Site icon Vistara News

ರಾಮನಗರದಲ್ಲಿ ಈಜಲು ಹೋದ ಬೆಂಗಳೂರಿನ ಮೆಡಿಕಲ್ ವಿದ್ಯಾರ್ಥಿ ನೀರುಪಾಲು

students missing

ರಾಮನಗರ: ಈಜಲು ಹೋಗಿದ್ದ ಮೂವರು ಮೆಡಿಕಲ್ ವಿದ್ಯಾರ್ಥಿಗಳಲ್ಲಿ ಒಬ್ಬಾತ ನೀರುಪಾಲಾಗಿದ್ದಾನೆ.

ಕನಕಪುರದ ಮಾವತ್ತೂರು ಕೆರೆಗೆ ಈಜಲು ಮೂವರು ವಿದ್ಯಾರ್ಥಿಗಳು ತೆರಳಿದ್ದರು. ಮಾವತ್ತೂರು ಕೆರೆ ಬಳಿ ಇವರು ಬಂದಿದ್ದ ಬೈಕ್ ಪತ್ತೆಯಾಗಿದೆ. ಈ ಮೂವರೂ ಬೆಂಗಳೂರಿನ ದಯಾನಂದ ಸಾಗರ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ. ನೀರುಪಾಲಾದ ವಿದ್ಯಾರ್ಥಿಯನ್ನು ಸಚಿನ್ (26) ಎಂದು ಗುರುತಿಸಲಾಗಿದೆ. ಉಳಿದ ಇಬ್ಬರೆಂದರೆ ಜಾವೀದ್ ಅಹಮದ್ ಮುಲ್ಲಾ(26) ಮತ್ತು ನಿರಂಜನ್(26).

ನಿನ್ನೆ ಮಧ್ಯಾಹ್ನ ಈ ವಿದ್ಯಾರ್ಥಿಗಳು ಕಾಲೇಜಿನಿಂದ ಹೊರಹೋಗಿದ್ದರು. ಈಜಲೆಂದು ಕೆರೆಗೆ ಇಳಿದಾಗ ಮುಳುಗಿದ್ದಾನೆ ಎನ್ನಲಾಗಿದೆ. ಅಗ್ನಿಶಾಮಕ ಸಿಬ್ಬಂದಿಯಿಂದ ಶೋಧ ಕಾರ್ಯ ನಡೆದಿದ್ದು, ಕನಕಪುರ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ| Rain News | ರಾಮನಗರದಲ್ಲಿ ಮಳೆ ಅಬ್ಬರ: ಅರ್ಕಾವತಿ ನದಿ ರಭಸಕ್ಕೆ ಕೊಚ್ಚಿಹೋದ ಹರಿಸಂದ್ರ ಸೇತುವೆ

Exit mobile version