ಬೆಂಗಳೂರು: ಪರೀಕ್ಷೆ ಮುಗಿಸಿ ರಜೆಯ ಮೋಜಿನಲ್ಲಿ ಇದ್ದವರಿಗೆ ಅಂತೂ ದ್ವಿತೀಯ ಪಿಯುಸಿ ಫಲಿತಾಂಶ (2nd puc result) ಪ್ರಕಟಗೊಂಡಿದೆ. ಈ ಬಾರಿ ಕೂಡ ಹೆಣ್ಣುಮಕ್ಕಳು ತಮ್ಮ ದಾಖಲೆಯನ್ನು ಬಿಟ್ಟುಕೊಡದೇ, ಮೇಲುಗೈ ಸಾಧಿಸಿದ್ದಾರೆ. ಮಲ್ಲೇಶ್ವರಂನಲ್ಲಿರುವ ಪಿಯು ಬೋರ್ಡ್ ನಲ್ಲಿ ಇಂದು ಬೆಳಗ್ಗೆ 11.30 ಗಂಟೆಗೆ ಪತ್ರಿಕಾಗೋಷ್ಠಿ ನಡೆಸಿದ ಶಿಕ್ಷಣ ಸಚಿವ ನಾಗೇಶ್ ಫಲಿತಾಂಶವನ್ನು ಪ್ರಕಟಿಸಿದರು.
ಇದನ್ನೂ ಓದಿ | ನದಿಯಲ್ಲಿ ಈಜಲು ಹೋಗಿದ್ದ ಇಬ್ಬರು ಪಿಯು ವಿದ್ಯಾರ್ಥಿಗಳು ನೀರು ಪಾಲು
ನಂತರ ಮಾತನಾಡಿದ ಸಚಿವರು, ಕೋವಿಡ್ ಸಮಯದಲ್ಲೂ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಯಾರು ಫಲಿತಾಂಶದಿಂದ ನಿರಾಸೆ ಆಗಬಾರದು ಎಂದು ಸಲಹೆ ನೀಡಿದ್ದಾರೆ. ಈ ಸಲವು ಬಾಲಕಿಯರೇ ಮೇಲುಗೈ ಸಾಧಿಸಿದ್ದು, ದಕ್ಷಿಣಕನ್ನಡ ಜಿಲ್ಲೆ ಮೊದಲು ಬಂದಿದ್ದು, ಈ ವರ್ಷವೂ ಚಿತ್ರದುರ್ಗ ಕೊನೆ ಸ್ಥಾನದಲ್ಲಿದೆ. ಏಪ್ರಿಲ್ 22ರಿಂದ ಆರಂಭವಾಗಿ ಮೇ 18ಕ್ಕೆ ಪರೀಕ್ಷೆ ನಡೆದಿತ್ತು. .ಈ ಸಾಲಿನಲ್ಲಿ ಒಟ್ಟು 6,83,563 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿದ್ದು, ಇದರಲ್ಲಿ 4,22,966 ಹಾಜರಾಗಿದ್ದಾರೆ.
ವಿದ್ಯಾರ್ಥಿಗಳ ವಿವರ
ವಿದ್ಯಾರ್ಥಿಗಳು- ನೋಂದಾಣಿ- ಹಾಜರು-ಶೇಕಡವಾರು
ಹೊಸಬರು ವಿದ್ಯಾರ್ಥಿಗಳು 5,99,794- 4,02,697- 67.14%
ಪುನರಾವರ್ತಿತ ವಿದ್ಯಾರ್ಥಿಗಳು- 61,838- 14,403- 23.29%
ಖಾಸಗಿ ವಿದ್ಯಾರ್ಥಿಗಳು -21,931- 5,866- 26.75%
ಒಟ್ಟಾರೆ 6,83,563 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿದ್ದು, ಇದರಲ್ಲಿ 4,22,966 ಹಾಜರಾಗಿದ್ದಾರೆ. ಈ ಸಲ ಶೇಕಡವಾರು ಫಲಿತಾಂಶ ಶೇ. 61.88ರಷ್ಟಿದೆ. ಇಲಾಖೆಯ ಅಧಿಕೃತ ವೆಬ್‌ಸೈಟ್ www.karresults.nic.in ನಲ್ಲಿ 11.30ರ ನಂತರ ಫಲಿತಾಂಶ ಲಭ್ಯವಿರಲಿದೆ. ವಿದ್ಯಾರ್ಥಿಗಳು ತಮ್ಮ ಹಾಲ್ ಟಿಕೆಟ್ ನಂಬರ್ ಹಾಕಿ ಫಲಿತಾಂಶ ನೋಡಬಹುದು.
ವರ್ಷವಾರು ಶೇಕಡವಾರು ಫಲಿತಾಂಶ ಮಾಹಿತಿ ಹೀಗಿದೆ
ವರ್ಷ- ಶೇಕಡವಾರು ಫಲಿತಾಂಶ
2018- ಶೇ.59.56%
2019- ಶೇ.61.73 %
2020-21 ಶೇ.- ಕೋವಿಡ್ ಕಾರಣದಿಂದ ಪರೀಕ್ಷೆ ರದ್ದು
2021-22- 61.88%
2021-22ನೇ ಸಾಲಿನ ಫಲಿತಾಂಶ
ಜಿಲ್ಲೆಯ ಹೆಸರು | ಶೇಕಡವಾರು |
ದಕ್ಷಿಣ ಕನ್ನಡ | 88.02% |
ಉಡುಪಿ | 86.38% |
ವಿಜಯಪುರ | 77.14% |
ಬೆಂಗಳೂರು ದಕ್ಷಿಣ | 76.24% |
ಚಿತ್ರದುರ್ಗ | 49.31% |
ಉತ್ತರ ಕನ್ನಡ | 74.33 |
ಕೊಡಗು | 73.22 |
ಬೆಂಗಳೂರು ಉತ್ತರ | 72.01 |
ಶಿವಮೊಗ್ಗ | 70.14 |
ಚಿಕ್ಕಮಗಳೂರು | 69.42 |
ಬಾಗಲಕೋಟೆ | 68.69 |
ಚಿಕ್ಕೋಡಿ | 68.00 |
ಬೆಂಗಳೂರು ಗ್ರಾಮಾಂತರ | 67.86 |
ಹಾಸನ | 67.28 |
ಹಾವೇರಿ | 66.64 |
ಧಾರವಾಡ | 65.66 |
ಚಿಕ್ಕಬಳ್ಳಾಪುರ | 64.49 |
ಮೈಸೂರು | 64.45 |
ಚಾಮರಾಜನಗರ | 63.02 |
ದಾವಣಗೆರೆ | 62.72 |
ಕೊಪ್ಪಳ | 62.04 |
ಬೀದರ್ | 60.78 |
ಗದಗ | 60.63 |
ಯಾದಗಿರಿ | 60.59 |
ಕೋಲಾರ | 60.41 |
ರಾಮನಗರ | 60.22 |
ಬೆಳಗಾವಿ | 59.88 |
ಕಲಬುರಗಿ | 59.17 |
ತುಮಕೂರು | 58.90 |
ಮಂಡ್ಯ | 58.77 |
ರಾಯಚೂರು | 57.93 |
ಬಳ್ಳಾರಿ | 55.48 |
ಚಿತ್ರದುರ್ಗ | 49.31 |
ವಿಭಾಗವಾರು ಮಾಹಿತಿ
ವಿಭಾಗ- ನೋಂದಾಣಿ- ಹಾಜರು
ಕಲಾ ವಿಭಾಗ- 2,27,929-1,11,032 (48.71%)
ವಿಜ್ಞಾನ ವಿಭಾಗ- 2,10,284- 1,52,525 (72.53)
ವಾಣಿಜ್ಯ ವಿಭಾಗ- 2,45,350- 1,59,409 ( 64.97)
2nd puc ಟಾಪರ್ಸ್ ಇವರೇ ನೋಡಿ
ಪ್ರತಿ ವರ್ಷದಂತೆ ಈ ವರ್ಷವು ಬಾಲಕಿಯರೇ ಮುಂದಿದ್ದು, ಟಾಪರ್ಸ್ ವಿಷಯದಲ್ಲೂ ಹೆಣ್ಣು ಮಕ್ಕಳೇ ಮೊದಲಿಗರು. ಕಲಾ ವಿಭಾಗದ ಶ್ವೇತಾ ಭೀಮಾ ಶಂಕರ್, ವಾಣಿಜ್ಯ ವಿಭಾಗದ ನೀಲು ಸಿಂಗ್ ಹಾಗೂ ವಿಜ್ಞಾನ ವಿಭಾಗದಲ್ಲಿ ಸಿರ್ಮನ್ ಶೇಷಾ ರಾವ್, ಆರ್.ವಿ ದ್ವಿತೀಯ ಪಿಯುಸಿ ಟಾಪರ್ಸ್ ಆಗಿದ್ದಾರೆ. ಈ ಸಲ 600ಕ್ಕೆ 600 ಅಂಕಗಳನ್ನು ಯಾವ ವಿದ್ಯಾರ್ಥಿಯು ಗಳಿಸಿಲ್ಲ, 598 ಗರಿಷ್ಠ ಅಂಕವಾಗಿದೆ. ಬೆಂಗಳೂರಿನ ಆರ್.ವಿ.ಪಿಯು ಕಾಲೇಜ್‌ನ ವಿಜ್ಞಾನ ವಿಭಾಗದ ವಿದ್ಯಾರ್ಥಿ ಸಿರ್ಮನ್ ಶೇಷಾ ರಾವ್ ಎಂಬುವವರು 600ಕ್ಕೆ 598 ಗಳಿಸಿ ಮೊದಲ ರ‍್ಯಾಂಕ್ ಗಳಿಸಿದ್ದಾರೆ. ವಾಣಿಜ್ಯ ವಿಭಾಗದಿಂದ ಬೆಂಗಳೂರಿನ ಬಿಜಿಎಸ್ ಪಿಯು ಕಾಲೇಜ್‌ನ ನೀಲು ಸಿಂಗ್ 596 ಅಂಕ ಗಳಿಸಿ ಎರಡನೇ ರ‍್ಯಾಂಕ್ ಹಾಗೂ ಇವರೊಂದಿಗೆ ಆಕಾಶ್ ದಾಸ್,ನೇಹಾ. ಬಿ.ಆರ್,ಮಾನವ್ ವಿನಯ್ ಕೇಜ್ರಿವಾಲ್ ಕೂಡ 596 ಅಂಕ ಗಳಿಸಿದ್ದಾರೆ. ಬಳ್ಳಾರಿಯ ಹಿಂದೂ ಪಿಯು ಕಾಲೇಜ್ ಕಲಾ ವಿಭಾಗದ ವಿದ್ಯಾರ್ಥಿನಿ ಶ್ವೇತಾ ಭೀಮಾ ಶಂಕರ್ 600ಕ್ಕೆ 594 ಅಂಕ ಗಳಿಸಿ ಮೂರನೇ ರ‍್ಯಾಂಕ್ ಪಡೆದಿದ್ದಾರೆ.
ಇದನ್ನೂ ಓದಿ | ಎಕ್ಸಾಂ ಟೆನ್ಷನ್, ಹಿಜಾಬ್ ಕನ್ಫ್ಯೂಷನ್ ನಡುವೆ ನಡೆದ ಸಿಇಟಿ ಪರೀಕ್ಷೆ