ಮೈಸೂರು: ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿರುವ ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮಕ್ಕ ಅರಮನೆ ಮೈದಾನದಲ್ಲಿ ಭಾನುವಾರ ಮತ್ತೊಂದು ತಾಲೀಮು ನಡೆಸಲಾಯಿತು.
ಸುಮಾರು 10 ಸಾವಿರಕ್ಕೂ ಹೆಚ್ಚು ಯೋಗಪಟುಗಳಿಂದ ಪೂರ್ವಾಭ್ಯಾಸ ನಡೆಸಲಾಯಿತು. ಚಲನ ಕ್ರಿಯೆ, ಯೋಗ ಸೇರಿದಂತೆ ಪ್ರಾಣಾಯಾಮಗಳ ಅಭ್ಯಾಸ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಸಂಸದ ಪ್ರತಾಪ್ ಸಿಂಹ, ಶಾಸಕ ಎಸ್.ಎ. ರಾಮದಾಸ್, ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್, ಮೊರಾರ್ಜಿ ದೇಸಾಯಿ ವಿಭಾಗದ ನಿರ್ದೇಶಕ ಬಸವರೆಡ್ಡಿ ಸೇರಿದಂತೆ ಪ್ರಮುಖರು ಭಾಗಿಯಾದರು. ಪ್ರಧಾನಿಯೊಂದಿಗೆ ಯೋಗಾಭ್ಯಾಸ ಮಾಡಲು ಯೋಗಪಟುಗಳು ಉತ್ಸುಕರಾಗಿದ್ದಾರೆ.
ಇದನ್ನೂ ಓದಿ | ಬೆಂಗಳೂರು- ಮೈಸೂರು ಹೆದ್ದಾರಿಗೂ ಪ್ರತಾಪ್ ಸಿಂಹಗೂ ಏನು ಸಂಬಂಧ ?: ಸಿದ್ದು ಪ್ರಶ್ನೆ
ಅಂತಾರಾಷ್ಟ್ರೀಯ ಯೋಗ ದಿನವನ್ನು ಪ್ರತಿ ವರ್ಷ ದೇಶಾದ್ಯಂತ ಆಚರಣೆ ಮಾಡಲಾಗುತ್ತದೆ. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುವ ಕಾರ್ಯಕ್ರಮವನ್ನು ಪ್ರತಿ ಬಾರಿ ಒಂದೊಂದು ಸ್ಥಳದಲ್ಲಿ ಆಚರಿಸಲಾಗುತ್ತದೆ. 2015ರಲ್ಲಿ ಮೊದಲ ಯೋಗ ದಿನವನ್ನು ನವದೆಹಲಿಯ ರಾಜಪಥದಲ್ಲಿ, 2016ರಲ್ಲಿ ಎಡನೇ ಯೋಗ ದಿನವನ್ನು ಚಂಡೀಗಢದಲ್ಲಿ, 2017ರಲ್ಲಿ ಮೂರನೇ ಯೋಗ ದಿನವನ್ನು ಲಖನೌನಲ್ಲಿ, 2018ರಲ್ಲಿ ನಾಲ್ಕನೇ ಯೋಗ ದಿನವನ್ನು ಡೆಹರಾಡೂನ್‌ನಲ್ಲಿ, ಹಾಗೂ 2019ರಲ್ಲಿ ಐದನೇ ಯೋಗದಿನವನ್ನು ರಾಂಚಿಯಲ್ಲಿ ಪ್ರಧಾನಿ ಆಚರಿಸಿದರು. ಕೋವಿಡ್ ಕಾರಣಕ್ಕೆ 2020 ಹಾಗೂ 2021ರಲ್ಲಿ ಸಾರ್ವಜನಿಕ ಕಾರ್ಯಕ್ರಮಗಳು ನಡೆಯಲಿಲ್ಲ. ಇದೀಗ ಮೂರು ವರ್ಷದ ನಂತರ ಮೈಸೂರಿನಲ್ಲಿ ಯೋಗ ದಿನ ನಡೆಯುತ್ತಿದೆ.
ಯೋಗ ದಿನದ ಕಾರ್ಯಕದ ಸಿದ್ಧತೆ ಕುರಿತಂತೆ ಪ್ರಧಾನಿ ಮೋದಿ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಈಗಾಗಲೆ ಒಂದು ಸಭೆ ನಡೆಸಿದ್ದಾರೆ. ಜತೆಗೆ, ಜಿಲ್ಲಾಡಳಿತದ ಜತೆಗೆ ಸಿಎಂ ಸಭೆ ನಡೆಸಿ ಅನೇಕ ಸೂಚನೆಗಳನ್ನು ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಅಂದಾಜು ಹದಿನೈದು ಸಾವಿರ ಜನರು ಏಕಕಾಲದಲ್ಲಿ ಯೋಗಾಭ್ಯಾಸ ನಡೆಸುವ ಅಂದಾಜಿದೆ.
ಇದನ್ನೂ ಓದಿ | ʼಪ್ರತಾಪ್ ಸಿಂಹ ಅವರಿಗೆ ಮಾಹಿತಿ ಇರಲಿಲ್ಲ ಅದಕ್ಕೆ ಹೇಳಿದೆʼ: ಮೈಸೂರಲ್ಲಿ ಮತ್ತೆ ಶಾಸಕ VS ಸಂಸದ