ಬೆಂಗಳೂರು: ಭಾರತದ ಪ್ರಮುಖ ವಾಹನ ತಯಾರಕ ಸಂಸ್ಥೆಯಾದ ಟಾಟಾ ಮೋಟಾರ್ಸ್ (Tata Motors) ಇಂದು ಕಂಪನಿಯ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನ ಸ್ಪೋರ್ಟಿ ವರ್ಷನ್ ಆಗಿರುವ ಆಲ್ಟ್ರೋಜ್ ರೇಸರ್ ಅನ್ನು ಬಿಡುಗಡೆ ಮಾಡಿದೆ. 1.2 ಲೀ ಟರ್ಬೊ ಪೆಟ್ರೋಲ್ ಎಂಜಿನ್ ಹೊಂದಿರುವ ಅಲ್ಟ್ರೋಜ್ ಅತ್ಯುನ್ನತ ಕಾರ್ಯಕ್ಷಮತೆಯನ್ನು ಒದಗಿಸುವಂತೆ ವಿನ್ಯಾಸಗೊಂಡಿದೆ. ರೇಸ್ ಕಾರ್‌ಗಳಿಂದ ಸ್ಫೂರ್ತಿ ಪಡೆದು ರಚಿಸಿದ ಹೊರಾಂಗಣ ಮತ್ತು ಒಳಾಂಗಣ ಲುಕ್ ಅನ್ನು ಹೊಂದಿದೆ.
5500 ಆರ್‌ಪಿಎಂನಲ್ಲಿ 120 ಪಿಎಸ್ ಉತ್ಪಾದಿಸುವ, 1750ರಿಂದ 4000 ಆರ್‌ಪಿಎಂನಲ್ಲಿ 170 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿರುವ ಅಲ್ಟ್ರೋಜ್ ಅತ್ಯುನ್ನತ ಡ್ರೈವಿಂಗ್ ಅನುಭವವನ್ನು ಒದಗಿಸಲಿದೆ. 360 ಡಿಗ್ರಿ ಕ್ಯಾಮೆರಾ, 26.03 ಸೆಂ ಇನ್ಫೋಟೈನ್‌ಮೆಂಟ್ ಟಚ್‌ಸ್ಕ್ರೀನ್, ವೆಂಟಿಲೇಟೆಡ್ ಸೀಟ್‌ಗಳು ಮತ್ತು 6 ಏರ್‌ಬ್ಯಾಗ್‌ಗಳು (ರೇಸರ್‌ನಲ್ಲಿ ಸ್ಟ್ಯಾಂಡರ್ಡ್ ಆಗಿ ಬರುತ್ತವೆ) ಹೀಗೆ ಹಲವಾರು ಫೀಚರ್‌ಗಳನ್ನು ಹೊಂದಿರುವ ರೇಸರ್ ಆವೃತ್ತಿಯು ಆಲ್ಟ್ರೊಜ್ ಕಾರು ಆವೃತ್ತಿಗಳಲ್ಲಿಯೇ ಅಗ್ರಸ್ಥಾನದಲ್ಲಿದೆ.
ಇದನ್ನೂ ಓದಿ: University Grants Commission : ಇನ್ನು ಮುಂದೆ ವಿಶ್ವವಿದ್ಯಾಲಯಗಳಲ್ಲಿ ವರ್ಷಕ್ಕೆ ಎರಡು ಬಾರಿ ಅಡ್ಮಿಷನ್
ಇದು 6 ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅನ್ನು ಒದಗಿಸುವ ಏಕೈಕ ಹ್ಯಾಚ್‌ಬ್ಯಾಕ್ ಆಗಿದ್ದು, ನಗರದ ಟ್ರಾಫಿಕ್ ಮತ್ತು ಹೆದ್ದಾರಿಗಳಲ್ಲಿ ಅತ್ಯುತ್ತಮ ಚಾಲನಾ ಅನುಭವವನ್ನು ಒದಗಿಸುತ್ತದೆ. ಸುಧಾರಿತ ತಂತ್ರಜ್ಞಾನ, ವೈಶಿಷ್ಟ್ಯಗಳು ಮತ್ತು ಹ್ಯಾಚ್‌ಬ್ಯಾಕ್‌ನಲ್ಲಿ ಕ್ಲಾಸ್-ಲೀಡಿಂಗ್ ಸುರಕ್ಷತೆಯನ್ನು ಹೊಂದಿರುವ ಆಲ್ಟ್ರೋಜ್ ರೇಸರ್ 3 ವೇರಿಯಂಟ್‌ಗಳಲ್ಲಿ (ಆರ್1, ಆರ್2 ಮತ್ತು ಆರ್3) ಲಭ್ಯವಿರುತ್ತದೆ. ಮೂರು ಬಣ್ಣಗಳ (ಪ್ಯೂರ್ ಗ್ರೇ, ಅಟಾಮಿಕ್ ಆರೆಂಜ್ ಮತ್ತು ಅವೆನ್ಯೂ ವೈಟ್) ಆಯ್ಕೆ ಗ್ರಾಹಕರಿಗೆ ಸಿಗುತ್ತದೆ.
ಇದರ ಜತೆಗೆ ಅಲ್ಟ್ರೋಜ್ ಶ್ರೇಣಿಯನ್ನು ವಿಸ್ತರಿಸುತ್ತಾ ಟಾಟಾ ಮೋಟಾರ್ಸ್ ಎರಡು ಹೊಸ ವೇರಿಯಟ್‌ಗಳನ್ನು (ಎಕ್ಸ್ ಝಡ್ ಎಲ್‌ಯುಎಕ್ಸ್ ಮತ್ತು ಎಕ್ಸ್ ಝಡ್+ಎಸ್ ಎಲ್‌ಯುಎಕ್ಸ್) ಪರಿಚಯಿಸಿದೆ ಮತ್ತು ಅಲ್ಟ್ರೋಜ್ ಶ್ರೇಣಿಯ ಒಂದು ವೇರಿಯಂಟ್ ಅನ್ನು (ಎಕ್ಸ್ ಝಡ್+ಓಎಸ್) ನವೀಕರಿಸಿದೆ. ಈ ಎರಡು ಹೊಸ ಹೆಚ್ಚುವರಿ ವೇರಿಯಂಟ್‌ಗಳು ಪೆಟ್ರೋಲ್ ಮ್ಯಾನ್ಯುವಲ್, ಪೆಟ್ರೋಲ್ ಡಿಸಿಎ, ಡೀಸೆಲ್ ಮತ್ತು ಸಿ ಎನ್ ಜಿ ವಿಭಾಗಗಳ ಆಯ್ಕೆಯಲ್ಲಿ ಲಭ್ಯವಿರುತ್ತವೆ.
ದರ ಪಟ್ಟಿ
ರೇಸರ್ ವೇರಿಯಂಟ್‌ಗಳು ಪರಿಚಯಾತ್ಮಕ ಬೆಲೆ (ಪೆಟ್ರೋಲ್ ಎಂಟಿ), ಭಾರತೀಯ ರೂಪಾಯಿಗಳಲ್ಲಿ, ಎಕ್ಸ್ ಶೋರೂಂ, ದೆಹಲಿ ಆರ್1 -9,49,000, ಆರ್2- 10,49,000, ಆರ್3- 10,99,000 ಆಗಿವೆ.
ವೇರಿಯಂಟ್‌ಗಳು ಪರಿಚಯಾತ್ಮಕ ಬೆಲೆ (ಪೆಟ್ರೋಲ್ ಎನ್ಎ ಎಂಟಿ), ಭಾರತೀಯ ರೂಪಾಯಿಗಳಲ್ಲಿ, ಎಕ್ಸ್ ಶೋರೂಂ, ದೆಹಲಿ ಎಕ್ಸ್ ಝಡ್ ಎಲ್‌ಯುಎಕ್ಸ್ (ಹೊಸತು) – 8,99,900, ಎಕ್ಸ್ ಝಡ್+ಎಸ್ ಎಲ್‌ಯುಎಕ್ಸ್ – (ಹೊಸತು) -9,64,990, ಎಕ್ಸ್ ಝಡ್+ಓಎಸ್ (ಅಪ್ ಗ್ರೇಡೆಡ್) -9,98,900 ರಷ್ಟಿದೆ.
ಇದನ್ನೂ ಓದಿ: EPF Account Rules: ಕ್ಲೈಮ್ ಇತ್ಯರ್ಥ ಇನ್ನು ಸುಲಭ; ಇಪಿಎಫ್‌ಒ ಮಾಡಿದೆ ಹಲವು ಹೊಸ ಬದಲಾವಣೆ
ಟಾಟಾ ಆಲ್ಟ್ರೊಜ್ ರೇಸರ್ ಬಿಡುಗಡೆಯ ಕುರಿತು ಪ್ರತಿಕ್ರಿಯಿಸಿದ ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್‌ನ ಮುಖ್ಯ ವಾಣಿಜ್ಯ ಅಧಿಕಾರಿ ವಿವೇಕ್ ಶ್ರೀವತ್ಸ ಮಾತನಾಡಿ, ಪ್ರತಿ ದಿನ ವಾಹನ ಚಾಲನೆ ಮಾಡುವವರಿಗೆ ಉತ್ಕೃಷ್ಟ ಅನುಭವ ಒದಗಿಸಲೆಂದೇ ವಿನ್ಯಾಸಗೊಂಡಿರುವ ಆಲ್ಟ್ರೋಜ್ ರೇಸರ್ ಅನ್ನು ಬಿಡುಗಡೆ ಮಾಡವ ಮೂಲಕ ಆಲ್ಟ್ರೋಜ್ ಶ್ರೇಣಿಯನ್ನು ಬಲಪಡಿಸಲು ಹೆಮ್ಮೆ ಪಡುತ್ತೇವೆ. ವಿಭಾಗ ಪ್ರಮುಖ ವೈಶಿಷ್ಟ್ಯಗಳನ್ನು ಹೊಂದಿರುವ ಮತ್ತು ತಂತ್ರಜ್ಞಾನ ಆಧರಿತವಾಗಿ ರೂಪುಗೊಂಡಿರುವ, ಅತ್ಯುನ್ನತ ಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿರುವ ರೇಸರ್, ವಿಭಿನ್ನ ಕಾರನ್ನು ಡ್ರೈವ್ ಮಾಡಲು ಬಯಸುವ, ಕನೆಕ್ಟೆಡ್ ಆಗಿರುವ ಮತ್ತು ಫ್ಯಾಷನ್ ಆಸಕ್ತಿಯನ್ನು ಹೊಂದಿರುವ ಹೊಸ ಪೀಳಿಗೆಯ ಗ್ರಾಹಕರನ್ನು ಹೆಚ್ಚು ಆಕರ್ಷಿಸಬಹುದಾಗಿದೆ.
ಅದ್ಭುತ ಕಾರ್ಯಕ್ಷಮತೆಯ ಡಿಎನ್ಎ ಹೊಂದಿರುವ ಮತ್ತು ರೇಸ್ ಕಾರ್‌ನಿಂದ ಸ್ಫೂರ್ತಿ ಪಡೆದಿರುವ ಲುಕ್ ಹೊಂದಿರುವ ರೇಸರ್ ನಿಮ್ಮನ್ನು #RacePastTheRoutine ಎಂಬ ಭಾವನೆ ಉಂಟು ಮಾಡುವ ಪರಿಪೂರ್ಣ ಒಡನಾಡಿಯಾಗುವ ವಿಶ್ವಾಸ ನಮಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Bengaluru News: ಬೆಂಗಳೂರಿನಲ್ಲಿ ಜೂ. 29ರಂದು ನಿವೃತ್ತ ನ್ಯಾ. ಚಂದ್ರಶೇಖರಯ್ಯಗೆ ಅಭಿನಂದನೆ
2.5 ಲಕ್ಷ ಗ್ರಾಹಕರನ್ನು ಹೊಂದಿರುವ ಅಲ್ಟ್ರೋಜ್ ಅದರ ಸೊಗಸಾದ ವಿನ್ಯಾಸ, ಅಪೂರ್ವ ವೈಶಿಷ್ಟ್ಯಗಳು, ಅತ್ಯುತ್ತಮ ಕಾರ್ಯಕ್ಷಮತೆ ಮತ್ತು ಉತ್ತಮ ಸುರಕ್ಷತೆಯ ಮೂಲಕ ಭಾರತದಲ್ಲಿನ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ಗಳಲ್ಲಿಯೇ ಉನ್ನತ ಮಾನದಂಡವನ್ನು ಸ್ಥಾಪಿಸಿದೆ. ಈ ಕಾರು ಅನೇಕ ವಿಭಾಗಗಳಲ್ಲಿ ಪ್ರವರ್ತಕ ಫೀಚರ್ ಗಳನ್ನು ಹೊಂದಿದೆ. ಗ್ಲೋಬಲ್ ಎಸಿಎಪಿ 5 ಸ್ಟಾರ್ ಸುರಕ್ಷತಾ ರೇಟಿಂಗ್ ಗಳಿಸಿದ ಭಾರತದ ಮೊದಲ ಹ್ಯಾಚ್‌ಬ್ಯಾಕ್ ಎಂಬ ಹೆಗ್ಗಳಿಗೆ ಗಳಿಸಿದೆ. ಟ್ವಿನ್-ಸಿಲಿಂಡರ್ ತಂತ್ರಜ್ಞಾನವನ್ನು ಒಳಗೊಂಡಿರುವ ದೇಶದ ಮೊದಲ ಸಿಎನ್‌ಜಿ ಕಾರ್ ಮತ್ತು ಗ್ರಾಹಕರಿಗೆ ಆಯ್ಕೆ ಮಾಡಲು ಪವರ್‌ಟ್ರೇನ್ ಆಯ್ಕೆಗಳನ್ನು ಒದಗಿಸುವ ಏಕೈಕ ಹ್ಯಾಚ್‌ಬ್ಯಾಕ್ ಆಗಿದೆ.