Site icon Vistara News

Viral video: ನಾನೊಬ್ಳೇ ಎಷ್ಟೂಂತ ಮಾಡ್ಲಿ, ಆಗಲ್ಲ ನಂಗೆ; ಆಧಾರ್‌ ಕೇಂದ್ರದ ಒತ್ತಡಕ್ಕೆ ಮಹಿಳಾ ಸಿಬ್ಬಂದಿ ಕಣ್ಣೀರು

Pressure in Aadhar centre

#image_title

ರಾಯಚೂರು: ರಾಜ್ಯದ ಕಾಂಗ್ರೆಸ್‌ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಎಲ್ಲ ಗ್ಯಾರಂಟಿ ಯೋಜನೆಗಳಿಗೆ (Congress Guarantee) ಆಧಾರ್‌ ಕಾರ್ಡ್‌ ಕಡ್ಡಾಯವಾಗಿದೆ (Aadhar Updates) ಮತ್ತು ಅದಕ್ಕೆ ಸಂಬಂಧಿಸಿದ ಲಿಂಕ್‌ಗಳನ್ನು ಮಾಡಿಸಿರಬೇಕಾಗುತ್ತದೆ. ಹೀಗಾಗಿ ಪ್ರತಿಯೊಬ್ಬರೂ ಆಧಾರ್‌ ಕೇಂದ್ರಗಳ (Aadhar centre) ಕಡೆಗೆ ದಾಂಗುಡಿ ಇಡುತ್ತಿದ್ದಾರೆ. ಇದರಿಂದಾಗಿ ಆಧಾರ್‌ ಕೇಂದ್ರಗಳಲ್ಲಿ ಕೆಲಸದ ಒತ್ತಡ ಹೆಚ್ಚಿದ್ದು, ನಿಭಾಯಿಸಲು ಸಾಧ್ಯವಾಗದೆ ಅಲ್ಲಿನ ಸಿಬ್ಬಂದಿ (woman staff) ಕಣ್ಣೀರು ಹಾಕುವ ಪರಿಸ್ಥಿತಿ ಬಂದಿದೆ. ರಾಯಚೂರು ನಗರದ ಅಂಚೆ ಕಚೇರಿಯಲ್ಲಿ (Raichur post office) ವಸ್ತುಶಃ ಆಧಾರ್‌ ಕೇಂದ್ರ ಮಹಿಳಾ ಸಿಬ್ಬಂದಿ ಕಣ್ಣೀರು ಹಾಕಿದ್ದಾರೆ. ಈ ದೃಶ್ಯ ವೈರಲ್‌ ಆಗಿದೆ (viral video)

ಪ್ರತಿಯೊಂದು ಗ್ಯಾರಂಟಿ ಯೋಜನೆಗೆ ಆಧಾರ್‌ ಕಡ್ಡಾಯ ಮಾಡಿರುವ ಹಿನ್ನೆಲೆಯಲ್ಲಿ ಕೆಲವರು ಹೊಸ ಕಾರ್ಡ್‌ ಮಾಡಿಸುವುದು, ಇನ್ನು ಕೆಲವರು ವಿಳಾಸ ಬದಲಾವಣೆ, ಇನ್ನು ಕೆಲವರು ಫೋನ್‌ ನಂಬರ್‌, ಹೆಸರಿನ ವ್ಯತ್ಯಾಸಗಳ ಬದಲಾವಣೆಗೆ ಹೀಗೆ ನೂರಾರು ಕೆಲಸ ಹೊತ್ತು ಬರುತ್ತಾರೆ.

ರಾಯಚೂರು ಅಂಚೆ ಕಚೇರಿಯ ಆಧಾರ್‌ ಕೇಂದ್ರದಲ್ಲಿ ಜನಸಂದಣಿ

ರಾಯಚೂರು ಅಂಚೆ ಕಚೇರಿಯಲ್ಲಿರುವ ಆಧಾರ್‌ ಕೇಂದ್ರದಲ್ಲೂ ವಿಪರೀತ ಜನದಟ್ಟಣೆ ಇದೆ. ಹಲವಾರು ಮಂದಿ ಕಚೇರಿಯ ಒಳಗಡೆ ನಿಂತಿದ್ದರೆ, ಹಲವಾರು ಮಂದಿ ಹೊರಗಡೆ ಕಾಯುತ್ತಿದ್ದಾರೆ. ಇಷ್ಟೆಲ್ಲ ಜನರ ಕೆಲಸ ಮಾಡಲು ಇರುವುದು ಒಬ್ಬರೇ ಮಹಿಳಾ ಸಿಬ್ಬಂದಿ.

ಕೇಂದ್ರಕ್ಕೆ ಬಂದ ಜನರ ಬೇಡಿಕೆ ಏನು ಎಂದು ತಿಳಿದುಕೊಳ್ಳುವುದು, ಅದಕ್ಕೆ ಬೇಕಾದ ದಾಖಲೆಗಳನ್ನು ತಂದಿದ್ದಾರಾ ಎಂದು ಪರಿಶೀಲಿಸುವುದು, ತರದಿದ್ದರೆ ತರುವಂತೆ ಅವರಿಗೆ ತಿಳಿಸಿಹೇಳುವುದು, ಏನೇನು ದಾಖಲೆ ಬೇಕು ಎಂದು ಬರೆದುಕೊಡುವುದು ಮೊದಲಾದ ಸಾವಿರ ಕೆಲಸಗಳು ಇರುತ್ತವೆ.

ರಾಯಚೂರು ಅಂಚೆ ಕಚೇರಿಯ ಆಧಾರ್‌ ಕೇಂದ್ರದಲ್ಲಿ ಜನಸಂದಣಿ

ಒಂದೊಮ್ಮೆ ದಾಖಲೆ ತಂದಿದ್ದರೆ ಆ ದಾಖಲೆಯನ್ನು ತಾವೇ ಸ್ಕ್ಯಾನ್‌ ಮಾಡಿ, ಅರ್ಜಿಗಳನ್ನು ತುಂಬಿ ಕೊಡುವ ಕೆಲಸವನ್ನು ಅವರೊಬ್ಬರೇ ಮಾಡಬೇಕು. ಇದರ ನಡುವೆ, ಜನರ ಒತ್ತಡ ಬೇರೆ. ಒಂದು ಅರ್ಜಿಗೆ ಎಷ್ಟು ಹೊತ್ತು ಎಂದು ಕೆಲವರು ದಾರ್ಷ್ಟ್ಯದಿಂದ ಮಾತನಾಡಿದರೆ, ಕೆಲವರು ನಮ್ಮದು ಬೇಗ ಮಾಡಿಕೊಡಿ, ಹೋಗಬೇಕು ಎಂದು ಹಠ ಹಿಡಿಯುತ್ತಾರೆ.

ಯಾರು ಮೊದಲು ಬಂದಿದ್ದಾರೆ ಎನ್ನುವುದನ್ನು ಗಮನಿಸಿ ಒಬ್ಬೊಬ್ಬರನ್ನಾಗಿ ಕಳುಹಿಸಿಕೊಡುವ ವ್ಯವಸ್ಥೆಯೂ ಅಲ್ಲಿಲ್ಲ. ಹೀಗಾಗಿ, ನಾನು ಮೊದಲು, ತಾನು ಮೊದಲು ಎಂಬ ಜಗಳವೂ ಜೋರಾಗಿಯೇ ಇರುತ್ತದೆ. ಇದೆಲ್ಲವನ್ನೂ ಸಂಭಾಳಿಸಿಕೊಂಡು ಕೆಲಸ ಮಾಡಬೇಕಾದ ಅನಿವಾರ್ಯತೆ.

ಇಂಥ ಒತ್ತಡಗಳಿಂದ ಬಳಲಿದ ಆ ಮಹಿಳಾ ಸಿಬ್ಬಂದಿ ಜನರ ಎದುರೇ ಕಣ್ಣೀರು ಹಾಕಿದ್ದಾರೆ. ನನಗೆ ಆಗಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಒಂದು ಕಡೆ ಸಾರ್ವಜನಿಕರು ಒತ್ತಡ ಹಾಕುತ್ತಾರೆ, ಇನ್ನೊಂದು ಕಡೆ ಮೇಲಧಿಕಾರಿಗಳು ಒತ್ತಡ ಹಾಕುತ್ತಾರೆ, ನಾನು ಏನು ಮಾಡಲಿ ಎಂದು ಆಕೆ ಕಣ್ಣೀರು ಒರೆಸುತ್ತಲೇ ಹೇಳುವ ದೃಶ್ಯಗಳು ವೈರಲ್‌ ಆಗಿವೆ.

ʻʻನನಗೆ ಆಗಲ್ಲ ಇದು… ಕೆಲಸ ಮಾಡಬೇಕು, ಬೈಗುಳವನ್ನೂ ತಿನ್ನಬೇಕು, ಯಾರು ಇವರ ಬೈಗುಳ ತಿಂತಾರೆ…? ನಾನು ಒಬ್ಬಕೆ ಎಷ್ಟು ಅಂತಾ ಕೆಲಸ ಮಾಡಲಿ… ನಾನು ಒಳಗೆ ಹೋಗಿ ಆಗಲ್ಲ ಅಂತ ಸರ್ ಹೇಳ್ತೀನಿʼʼ ಎಂದು ಆ ಮಹಿಳಾ ಸಿಬ್ಬಂದಿ ಅತ್ತುಕೊಂಡೇ ಹೇಳಿದ್ದಾರೆ.

ಒಂದು ಕರೆ ಜನರ ಒತ್ತಡ, ಕಷ್ಟಪಟ್ಟು ಕೆಲಸ ಮಾಡಿಕೊಟ್ಟರೂ ಬೈದಾಡಿಕೊಂಡು ಹೋಗುವ ಜನರ ನಡವಳಿಕೆಗಳಿಂದ ಆಕೆ ನಿಜಕ್ಕೂ ಸೋತು ಸುಣ್ಣವಾದಂತೆ ಕಾಣುತ್ತಿದ್ದಾರೆ. ಇದು ಕೇವಲ ರಾಯಚೂರಿನ ಪೋಸ್ಟ್‌ ಆಫೀಸ್‌ನ ಒಂದು ಸನ್ನಿವೇಶವಲ್ಲ. ರಾಜ್ಯದ ನಾನಾ ಕಡೆಗಳಲ್ಲಿನ ಆಧಾರ್‌ ಕೇಂದ್ರಗಳ ಸ್ಥಿತಿಗತಿಯ ಸ್ಯಾಂಪಲ್‌ ಅಷ್ಟೇ.

ಇದನ್ನೂ ಓದಿ: Free Bus Service: ಸೀಟಿಲ್ಲ ಎಂದು ಬಸ್‌ ನಿಲ್ಲಿಸದೇ ಹೋಗಿದ್ದ ಕಂಡಕ್ಟರ್‌ ಮೇಲೆ ಸಿಟ್ಟಲ್ಲಿ ಹಲ್ಲೆ; ನಾಲ್ವರ ಸೆರೆ

Aadhar centre: woman staff cries as she cant manage the work pressure in Aadhar centre

Exit mobile version