ಬೆಂಗಳೂರು: ಕೇಂದ್ರ ಗೃಹಸಚಿವ ಹಾಗೂ ಚುನಾವಣಾ ಚಾಣಕ್ಯ ಅಮಿತ್ ಶಾ (Amit Shah) ಜೆಡಿಎಸ್ ಭದ್ರಕೋಟೆಯಲ್ಲಿ ಸೋಮವಾರ ಪ್ರವಾಸ ನಡೆಸಲಿದ್ದಾರೆ. ಹಳೆ ಮೈಸೂರು ಭಾಗದ ಮೇಲೆ ಹೆಚ್ಚಿನ ಗಮನ ನೀಡುತ್ತಿರುವ ಅಮಿತ್ ಶಾ, ಮೈಸೂರು ಹಾಗೂ ಹಾಸನ ಜಿಲ್ಲೆಗಳಲ್ಲಿ ರೋಡ್ ಶೋ ನಡೆಸಲಿದ್ದಾರೆ.
ಭಾನುವಾರ ರಾತ್ರಿಯೇ ಬೆಂಗಳೂರಿಗೆ ಆಗಮಿಸಿ ವಾಸ್ತವ್ಯ ಹೂಡಿದ್ದ ಅಮಿತ್ ಶಾ (Amit Shah) ಸೋಮವಾರ ಬೆಳಗ್ಗೆ ಹೊರಟು ಮೈಸೂರು ತಲುಪಿದ್ದಾರೆ. ವಿಶೇಷ ವಿಮಾನದ ಮೂಲಕ ಮೈಸೂರಿಗೆ ಆಗಮಿಸಿದ ಶಾ ಅವರನ್ನು ಸಂಸದ ಪ್ರತಾಪ್ ಸಿಂಹ, ಮೇಯರ್ ಶಿವಕುಮಾರ್, ಉಪಮೇಯರ್ ರೂಪಾ, ಶಾಸಕ ಎಸ್.ಎ. ರಾಮದಾಸ್, ಚುನಾವಣಾ ಉಸ್ತುವಾರಿ ವಿ. ರವಿಶಂಕರ್, ಕೆ.ಆರ್ .ಕ್ಷೇತ್ರದ ಚುನಾವಣಾ ಉಸ್ತುವಾರಿ ರಾಜೀವ್ ಬಬ್ಬರ್ ಸೇರಿ 14 ಜನರ ತಂಡದಿಂದ ಸ್ವಾಗತ ಕೋರಲಾಯಿತು.
ಅಮಿತ್ ಶಾ ಕಾರ್ಯಕ್ರಮಗಳು
11.00ಕ್ಕೆ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮನ
11.20ಕ್ಕೆ ರಸ್ತೆ ಮೂಲಕ ಚಾಮಂಡಿ ಬೆಟ್ಟಕ್ಕೆ ಆಗಮನ
11.20 ರಿಂದ 11.50ರ ವರೆಗೆ ಚಾಮುಂಡೇಶ್ವರಿಗೆ ಪೂಜೆ
11.55ಕ್ಕೆ ಚಾಮುಂಡೇಶ್ವರಿ ದೇವಸ್ಥಾನದಿಂದ ಪ್ರಯಾಣ
12.10ಕ್ಕೆ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮನ
12.15ಕ್ಕೆ ಮೈಸೂರು ವಿಮಾನ ನಿಲ್ದಾಣದಿಂದ ಪ್ರಯಾಣ.
12.45ಕ್ಕೆ ಗುಂಡ್ಲುಪೇಟೆ ಹೆಲಿಪ್ಯಾಡ್ ಗೆ ಆಗಮನ
12.50ರಿಂದ 1.50ರ ವರೆಗೆ ರೋಡ್ ಶೋನಲ್ಲಿ ಭಾಗಿ
1.55ಕ್ಕೆ ಕಾರಿನ ಮೂಲಕ ಗುಂಡ್ಲುಪೇಟೆ ಹೆಲಿಪ್ಯಾಡ್ ಗೆ ಪ್ರಯಾಣ
ಮಧ್ಯಾಹ್ನ 2.00ಗಂಟೆಗೆ ಗುಂಡ್ಲುಪೇಟೆಯಿಂದ ಹೆಲಿಕಾಪ್ಟರ್ ನಲಿ ಪ್ರಯಾಣ
3 ಗಂಟೆಗೆ ಸಕಲೇಶಪುರದ ಆಲೂರು ಹೆಲಿಪ್ಯಾಡ್ ಗೆ ಆಗಮನ
3.5ಕ್ಕೆ ರಸ್ತೆ ಮೂಲಕ ಆಲೂರಿಗರ ಆಗಮನ
3.10 ರಿಂದ 4ಗಂಟೆ ವರೆಗೆ ಆಲೂರಿನ ರೋಡ್ ಶೋನಲ್ಲಿ ಭಾಗಿ
4.5ಕ್ಕೆ ಅಲ್ಲಿಂದ ರಸ್ತೆ ಮೂಲಕ ಆಲೂರಿನ ಹೆಲಿಪ್ಯಾಡ್ ಗೆ ಆಗಮನ
4.15ಕ್ಕೆ ಆಲೂರಿಂದ ಹೆಲಿಕಾಪ್ಟರ್ ನಿಂದ ಪ್ರಯಾಣ
5 .00 ಗಂಟೆಗೆ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮನ
5.5ಕ್ಕೆ ಅಲ್ಲಿಂದ ವಿಮಾನದಲ್ಲಿ ಪ್ರಯಾಣ
6.30ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮನ
6.35ಕ್ಕೆ ಹುಬ್ಬಳ್ಳಿಯ ಖಾಸಗಿ ಹೋಟೆಲ್ ಗೆ ಆಗಮನ
7 ಗಂಟೆಯಿಂದ 8ಗಂಟೆ ವರೆಗೆ ಚುನಾವಣಾ ನಿರ್ವಹಣಾ ಸಮಿತಿ ಜೊತೆ ಶಾ ಸಭೆ
ರಾತ್ರಿ 8.5ಕ್ಕೆ ಊಟ ಮಾಡಿ ಅಲ್ಲೇ ವಿಶ್ರಾಂತಿ