ರಾಮನಗರ: ಮಾಗಡಿ ತಾಲೂಕಿನ ನಾರಾಯಣಿಪಾಳ್ಯ ಗೇಟ್ ಬಳಿ ರಸ್ತೆ ತಿರುವಿನಲ್ಲಿ ಸೋಮವಾರ (ಡಿ. ೫) ಲಗೇಜ್ ಆಟೋವೊಂದು (Accident Case) ಪಲ್ಟಿಯಾಗಿದೆ. ಮೂವರು ಸ್ಥಳದಲ್ಲಿಯೇ ಮೃತಪಟ್ಟರೆ, ಮೂವರಿಗೆ ಗಂಭೀರ ಗಾಯಗಳಾಗಿವೆ.
ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ಬೆಳ್ಳೂರು ಕ್ರಾಸ್‌ನಿಂದ ನೆಲಮಂಗಲಕ್ಕೆ ಹೋಗುವಾಗ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ.
ರತ್ನಮ್ಮ (53), ಲಕ್ಕಮ್ಮ (40) ಮಂಜುನಾಥ್ (32) ಮೃತ ವ್ಯಕ್ತಿಗಳಾಗಿದ್ದು, ಇವರೆಲ್ಲರೂ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬೆಳ್ಳೂರು ಗ್ರಾಮದವರು ಎಂದು ತಿಳಿದು ಬಂದಿದೆ. ಗಾಯಗೊಂಡವರ ವಿವರಗಳು ಇನ್ನೂ ಲಭ್ಯವಾಗಿಲ್ಲ. ಗಾಯಾಳುಗಳನ್ನು ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇವರು ತರಕಾರಿಯನ್ನು ತರಲು ಬೆಳ್ಳೂರು ಕ್ರಾಸ್‌ನಿಂದ ನೆಲಮಂಗಲದ ಕಡೆಗೆ ಗೂಡ್ಸ್ ವಾಹನದಲ್ಲಿ ಬರುತ್ತಿದ್ದರು ಎಂದು ಹೇಳಲಾಗಿದೆ. ಈ ವೇಳೆ ನಾರಾಯಣಿಪಾಳ್ಯಕ್ಕೆ ಹೋಗುವಾಗ ತಿರುವಿನಲ್ಲಿ ಗೂಡ್ಸ್ ವಾಹನವು ಚಾಲಕನ ನಿಯಂತ್ರಣಕ್ಕೆ ಸಿಗದೆ ಪಲ್ಟಿಯಾಗಿದೆ ಎಂದು ಹೇಳಲಾಗಿದೆ. ಬಿದ್ದ ರಭಸಕ್ಕೆ ವಾಹನದ ಒಳಗೆ ಇದ್ದ ಎಲ್ಲರಿಗೂ ತೀವ್ರ ಗಾಯಗಳಾಗಿದ್ದು, ಅವರಲ್ಲಿ ಮೂವರು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | Honey Bee attack | ಮಾಗಡಿ ಸರ್ಕಾರಿ ಸಂಕೀರ್ಣದಲ್ಲಿ 50ಕ್ಕೂ ಹೆಚ್ಚು ಮಂದಿ ಮೇಲೆ ಹೆಜ್ಜೇನು ದಾಳಿ; ನಾಲ್ವರು ಆಸ್ಪತ್ರೆಗೆ ದಾಖಲು