ಬೆಂಗಳೂರು: ಇತ್ತೀಚೆಗಷ್ಟೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾತ್ರೆಯಲ್ಲಿ ಭಾಗವಹಿಸಿ ಜಾನಪದ ನೃತ್ಯ ಮಾಡಿದ ವೀಡಿಯೋ ಹರಿದಾಡಿದ್ದ ನೆನಪು ಹಸಿರಾಗಿರುವಾಗಲೆ ಅಂತಹದ್ದೇ ಕಾರ್ಯ ಮಾಡಿದ್ದರೆ ಶಾಸಕ ಜಿ.ಟಿ. ದೇವೇಗೌಡ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ವಿರುದ್ಧ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸಿ ಜಯಿಸಿದ್ದ ಜಿ.ಟಿ. ದೇವೇಗೌಡ, ಪೌರಾಣಿಕ ನಾಟಕದ ಸಂಭಾಷಣೆ ಹೇಳಿದ್ದಾರೆ.
ಇಲವಾಲ ಹೋಬಳಿಯ ಬೊಮ್ಮನಹಳ್ಳಿ ಗ್ರಾಮದೇವತೆ ಹಬ್ಬದಲ್ಲಿ ಭಾಗಿಯಾಗಿ ದಕ್ಷಯಜ್ಞ ನಾಟಕಕ್ಕೆ ಚಾಲನೆ ನೀಡಿದರು. ಈ ವೇಳೆ ಕರ್ಣ ಹಾಗೂ ಕುಂತಿಯ ನಡುವಿನ ಮಾತುಕತೆಯ ಡೈಲಾಗ್ ಹೇಳಿದರು. ನಂತರ ಈ ಸನ್ನಿವೇಶವನ್ನು ಅರ್ಥಪೂರ್ಣವಾಗಿ ವಿವರಿಸಿದರು. ಇದನ್ನು ಕಂಡು ಗ್ರಾಮಸ್ಥರು ಶಿಳ್ಳೆ ಹೊಡೆದು, ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. ಸಂಪೂರ್ಣ ವಿಡಿಯೋ ನೋಡಿ.