ಚಿಕ್ಕಬಳ್ಳಾಪುರ: ಆಂಧ್ರದಲ್ಲಿ ಎಟಿಎಂಗೆ ಹಣ ತುಂಬುವ ವಾಹನದ ಚಾಲಕನಾಗಿದ್ದಕೊಂಡೇ ಹಣ ಕದ್ದು ಎಸ್ಕೇಪ್ ಆಗಿದ್ದವನನ್ನು ಸಿನಿಮೀಯ ರೀತಿಯಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿ ಬಂಧಿಸಿರುವ ಬಾಗೇಪಲ್ಲಿ ಪೊಲೀಸರು, ಆರೋಪಿಯಿಂದ 56 ಲಕ್ಷ ರೂಪಾಯಿ ಹಣವನ್ನು ವಶಕ್ಕೆ ಪಡೆದಿದ್ದಾರೆ.
ಆಂಧ್ರ ಪ್ರದೇಶದ ಕಡಪ ನಗರದ ಫಾರೂಕ್ ಬಂಧಿತ ಆರೋಪಿ. ಆಂಧ್ರಪ್ರದೇಶದ ಕಡಪ ನಗರದಲ್ಲಿ ಎಸ್‌ಬಿಎಂ ಬ್ಯಾಂಕ್‌ನಿಂದ ಸಿಎಂಎಸ್ ಕಂಪನಿ ವಾಹನದಲ್ಲಿ ಎಟಿಎಂಗೆ ಹಣ ತುಂಬಿಸಲು ತರಲಾಗಿತ್ತು. ಆದರೆ, ವಾಹನ ಚಾಲಕ ಫಾರೂಕ್ 56 ಲಕ್ಷ ರೂಪಾಯಿಯನ್ನು ಕದ್ದು, ಇಟಿಯೋಸ್ ಕಾರಿನಲ್ಲಿ ಪರಾರಿಯಾಗಿದ್ದ. ಹೀಗಾಗಿ ಕಡಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಚಾಲಕ ಫಾರೂಕ್ ಎಟಿಎಂ ಹಣ ಕದ್ದು ಕಾರಿನಲ್ಲಿ ಪರಾರಿಯಾಗಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಹೀಗಾಗಿ ಆರೋಪಿ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದರು. ಈ ನಡುವೆ ಆಂಧ್ರ ಗಡಿಭಾಗದ ಬಾಗೇಪಲ್ಲಿ ಚೆಕ್ ಪೋಸ್ಟ್ ಬಳಿ ರಾಜ್ಯಕ್ಕೆ ಬರುತ್ತಿದ್ದ ಫಾರೂಕ್ ಕಾರನ್ನು ಬಾಗೇಪಲ್ಲಿ ಪೊಲೀಸರು ತಡೆದಾಗ, ಆರೋಪಿ ಗಾಬರಿಕೊಂಡು ಕಾರಿನಿಂದ ಇಳಿದು ಓಡಿದ್ದಾನೆ. ಆಗ ಆತನನ್ನು ಬೆನ್ನಟ್ಟಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಳಿಕ ವಿಚಾರಣೆ ನಡೆಸಿದಾಗ ಎಟಿಎಂ ಹಣ ಕದ್ದಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಕಾರಿನಲ್ಲಿದ್ದ 56 ಲಕ್ಷ ರೂಪಾಯಿ ಹಣವನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ | Bus Accident | ಅತಿ ವೇಗ ತಂದ ಆಪತ್ತು; ಲಾರಿಗೆ ಡಿಕ್ಕಿ ಹೊಡೆದ ಕೆಎಸ್‌ಆರ್‌ಟಿಸಿ ಬಸ್ ಛಿದ್ರ