Site icon Vistara News

ಅರ್ಧ ಅಡಿ ನೀರಿನಲ್ಲಿ 18ರ ಯುವಕನ ಶವ ಪತ್ತೆ, ಈಜು ಬರುತ್ತಿದ್ದ ಹುಡುಗ ಸತ್ತಿದ್ದು ಹೇಗೆ?

Nandish death

ದೊಡ್ಡಬಳ್ಳಾಪುರ: ಬೆಂಗಳೂರು ಹೊರವಲಯದ ದೊಡ್ಡಬಳ್ಳಾಪುರದ ದೊಡ್ಡ ಬೆಳವಂಗಲ ಬಳಿ ಅನುಮಾನಾಸ್ಪದ ಸಾವೊಂದು ಸಂಭವಿಸಿದೆ. ಇಲ್ಲಿ ಜಿಕ್ಕ ಹೆಜ್ಜಾಜ್ಜಿಯಲ್ಲಿರುವ ಕೆರೆಯಲ್ಲಿ ೧೮ ವರ್ಷದ ಯುವಕನ ಶವ ಪತ್ತೆಯಾಗಿದೆ. ಅಚ್ಚರಿ ಎಂದರೆ ಈ ಕೆರೆಯಲ್ಲಿ ಅರ್ಧ ಅಡಿ ನೀರೂ ಇರಲಿಲ್ಲ. ಅದರಲ್ಲೇ ಮುಳುಗಿ ಯುವಕ ಪ್ರಾಣ ಕಳೆದುಕೊಂಡಿದ್ದು ಹೇಗೆ ಎನ್ನುವುದು ಎಲ್ಲರ ಪ್ರಶ್ನೆ.

ದೊಡ್ಡಬಳ್ಳಾಪುರದ ಶಾಕಲ್ ದೇವನಪುರದ ನಿವಾಸಿಯಾಗಿರುವ ನಂದೀಶ್ (18) ಮೃತ ಯುವಕ. ಈತ ಚಿಕ್ಕ ಹೆಜ್ಜಾಜ್ಜಿಯಲ್ಲಿರುವ ಅಜ್ಜಿಮನೆಯಲ್ಲಿ ವಾಸವಾಗಿದ್ದ. ಅಲ್ಲೇ ಒಂದು ಗ್ಯಾರೇಜ್‌ನಲ್ಲಿ ಕೆಲಸ ಮಾಡಿಕೊಂಡಿದ್ದ.

ಇಷ್ಟೇ ನೀರಿರುವ ಕೆರೆಯಲ್ಲಿ ನಂದೀಶ್‌ ಸಾಯಲು ಸಾಧ್ಯವೇ ಎನ್ನುವುದು ಮನೆಯವರ, ಊರಿನವರ ಪ್ರಶ್ನೆ.

ಮಂಗಳವಾರ ಇಲ್ಲಿನ ಕೆರೆಯ ಏರಿ ಮೇಲೆ ಜನರು ಸಾಗುತ್ತಿದ್ದಾಗ ಒಂದು ಶವ ಕಂಡುಬಂದಿದೆ. ಬಳಿಗೆ ಹೋಗಿ ನೋಡಿದಾಗ ಕಂಡದ್ದು ನಂದೀಶ್‌ ಶವ. ಕೂಡಲೇ ಅವನನ್ನು ಎತ್ತಿ ಮೇಲೆ ತರಲಾಯಿತಾದರೂ ಅಷ್ಟು ಹೊತ್ತಿಗೆ ಪ್ರಾಣವೇ ಹೋಗಿತ್ತು.

ಅಚ್ಚರಿ ಎಂದರೆ, ಈ ಕೆರೆಯಲ್ಲಿ ನಂದೀಶ್‌ ಬಿದ್ದಿದ್ದ ಜಾಗದಲ್ಲಿ ಇದ್ದಿದ್ದು ಕೇವಲ ಅರ್ಧ ಅಡಿ ನೀರು. ಇದರಲ್ಲಿ ಬಿದ್ದು ಸಾಯಲು ಸಾಧ್ಯವೇ? ಅದರಲ್ಲೂ ನಂದೀಶ್‌ಗೆ ಈಜು ಬೇರೆ ಬರುತ್ತಿತ್ತು. ಹಾಗಾಗಿ ನೀರಲ್ಲಿ ಬಿದ್ದು ಸಾಯಲು ಸಾಧ್ಯವೇ ಎಂಬ ಪ್ರಶ್ನೆ ಎಲ್ಲರನ್ನೂ ಕಾಡಿದೆ. ಮನೆಯವರು ಕೂಡಾ ಇದೇ ಪ್ರಶ್ನೆಯನ್ನು ಎತ್ತಿದ್ದು ಸಮಗ್ರ ತನಿಖೆಗೆ ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಆಗಮಿಸಿರುವ ದೊಡ್ಡಬೆಳವಂಗಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆಗೆ ಮುಂದಾಗಿದ್ದಾರೆ.

ಕೆರೆಯ ದಂಡೆಯಲ್ಲಿ ಸೇರಿರುವ ಜನ

ಇದನ್ನೂ ಓದಿ| Rain News | ಹರಿಯುತ್ತಿರುವ ನೀರಲ್ಲಿ ಯುವಕರ ಹುಚ್ಚಾಟ; ಕೊಚ್ಚಿ ಹೋಗಿದ್ದ ಯುವಕ, ಬಾಲಕನ ರಕ್ಷಣೆ

Exit mobile version