Site icon Vistara News

Video: ಮೈಸೂರಿನಲ್ಲಿ ಕೊಂಡ ಹಾಯುವಾಗ ಬಿದ್ದು ಗಾಯಗೊಂಡ ಭಕ್ತ

ಮೈಸೂರು: ಧಾರ್ಮಿಕ ಆಚರಣೆಗಳ ವೇಳೆ ಭಕ್ತರು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಮಾತಿಗೆ ಪುಷ್ಠಿಯೆನ್ನುವಂತೆ ತಿ.ನರಸೀಪುರ ತಾಲೂಕಿನ ರಂಗಸಮುದ್ರ ಗ್ರಾಮದಲ್ಲಿ ಕೊಂಡ ಹಾಯುವ ವೇಳೆ ಭಕ್ತನೊಬ್ಬ ಆಯತಪ್ಪಿ ಬಿದ್ದು ಗಾಯಗೊಂಡಿರುವ ಘಟನೆ ನಡೆದಿದೆ.

ಗ್ರಾಮದ ಹುಚ್ಚಗಮ್ಮ ದೇವಿ ಮತ್ತು ಲಕ್ಷ್ಮೀದೇವಿ ದೇವಸ್ಥಾನವಿದೆ. ಜಾತ್ರೆಯ ಸಂದರ್ಭದಲ್ಲಿ ಇತರೆ ಆಚರಣೆಗಳ ಜತೆಗೆ ಕೊಂಡ ಹಾಯುವ ಸಂಪ್ರದಾಯವಿದೆ. ಮೂವತ್ತು ಅಡಿಗೂ ಉದ್ದದ ಸ್ಥಳದಲ್ಲಿ ಮರದ ತುಂಡುಗಳನ್ನು ಸೇರಿಸಿ, ಧಾರ್ಮಿಕ ವಿಧಿವಿಧಾನಗಳ ಜತೆಗೆ ಬೆಂಕಿ ಹಚ್ಚಲಾಗುತ್ತದೆ. ಅದು ಉರಿದ ನಂತರ ಕೆಂಡದ ಮೇಲೆ ಭಕ್ತರು ಬರಿಗಾಲಿನಲ್ಲಿ ನಡೆದು ಹರಕೆ ತೀರಿಸುತ್ತಾರೆ.

ಸೋಮವಾರ ತಡರಾತ್ರಿ ಕೊಂಡ ಹಾಯುವ ವೇಳೆ ಮನು ಎಂಬ ಹೆಸರಿನ ಭಕ್ತ ಕೊಂಡ ಹಾಯುವಾಗ ಸಾಕಷ್ಟು ದೂರ ಚಲಿಸಿ ನಡುವಿನಲ್ಲಿ ಆಯತಪ್ಪಿ ಬಿದ್ದಿದ್ದಾನೆ. ಕೂಡಲೆ ಅಕ್ಕಪಕ್ಕದಲ್ಲಿದ್ದ ಗ್ರಾಮಸ್ಥರು ನೆರವಿಗೆ ಧಾವಿಸಿ ರಕ್ಷಿಸಿದ್ದಾರೆ. ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

https://vistaranews.com/wp-content/uploads/2022/05/jatre.mp4
Exit mobile version