲ್ಯಾನಕೋಡಿ ಬಳಿ ಕಂಡುಬಂದಿದೆ.
ವಿಜಯಪುರ ನಿವಾಸಿ ಕಾಮಪ್ಪ ಕುಂಚಿಕೊರವ(17) ಮೃತ ದುರ್ದೈವಿ. ಕೂದಲು ಆರಿಸಿ ಜೀವನ ಸಾಗಿಸುತ್ತಿದ್ದ ಬಾಲಕ, ಎರಡು ದಿನಗಳ ಹಿಂದೆ ಸ್ನೇಹಿತನ ಜತೆ ಹಾರೂಗೇರಿಗೆ ಬಂದಿದ್ದ. ಕೂದಲು ಆಯುವ ವೇಳೆ ಸ್ಥಳೀಯ ಕೂದಲು ಸಂಗ್ರಹಿಸುವವರರ ಜತೆ ಗಲಾಟೆಯಾಗಿದೆ ಎನ್ನಲಾಗಿದೆ. ನಮ್ಮ ಏರಿಯಾಗೆ ಬಂದು ಕೂದಲು ಏಕೆ ಸಂಗ್ರಹಿಸುತ್ತೀಯಾ ಎಂದು ಸ್ಥಳೀಯರು ಗಲಾಟೆ ಮಾಡಿದ್ದಾರೆ. ಇದೇ ವೇಳೆ ಕಾಮಪ್ಪನನ್ನು ಹತ್ಯೆಗೈದು ಬಾವಿಯಲ್ಲಿ ಬಿಸಾಕಿರುವ ಶಂಕೆ ವ್ಯಕ್ತವಾಗಿದೆ.
ಇದನ್ನೂ ಓದಿ | Gold Fruad : Hallmark ಚಿನ್ನಾಭರಣ ನೀಡಿ ಲೋನ್ ಪಡೆಯಲು ಯತ್ನ: SBI ಮ್ಯಾನೇಜರ್ ಜಾಣ್ಮೆ ಮುಂದೆ ನಡೆಯದ ಆಟ!
ತನ್ನ ಬಗ್ಗೆ ಕೆಟ್ಟದಾಗಿ ಮಾತಾಡಿದ್ದಕ್ಕೆ ಕತ್ತು ಕತ್ತರಿಸಿದ!
ಬೆಂಗಳೂರು: ಕೆಟ್ಟದಾಗಿ ಮಾತಾಡಿದ್ದಕ್ಕೆ ವ್ಯಕ್ತಿಯೊಬ್ಬ ಬೆಂಗಳೂರಲ್ಲಿ (Murder Case ) ಕೊಲೆಯಾಗಿ ಹೋಗಿದ್ದಾನೆ. ಫಾರುಕ್ ಮೃತಪಟ್ಟವನು. ಮುಬಾರಕ್, ಸುಹೇಲ್, ಆಲಿ ಅಕ್ರಮ್ ಬಂಧಿತ ಆರೋಪಿಗಳಾಗಿದ್ದಾರೆ.
ಆರೋಪಿಗಳು ಮತ್ತು ಕೊಲೆಯಾದವರು ಎಲ್ಲರೂ ಪರಿಚಿತರೇ ಆಗಿದ್ದಾರೆ. ಕೊಲೆಯಾದ ಫಾರುಕ್ ಸುಖಾಸುಮ್ಮನೆ ಸೋಹೆಲ್ ಎಂಬಾತನಿಗೆ ಬೆದರಿಕೆ ಹಾಕುತ್ತಿದ್ದ. ಸೋಹೆಲ್ ಗಾಂಜಾ ಮಾರಾಟ ಮಾಡದೆ ಇದ್ದರೂ, ಫಾರೂಕ್ ಗಾಂಜಾ ಮಾರಾಟ ಮಾಡುತ್ತಾನೆ ಎಂದು ಪೊಲೀಸರಿಗೆ ಹೇಳುತ್ತಿನಿ ಎಂದು ಹೆದರಿಸುತ್ತಿದ್ದ. ಜತೆಗೆ ಏರಿಯಾದಲ್ಲಿ ಸೋಹೆಲ್ ಕೆಟ್ಟವನು ಎಂಬಂತೆ ಬಿಂಬಿಸುತ್ತಿದ್ದ.
ಇದನ್ನೂ ಓದಿ: Road Romeo : ಹುಡುಗಿಯರಿಗೆ ಕರೆ ಮಾಡಿ ಕಾಡುತ್ತಿದ್ದ ರೋಮಿಯೊಗೆ ರೋಡಲ್ಲೇ ಗೂಸಾ; ವಿಡಿಯೊ ಕಾಲ್ ಮಾಡ್ಲಾ ಅಂತಿದ್ದ!
ಈ ವಿಚಾರವಾಗಿ ಸೋಹೆಲ್ ಕೋಪಗೊಂಡಿದ್ದ. ಹೀಗಾಗಿ ತನ್ನಿಬ್ಬರು ಸ್ನೇಹಿತರೊಂದಿಗೆ ಸೇರಿ ಈ ಫಾರುಕ್‌ನನ್ನು ಮುಗಿಸಲು ಪ್ಲ್ಯಾನ್ ಮಾಡಿದ್ದರು. ಅದರಂತೆ ಕಳೆದ 17 ರಂದು ಫಾರುಕ್‌ನನ್ನು ಆಟೋವೊಂದರಲ್ಲಿ ಕರೆದುಕೊಂಡು ಹೋಗಿ ಮನಬಂದಂತೆ ಥಳಿಸಿದ್ದಾರೆ. ಬಳಿಕ ಚಾಕುವಿನಿಂದ ಫಾರುಕ್‌ನ ಕತ್ತು ಕತ್ತರಿಸಿದ್ದಾರೆ.
ಹತ್ಯೆ ಮಾಡಿ ಎಸ್ಕೇಪ್ ಆದ ಮೂವರು ಮಾರನೇ ದಿನ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾರೆ. ಸದ್ಯ ಈ ಸಂಬಂಧ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ಫಾರುಕ್‌ನಿಂದ ಸಾಲಪಡೆದಿದ್ದ ಸುಹೇಲ್
ಫಾರುಕ್ ಬಳಿ 20 ಸಾವಿರ ರೂ. ಸಾಲವನ್ನು ಸುಹೇಲ್ ಪಡೆದುಕೊಂಡಿದ್ದ. ಸಾಲ ವಾಪಸ್ ಕೇಳುವ ನೆಪದಲ್ಲಿ ಫಾರುಕ್ ಹಾಗೂ ಆತನ ಸ್ನೇಹಿತ ಸದ್ದಾಂ ಸುಹೇಲ್‌ನ ಮೊಬೈಲ್ ಅನ್ನು ಕಿತ್ತುಕೊಂಡಿದ್ದ. ಆ ಮೊಬೈಲ್‌ನಲ್ಲಿ ಸುಹೇಲ್ ತಾಯಿಯ ಫೋಟೋ ಇದ್ದರಿಂದ ಮೊಬೈಲ್ ಕೊಡುವಂತೆ ಸಾಕಷ್ಟು ಬಾರಿ ಕೇಳಿದ್ದ. ಆದರೆ ಫಾರುಕ್ ಮೊಬೈಲ್ ಕೊಡದೇ ಸತಾಯಿಸಿದ್ದ.
ಇದನ್ನೂ ಓದಿ | Road Romeo : ಹುಡುಗಿಯರಿಗೆ ಕರೆ ಮಾಡಿ ಕಾಡುತ್ತಿದ್ದ ರೋಮಿಯೊಗೆ ರೋಡಲ್ಲೇ ಗೂಸಾ; ವಿಡಿಯೊ ಕಾಲ್ ಮಾಡ್ಲಾ ಅಂತಿದ್ದ!
ಈ ನಡುವೆ 20 ಸಾವಿರ ರೂ. ಸಾಲ ವಾಪಸ್ ಕೊಡು ಇಲ್ಲವಾದರೆ ಪೊಲೀಸರಿಗೆ ದೂರು ಕೊಡುತ್ತೇನೆ ಎಂದಿದ್ದ. ಫಾರುಕ್‌ಗೆ ಬೆದರಿಸಿ ವಾರ್ನ್ ಮಾಡಲು ಈ ಮೂವರು ಕರೆಸಿಕೊಂಡಿದ್ದರು. ಹೆದರಿಸಲು ಫಾರುಕ್ ಕೈಗೆ ಚಾಕು ಇರಿದಿದ್ದರು. ಆದರೆ ಆತ ತಿರುಗಿ ಬಿದ್ದಾಗ ಮಿಸ್ ಆಗಿ ಕುತ್ತಿಗೆಗೆ ತಾಗಿತ್ತು. ಇವನು ಬದುಕಿದರೂ ಕೂಡ ಪೊಲೀಸರು ಕೊಲೆ ಯತ್ನ ಪ್ರಕರಣ ದಾಖಲಿಸುತ್ತಾರೆ. ಅದರ ಬದಲು ಕೊಂದೇ ಬಿಡೋಣ ಎಂದು ನಿರ್ಧರಿಸಿ ಹತ್ಯೆ ಮಾಡಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ