Site icon Vistara News

Actor Darshan: ದರ್ಶನ್ ಬಟ್ಟೆ ಮೇಲೆ ರೇಣುಕಾಸ್ವಾಮಿ ರಕ್ತದ ಕಲೆ; ಎಫ್‌ಎಸ್‌ಎಲ್ ವರದಿಯಲ್ಲಿ ದೃಢ

Actor Darshan

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಇದೀಗ ಅತಿ ದೊಡ್ಡ ರಹಸ್ಯ ರಿವೀಲ್ ಆಗಿದೆ. ದರ್ಶನ್ ಬಟ್ಟೆಗಳ ಮೇಲೆ ರೇಣುಕಾಸ್ವಾಮಿ ರಕ್ತದ ಕಲೆಗಳು ಸಿಕ್ಕಿದ್ದು, ಇದರಿಂದ ಪ್ರಕರಣದಲ್ಲಿ ದರ್ಶನ್‌ಗೆ (Actor Darshan) ಕಂಟಕವಾಗಲಿರುವ ಅತಿ ದೊಡ್ಡ ಸಾಕ್ಷ್ಯ ಪೊಲೀಸರಿಗೆ ಸಿಕ್ಕಂತಾಗಿದೆ.

ಎಫ್‌ಎಸ್‌ಎಲ್ ವರದಿಯಲ್ಲಿ ಭಯಾನಕ ಸತ್ಯ ಹೊರಬಿದ್ದಿದೆ. ದರ್ಶನ್ ಮನೆಯಲ್ಲಿ ವಶಪಡಿಸಿಕೊಂಡಿದ್ದ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಹಾಗೂ ಕಪ್ಪು ರೌಂಡ್ ನೆಕ್ ಶರ್ಟ್ ಅನ್ನು ಎಫ್‌ಎಸ್‌ಎಲ್‌ಗೆ ಪೊಲೀಸರು ಕಳುಹಿಸಿದ್ದರು. ಪರಿಶೀಲನೆಯಲ್ಲಿ ದರ್ಶನ್ ಬಟ್ಟೆಯ ಮೇಲೆ ರಕ್ತದ ಕಲೆಗಳು ಪತ್ತೆಯಾಗಿದ್ದವು. ಇವು ರೇಣುಕಾಸ್ವಾಮಿಯ ದೇಹದ ರಕ್ತ ಎಂಬುದು ಎಫ್‌ಎಸ್‌ಎಲ್ ವರದಿಯಲ್ಲಿ ಧೃಡವಾಗಿದೆ ಎನ್ನಲಾಗಿದೆ.

ಆಂಜನೇಯನ ಮೂರ್ತಿ ಜೊತೆಗೆ ದರ್ಶನ್‌ ಫೋಟೋ ಇಟ್ಟು ಪೂಜೆ! ಕಿಡಿ ಕಾರಿದ ಭಕ್ತರು

ರಾಯಚೂರು: ದೇವರ ಮೂರ್ತಿಯ (God Idol) ಜೊತೆಗೆ ಕೊಲೆ ಆರೋಪಿ (Murder Suspect) ನಟ ದರ್ಶನ್‌ (Actor Darshan) ಫೋಟೋ ಇಟ್ಟು ಪೂಜೆ (worship) ಮಾಡಿರುವ ರಾಯಚೂರಿನ (Raichur News) ದೇವಾಲಯದ ಅರ್ಚಕರ ನಡೆಗೆ ಭಾರಿ ವಿರೋಧ ವ್ಯಕ್ತವಾಗಿದೆ.

ರಾಯಚೂರಿನ ದೇವದುರ್ಗ ತಾಲೂಕಿನ ಮಸರಕಲ್ ಗ್ರಾಮದ ಪ್ರಸಿದ್ಧ ದೇಗುಲ ಲಕ್ಷ್ಮೀ ರಂಗನಾಥ ದೇವಾಲಯದಲ್ಲಿ ಈ ಅಪಸವ್ಯ ನಡೆದಿದೆ. ಪೂಜೆ ಮಾಡಿದ ಅರ್ಚಕರು ಹಾಗೂ ಪೂಜೆ ಮಾಡಿಸಿದ ದರ್ಶನ್‌ ಫ್ಯಾನ್ಸ್‌ ಇದೀಗ ಭಕ್ತರ ಅಸಮಾಧಾನಕ್ಕೆ ತುತ್ತಾಗಿದ್ದಾರೆ.

ಮಸರಕಲ್ ಲಕ್ಷ್ಮೀ ರಂಗನಾಥ ದೇಗುಲದ ಎದುರಲ್ಲಿರುವ ಆಂಜನೇಯ ಮೂರ್ತಿಯ ಜೊತೆಗೆ ನಟ ದರ್ಶನ್ ಫೋಟೋಗಳನ್ನು ಇಟ್ಟು ಪೂಜೆ ಸಲ್ಲಿಸಲಾಗಿತ್ತು. ಅರ್ಚಕರ ಪೂಜೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಉದ್ಭವ ಮೂರ್ತಿ, ಪ್ರತಿಷ್ಠಾಪನಾ ಮೂರ್ತಿಯ ಮೇಲೆ ಕೊಲೆ ಆರೋಪಿ ದರ್ಶನ್ ಪೋಟೋ ಇಟ್ಟು ಪೂಜೆ ಮಾಡಿರುವುದನ್ನು ಭಕ್ತರು ಪ್ರಶ್ನಿಸಿದ್ದಾರೆ.

ದೇವರ ಮೂರ್ತಿಯ ಜೊತೆಗೆ ಕೊಲೆ ಆರೋಪಿಯ ಫೋಟೋ ಇಟ್ಟು ಪೂಜೆ ಮಾಡಿಸುವ ಮೂಲಕ ದೇಗುಲದ ಅರ್ಚಕರು ಹಾಗೂ ದರ್ಶನ್ ಅಭಿಮಾನಿಗನು ಭಕ್ತರ ಭಾವನೆಗಳಿಗೆ ಧಕ್ಕೆ ಮಾಡಿದ್ದಾರೆ. ದರ್ಶನ್ ಕೊಲೆ ಆರೋಪಿಯಾಗಿ ಜೈಲಿನಲ್ಲಿದ್ದಾರೆ. ಕೊಲೆ ಆರೋಪಿಯ ಫೋಟೋ ಗರ್ಭಗುಡಿಯಲ್ಲಿ ಇಟ್ಟು ಪೂಜೆ ಮಾಡುವ ಅಗತ್ಯ ಏನಿದೆ? ಇದು ಕನ್ನಡ ಸಂಸ್ಕೃತಿಯಲ್ಲ. ಅಭಿಮಾನಿಗಳಿಗೆ ದರ್ಶನ್ ಮೇಲೆ ಅಭಿಮಾನ ಇರಬಹುದು.‌ ಆದರೆ ಮನೆಯಲ್ಲಿ ಹೀಗೆ ಪೂಜೆ ಮಾಡಲಿ. ಸಾರ್ವಜನಿಕ ದೇವಾಲಯದಲ್ಲಿ ಹೀಗೆ ಮಾಡುವುದು ಸಲ್ಲದು ಎಂದು ಕನ್ನಡ ಹೋರಾಟಗಾರರು ರಾಂಗ್‌ ಆಗಿದ್ದಾರೆ.

ಇದನ್ನೂ ಓದಿ | Muda Scam: ರಾಜ್ಯಪಾಲರನ್ನು ಭೇಟಿಯಾದ ಟಿ.ಜೆ.ಅಬ್ರಹಾಂ; ಸಿಎಂ ವಿರುದ್ಧ ತನಿಖೆಗೆ ಮತ್ತಷ್ಟು ದಾಖಲೆ

ಈ ವಿಚಾರದಲ್ಲಿ ಅರ್ಚಕರು ಹಾಗೂ ಪೂಜೆ ಮಾಡಿಸಿದವರ ವಿರುದ್ಧ ಹೋರಾಟ ಮಾಡುತ್ತೇವೆ. ನೀವು ದೇವರ ಪುರೋಹಿತರು ಅಂತ ಹೇಳಲು ನಮಗೆ ನಾಚಿಕೆ ಆಗುತ್ತದೆ. ಕ್ಷಮೆ ಕೇಳಿ ಎಂದು ರಾಯಚೂರಲ್ಲಿ ಕನ್ನಡ ಪರ ಹೋರಾಟಗಾರ ಅಶೋಕ್ ಕುಮಾರ್ ಜೈನ್ ಕಿಡಿ ಕಾರಿದ್ದಾರೆ.

Exit mobile version