Site icon Vistara News

ನವಜಾತ ಶಿಶುವನ್ನು ಪಾಳು ಬಾವಿಗೆ ಎಸೆದ ತಾಯಿ: ಗ್ರಾಮಸ್ಥರಿಂದ ರಕ್ಷಣೆ; ಮಂಡ್ಯ ಜಿಲ್ಲೆಯಲ್ಲಿ ನಡೆದ ಘಟನೆ

ನವಜಾತ ಶಿಶುವನ್ನು

ಮಂಡ್ಯ: ತಾಯಿಯೊಬ್ಬಳು ಆಗ ತಾನೆ ಜನಿಸಿದ ಮಗುವನ್ನು ಪಾಳು ಬಾವಿಗೆ ಎಸೆದಿರುವ ಅಮಾನವೀಯ ಘಟನೆ ಜಿಲ್ಲೆಯ ಪಾಂಡವಪುರ ತಾಲೂಕಿನ ಚಂದ್ರೆ ಗ್ರಾಮದಲ್ಲಿ ನಡೆದಿದ್ದು, 30 ಅಡಿ ಆಳದ ಬಾವಿಯಿಂದ ಮಗುವನ್ನು ಗ್ರಾಮಸ್ಥರು ರಕ್ಷಣೆ ಮಾಡಿದ್ದಾರೆ.

ತಾಯಿಯೊಬ್ಬಳು ಗಂಡು ಮಗು ಗ್ರಾಮದ ಬಾವಿಯಲ್ಲಿ ಬಿಸಾಡಿದ್ದಳು. ಈ ಮಧ್ಯೆ ತೋಟಕ್ಕೆ ಹೋಗುತ್ತಿದ್ದ ಮಹಿಳೆಯೊಬ್ಬರು ಬಾವಿಯಲ್ಲಿ ಅಳುವಿನ ಶಬ್ಧ ಕೇಳಿ ಇಣುಕಿ ನೋಡಿದಾಗ ಮಗು ಇರುವುದನ್ನು ನೋಡಿದ್ದಾರೆ. ನಂತರ ಕೂಡಲೇ ಈ ವಿಚಾರವನ್ನು ಗ್ರಾಮಸ್ಥರಿಗೆ ತಿಳಿಸಿದ್ದಾರೆ. ಕೂಡಲೇ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ಹಗ್ಗದ ಸಹಾಯದಿಂದ ಬಾವಿಗೆ ಇಳಿದು ಮಗುವನ್ನು ರಕ್ಷಿಸಿದ್ದಾರೆ. ಈ ವೇಳೆ ಮಗು ಹಸಿವಿನಿಂದ ಅಳುತ್ತಿದ್ದಾಗ ಮಹಿಳೆಯೊಬ್ಬರು ಎದೆ ಹಾಲುಣಿಸಿ ಮಾನವೀಯತೆ ಮೆರೆದಿದ್ದಾರೆ.

ಬಳಿಕ ಮಗುವನ್ನು ಪಾಂಡವಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. 30 ಅಡಿ ಎತ್ತರದಿಂದ ಬಿದ್ದರೂ ಮಗು ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾಗಿದ್ದು, ಸದ್ಯ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದೆ.

ಇದನ್ನೂ ಓದಿ | Accident | 30 ಅಡಿ ಎತ್ತರದ ಸೇತುವೆಯಿಂದ ಕೆಳಗೆ ಬಿದ್ದ ಮಿನಿ ಟೆಂಪೋ; ಒಬ್ಬ ಸಾವು, ಇಬ್ಬರಿಗೆ ಗಾಯ

Exit mobile version