ಬೆಂಗಳೂರು: ಕರೊನಾ ಸೋಂಕು ಸರಿಯುತ್ತಲೆ ತೆರಿಗೆ ಸಂಗ್ರಹಣೆಯೂ ಉತ್ತಮವಾಗುತ್ತಿದೆ ಎನುತ್ತಿರುವಾಗಲೆ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಮತ್ತೊಂದು ಸಿಹಿ ಸುದ್ದಿ ನೀಡಿದೆ. ರಾಜ್ಯಗಳು ಉತ್ಪನ್ನಗಳ ರಫ್ತು ಸಾಮರ್ಥ್ಯವನ್ನು ತಿಳಿಸುವ ಎಕ್ಸ್‌ಪೋರ್ಟ್ ಪ್ರಿಪೇರ್ಡ್‌ನೆಸ್ ಸೂಚ್ಯಂಕ-2021ನ್ನು ಬಿಡುಗಡೆ ಮಾಡಿದೆ.
ಎರಡನೇ ವರ್ಷದ ಈ ಸೂಚ್ಯಂಕದಲ್ಲಿ ಕರ್ನಾಟಕ ಒಟ್ಟಾರೆ ರ್ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನ ಪಡೆದಿದೆ. ಒಟ್ಟು 78.86% ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ, 77.14%ಅಂಕ ಪಡೆದ ಮಹಾರಾಷ್ಟ್ರ ಇದೆ. 61.72% ಅಂಕ ಪಡೆದ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿದೆಯಲ್ಲ ಇದೇ ನೊ ದೊಡ್ಡದು ಎನ್ನಿಸಬಹುದಾದರೂ, ಕಳೆದ ವರ್ಷ ಕರ್ನಾಟಕ ಒಂಭತ್ತನೇ ಸ್ಥಾನದಲ್ಲಿತ್ತು ಎನ್ನುವುದು ಗಮನಾರ್ಹ. ಒಂದು ವರ್ಷದ ಅವಧಿಯಲ್ಲಿ ರಾಜ್ಯ ಆರು ಸ್ಥಾನ ಮೇಲೇರಿದೆ.
ನಾಲ್ಕು ಆಧಾರ ಸ್ಥಂಭಗಳು
ಎಕ್ಸ್‌ಪೋರ್ಟ್ ಪ್ರಿಪೇರ್ಡ್‌ನೆಸ್ ಸೂಚ್ಯಂಕ ಘೋಷಣೆ ಮಾಡಲು ಒಟ್ಟು ನಾಲ್ಕು ಅಂಶಗಳನ್ನ ಪರಿಗಣಿಸಲಾಗುತ್ತದೆ. ರಫ್ತು ಕುರಿತ ನೀತಿ, ಉದ್ಯಮ ವಾತಾವರಣ, ರಫ್ತು ವಾತಾವರಣ ಹಾಗೂ ರಫ್ತು ಸಾಧನೆ. ಇದರ ಜತೆಗೆ ರಫ್ತು ಉತ್ತೇಜನ ನೀತಿ, ಅಂತಾರಾಷ್ಟ್ರೀಯ ನೀತಿ, ಮೂಲ ಸೌಕರ್ಯದಂತಹ 11 ಉಪ ಅಂಶಗಳನ್ನು ಪರಿಗಣಿಸಿ ಅದರ ಆಧಾರದಲ್ಲಿ ಸೂಚ್ಯಂಕ ನಗದಿ ಮಾಡಲಾಗುತ್ತದೆ.
ಕರ್ನಾಟಕವು ಕಳೆದ ವರ್ಷಕ್ಕಿಂತ ಆರು ಸ್ಥಾನ ಮೇಲೆ ಏರಿರುವುದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹರ್ಷ ವ್ಯಕ್ತಪಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಕರ್ನಾಟಕ ಇಷ್ಟು ದೊಡ್ಡ ಜಿಗಿತ ಕಂಡಿರುವುದು ಸಂತಸವಾಗಿದೆ. ಆತ್ಮನಿರ್ಭರ ಭಾರತಕ್ಕಾಗಿ ಬಿಜೆಪಿ ಸರ್ಕಾರವು ನಿರಂತರ ಶ್ರಮಿಸುತ್ತಿರುವುದನ್ನು ಈ ಸೂಚ್ಯಂಕ ಪ್ರತಿಬಿಂಬಿಸಿದೆ ಎಂದು ಹೇಳಿದ್ದಾರೆ..
ಎಕ್ಸ್‌ಪೋರ್ಟ್ ಪ್ರಿಪೇರ್ಡ್‌ನೆಸ್ ಸೂಚ್ಯಂಕ-2021
ರಾಜ್ಯ ಅಂಕ
- ಗುಜರಾತ್ 78.86%
- ಮಹಾರಾಷ್ಟ್ರ 77.14%
- ಕರ್ನಾಟಕ 61.72%
- ತಮಿಳುನಾಡು 56.84%
- ಹರ್ಯಾಣ 53.20%
- ಉತ್ತರಪ್ರದೇಶ 51.09%
- ಮಧ್ಯಪ್ರದೇಶ 51.03%
- ಪಂಜಾಬ್ 50.99%
- ಆಂಧ್ರಪ್ರದೇಶ 47.92%
- ತೆಲಂಗಾಣ 47.92%
- ರಾಜಸ್ಥಾನ 47.13%