Site icon Vistara News

Life imprisonment : ಮಗಳ ಸಾಕ್ಷಿಯ ಮೇಲೆ ತಂದೆಗೆ ಜೀವಾವಧಿ ಶಿಕ್ಷೆ! ಹೆಂಡತಿಯನ್ನು ಕೊಂದವನಿಗೆ ತಕ್ಕ ಶಾಸ್ತಿ

Murder parameshi

#image_title

ಬಳ್ಳಾರಿ: ತಾಯಿ‌ಯನ್ನು ಕೊಲೆ ಮಾಡಿದ ತಂದೆಯ ವಿರುದ್ಧವೇ ಎಂಟು ವರ್ಷದ ಮಗಳು ನೀಡಿದ ಸಾಕ್ಷಿ ಆತನಿಗೆ ಕಠಿಣ ಶಿಕ್ಷೆಯಾಗುವಂತೆ ಮಾಡಿದೆ. ಎಂಟು ವರ್ಷದ ಬಾಲಕಿಯ ಸಾಕ್ಷಿಯನ್ನು ಗಂಭೀರವಾಗಿ‌ ಪರಿಗಣಿಸಿದ ಬಳ್ಳಾರಿಯ 2ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ವಿದ್ಯಾದರ ಶಿರಹಟ್ಟಿ ಅವರು ಅಪರಾಧಿಗೆ ಜೀವಾವಧಿ ಶಿಕ್ಷೆ (Life imprisonment) ವಿಧಿಸಿ ಮಹತ್ವದ ತೀರ್ಪು ನೀಡಿದ್ದಾರೆ.

ಸಂಡೂರು ತಾಲೂಕಿನ ಅಂಕಮ್ಮನಹಾಳ್ ಗ್ರಾಮದ ಜಿ.ಹನುಮೇಶ್ ತನ್ನ ಹೆಂಡತಿ ಮಾರಕ್ಕನೊಂದಿಗೆ ನಿತ್ಯವೂ ಹಣಕ್ಕಾಗಿ ಜಗಳವಾಡುತ್ತಿದ್ದ ಎನ್ನಲಾಇದೆ. ಇದರಿಂದಾಗಿ‌ ನೊಂದ ಹೆಂಡತಿ ತವರು ಮನೆಗೆ ಹೋಗಿದ್ದಳು. ಗ್ರಾಮದವರು ಪಂಚಾಯಿತಿ ಮಾಡಿ ಗಂಡನಿಗೆ ಬುದ್ಧಿ‌ ಹೇಳಿ ಮಾರಕ್ಕಳನ್ನು ಗಂಡನ ಮನೆಗೆ ಕಳಿಸಿದ್ದರು‌.

2019ರ ಡಿಸೆಂಬರ್‌ 5ರಂದು ಗಂಡ ಹನುಮೇಶಿ‌ ಹೆಂಡತಿಯ ಬಳಿ ಹಣವನ್ನು ಕೇಳಿದ್ದಾನೆ. ಹಣ ನೀಡುವುದಕ್ಕೆ ಆಕೆ ನಿರಾಕರಿಸಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಹನುಮೇಶಿ ಮಚ್ಚಿನಿಂದ ಕೊಚ್ಚಿ ಹೆಂಡತಿಯನ್ಮು ಕೊಲೆ ಮಾಡಿರುವುದಾಗಿ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಲಾಗಿತ್ತು.

ಸಿಪಿಐ ಪಂಪನಗೌಡರಿಂದ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ‌ ಸಲ್ಲಿಕೆ ಮಾಡಿದ್ದರು. ಸರಕಾರಿ ಅಭಿಯೋಜಕ ಲಕ್ಷ್ಮಿದೇವಿ ಪಾಟೀಲ್ ಅವರು ಅಭಿಯೋಜನೆ ಪರ ವಾದ ಮಂಡಿಸಿದ್ದರು.

ಪ್ರಕರಣಕ್ಕೆ‌ ಸಂಬಂಧಿಸಿದಂತೆ ಮಗಳ ಸಾಕ್ಷಿಯೊಂದಿಗೆ 19 ಜನ ಸಾಕ್ಷಿ ವಿಚಾರಣೆ ಆಲಿಸಿದ ನ್ಯಾಯಾಧೀ ವಿದ್ಯಾಧರ ಶಿರಹಟ್ಟಿ ಅವರು ಭಾರತೀಯ ದಂಡ ಪ್ರಕ್ರಿಯಾ ಸಂಹಿತೆ ಕಲಂ ‌498ಎ, 302 ಅಡಿ ಆರೋಪ ಸಾಬೀತಾಗಿದೆ ಎಂದು‌ ಅಪರಾಧಿಗೆ ಜೀವಾವಧಿ ಶಿಕ್ಷೆ ಮತ್ತು 25 ಸಾವಿರ ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದರು‌.

ಎಂಟು ವರ್ಷದ ಮಗಳು ಅತ್ಯಂತ ಧೈರ್ಯದಿಂದ ತನ್ನ ತಂದೆಯ ವಿರುದ್ಧ ಸಾಕ್ಷಿ ಹೇಳಿದ್ದಳು. ತಂದೆ ನಿತ್ಯವೂ ತಾಯಿಗೆ ನೀಡುತ್ತಿದ್ದ ಕಿರುಕುಳ, ಆವತ್ತು ತನ್ನೆದುರೇ ನಡೆದ ಕೊಲೆಯ ವಿಚಾರಗಳನ್ನು ಆಕೆ ಕೋರ್ಟ್‌ನ ಮುಂದೆ ಹೇಳಿದ್ದಳು. ಇದರಿಂದ ಆರೋಪಿಗೆ ಶಿಕ್ಷೆಯಾಗಲು ಕಾರಣವಾಯಿತು.

ಅಪರಾಧ ಮಾಡಿದವರ ಮೇಲೆ ಯಾವುದೇ ಕರುಣೆ ತೋರಿಸದೆ ಸಾಕ್ಷ್ಯ ಹೇಳಿದರೆ ಪೊಲೀಸರು ಮತ್ತು ಪ್ರಾಸಿಕ್ಯೂಷನ್‌ಗೆ ಶಿಕ್ಷೆಗಾಗಿ ಕೋರ್ಟ್‌ ಮುಂದೆ ಕೋರಿಕೆ ಮಂಡಿಸಲು ಅನುಕೂಲವಾಗುತ್ತದೆ ಎಂಬ ಅಭಿಪ್ರಾಯವಿದ್ದು, ಬಾಲಕಿಯ ನಡೆ ಎಲ್ಲರ ಶ್ಲಾಘನೆ ಪಡೆದಿದೆ.

ಇದನ್ನೂ ಓದಿ : ಡ್ರಮ್‌ನಲ್ಲಿ ಶವ ಪತ್ತೆ ರಹಸ್ಯ ಬಯಲು : ಕುಟುಂಬವನ್ನೇ ಹಾಳು ಮಾಡಿದಳೆಂಬ ಸಿಟ್ಟಿನಲ್ಲಿ ನಡೆಯಿತೇ ತಮನ್ನಾ ಕೊಲೆ?

Exit mobile version