Site icon Vistara News

‌Assault Case: ಮೋದಿ ಹಾಡು ಬರೆದ ಯುವಕನ ಮೇಲೆ ಹಲ್ಲೆ; ಐವರ ವಿರುದ್ಧ ಎಫ್ಐಆರ್

‌Assault Case

ಮೈಸೂರು: ಮೋದಿ ಹಾಡು ಬಿಡುಗಡೆ ಮಾಡಿದ ಯುವಕನ ಮೇಲೆ ಹಲ್ಲೆ ಪ್ರಕರಣಕ್ಕೆ (‌Assault Case) ಸಂಬಂಧಿಸಿ ನಗರದ ನಜರ್‌ಬಾದ್ ಪೊಲೀಸ್ ಠಾಣೆಯಲ್ಲಿ ಐವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಹಲ್ಲೆಗೊಳಗಾದ ಯುವಕ ನೀಡಿದ ದೂರು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಲೀಂ, ಜಾವೀದ್, ಪಾಷಾ ಸೇರಿ ಐವರ ಮೇಲೆ ಎಫ್ಐಆರ್ ದಾಖಲಾಗಿದೆ. ಹಳ್ಳಿಕೆರೆಹುಂಡಿ ಗ್ರಾಮದ ಲಕ್ಷ್ಮೀನಾರಾಯಣ್ ಎಂಬ ಯುವಕನ ಮೇಲೆ ಮೈಸೂರಿನ ಸರ್ಕಾರಿ ಗೆಸ್ಟ್‌ ಹೌಸ್‌ ಬಳಿ ಶುಕ್ರವಾರ ಮಧ್ಯಾಹ್ನ ಹಲ್ಲೆ ನಡೆದಿತ್ತು.

ಮೂರನೇ ಬಾರಿ ಮೋದಿ ಅಧಿಕಾರಕ್ಕೆ ಏಕೆ ಬರಬೇಕು ಎಂದು ಯುವಕ ಹಾಡು ರಚಿಸಿದ್ದ. ಸಾಮಾಜಿಕ ಜಾಲತಾಣದಲ್ಲಿ ವೀಕ್ಷಕರ ಸಂಖ್ಯೆ ಹೆಚ್ಚಿಸಲು ಸಾರ್ವಜನಿಕವಾಗಿ ವಿಡಿಯೊ ನೋಡುವಂತೆ ಮನವಿ ಮಾಡುತ್ತಿದ್ದ.
ಮೈಸೂರಿನ ಸರ್ಕಾರಿ ಅತಿಥಿ ಗೃಹದ ಆವರಣದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರಿಗೆ ವಿಡಿಯೊ ನೋಡುವಂತೆ ಹೇಳಿದ್ದ. ನಂತರ ಆತನ ಮೇಲೆ ಮುಸ್ಲಿಂ ಯುವಕರ ಗುಂಪು ಹಲ್ಲೆ ಮಾಡಿತ್ತು. ಇದೀಗ ಗಾಯಾಳು ಲಕ್ಷ್ಮೀನಾರಾಯಣ ದೂರಿನ ಅನ್ವಯ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

ಪಾಕ್‌ ಪರ ಘೋಷಣೆ ಕೂಗಲು ಒತ್ತಾಯ

ಪ್ರಧಾನಿ ಮೋದಿ ಕುರಿತ ಹಾಡು ಬಿಡುಗಡೆ ಮಾಡಿದ್ದಕ್ಕೆ ಮೈಸೂರಿನ ಸರ್ಕಾರಿ ಅತಿಥಿ ಗೃಹದ ಬಳಿ ಹಿಂದು ಯುವಕನ ಮೇಲೆ ಮುಸ್ಲಿಂ ಯುವಕರು ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿತ್ತು. ಇದೇ ವೇಳೆ ಪಾಕ್‌ ಪರ ಮತ್ತು ಅಲ್ಲಾಹು ಅಕ್ಬರ್‌ ಎಂದು ಪರ ಘೋಷಣೆ (Pro Pak Slogan) ಕೂಗುವಂತೆ ಯುವಕನಿಗೆ ಒತ್ತಾಯ ಮಾಡಲಾಗಿತ್ತು.

ಮೋದಿ ಹಾಡು ರಿಲೀಸ್‌ ಮಾಡಿದ್ದೀಯ, ನಿನ್ನ ಸಾಯಿಸುತ್ತೇವೆ ಎಂದು ಅಪರಿಚಿತ ಮುಸ್ಲಿಂ ಯುವಕರ ಗುಂಪು, ಹಿಂದು ಯುವಕನ ಬಟ್ಟೆ ಹರಿದು ಹಲ್ಲೆ ನಡೆಸಿ ಪರಾರಿಯಾಗಿತ್ತು. ಹಲ್ಲೆ ವೇಳೆ ಪಾಕಿಸ್ತಾನ ಹಾಗೂ ಅಲ್ಲಾಹ್‌ ಪರ ಘೋಷಣೆ ಕೂಗುವಂತೆ ಯುವಕನಿಗೆ ಒತ್ತಾಯ ಮಾಡಿದ್ದರು. ನಂತರ ಹಲ್ಲೆಗೊಳಗಾದ ಯುವಕನನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದರು. ಘಟನೆ ಬಗ್ಗೆ ವಿಡಿಯೊ ಮೂಲಕ ಲಕ್ಷ್ಮಿನಾರಾಯಣ್ ಮಾಹಿತಿ ನೀಡಿದ್ದ.

ಇದನ್ನೂ ಓದಿ | Karnataka Weather : ಕೊಪ್ಪಳದಲ್ಲಿ ಸಿಡಿಲು ಬಡಿದು ವ್ಯಕ್ತಿ ಸಾವು; ಹೊತ್ತಿ ಉರಿದ ತೆಂಗಿನ ಮರ, ಧರೆಗುರುಳಿದ ಮರಗಳು, ವಿದ್ಯುತ್‌ ಕಂಬ

ಘಟನೆ ಬಗ್ಗೆ ಗಾಯಾಳು ಲಕ್ಷ್ಮೀನಾರಾಯಣ್ ಪ್ರತಿಕ್ರಿಯಿಸಿ, ನಾನು ಕಳೆದ ವಾರ ಮೋದಿ ಸಾಂಗ್‌ ರಿಲೀಸ್‌ ಮಾಡಿದ್ದೆ. ಪರಿಚಯಸ್ಥರ ಬಳಿ ನಮ್ಮ ಯುಟ್ಯೂಟ್‌ ಚಾನೆಲ್‌ ಸಬ್‌ಸ್ಕ್ರೈಬ್‌ ಮಾಡಿಸುತ್ತಿದ್ದೆ. ಸರ್ಕಾರಿ ಗೆಸ್ಟ್‌ ಹೌಸ್‌ ಬಳಿ ಮುಸ್ಲಿಂ ವ್ಯಕ್ತಿಯೊಬ್ಬರು ಬಂದರು. ಅವರು ಮುಸ್ಲಿಂ ಎಂದು ನನಗೆ ಗೊತ್ತಿರಲಿಲ್ಲ. ನಂತರ ಆ ವ್ಯಕ್ತಿ ವಿಡಿಯೊ ನೋಡಿದ. ನಂತರ ನನ್ನನ್ನು ಒಳಗೆ ಕರೆದುಕೊಂಡು ಹೋಗಿ, ಮೋದಿ ಬಗ್ಗೆ ಸಾಂಗ್‌ ಮಾಡಿದ್ದೀಯಾ, ನಿನ್ನ ಇಲ್ಲೇ ಕೊಲ್ಲುತ್ತೇವೆ ಎಂದು ಸಹಚರರ ಜತೆ ಸೇರಿ ಹಲ್ಲೆ ಮಾಡಿದರು. ನನ್ನ ಕೈಯಲ್ಲಿ ಇದ್ದ ಶ್ರೀರಾಮನ ಫೋಟೊ, ಧ್ವಜವನ್ನು ಕಿತ್ತು ಬಿಸಾಡಿದರು. ನಂತರ ಅವಾಚ್ಯ ಶಬ್ದಗಳಿಂದ ಬೈಯ್ದು ನನ್ನ ಮೇಲೆ ಬಿಯರ್‌ ಎರಚಿ, ಮೂತ್ರ ವಿಸರ್ಜನೆ ಮಾಡಿ, ಸಿಗರೇಟ್‌ನಿಂದ ಸುಟ್ಟು ಅಮಾನುಷವಾಗಿ ಹಲ್ಲೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

Exit mobile version