ಬೆಂಕಿ ಬಸಣ್ಣ, ನ್ಯೂಯಾರ್ಕ್
ನ್ಯೂಯಾರ್ಕ್ ರಾಜ್ಯದಲ್ಲಿ ಭಾರತದ ಸ್ವಾತಂತ್ರ್ಯೋತ್ಸವ (Independence Day) ಕಲರವ. ಒಂದೆಡೆ ಬೈಕ್ ಪರೇಡ್, ಮತ್ತೊಂದೆಡೆ ತ್ರಿವರ್ಣ ಅಲಂಕಾರ ಭೂಷಿತ ಶಿವಲಿಂಗ, ಮಗದೊಂದೆಡೆ ಮನೆಯ ಮುಂದೆ ಅಂಗಳದಲಿ ಭಾರತೀಯ ರಾಷ್ಟ್ರಧ್ವಜ ಮೂಡಿದೆ.
ಇಷ್ಟೆಲ್ಲ ಸಂಭ್ರಮವನ್ನು ಅಲ್ಬನಿಯಲ್ಲಿ ಇರುವ ಅನಿವಾಸಿ ಭಾರತೀಯರು ಆಗಸ್ಟ್ 15ರ ಸೋಮವಾರ ಭಾರತದ 75ನೇ ಸ್ವಾತಂತ್ರ್ಯೋತ್ಸವವನ್ನು ವಿಭಿನ್ನ ರೀತಿಯಲ್ಲಿ ಆಚರಿಸಿದರು. ಭಾರತದ ತಿರಂಗ ಧ್ವಜ ಮತ್ತು ಅಮೆರಿಕದ ಧ್ವಜಗಳನ್ನು ಬೈಕ್‌ಗಳಿಗೆ ಕಟ್ಟಿ ಪರೇಡ್ ನಡೆಸಿದ್ದಾರೆ.
ಮಹಾಲಿಂಗಕ್ಕೆ ತ್ರಿವರ್ಣಗಳಿಂದ ಅಲಂಕಾರ
ಅಲ್ಬನಿ ಹಿಂದು ಟೆಂಪಲ್‌ನ ಶಿವಲಿಂಗವನ್ನು ಕೇಸರಿ, ಬಿಳಿ, ಹಸಿರು ಬಣ್ಣಗಳಿಂದ ಅಲಂಕರಿಸಿ ಭಾರತದ ಧ್ವಜದೊಂದಿಗೆ ಸಿಂಗರಿಸಲಾಗಿತ್ತು. ಇಲ್ಲಿ ಭಾರತೀಯ ಪ್ರಜೆಗಳು ಭೇಟಿ ನೀಡಿ ಪೂಜೆ ಸಲ್ಲಿಸಿ ದೈವ ಭಕ್ತಿಯ ಜತೆಗೆ ದೇಶ ಭಕ್ತಿಯನ್ನು ಮೆರೆದರು.
ವಿಶೇಷ ರಂಗೋಲಿ
ಇಲ್ಲಿಯ ವಿಶ್ವೇಶ್ ಓಬ್ಲ ಎಂಬುವರ ಪತ್ನಿ ಸ್ವರ್ಣಲತಾ ಅವರು ತಮ್ಮ ಮನೆಯ ಮುಂಭಾಗದಲ್ಲಿ ಭಾರತದ ತಿರಂಗ ಧ್ವಜದ ವಿನ್ಯಾಸದಲ್ಲಿ ರಂಗೋಲಿ ಹಾಕಿ ತಮ್ಮ ಕ್ರಿಯಾಶೀಲತೆಯನ್ನು ಮೆರೆದರು. ಇದು ಸಾರ್ವಜನಿಕವಾಗಿ ಪ್ರಶಂಸೆಗೆ ಪಾತ್ರವಾಗಿತ್ತು.
ಇದನ್ನೂ ಓದಿ | Independence Day | ದೈವ ಭಕ್ತಿ ಜತೆ ದೇಶ ಭಕ್ತಿ; ವಿಜಯಪುರದ ಶಿವಲಿಂಗದಲ್ಲಿ ಮೂಡಿದ ರಾಷ್ಟ್ರಧ್ವಜ!